
ಹಿಪ್ಪು ನೇರಳೆ (Mulberry), ರೇಷ್ಮೆ ಹಣ್ಣು ಎಂದೂ ಕರೆಯಲ್ಪಡುವ ಮಲ್ಬರಿ ಹಣ್ಣನ್ನು ತಿನ್ನಲು ಅನೇಕರು ಇಷ್ಟಪಡುವುದಿಲ್ಲ. ಇದು ಸಿಹಿ (Sweet), ಹುಳಿ ಮಿಶ್ರಿತ ಹಣ್ಣು. ಹಿಪ್ಪುನೇರಳೆ ಬಣ್ಣ (Color) ಹಾಗೂ ಹಣ್ಣಿನ ಆಕಾರ ನೋಡಿದ ನಂತರ ಅದನ್ನು ತಿನ್ನಲು ಕೆಲವರು ಹಿಂಜರಿಯುತ್ತಾರೆ. ಆದ್ರೆ ಇದರ ರುಚಿ (Taste)ಯನ್ನು ಒಮ್ಮೆ ನೋಡಿದ್ರೆ ಮತ್ತೆ ಬಿಡೋದಿಲ್ಲ. ಅನೇಕರಿಗೆ ಇದ್ರ ರುಚಿಯೇ ತಿಳಿದಿಲ್ಲ. ರಸಭರಿತವಾಗಿರುವ ಈ ಮಲ್ಬರಿ ಹಣ್ಣು ತಿನ್ನುವುದು ಬಹಳ ಪ್ರಯೋಜನಕಾರಿ. ಕಿಪ್ಪು ನೇರಳೆಯನ್ನು ಬೇಸಿಗೆಯಲ್ಲಿ ತಿನ್ನುವುದರಿಂದ ನಿರ್ಜಲೀಕರಣದ ಸಮಸ್ಯೆ ಇರುವುದಿಲ್ಲ. ಮಲ್ಬರಿ ಬರೀ ದೇಹಕ್ಕೆ ನೀರಿನಂಶ ಮಾತ್ರ ನೀಡುವುದಿಲ್ಲ ಬದಲಿಗೆ ಅನೇಕ ಆರೋಗ್ಯ ಗುಣಗಳನ್ನು ಹೊಂದಿದೆ. ಇಂದು ಮಲ್ಬರಿ ಹಣ್ಣಿನ ಪ್ರಯೋಜನಗಳನ್ನು ತಿಳಿಯೋಣ.
ಮಲ್ಬರಿಯಲ್ಲಿದೆ ಈ ಎಲ್ಲ ಅಂಶ : ಮಲ್ಬರಿ ಜೀವಸತ್ವಗಳು ಮತ್ತು ಪೊಟ್ಯಾಸಿಯಮ್ ನಿಂದ ಸಮೃದ್ಧವಾಗಿವೆ. ಜೀವಸತ್ವಗಳು ಮತ್ತು ಪೊಟ್ಯಾಸಿಯಮ್ ಕೊರತೆಯಿಂದಾಗಿ ಆಯಾಸ ಮತ್ತು ದೌರ್ಬಲ್ಯ ಸಾಮಾನ್ಯವಾಗಿ ಕಾಡುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಬೇಸಿಗೆಯಲ್ಲಿ ಹಿಪ್ಪುನೇರಳೆಯನ್ನು ಸೇವಿಸುವುದು ಪ್ರಯೋಜನಕಾರಿ.
ರಾತ್ರಿ ಮಲಗಿದಾಗ ಬಾಯಿ ಒಣಗೋ ಸಮಸ್ಯೆಗೆ ಇಲ್ಲಿದೆ ಪರಿಹಾರ
ಕ್ಯಾನ್ಸರ್ ವಿರುದ್ಧ ರಕ್ಷಣೆ : ಮಲ್ಬರಿ ಸೇವನೆಯು ಕ್ಯಾನ್ಸರ್ ಅನ್ನು ತಡೆಯುತ್ತದೆ. ಮಲ್ಬರಿ ಕ್ಯಾನ್ಸರ್ ಕೋಶವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಕ್ಯಾನ್ಸರ್ ರೋಗಿಗಳು ಮಲ್ಬರಿ ಹಣ್ಣನ್ನು ತಿನ್ನುವುದು ಒಳ್ಳೆಯದು.
ಚರ್ಮಕ್ಕೆ ಪ್ರಯೋಜನಕಾರಿ : ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಸಾಮಾನ್ಯವಾಗಿದೆ. ಆದರೆ ಹಿಪ್ಪುನೇರಳೆ ಕೂದಲು ಉದರುವ ಸಮಸ್ಯೆಯನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ. ಉತ್ಕರ್ಷಣ ನಿರೋಧಕ ಅಂಶಗಳು ಮಲ್ಬರಿಯಲ್ಲಿ ಕಂಡುಬರುತ್ತವೆ. ಇದು ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಮಲ್ಬರಿ, ಚರ್ಮವು ಶುಷ್ಕ ಮತ್ತು ನಿರ್ಜೀವವಾಗುವುದನ್ನು ತಡೆಯುತ್ತದೆ. ಹಿಪ್ಪುನೇರಳೆ ಸೇವನೆ ಮಾಡುವುದ್ರಿಂದ ಕೂದಲು ಕಪ್ಪಾಗುವುದಲ್ಲದೆ ದಪ್ಪವಾಗಿ, ಉದ್ದವಾಗಿ ಬೆಳೆಯಲು ಸಹಕಾರಿ.
ಅನೇಕ ರೋಗಕ್ಕೆ ಮದ್ದು : ಈ ಋತುವಿನಲ್ಲಿ ಮಲ್ಬರಿಯನ್ನು ಬಳಸುವುದರಿಂದ ಅನೇಕ ರೋಗಗಳನ್ನು ತಡೆಯಬಹುದು. ಹಿಪ್ಪು ನೇರಳ ಕಣ್ಣು, ಹೃದಯ ಮೂಳೆಗಳು ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದರೆ ಮಲ್ಬರಿ ಜ್ಯೂಸ್ ಸೇವನೆ ಮಾಡಿ. ಇದ್ರಿಂದ ಮೂಳೆ ಸಮಸ್ಯೆ ದೂರವಾಗುತ್ತದೆ. ಹಿಪ್ಪುನೇರಳೆ ತಿನ್ನುವುದರಿಂದ ದೃಷ್ಟಿ ಹೆಚ್ಚುತ್ತದೆ. ಇದು ವಯಸ್ಸಾಗಿರುವುದನ್ನು ಮುಚ್ಚಿಡುವ ಕೆಲಸ ಮಾಡುತ್ತದೆ.
ಅಡುಗೆ ಮಾಡುವಾಗ ಕೈ ಸುಟ್ಟು ಕೊಂಡ್ರಾ? ಈ ತಪ್ಪು ಮಾಡಬೇಡಿ!!
ಹೊಟ್ಟೆ ಸಮಸ್ಯೆ : ಹಿಪ್ಪುನೇರಳೆ ಹೊಟ್ಟೆಯ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಹಿಪ್ಪುನೇರಳೆಯಲ್ಲಿ ಹಲವಾರು ಅದ್ಭುತ ಪ್ರಯೋಜನಗಳಿವೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಿದ್ದರೆ, ಹೊಟ್ಟೆಯಲ್ಲಿ ಯಾವುದೇ ಸಮಸ್ಯೆಯಿದ್ದರೆ, ಹಿಪ್ಪುನೇರಳೆ ಸೇವನೆಯು ಪ್ರಯೋಜನಕಾರಿಯಾಗಿದೆ. ನೆಗಡಿ – ಶೀತದಂತಹ ಸಮಸ್ಯೆಯಿರುವವರಿಗೂ ಇದು ಲಾಭದಾಯಕ ಹಣ್ಣಾಗಿದೆ. ಬೇಸಿಗೆಯಲ್ಲಿ ಇದ್ರ ಸೇವನೆ ಮಾಡಿದ್ರೆ ಬಿಸಿಯ ಅಪಾಯದಿಂದ ತಪ್ಪಿಸಿಕೊಳ್ಳಬಹುದು.
ಮಧುಮೇಹಿಗಳಿಗೆ ಲಾಭಕರ : ಹಿಪ್ಪು ನೇರಳೆ ಹಣ್ಣಿನಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುವುದಿಲ್ಲ. ಇದು ದೇಹದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದು ಮಧುಮೇಹ ರೋಗಿಗಳಿಗೆ ರಾಮಬಾಣವಿದ್ದಂತೆ. ಮಧುಮೇಹಿಗಳು ಹಿಪ್ಪು ನೇರಳೆ ಹಣ್ಣನ್ನು ಆರಾಮವಾಗಿ ಸೇವನೆ ಮಾಡಬಹುದು. ಇದಲ್ಲದೆ ಹಿಪ್ಪು ನೇರಳೆ ಹಲ್ಲಿನ ಸಮಸ್ಯೆಯನ್ನು ದೂರ ಮಾಡುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣ : ಇತ್ತೀಚಿನ ದಿನಗಳಲ್ಲಿ ಜನರು ಕೇಳುವ ಮೊದಲ ಪ್ರಶ್ನೆ ಅಂದ್ರೆ ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಿಸುತ್ತಾ ಎಂದು. ಮಲ್ಬರಿ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸುವ ಗುಣವಿದೆ. ಕೊಲೆಸ್ಟ್ರಾಲ್ ಹೆಚ್ಚಾಗ್ಬಾರದು ಎನ್ನುವವರು ಡಯಟ್ ನಲ್ಲಿ ಮಲ್ಬರಿ ಹಣ್ಣನ್ನು ಸೇರಿಸಬಹುದು.
ಹಿಪ್ಪು ನೇರಳೆ ಹಣ್ಣಿನ ಸೇವನೆಯಿಂದ ಲಿವರ್ ಜೊತೆ ಕಿಡ್ನಿ ಆರೋಗ್ಯವೂ ಸುಧಾರಿಸುತ್ತದೆ. ಬರೀ ಹಣ್ಣು ಮಾತ್ರವಲ್ಲ ಇದ್ರ ಎಲೆಯಲ್ಲೂ ಔಷಧಿ ಗುಣವಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.