Diabetes Diet ಕುರಿತ ಈ ವಿಷಯಗಳನ್ನು ನಂಬಲು ಹೋಗಬೇಡಿ!

By Suvarna NewsFirst Published Mar 9, 2022, 4:24 PM IST
Highlights

ಡಯಾಬಿಟಿಸ್ ಒಂದು ಸಾಮಾನ್ಯ ರೋಗವಾಗಿಬಿಟ್ಟಿದೆ. ಇದನ್ನು ಹತೋಟಿಯಲ್ಲಿಡಲು ಯಾವ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬೇಕು ಹಾಗೂ ಯಾವೆಲ್ಲ ಆಹಾರ ಪದಾರ್ಥಗಳಿಂದ ದೂರ ಇರಬೇಕು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಲೇ ಇರುತ್ತದೆ. ಆದರೆ, ಇವುಗಳ ನಡುವೆ ಹಲವಾರು ತಪ್ಪು ಕಲ್ಪನೆಗಳು ಕೂಡ ಸೇರಿಕೊಂಡಿವೆ..

ಮಧುಮೇಹ (Diabetes) ಇದು ನಮ್ಮ ಸುತ್ತಮುತ್ತಲಿನ ಜನರಲ್ಲಿ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ಸಮಸ್ಯೆಯಾಗಿರುತ್ತದೆ. ನೀವು ಕೂಡ ಮಧುಮೇಹದಿಂದ ಬಳಲುತ್ತಿರ ಬಹುದು. ಮಧುಮೇಹಿಗಳು ಯಾವೆಲ್ಲ ಆಹಾರ ಪದಾರ್ಥಗಳನ್ನು ಸೇವಿಸಬೇಕು ಹಾಗೂ ಯಾವ ಪದಾರ್ಥಗಳನ್ನು ಸೇವಿಸಲೇಬಾರದು ಎಂಬುದಕ್ಕೆ ಹಲವಾರು ವೈದ್ಯರು (Doctor) ವಿಭಿನ್ನ ರೀತಿಯ ಸಲಹೆಗಳನ್ನು ನೀಡುತ್ತಾರೆ. ನೀವು ನಿಮ್ಮ ವೈದ್ಯರು ಹೇಳುವ ಸಲಹೆಗಳನ್ನು ಪಾಲಿಸಿ. ಆದರೆ, ವೈದ್ಯರನ್ನು ಹೊರತುಪಡಿಸಿ ಇತರರು ಹೇಳುವ ಸಲಹೆಗಳನ್ನು ಕಣ್ಣು ಮುಚ್ಚಿಕೊಂಡು ಪಾಲಿಸುವ ಮೊದಲು ಸ್ವಲ್ಪ ಯೋಚಿಸಿ. ಸಾಮಾನ್ಯವಾಗಿ ಮಧುಮೇಹಿಗಳು ಪಾಲನೆ ಮಾಡುವ ಡಯಟ್ ನಲ್ಲಿ ಕೆಲವೊಂದು ಮಿಥ್ಯ ಅಂಶಗಳು ಸೇರಿಕೊಂಡಿದೆ. ಅವುಗಳ ಕುರಿತು ತಿಳಿದುಕೊಳ್ಳಿ..

ಪಿಷ್ಟಯುಕ್ತ (Starchy) ಆಹಾರವನ್ನು ಸೇವಿಸಬಾರದು

ಪಿಷ್ಟಯುಕ್ತ ಆಹಾರ ಪದಾರ್ಥಗಳು ಅಂದರೆ ಗೋಧಿ, ಅಕ್ಕಿ, ಬ್ರೆಡ್, ಹಾಗೂ ಧಾನ್ಯಗಳು. ಇವುಗಳಲ್ಲಿ ಹೆಚ್ಚಿನ ಕಾರ್ಬೋಹೈಡ್ರೆಟ್ ಅಂಶ ಇರುತ್ತದೆ. ಈ ಆಹಾರಗಳನ್ನು ಸೇವಿಸಬಾರದು ಎಂಬ ಸಲಹೆಗಳನ್ನು ಕೆಲವರು ನೀಡುತ್ತಾರೆ. ಆದರೆ, ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುವ ಆಹಾರವೇ ಇವುಗಳು ಆಗಿರುವಾಗ, ಈ ಪದಾರ್ಥಗಳನ್ನು ಸೇವನೆ ಮಾಡದೆ ಇರಬಾರದು. ಆದರೆ, ಅತಿ ಹೆಚ್ಚು ಸೇವಿಸಬಾರದು ಸ್ವಲ್ಪ ಮಿತಿಯಲ್ಲಿದ್ದರೆ (Limit) ಒಳಿತು.

ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ಆರೋಗ್ಯ ವೃದ್ಧಿಸುತ್ತಾ?!

ಒಮ್ಮೆ ಮಧುಮೇಹ ಬಂದರೆ ನಿಮ್ಮ ಡಯಟ್ ಪ್ಲಾನ್ (Diet plan) ಬದಲಾಯಿಸಬಾರದು.

ಇದು ತಪ್ಪು ಕಲ್ಪನೆ. ಕೆಲವರು ಹೇಳುವ ಪ್ರಕಾರ ಡಯಟ್ ಲೈನ್ ನಲ್ಲಿ ಯಾವುದೇ ರೀತಿಯ ಬದಲಾವಣೆ ತರಬಾರದು ಹಾಗೂ ಕೇವಲ ಮಾತ್ರೆ ಹಾಗೂ ಔಷಧಿಗಳು ಮಾತ್ರ ನಿಮ್ಮ ಮಧುಮೇಹವನ್ನು ಕಡಿಮೆ ಮಾಡಬಹುದು ಎಂಬ ಸಲಹೆಯನ್ನು ನೀಡುತ್ತಾರೆ. ಮದುಮೇಹದಲ್ಲಿಯೂ ಬೇರೆ ಬೇರೆ ವಿಧಗಳಿವೆ. ಅವುಗಳಿಗೆ ಅನುಗುಣವಾಗಿ ಮಾತ್ರೆ ಔಷಧಿಗಳನ್ನು (Medicine) ತೆಗೆದುಕೊಳ್ಳಬೇಕು ಹಾಗೂ ಅದಕ್ಕೆ ಸರಿ ಹೊಂದುವ ರೀತಿಯಲ್ಲಿ ನಿಮ್ಮ ಡಯಟ್ ಪ್ಲಾನ್ ಕೂಡ ರೂಪಿಸಿಕೊಳ್ಳಬೇಕು. ಇದಕ್ಕಾಗಿ ನೀವು ನಿಮ್ಮ ವೈದ್ಯರು ಹೇಗೆ ಹೇಳುತ್ತಾರೋ ಆ ಮಾರ್ಗದಲ್ಲಿ ನಡೆಯುವುದು ಉತ್ತಮ. ಇಲ್ಲವಾದರೆ, ಸಮಸ್ಯೆ ಎದುರಿಸಬೇಕಾಗುತ್ತದೆ.

ಮಧುಮೇಹಿಗಳು ಆಲ್ಕೋಹಾಲ್ (Alcohol) ಸೇವಿಸಬಾರದು

ಆಲ್ಕೋಹಾಲ್ ಸೇವಿಸಬಹುದು, ಆದರೆ ಸಾಕಷ್ಟು ಮಿತಿಯಲ್ಲಿ ಸೇವಿಸಬೇಕು. ಮಧುಮೇಹಿಗಳಿಗೆ ಆಲ್ಕೋಹಾಲ್‌ನಿಂದ ದೂರ ಇರಿ ಎಂದು ಸೂಚಿಸಲು ಕಾರಣವಿದೆ. ಆಲ್ಕೋಹಾಲ್ ನಲ್ಲಿ ಹೆಚ್ಚಿನ ಕ್ಯಾಲರಿಗಳಿವೆ, ಹಾಗೂ ಆಲ್ಕೋಹಾಲ್ ಅಂಶವಿರುವ ಪಾನೀಯವನ್ನು (Drinks) ಕುಡಿಯುವುದರಿಂದ ಬಹು ಬೇಗ ಹೊಟ್ಟೆ ಹಸಿವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿಯೇ ಮಧುಮೇಹಿಗಳು ಆಲ್ಕೋಹಾಲ್ ಸೇವನೆ ಮಾಡಬಾರದು ಎಂದು ಶಿಫಾರಸು ಮಾಡಲಾಗುತ್ತದೆ.

Alcohol Truth: ಕಾನೂನುಬದ್ಧವಾಗಿ ಮನೇಲಿ ಎಷ್ಟು ಮದ್ಯ ಸಂಗ್ರಹಿಸಬಹುದು ?

ಮಧುಮೇಹಿಗಳು ಬೇಗ ಅನಾರೋಗ್ಯಕ್ಕೆ (Illness) ಗುರಿಯಾಗುತ್ತಾರೆ. 

ಹೆಚ್ಚಿನ ಜನರು ಇದನ್ನು ನಂಬಿಕೊಂಡಿರುತ್ತಾರೆ. ಆದರೆ, ನೀವು ಅನಾರೋಗ್ಯಕ್ಕೆ ಗುರಿಯಾಗುವುದಕ್ಕೆ ಕಾರಣ ಡಯಾಬಿಟಿಸ್ ಅಲ್ಲ. ಬದಲಿಗೆ ಡಯಾಬಿಟಿಸ್ ಇರುವವರಲ್ಲಿ ರಕ್ತದಲ್ಲಿರುವ ಗ್ಲುಕೋಸ್ (Glucose) ಅಂಶ ಕಡಿಮೆ ಇರುವುದರಿಂದ ಅನಾರೋಗ್ಯ ಹೆಚ್ಚು ದಿನಗಳ ತನಕ ನಿಮ್ಮನ್ನು ಭಾಧಿಸಬಹುದು.

 ನೈಸರ್ಗಿಕ (Natural) ಉತ್ಪನ್ನಗಳು ಮಧುಮೇಹವನ್ನು ನಿವಾರಣೆ ಮಾಡುತ್ತದೆ.

ವೈದ್ಯಕೀಯ ಶಾಸ್ತ್ರದಲ್ಲಿ ಮಧುಮೇಹವನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಯಾವುದೇ ಮಾರ್ಗವಿಲ್ಲ. ಬದಲಿಗೆ ವೈದ್ಯರು ನೀಡುವ ಮಾತ್ರೆ, ಔಷಧಿಗಳಿಂದ ಸ್ವಲ್ಪ ಮಟ್ಟಿಗೆ ಹತೋಟಿಯಲ್ಲಿ (Control) ಇಟ್ಟುಕೊಳ್ಳಬಹುದು. ಹೀಗಿರುವಾಗ ಯಾವುದೇ ನೈಸರ್ಗಿಕ ಉತ್ಪನ್ನವು ಕೂಡ ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸುತ್ತದೆ ಎಂಬುದಕ್ಕೆ ಪುರಾವೆಗಳಿಲ್ಲ (Proofs). ಬದಲಿಗೆ ಅವುಗಳು ಮಟ್ಟವನ್ನು ಕಡಿಮೆ ಮಾಡುತ್ತದೆ ಅಷ್ಟೇ. ನಿಮ್ಮ ಮಧುಮೇಹ ಮಟ್ಟವು ಬಹಳ ಹೆಚ್ಚಾಗಿದ್ದರೆ ಅಂತಹ ಸಂದರ್ಭದಲ್ಲಿ ಈ ಪ್ರಯೋಗಗಳನ್ನು ನಡೆಸಬೇಡಿ ಇದರಿಂದಾಗಿ ಮಧುಮೇಹವು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

click me!