
ರಾತ್ರಿ (Night) ಮಗಲುವಾಗ ಬಾಯಿ ಒಣಗುವಂತಾಗುವುದು (Dry Mouth) ಹಲವರಲ್ಲಿ ಕಂಡು ಬರುವ ಸಮಸ್ಯೆ. ಕೆಲವೊಮ್ಮೆ, ಬಾಯಾರಿಕೆಯಿಂದ ಒಣ ಬಾಯಿ ತಪ್ಪಿಸಲು ನೀರು ಕುಡಿಯುವಷ್ಟೇ ಪರಿಹಾರವಾಗಿದೆ. ಔಷಧಿ ಅಥವಾ ಆಧಾರವಾಗಿರುವ ಸ್ಥಿತಿಯಂತಹ ಇತರ ಕಾರಣಗಳಿಂದಾಗಿ ಒಣ ಬಾಯಿ ಕಾಣಿಸಿಕೊಳ್ಳಬಹುದು. ಲಾಲಾರಸವನ್ನು ಉತ್ಪಾದಿಸುವ ಗ್ರಂಥಿಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಒಣ ಬಾಯಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಕ್ಸೆರೊಸ್ಟೊಮಿಯಾ ಅಥವಾ ಹೈಪೋಸಲೈವೇಶನ್ ಎಂದು ಸಹ ಕರೆಯುತ್ತಾರೆ. ಇದನ್ನು ಅಧಿಕೃತ ರೋಗನಿರ್ಣಯದ ಸ್ಥಿತಿ ಎಂದು ಪರಿಗಣಿಸಲಾಗುವುದಿಲ್ಲ.
ವೃದ್ಧಾಪ್ಯ (Old Age) ದಲ್ಲಿ ಬಾಯಿ ಒಣಗುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಏಕೆಂದರೆ ವಯಸ್ಸಾದಂತೆ, ಬಾಯಿಯಲ್ಲಿ ಲಾಲಾರಸ (Saliva) ದ ಉತ್ಪಾದನೆಯು ಕಡಿಮೆಯಾಗುತ್ತದೆ. ಬಾಯಿಯ ಶುಷ್ಕತೆಯಿಂದ ಈ ಸಮಸ್ಯೆ ಕಾಡುತ್ತದೆ. ಆದ್ರೆ ವೃದ್ಧರಿಗೆ ಮಾತ್ರವಲ್ಲ ರಾತ್ರಿ ಮಲಗುವಾಗ ಕೆಲ ವಯಸ್ಕರಿಗೂ ಬಾಯಿ ಒಣಗುತ್ತದೆ. ಬಾಯಿ ಒಣಗಲು ಅನೇಕ ಕಾರಣಗಳಿವೆ. ಸದಾ ಔಷಧಿ ತೆಗೆದುಕೊಳ್ಳುವವರಿಗೆ ಬಾಯಿ ಒಣಗುವ ಸಮಸ್ಯೆ ಶುರುವಾಗುತ್ತದೆ. ಬಾಯಿಯ ಮೂಲಕ ಉಸಿರಾಡುವುದರಿಂದಲೂ ರಾತ್ರಿ ಮಲಗಿದಾಗ ಬಾಯಿ ಒಣಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಜೊತೆ ನೀರು ಕೂಡ ನಿಮ್ಮ ಸಮಸ್ಯೆಗೆ ಕಾರಣವಾಗಬಹುದು. ಕೆಲ ಮನೆ ಮದ್ದಿನ ಮೂಲಕ ನೀವು ಈ ಸಮಸ್ಯೆಯಿಂದ ಹೊರಗೆ ಬರಬಹುದು. ಅದೇನೆಂದು ತಿಳ್ಕೊಳ್ಳೋಣ.
ಈ 5 ರೀತಿಯ ಎಲೆಗಳನ್ನು ತಿನ್ನೋ ಮೂಲಕ ಹೊಟ್ಟೆಯ ಸಮಸ್ಯೆ ನಿವಾರಿಸಿ
ಬಾಯಿ ಒಣಗುವ ಸಮಸ್ಯೆಗೆ ಮದ್ದು
ಹೆಚ್ಚೆಚ್ಚು ನೀರು ಕುಡಿಯಿರಿ
ಒಣ ಬಾಯಿಯ ಸಮಸ್ಯೆಯನ್ನು ಅನುಭವಿಸುವ ಯಾರಾದರೂ ಅವರು ಸಾಕಷ್ಟು ನೀರು ಕುಡಿಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ದಿನವಿಡೀ ನೀರು ಕುಡಿಯುವುದು ಒಣ ಬಾಯಿಗೆ ಕಾರಣವಾಗುವ ಸಣ್ಣ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ದಿನವಿಡೀ ನಿಧಾನವಾಗಿ ಮತ್ತು ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ಒಂದೇ ಬಾರಿಗೆ ಹೆಚ್ಚು ನೀರು ಕುಡಿಯುವುದರಿಂದ ಉಂಟಾಗುವ ಹೊಟ್ಟೆಯ ತೊಂದರೆಯನ್ನು ತಡೆಯಬಹುದು.
ಮೂಗಿನ ಮೂಲಕ ಉಸಿರಾಟ
ಸಾಮಾನ್ಯವಾಗಿ ಉಸಿರಾಟದ ತೊಂದರೆಯಿಂದಾಗಿ ಕೆಲವರು ಮಲಗುವಾಗ ಬಾಯಿ ತೆರೆಯುತ್ತಾರೆ. ನಂತರ ಅವರು ಮೂಗಿನ ಬದಲು ಬಾಯಿಯ ಮೂಲಕ ಉಸಿರಾಡಲು ಪ್ರಾರಂಭಿಸುತ್ತಾರೆ. ಇದು ನೈಸರ್ಗಿಕವಾಗಿ ಒಣ ಬಾಯಿಗೆ ಕಾರಣವಾಗುತ್ತದೆ. ಆದ್ದರಿಂದ ಮೂಗಿನ ಮೂಲಕ ಉಸಿರಾಡಲು ಸಾಧ್ಯವಾದಷ್ಟು ಪ್ರಯತ್ನಿಸಿ. ಶೀತ ಮತ್ತು ಜ್ವರದಂತ ಯಾವುದೇ ಸಮಸ್ಯೆ ಇದ್ದರೆ, ಅದರ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿದ್ದೆ ಮಾಡುವಾಗ ಮೂಗು ಕಟ್ಟಿಕೊಂಡರೆ ಬಾಯಿಯ ಮೂಲಕ ಉಸಿರಾಟ ಮಾಡಬೇಡಿ. ಎದ್ದು ಕುಳಿತು ಮೂಗನ್ನು ಸರಿಪಡಿಸಿಕೊಂಡು ಮೂಗಿನ ಮೂಲಕವೇ ಉಸಿರಾಡಿ.
Health Tips : ಹೊಟ್ಟೆಯಲ್ಲಿ ಸದಾ ಕಾಡುವ ಗ್ಯಾಸ್ ಗೆ ಹೇಳಿ ಗುಡ್ ಬೈ
ಮೌಖಿಕ ನೈರ್ಮಲ್ಯವನ್ನು ಸುಧಾರಿಸುವುದು
ಕಳಪೆ ಮೌಖಿಕ ಆರೋಗ್ಯವು ಒಣ ಬಾಯಿಗೆ ಕಾರಣವಾಗಬಹುದು ಮತ್ತು ಒಣ ಬಾಯಿಯು ಕಳಪೆ ಮೌಖಿಕ ಆರೋಗ್ಯಕ್ಕೆ ಕಾರಣವಾಗಬಹುದು. ಒಣ ಬಾಯಿಯ ಮೂಲ ಕಾರಣ ಏನೇ ಇರಲಿ, ಒಟ್ಟಾರೆ ಮೌಖಿಕ ನೈರ್ಮಲ್ಯವನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.ಉತ್ತಮ ಮೌಖಿಕ ನೈರ್ಮಲ್ಯವು ಪ್ರತಿ ದಿನ ಹಲ್ಲುಜ್ಜುವುದು, ಹಾಗೆಯೇ ಆಹಾರದ ಕಣಗಳನ್ನು ತೊಳೆಯಲು ಸಹಾಯ ಮಾಡಲು ಊಟದ ನಂತರ ನೀರಿನಿಂದ ಅಥವಾ ಮೌತ್ವಾಶ್ನಿಂದ ಬಾಯಿಯನ್ನು ತೊಳೆಯುವುದು ಒಳಗೊಂಡಿರುತ್ತದೆ. ಕೆಲವು ಜನರು ತಮ್ಮ ನಾಲಿಗೆಯಲ್ಲಿ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಸಹಾಯ ಮಾಡಲು ನಾಲಿಗೆ ಸ್ಕ್ರಾಪರ್ ಅನ್ನು ಬಳಸಲು ಆಯ್ಕೆ ಮಾಡುತ್ತಾರೆ, ಇದು ಒಟ್ಟಾರೆ ಮೌಖಿಕ ಆರೋಗ್ಯವನ್ನು ಸುಧಾರಿಸಬಹುದು.
ಮದ್ಯಪಾನದಿಂದ ದೂರವಿರಿ
ಆಲ್ಕೋಹಾಲ್ ಸೇವನೆ ಅಥವಾ ಮೌತ್ ವಾಶ್ ಆಗಿ ಬಳಸುವುದರಿಂದ ಒಣ ಬಾಯಿ ಸಮಸ್ಯೆಯೂ ಹೆಚ್ಚಾಗುತ್ತದೆ. ಈ ಸಮಸ್ಯೆಯಿಂದ ಮುಕ್ತಿಪಡೆಯಬೇಕು ಎನ್ನುವವರು ಆಲ್ಕೋಹಾಲ್ ಸೇವನೆ ಮಾಡ್ಬೇಡಿ. ಇಷ್ಟೇ ಅಲ್ಲ ಆಲ್ಕೋಹಾಲ್ ಹೊಂದಿರುವ ಮೌತ್ವಾಶ್ ಅನ್ನು ಬಳಸಬೇಡಿ. ಇವೆರಡೂ ನಿಮ್ಮ ಬಾಯಿ ಒಣಗುವ ಸಮಸ್ಯೆಯನ್ನು ಹೆಚ್ಚು ಮಾಡುತ್ತವೆ ಎಂಬುದು ನೆನಪಿರಲಿ. ಅತಿಯಾದ ಉಪ್ಪು ಸೇವನೆ ಕೂಡ ಒಣ ಬಾಯಿ ಸಮಸ್ಯೆಯನ್ನುಂಟು ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.