Walking Health Benefits: ನಡೆದಷ್ಟೂ ಆಯಸ್ಸು ಹೆಚ್ಚುತ್ತೆ

By Suvarna News  |  First Published Mar 9, 2022, 11:42 AM IST

ಮನೆ ಮುಂದೆಯಿಂದಾನೇ ಕ್ಯಾಬ್ ಬುಕ್ ಮಾಡ್ತೀರಾ, ತರಕಾರಿ (Vegetable) ತರೋಕೆ ಐದು ನಿಮಿಷ ಹೋಗೋ ದಾರಿಯಾಗಿದ್ರೂ ಆಟೋ ಹತ್ತುತ್ತೀರಾ ? ತಿಳ್ಕೊಳ್ಳಿ. ಇದ್ರಿಂದ ನಿಮ್ಮ ಆಯಸ್ಸು (Longevity) ಕಡಿಮೆಯಾಗುತ್ತಾ ಹೋಗುತ್ತೆ. ಹೆಚ್ಚು ನಡೆದಷ್ಟೂ ಆಯಸ್ಸು ಹೆಚ್ಚುತ್ತೆ.


ಕೊರೋನಾ ಕಾಲಾನಂತರದ ಜನಜೀವನದಲ್ಲಿ ಆಗಿರುವ ಬದಲಾವಣೆಯೆಂದರೆ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಅದರಲ್ಲೂ ಫಿಟ್ನೆಸ್ (Fitness) ಬಗ್ಗೆ ಜನರು ಹೆಚ್ಚು ಮುತುವರ್ಜಿ ವಹಿಸುತ್ತಿದ್ದಾರೆ. ಪ್ರತಿದಿನ ಯೋಗ, ಎಕ್ಸರ್‌ಸೈಸ್, ಧ್ಯಾನ ಹಾಗೂ ಮೊದಲಾದ ಕ್ರಮಗಳನ್ನು ಅನುಸರಿಸುವ ಮೂಲಕ ಹೆಚ್ಚು ಆರೋಗ್ಯವಾಗಿರಲು ಯತ್ನಿಸುತ್ತಿದ್ದಾರೆ. ಇವೆಲ್ಲದರ ಜತೆಯೂ ವಾಕಿಂಗ್, ಜಾಗಿಂಗ್ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. 

ಓಡುವುದು ಅಥವಾ ರನ್ನಿಂಗ್ ಮಾಡುವುದರಿಂದ ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತದೆ ಎಂಬುದು ಹಲವರಿಗೆ ತಿಳಿದಿರುವ ವಿಷಯ. ಓಡುವುದರಿಂದ ದೇಹದಲ್ಲಿರುವ ಅನಾವಶ್ಯಕ ಕೊಬ್ಬು ಕರಗುತ್ತದೆ. ಮಾನಸಿಕ ಸ್ಥೈರ್ಯ ಹಾಗೂ ಆಲೋಚನಾಶಕ್ತಿ ವೃದ್ಧಿಯಾಗುತ್ತದೆ. ರನ್ನಿಂಗ್ ನಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ, ಮಾನಸಿಕ ತಳಮಳ ದೂರವಾಗುತ್ತದೆ. ಆದ್ರೆ ನಡೆಯೋದ್ರಿಂದ ಏನು ಪ್ರಯೋಜನವಿದೆ ಎಂದು ನೀವು ಯೋಚಿಸಬಹುದು. ದಿನಕ್ಕೆ ಇಂತಿಷ್ಟು ಹೆಜ್ಜೆಗಳನ್ನು ನಡೆಯೋದ್ರಿಂದ ಆರೋಗ್ಯ (Health)ಕ್ಕೆ ಅದೆಷ್ಟು ಪ್ರಯೋಜನವಿದೆ ಗೊತ್ತಾ ?

Tap to resize

Latest Videos

Health Tips: ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ?

ವರ್ಕ್‌ ಫ್ರಂ ಹೋಮ್, ಆನ್‌ಲೈನ್‌ ಕ್ಲಾಸ್ ಶುರುವಾದಾಗಿನಿಂದ ಜನರು ಕೋಣೆಯೊಳಗೇ ಬಂಧಿಯಾಗಿಬಿಟ್ಟಿದ್ದಾರೆ. ಮನೆಯಿಂದ ಹೊರಗೆ ಹೋಗೋದು ಬಿಡಿ. ರೂಮಿನಿಂದ ನಾಲ್ಕು ಹೆಜ್ಜೆ ನಡೆಯೋದು ಸಹ ಕಡಿಮೆಯೇ. ಇದರಿಂದಾಗಿ ಅನಾವಶ್ಯಕ ಕೊಬ್ಬು, ಮಾನಸಿಕ ಒತ್ತಡ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ ನಡೆಯುವುದು (Walking) ಹಲವು ಆರೋಗ್ಯ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬಹುದು. ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯದ ನೇತೃತ್ವದ ವಿಶ್ಲೇಷಣೆಯು ಪ್ರತಿದಿನ ಹೆಚ್ಚು ನಡೆಯುವುದು ಅಕಾಲಿಕ ಮರಣ (Premature Death)ದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿದೆ. ಈ ಅಧ್ಯಯನವು 'ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್' ಜರ್ನಲ್‌ನಲ್ಲಿ ಪ್ರಕಟವಾಗಿದೆ. 

ಪ್ರತಿದಿನ ನಡೆಯುವವರನ್ನು ಆಧರಿಸಿ ನಡೆಸಿದ ಅಧ್ಯಯನದಲ್ಲಿ, 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಅಕಾಲಿಕ ಮರಣದ ಅಪಾಯವು ಗಣನೀಯವಾಗಿ ಕಡಿಮೆಯಾಗಿರುವುದು ತಿಳಿದುಬಂದಿದೆ. 2018ರಲ್ಲಿ ಅಮೇರಿಕಾದಲ್ಲಿ ನಡೆಸಿದ ಅಧ್ಯಯನವು. ವಯಸ್ಕರು ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ-ತೀವ್ರತೆಯ ಏರೋಬಿಕ್ ದೈಹಿಕ ಚಟುವಟಿಕೆಯನ್ನು ಪಡೆಯಲು ಶಿಫಾರಸು ಮಾಡುತ್ತದೆ. ಮೆಟಾ ಸಂಸ್ಥೆ ವಿಶ್ಲೇಷಣೆಯ ಪ್ರಕಾರ, ದಿನಕ್ಕೆ ಹೆಚ್ಚು ಹೆಜ್ಜೆಗಳನ್ನು ನಡೆಯುವ ಗುಂಪುಗಳಲ್ಲಿ, ಕಡಿಮೆ ಹೆಜ್ಜೆ (Steps)ಗಳನ್ನು ನಡೆದ ಗುಂಪಿಗೆ ಹೋಲಿಸಿದರೆ, ಸಾವಿನ ಅಪಾಯವು ಶೇಕಡಾ 40-53ರಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

Health Tips: ಊಟ ಮಾಡಿದ್ಮೇಲೆ ನಡೀಬೇಕಾ ? ಎಕ್ಸ್‌ಪರ್ಟ್ಸ್ ಏನ್ ಹೇಳ್ತಾರೆ ಕೇಳಿ

18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಎಲ್ಲಾ ಕಾರಣಗಳ ಮರಣದ ಮೇಲೆ ದೈನಂದಿನ ಹಂತಗಳ ಪರಿಣಾಮವನ್ನು ತನಿಖೆ ಮಾಡಿದ 15 ಅಧ್ಯಯನಗಳ ಪುರಾವೆಗಳನ್ನು ಸಂಶೋಧನಾ ಗುಂಪು ಸಂಯೋಜಿಸಿದೆ. ಅವರು ದಿನಕ್ಕೆ ಸರಾಸರಿ ಹಂತಗಳ ಪ್ರಕಾರ ಸುಮಾರು 50,000 ಭಾಗವಹಿಸುವವರನ್ನು ನಾಲ್ಕು ತುಲನಾತ್ಮಕ ಗುಂಪುಗಳಾಗಿ ವರ್ಗೀಕರಿಸಿದ್ದಾರೆ. ಕಡಿಮೆ ಹಂತದ ಗುಂಪು ಸರಾಸರಿ 3,500 ಹೆಜ್ಜೆಗಳನ್ನು ನಡೆದಿದ್ದರು. ಎರಡನೇಯ ಗುಂಪು 5,800 ಹೆಜ್ಜೆ; ಮೂರನೇಯ ಗುಂಪು, 7,800, ಮತ್ತು ನಾಲ್ಕನೇಯ ಗುಂಪು ದಿನಕ್ಕೆ 10,900 ಹೆಜ್ಜೆಗಳನ್ನು ನಡೆದಿದ್ದರು.

ದಿನಕ್ಕೆ ಹೆಚ್ಚು ಹೆಜ್ಜೆಗಳನ್ನು ನಡೆದಷ್ಟೂ ಮರಣದ ಅಪಾಯ ಕಡಿಮೆಗೊಳಿಸುತ್ತದೆ. ಆಯಸ್ಸನ್ನು ಹೆಚ್ಚಿಸುತ್ತದೆ. ವಯಸ್ಸಾದವರಿಗೆ 6,000 ರಿಂದ 8,000 ಹೆಜ್ಜೆ, ಮತ್ತು ಕಿರಿಯ ವಯಸ್ಕರಿಗೆ 8,000 ರಿಂದ 10,000 ವರೆಗಿನ ಹೆಜ್ಜೆ ಮರಣದಿಂದ ದೂರವಿರುವಂತೆ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ದಿನಕ್ಕೆ ಹೆಚ್ಚು ಹೆಜ್ಜೆಗಳನ್ನು ನಡೆಯುವುದರಿಂದ ಜನರು ಆರೋಗ್ಯ, ದೀರ್ಘಾಯುಷ್ಯವನ್ನು ಸುಧಾರಿಸಬಹುದು ಎಂಬುದು ಹಲವು ಸಂಶೋಧನೆಗಳಿಂದ ತಿಳಿದುಬಂದಿರುವ ಸತ್ಯ. ಇನ್ಯಾಕೆ ತಡ, ನಿಮ್ಮ ದಿನಚರಿಯಲ್ಲಿ ನಡೆಯೋ ಅಭ್ಯಾಸವನ್ನು ಇವತ್ತೇ ಸೇರಿಸಿಕೊಳ್ಳಿ.

click me!