ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವವರ ಆಹಾರಕ್ರಮ ಹೀಗಿದ್ದರೆ ಆರೋಗ್ಯವಾಗಿರ್ಬೋದು

By Suvarna News  |  First Published May 13, 2022, 3:15 PM IST

ನೈಟ್‌ಶಿಫ್ಟ್‌ನಲ್ಲಿ (Nightshift) ಕೆಲಸ ಮಾಡುವುದರಿಂದ ದೇಹದ (Body) ಆರೋಗ್ಯ (Health) ಹದಗೆಡುತ್ತದೆ. ಆದರೆ, ಜೀವನಶೈಲಿ (Lifestyle), ಆಹಾರಕ್ರಮ ಸರಿಯಾಗಿ ಇಟ್ಟುಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ ನೀವೇನು ಮಾಡ್ಬೇಕು ?


ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಉದ್ಯೋಗ (Work)ಗಳಲ್ಲೂ ರಾತ್ರಿ ಪಾಳಿಯ (Night shift) ಕೆಲಸವಂತೂ ಇದ್ದೇ ಇರುತ್ತದೆ. ಇದರಲ್ಲಿ  ಆರೋಗ್ಯಕ್ಕೆ (Health) ಉಂಟಾಗುವ ಸಮಸ್ಯೆಗಳು ಹಲವು. ಹಗಲಿನಲ್ಲಿ ಕೆಲಸ ಮಾಡುವವರಿಗೆ ನಿದ್ದೆ ಸರಿಯಾಗಿ ಆಗುತ್ತದೆ ಹೀಗಾಗಿ ಆರೋಗ್ಯಕ್ಕೆ ಸಂಬಂಧಿಸಿದ ದೊಡ್ಡ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಕಿರಿಕಿರಿ ಇರುವುದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ. ನೈಟ್‌ ಡ್ಯೂಟಿ ಹೇಳುವಷ್ಟು ಸುಲಭವಲ್ಲ. ಇಡೀ ಜಗತ್ತು ಮಲಗಿರುವಾಗ ಎದ್ದು ಕೆಲಸ ಮಾಡಬೇಕು. ಇಂತಹ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತವೆ. ಮಧುಮೇಹ (Diabetes), ಸ್ಥೂಲಕಾಯತೆ, ಹೃದ್ರೋಗ ಮೊದಲಾದ ಸಮಸ್ಯೆ ಹೆಚ್ಚಾಗುತ್ತದೆ. ಆದ್ರೆ ನೀವು ಅನುಸರಿಸುವ ಒಳ್ಳೆಯ ಅಭ್ಯಾಸ (Habit) ನಿಮ್ಮನ್ನು ಇಂಥಾ ಆರೋಗ್ಯ ಸಮಸ್ಯೆಗಳಿಂದ ದೂರವಿಡಬಹುದು. 

ನೈಟ್​ಶಿಫ್ಟ್​ಗಳಲ್ಲಿ ಕೆಲಸ ಮಾಡುವವರು ಈ ಸಲಹೆಗಳನ್ನು ತಪ್ಪದೆ ಪಾಲಿಸಿ.

Tap to resize

Latest Videos

ನಿದ್ರೆ ಮಾಡಲು ಸಮಯ ನಿಗದಿ ಪಡಿಸಿ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಮುಖ್ಯವಾಗಿ ನಿದ್ರೆಯ (Sleep0 ಕೊರತೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಹೀಗಾಗಿ ನಿದ್ದೆ ಮಾಡಲು ನಿರ್ಧಿಷ್ಟ ಸಮಯವನ್ನು ನಿಗದಿಪಡಿಸಿ. ನಿತ್ಯವು ಒಂದೊಂದು ಸಮಯದಲ್ಲಿ ನಿದ್ರೆ ಮಾಡುವುದರಿಂದ ತೂಕ ಹೆಚ್ಚಳ, ಮಾನಸಿಕ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವವರು ಮೊದಲು ನಿದ್ರೆ ಮಾಡುವ ಸಮಯವನ್ನು ಫಿಕ್ಸ್ ಮಾಡಿ, ದಿನ ಅದೇ ಸಮಯಕ್ಕೆ ಮಲಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ನೈಟ್‌ ಶಿಫ್ಟ್‌ ಮಾಡೋರು ಮಧುಮೇಹ, ಹೃದ್ರೋಗ ಸಮಸ್ಯೆ ಕಾಣಿಸಿಕೊಳ್ಳೋದು ಬೇಡಾಂದ್ರೆ ಹೀಗೆ ಮಾಡಿ

ನೀರು ಹೆಚ್ಚು ಕುಡಿಯಿರಿ: ರಾತ್ರಿ ನಿದ್ದೆ ಮಾಡದೆ ಇರುವುದರಿಂದ ದೇಹದಲ್ಲಿ ನೀರಿನ (Water) ಕೊರತೆ ಉಂಟಾಗುತ್ತದೆ. ಇದು ದೇಹ ನಿರ್ಜಲೀಕರಣಕ್ಕೆ ಒಳಗಾಗಲು ಕಾರಣವಾಗುತ್ತದೆ. ಹೀಗಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹೆಚ್ಚು ನೀರು ಕುಡಿಯಿರಿ. ಇದು ನಿಮ್ಮ ದೇಹ ಒಣಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಆರೋಗ್ಯ ಸಮಸ್ಯೆಯ ಭಯವಿಲ್ಲ. ರಾತ್ರಿಯ ವೇಳೆ ಕೆಲಸ ಮಾಡುವಾಗ ಆದಷ್ಟು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ತಣ್ಣನೆಯ ನೀರನ್ನು ಕುಡಿದರೆ ಶೀತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. 

ಆಹಾರ ಮಿತವಾಗಿ ಸೇವಿಸಿ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹೆಚ್ಚು ಆಹಾರ (Food) ಸೇವನೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಒಮ್ಮೆಲೆ ಸೇವನೆ ಮಾಡದೇ ಇದ್ದರೂ ಆಗಾಗ ತಿನ್ನುವ ಅಭ್ಯಾಸ ಇವರಿಗಿರುತ್ತದೆ. ನಿದ್ರೆಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಇದರಿಂದ ದೇಹಕ್ಕೆ ಅತಿಯಾದ ಕ್ಯಾಲೊರಿ ಅಂಶಗಳು ಸೇರುತ್ತಾ ಹೋಗುತ್ತವೆ. ಅನಾರೋಗ್ಯಕರ ಆಹಾರದಿಂದ ಮಧುಮೇಹ ನಿರ್ವಹಣೆ ಕೂಡ ಕಷ್ಟ ಆಗುತ್ತದೆ. ಹಾಗಾಗಿ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಗಮನವಹಿಸಬೇಕು.

ನೈಟ್ ಶಿಫ್ಟ್ ತರುತ್ತೆ ಆರೋಗ್ಯಕ್ಕೆ ಕುತ್ತು

ತರಕಾರಿ, ಹಣ್ಣುಗಳನ್ನು ಹೆಚ್ಚು ಸೇವಿಸಿ: ರಾತ್ರಿ ನಿದ್ದೆಗೆಡವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity Power) ಕಡಿಮೆಯಾಗವ ಸಾಧ್ಯತೆ ಇರುತ್ತದೆ. ಹೀಗಾಗಿ ಪೌಷ್ಠಿಕ ಆಹಾರಗಳ ಸೇವನೆಯೆಡೆಗೆ ಹೆಚ್ಚು ಗಮನ ನೀಡಿ. ತರಕಾರಿಗಳ ಸಲಾಡ್‌, ಫ್ರೂಟ್ಸ್‌ ಸಲಾಡ್‌, ಹಣ್ಣು, ತರಕಾರಿಗಳ ಜ್ಯೂಸ್‌ ಹೆಚ್ಚಾಗಿ ಸೇವಿಸಿ. ಇದರಿಂದ ದೇಹ ನಿರ್ಜಲೀಕರಣವಾಗುವುದನ್ನೂ ತಡೆಯಬಹುದು. ತರಕಾರಿ, ಸೊಪ್ಪುಗಳ ಸೇವನೆಯಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ.

ಕಾಫಿ, ಟೀಗಳ ಬಳಕೆ ಮಿತವಾಗಿರಲಿ: ರಾತ್ರಿ ನಿದ್ರೆ ಬರಬಾರದೆಂದು ಕೆಲಸಕ್ಕೆ ಯಾವುದೇ ತೊಂದರೆಯಾಗಬಾರದೆಂದು ಕಾಫಿ, ಟೀ ಸೇರಿದಂತೆ ಇತರೆ ಪಾನೀಯಗಳನ್ನು ಕುಡಿಯುತ್ತಾರೆ ಆದರೆ ಅದು ತಪ್ಪು ಇವುಗಳು ಕೂಡ ಅನಾರೋಗ್ಯವನ್ನುಂಟು ಮಾಡಬಹುದು.

ಜಂಕ್‌ಫುಡ್ ಸೇವನೆ ಮಾಡದಿರಿ: ರಾತ್ರಿಪಾಳಿಯಲ್ಲಿರುವ ಹೆಚ್ಚಾಗಿ ಸರಿಯಾದ ಆಹಾರಕ್ರಮವನ್ನು ಪಾಲಿಸುವುದಿಲ್ಲ. ರೆಡಿಮೇಡ್ ಫುಡ್‌, ಜಂಕ್‌ಫುಡ್‌ಗಳನ್ನು ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೈಟ್‌ ಶಿಫ್ಟ್ ಕೆಲಸದಲ್ಲಿ ರಾತ್ರಿಯಿಡೀ ಎಚ್ಚರವಾಗಿರುವ ಕಾರಣ ಹೆಚ್ಚು ಎಣ್ಣೆಯಿರುವ ಅಥವಾ ಕರಿದ ಪದಾರ್ಥಗಳನ್ನು ಸೇವಿಸಬೇಡಿ. ಇದು ನಿಮ್ಮನ್ನು ಬೊಜ್ಜಿನ ದೇಹ ಉಂಟುಮಾಡುವಂತೆ ಮಾಡುತ್ತದೆ. ಜಂಕ್‌ಫುಡ್‌ಗಳನ್ನೂ ಕೂಡ ಅವೈಡ್‌ ಮಾಡಿ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಬಹುದಾಗಿದೆ.

click me!