ಆಪ್ತರ ಸಾವಿನ ದುಃಖದಿಂದ ಹಾರ್ಟ್‌ ಫೈಲ್ಯೂರ್‌ ಸಾಧ್ಯತೆ ಹೆಚ್ಚು!

By Suvarna News  |  First Published Jul 12, 2022, 10:57 AM IST

ಹೃದಯ ವೈಫಲ್ಯದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿ,  ವ್ಯಾಯಾಮ ಮಾಡದೇ ಇರುವುದು ಮೊದಲಾದ ಅಭ್ಯಾಸ ಕಾರಣವಾಗುತ್ತೆ ಅನ್ನೋದು ಹಲವರಿಗೆ ಗೊತ್ತು. ಅದಲ್ಲದೆ ಆಪ್ತರ ಸಾವು ಕೂಡಾ ಹೃದಯ ವೈಫಲ್ಯಕ್ಕೆ ಕಾರಣವಾಗುತ್ತೆ ಅನ್ನೋದು ನಿಮ್ಗೆ ತಿಳಿದಿದ್ಯಾ ?


ಹೃದಯ ವೈಫಲ್ಯವು ದೀರ್ಘಕಾಲದ, ಪ್ರಗತಿಶೀಲ ಸ್ಥಿತಿಯಾಗಿದ್ದು, ಇದರಲ್ಲಿ ರಕ್ತ ಮತ್ತು ಆಮ್ಲಜನಕದ ದೇಹದ ಅಗತ್ಯಗಳನ್ನು ಪೂರೈಸಲು ಹೃದಯ ಸ್ನಾಯು ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. ಮೂಲಭೂತವಾಗಿ, ಹೃದಯವು ತನ್ನ ಕೆಲಸವನ್ನು ಮುಂದುವರಿಸಲು ಸಾಧ್ಯವಾಗದೇ ಇದ್ದಾಗ ಹೃದಯ ವೈಫಲ್ಯಗೊಳ್ಳುತ್ತದೆ. ಹಿಂದೆಲ್ಲಾ ವಯಸ್ಸಾದವರಲ್ಲಿ ಮಾತ್ರ ಹೃದಯ ಸಂಬಂಧಿತ ಅಪಾಯ ಹೆಚ್ಚಿತ್ತು. ಆದರೆ ಈಗ ಹಾಗಲ್ಲ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತ, ಹೃದಯ ಸಂಬಂಧಿ ಸಮಸ್ಯೆಗಳು ಅತ್ಯಂತ ಸಾಮಾನ್ಯವಾಗಿದೆ. ಕೆಲವೊಬ್ಬರು ಒಂದು ಬಾರಿ ಹಾರ್ಟ್‌ ಅಟ್ಯಾಕ್‌ ಆದಾಗಲೇ ಸಾವನ್ನಪ್ಪುತ್ತಾರೆ. ಕೆಲವೊಬ್ಬರು ತಕ್ಷಣವೇ ಚಿಕಿತ್ಸೆ ದೊರೆಯುವ ಕಾರಣ ಬದುಕುಳಿಯುತ್ತಾರೆ. ಹೃದಯಾಘಾತಕ್ಕೆ ಕಾರಣಗಳು ಹಲವು. ಅತಿಯಾದ ಒತ್ತಡ, ಜೀವನಶೈಲಿ ಮೊದಲಾದ ವಿಚಾರಗಳು ಹಾರ್ಟ್‌ ಫೈಲ್ಯೂರ್‌ಗೆ ಕಾರಣವಾಗಬಹುದು. ಹಾಗೆಯೇ ಆಪ್ತರ ಸಾವು ಕೂಡಾ ಹೃದಯದ ವೈಫಲ್ಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಅನ್ನೋದು ನಿಮ್ಗೆ ಗೊತ್ತಾ ?

ತೀವ್ರವಾದ ಭಾವನಾತ್ಮಕ ಒತ್ತಡದಿಂದ ಹೃದಯಕ್ಕೆ ಅಪಾಯ
ಹೃದಯ ವೈಫಲ್ಯ ಪ್ರಪಂಚದಾದ್ಯಂತ 64 ದಶಲಕ್ಷಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಹಿಂದಿನ ಅಧ್ಯಯನದ ಸಂಶೋಧನೆಗಳು ಖಿನ್ನತೆ, ಆತಂಕ ಮತ್ತು ಕಡಿಮೆ ಸಾಮಾಜಿಕ ಬೆಂಬಲವು ಹಾರ್ಟ್ ಅಟ್ಯಾಕ್‌ಗೆ ಮುಖ್ಯ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಹಾಗೆಯೆ ತೀವ್ರವಾದ ಭಾವನಾತ್ಮಕ ಒತ್ತಡ ಮತ್ತು 'ಬ್ರೋಕನ್ ಹಾರ್ಟ್ ಸಿಂಡ್ರೋಮ್' ಎಂದೂ ಕರೆಯಲ್ಪಡುವ ಟಕೋಟ್ಸುಬೊ ಕಾರ್ಡಿಯೊಮಿಯೋಪತಿ ನಡುವಿನ ಸಂಬಂಧವನ್ನು ದೃಢೀಕರಿಸಲು ಅನೇಕ ಅಧ್ಯಯನಗಳನ್ನು ನಡೆಸಲಾಗಿದೆ

Tap to resize

Latest Videos

ಯುವಜನರು ಹಾರ್ಟ್‌ ಸ್ಕ್ರೀನಿಂಗ್ ಮಾಡೋದ್ರಿಂದ ಹೃದಯಾಘಾತ ತಪ್ಪಿಸಬಹುದಾ ?

ಈ ಅಧ್ಯಯನವು ವಿಯೋಗ ಮತ್ತು ಹೃದಯ ವೈಫಲ್ಯದ ಅಪಾಯದ ನಡುವಿನ ಸಂಬಂಧವನ್ನು ಪತ್ತೆಹಚ್ಚಿದೆ. ಹೌದು, ಪ್ರೀತಿಪಾತ್ರರ ಮರಣವು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸುತ್ತದೆ. ಹೃದಯಾಘಾತದ ರೋಗಿಗಳು ಹತ್ತಿರದ ಕುಟುಂಬದ ಸದಸ್ಯರನ್ನು ಕಳೆದುಕೊಂಡ ನಂತರ ದುಃಖವನ್ನು ಅನುಭವಿಸುತ್ತಾರೆ. ಇದು ಅವರಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.

ನಿದ್ರೆಯ ಕೊರತೆಯಿಂದಲೂ ಹೃದಯ ವೈಫಲ್ಯ
1987-2018ರ ಅವಧಿಯಲ್ಲಿ ಸ್ವೀಡಿಷ್ ರೋಗಿಗಳ ನೋಂದಣಿಯಿಂದ ಹೃದಯದ ವೈಫಲ್ಯದ ಪ್ರಾಥಮಿಕ ರೋಗನಿರ್ಣಯವನ್ನು ಹೊಂದಿರುವ ರೋಗಿಗಳನ್ನು ಗುರುತಿಸಲಾಯಿತು.  ಕುಟುಂಬದ ಸದಸ್ಯರ ಸಾವಿನ ದಿನಾಂಕ ಮತ್ತು ಸಾವಿನ ಕಾರಣವನ್ನು ನೋಂದಣಿ ಮಾಡಲಾಯಿತು. ಸರಾಸರಿ 3.7 ವರ್ಷಗಳ ಅನುಸರಣೆಯ ಅವಧಿಯಲ್ಲಿ ಅಧ್ಯಯನದಲ್ಲಿ ಭಾಗವಹಿಸಿದ ಸುಮಾರು 58,949 ಮಂದಿ ಆಪ್ತರ ಸಾವಿನಿಂದ ದುಃಖವನ್ನು ಅನುಭವಿಸಿದ್ದಾರೆ. ಮತ್ತು ಈ ಕಾರಣ ಅವರಲ್ಲಿ ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸಿದೆ ಎಂದು ತಿಳಿದುಬಂದಿದೆ. ಆಘಾತಕಾರಿ ಅಧ್ಯಯನವು ಹೃದಯಾಘಾತದ ಅಪಾಯದೊಂದಿಗೆ ನಿದ್ರೆಯ ಕೊರತೆಯನ್ನು ಅಚ್ಚರಿಗೊಳಿಸುವ ಅನ್ವೇಷಣೆಯನ್ನು ಮಾಡುತ್ತದೆ. ನಿದ್ರೆಯ ಕೊರತೆಯಿಂದಲೂ ಹೃದಯಾಘಾತದ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಸ್ಪಷ್ಟಪಡಿಸಿದೆ. 

ಹೃದಯಾಘಾತದ ಲಕ್ಷಣ ಮುಖದ ಮೇಲೂ ಕಾಣಿಸಿಕೊಳ್ಳುತ್ತೆ, ಗಮನವಿರಲಿ !

ಹೃದಯರಕ್ತನಾಳದ ಕಾಯಿಲೆಗಳು ಮತ್ತು ಇತರ ನೈಸರ್ಗಿಕ ಕಾರಣಗಳಿಂದ ಉಂಟಾಗುವ ಸಾವು ಮಾತ್ರವಲ್ಲದೆ ಅಸ್ವಾಭಾವಿಕ ಸಾವಿನ ಪ್ರಕರಣಗಳಲ್ಲಿಯೂ ಆಪ್ತರ ಸಾವಿನ ಸಂಬಂಧವನ್ನು ಗಮನಿಸಲಾಗಿದೆ ಎಂದು ಅಧ್ಯಯನ ನಡೆಸಿದ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನ ಡಾಕ್ಟರೇಟ್ ವಿದ್ಯಾರ್ಥಿ ಹುವಾ ಚೆನ್ ಹೇಳಿದರು. ಅಧ್ಯಯನದ ಆವಿಷ್ಕಾರಗಳು ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಹೆಚ್ಚು ಆಪ್ತರಾಗಿರುವ ಮಂದಿ ಅಂಥವರ ಸಾವಿನಿಂದ ಬೇಗ ದುಃಖಕ್ಕೆ ಒಳಗಾಗುತ್ತಾರೆ.  ದುಃಖಿತ ಹೃದಯ ಕ್ರಮೇಣ ಹೃದಯ  ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಅಧ್ಯಯನ ನಡೆಸಿದ ತಂಡ ತಿಳಿಸಿದೆ. 

ಹೀಗಿದ್ದೂ ಅಧ್ಯಯನವು ಹಲವಾರು ಮಿತಿಗಳನ್ನು ಹೊಂದಿದೆ. ಅನುವಂಶಿಕ ಅಂಶಗಳು ಅಥವಾ ಕುಟುಂಬದ ಸದಸ್ಯರು ಹಂಚಿಕೊಂಡಿರುವ ಅಳೆಯಲಾಗದ ಸಾಮಾಜಿಕ ಆರ್ಥಿಕ, ಜೀವನಶೈಲಿ ಅಥವಾ ಆರೋಗ್ಯ-ಸಂಬಂಧಿತ ಅಂಶಗಳು ಸಹ ಇದರೊಂದಿಗೆ ಸಂಬಂಧ ಹೊಂದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. 

click me!