ಹೊಟ್ಟೆ ಮತ್ತು ಎದೆಯ ಭಾಗಗಳು ಬೆಸೆದುಕೊಂಡು ಜನಿಸಿದ್ದ ಅವಳಿ ಹೆಣ್ಣುಮಕ್ಕಳಾದ ರಿದ್ಧಿ ಮತ್ತು ಸಿದ್ಧಿಯ ದೇಹಗಳನ್ನು ದೆಹಲಿಯ ಏಮ್ಸ್ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.
ನವದೆಹಲಿ: ಹೊಟ್ಟೆ ಮತ್ತು ಎದೆಯ ಭಾಗಗಳು ಬೆಸೆದುಕೊಂಡು ಜನಿಸಿದ್ದ ಅವಳಿ ಹೆಣ್ಣುಮಕ್ಕಳಾದ ರಿದ್ಧಿ ಮತ್ತು ಸಿದ್ಧಿಯ ದೇಹಗಳನ್ನು ದೆಹಲಿಯ ಏಮ್ಸ್ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿ ಮೂಲದ ದೀಪಿಕಾ ಗುಪ್ತಾ ಎಂಬುವವರ ಅವಳಿ ಮಕ್ಕಳು ಥೊರಾಕೊ- ಒಂಫಾಲೊಪಾಗಸ್ ಎಂಬ ದೈಹಿಕ ಸಂಯೋಜನೆಯೊಂದಿಗೆ ಕಳೆದ ವರ್ಷ ಜು.7 ರಂದು ಜನಿಸಿದ್ದರು. ಬಳಿಕ ಇವರನ್ನು 5 ತಿಂಗಳ ಕಾಲ ಐಸಿಯುನಲ್ಲಿರಿಸಲಾಗಿತ್ತು. ನಂತರ ಇವರನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕ 11 ತಿಂಗಳ ಮಕ್ಕಳಾಗಿದ್ದ ಇವರಿಗೆ ಕಳೆದ ಜೂ.8 ರಂದು 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪರಸ್ಪರ ಬೆಸೆದುಕೊಂಡಿದ್ದ ಮಕ್ಕಳ ಹೃದಯದ ಮೇಲ್ಭಾಗದ ಹೊದಿಕೆ, ಪಕ್ಕೆಲುಬುಗಳು ಮತ್ತು ಯಕೃತ್ತುಗಳನ್ನು ಪ್ರತಿ ಮಗುವಿಗೂ ಸಮಾನ ಅಂಗಾಂಶ ದೊರೆಯುವಂತೆ ಬೇರ್ಪಡಿಸಲಾಗಿದೆ. ಇಬ್ಬರ ಹೃದಯಗಳು ತೀರಾ ಹತ್ತಿರದಲ್ಲಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಮಕ್ಕಳ ಮೊದಲ ಹುಟ್ಟುಹಬ್ಬವನ್ನು ಆಸ್ಪತ್ರೆಯಲ್ಲೇ ಆಚರಿಸಲಾಗಿದೆ.
3 ವರ್ಷದ ಸಯಾಮಿ ಬಾಲಕರ ಯಶಸ್ವಿಯಾಗಿ ಬೇರ್ಪಡಿಸಿದ ವೈದ್ಯರು: 27 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ
Punjab Elections: ಸಯಾಮಿ ಅವಳಿಗಳಿಂದ ಪ್ರತ್ಯೇಕ ಮತದಾನ!