ನಿಮ್ಮ ಹೊಟ್ಟೆ ಸರಿಯಾಗಿರಬೇಕೆ? ಹಾಗಿದ್ದರೆ ಈ ಅಂಶಗಳನ್ನು ಪಾಲಿಸಿ

By Suvarna NewsFirst Published Sep 21, 2021, 5:13 PM IST
Highlights

ನಿಮ್ಮ ಜೀರ್ಣಾಂಗ ಕಾರ್ಯವ್ಯೂಹದ ಬಗ್ಗೆ ಒಂದು ಕಣ್ಣಿಟ್ಟಿರಿ. ನಿಮ್ಮ ಕೆಲವು ಅಭ್ಯಾಸಗಳು ನಿಮ್ಮ ಹೊಟ್ಟೆಯ ಆರೋಗ್ಯವನ್ನು ಕೆಡಿಸಬಲ್ಲವು. ಬನ್ನಿ ಅವುಗಳ್ಯಾವುವು ಅಂತ ನೋಡೋಣ.

ನಿಮ್ಮ ದೇಹದಲ್ಲಿ ಹೊಟ್ಟೆ ಸರಿಯಾಗಿ ಕೆಲಸ ಮಾಡುತ್ತಾ ಇದ್ದರೆ ಆರೋಗ್ಯ ಸರಿಯಾಗಿ ಇರುತ್ತದೆ. ಸಕ್ರಿಯ ಚಯಾಪಚಯ(ಜೀರ್ಣಾಂಗದ ಕೆಲಸ)ವು ನಿಮಗೆ ಹೆಚ್ಚಿನ ಕ್ಯಾಲೊರಿಗಳನ್ನು ಸುಡುವಂತೆ ಮಾಡುವ ಮೂಲಕ ತೂಕ ಸರಿಯಾಗಿರಲು ಸಹಾಯ ಮಾಡುತ್ತದೆ. ನಿಮ್ಮ ದೇಹಕ್ಕೆ ಅಗತ್ಯವಾದ ಮತ್ತು ಖರ್ಚಾಗಬೇಕಾದ ಕ್ಯಾಲೋರಿಗಳ ಪ್ರಮಾಣವನ್ನು ನಿರ್ಧರಿಸುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ ಮತ್ತು ರಕ್ತದೊತ್ತಡದ ಮಟ್ಟವನ್ನು ನೋಡಿಕೊಳ್ಳುವ ಮೂಲಕ ದೇಹದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಕೆಡಿಸುವ ಕೆಲವು ಕೆಟ್ಟ ಅಭ್ಯಾಸಗಳು ಇಲ್ಲಿವೆ, ನೋಡಿ. ಇವುಗಳನ್ನು ನಿವಾರಿಸಿಕೊಳ್ಳಿ.

1. ತುಂಬಾ ಕಡಿಮೆ ತಿನ್ನುವುದು
ಕಡಿಮೆ ಕ್ಯಾಲೊರಿಗಳನ್ನು ತಿನ್ನುವುದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ತಪ್ಪು ಕಲ್ಪನೆಯನ್ನು ಅನೇಕ ಜನರು ಹೊಂದಿದ್ದಾರೆ. ಆದರೆ ಕ್ಯಾಲೊರಿ ಸೇವನೆಯನ್ನು ಮಿತಿಮೀರಿ ಸೀಮಿತಗೊಳಿಸುವುದರಿಂದ ಜೀರ್ಣಕ್ರಿಯೆ, ಹಸಿವು ಹಾಗೂ ಅದರಿಂದ ದೇಹದ ಶಕ್ತಿ ಕಡಿಮೆಯಾಗಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ತೂಕವನ್ನು ಕಳೆದುಕೊಳ್ಳಲು ಕ್ಯಾಲೋರಿ ಕೊರತೆಯನ್ನು ಸೃಷ್ಟಿಸಬೇಕು ನಿಜ; ಅಂದರೆ ಖರ್ಚು ಮಾಡುವ ಕ್ಯಾಲೊರಿ ಹೆಚ್ಚಿರಬೇಕು, ತಿನ್ನುವುದು ಕಡಿಮೆ ಇರಬೇಕು. ಆದರೆ ತುಂಬಾ ಕಡಿಮೆ ಕ್ಯಾಲೊರಿಗಳನ್ನು ತಿನ್ನುವುದು ಅಪಾಯಕಾರಿ ಆಗಬಹುದು. ಈ ಸಂದರ್ಭದಲ್ಲಿ ನಿಮ್ಮ ದೇಹವು ಆಹಾರದ ಕೊರತೆಯನ್ನು ಗ್ರಹಿಸುತ್ತದೆ ಮತ್ತು ಅದು ಕ್ಯಾಲೊರಿಗಳನ್ನು ಸುಡುವ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ.

2. ಜಡ ಜೀವನಶೈಲಿ
ಜಡ ಜೀವನಶೈಲಿಯನ್ನು ಮುನ್ನಡೆಸುವುದು ನೀವು ಪ್ರತಿದಿನ ಸುಡುವ ಕ್ಯಾಲೋರಿಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು. ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ನಮ್ಮಲ್ಲಿ ಹೆಚ್ಚಿನವರು ಮನೆಯಿಂದ ಕೆಲಸ ಮಾಡುತ್ತಾ ದಿನವಿಡೀ ಕುಳಿತುಕೊಳ್ಳುತ್ತಿದ್ದೇವೆ. ಇದು ಚಯಾಪಚಯ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆಗಾಗ ನಿಲ್ಲುವುದು, ನೆಲ ಶುಚಿಗೊಳಿಸುವುದು, ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು, ಅಡುಗೆ ಮಾಡುವುದು ಮುಂತಾದ ಪ್ರತಿಯೊಂದು ದೈಹಿಕ ಚಟುವಟಿಕೆಯೂ ನಿಮಗೆ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಈ ರೀತಿಯ ಚಟುವಟಿಕೆಯನ್ನು, ವ್ಯಾಯಾಮ-ಅಲ್ಲದ ಚಟುವಟಿಕೆಗಳನ್ನು ನಾವು ಮಾಡುತ್ತಲೇ ಇರಬೇಕು.

3. ಪ್ರೋಟೀನ್ ತಿನ್ನದಿರುವುದು
ಆರೋಗ್ಯಕರ ತೂಕ ನಷ್ಟವನ್ನು ಸಾಧಿಸಲು ಸಾಕಷ್ಟು ಪ್ರೋಟೀನ್ ತಿನ್ನುವುದು ಮುಖ್ಯ. ಪ್ರೋಟೀನ್ ನಿಮ್ಮನ್ನು ಹೆಚ್ಚು ಕಾಲ ಸಶಕ್ತವಾಗಿ ಇರುವಂತೆ ಮಾಡುತ್ತದೆ, ಮತ್ತು ನಿಮ್ಮ ದೇಹವು ಕ್ಯಾಲೊರಿಗಳನ್ನು ಸುಡುವ ದರವನ್ನು ಹೆಚ್ಚಿಸುತ್ತದೆ. ನೀವು ಆಹಾರವನ್ನು ಜೀರ್ಣಿಸಿಕೊಂಡಾಗ, ಚಯಾಪಚಯ ಕ್ರಿಯೆಯಲ್ಲಿ ಹೆಚ್ಚಳವಾಗುತ್ತದೆ, ಇದನ್ನು ಆಹಾರದ ಉಷ್ಣ ಪರಿಣಾಮ ಎಂದು ಕರೆಯಲಾಗುತ್ತದೆ. ಆದ್ದರಿಂದ, ಪ್ರೋಟೀನ್‌ನ ಉಷ್ಣ ಪರಿಣಾಮವು ಕೊಬ್ಬು ಅಥವಾ ಕಾರ್ಬೊಹೈಡ್ರೇಟ್‌ಗಳಿಗಿಂತ ಹೆಚ್ಚು. ಕೇವಲ ಪ್ರೋಟೀನ್ ತಿನ್ನುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು 20-30 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಕಾರ್ಬೋಹೈಡ್ರೇಟ್‌ನಲ್ಲಿ ಇದು 5-10 ಪ್ರತಿಶತ ಮತ್ತು ಕೊಬ್ಬಿನಲ್ಲಿ 3 ಶೇಕಡಾ ಕಡಿಮೆ.
 

4. ಸಾಕಷ್ಟು ನಿದ್ದೆ ಇಲ್ಲದಿರುವುದು
ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ನಿದ್ರೆ ಮಾಡುವುದು ಮುಖ್ಯವಾಗಿದೆ. ಕಡಿಮೆ ಸಮಯ ನಿದ್ದೆ ಮಾಡುವುದರಿಂದ ನಿಮ್ಮಲ್ಲಿ ಹೃದ್ರೋಗ, ಮಧುಮೇಹ ಮತ್ತು ಖಿನ್ನತೆ ಸೇರಿದಂತೆ ನಿಮ್ಮ ಅನಾರೋಗ್ಯದ ಅಪಾಯ ಹೆಚ್ಚಬಹುದು. ಅಸಮರ್ಪಕ ನಿದ್ರೆ ನಿಮ್ಮ ಚಯಾಪಚಯ ದರವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ತೂಕವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ನಿದ್ರಿಸದಿರುವುದು ನಿಮ್ಮ ನಿದ್ರೆಯ ಚಕ್ರವನ್ನು ಘಾತಿಗೊಳಿಸುತ್ತದೆ ಮತ್ತು ನಿಮ್ಮ ದೇಹದ ಸಿರ್ಕಾಡಿಯನ್ ಲಯಕ್ಕೆ ಅಡ್ಡಿಪಡಿಸುತ್ತದೆ.

40 ವರ್ಷದನಾದ್ಮೇಲೆ ಹೃದಯ ಆರೋಗ್ಯವನ್ನು ಕಾಪಾಡಲು ಏನು ಮಾಡಬೇಕು?

5. ಹೆಚ್ಚು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಸೇವನೆ
ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಿಗಿಂತ ಬಹಳ ಭಿನ್ನವಾಗಿವೆ. ಉದಾಹರಣೆಗೆ ಬ್ರೆಡ್‌ ಮುಂತಾದ ಬೇಕರಿ ಐಟಂಗಳು. ಅವು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಕೆಗೆ ಕಾರಣವಾಗುತ್ತವೆ ಮತ್ತು ನಿಮ್ಮ ದೇಹವು ಅವುಗಳನ್ನು ಒಡೆಯಲು ಕಡಿಮೆ ಶಕ್ತಿಯನ್ನು ಬಳಸುತ್ತದೆ. ಹೀಗಾಗಿ, ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವುದು ನಿಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ದೇಹ ಜಡವಾದಂತಾಗುತ್ತದೆ. ಹೊಟ್ಟೆಯ ಕೆಲಸದ ವೇಗ ಕಡಿಮೆಯಾಗುತ್ತದೆ. ಅಜೀರ್ಣ ಅನ್ನುತ್ತೇವಲ್ಲ, ಅದು ಇದೇ.

6. ಕಟ್ಟುನಿಟ್ಟಿನ ಆಹಾರಕ್ರಮ
ತುಂಬಾ ಕಠಿಣವಾದ ಡಯಟ್‌ ಮಾಡುವುದು ಒಳ್ಳೆಯದಲ್ಲ. ಆಹಾರದಲ್ಲಿ ವೈವಿಧ್ಯವಿರಬೇಕು. ಮಿತವಾದ ಕಾರ್ಬೊಹೈಡ್ರೇಟ್, ಸಾಕಷ್ಟು ಪ್ರೊಟೀನ್, ಒಂದಿಷ್ಟು ಕೊಬ್ಬು ದೇಹವನ್ನು ಸರಿಯಾದ ಪ್ರಮಾಣದಲ್ಲಿ ಸೇರಬೇಕು. ನೀವು ಹೆಚ್ಚು ದೈಹಿಕ ಪರಿಶ್ರಮದ ಕೆಲಸ ಅಥವಾ ಹೆಚ್ಚು ವ್ಯಾಯಾಮ ಮಾಡುವವರಾಗಿದ್ದರೆ, ಕಟ್ಟುನಿಟ್ಟಾದ ನಿಗದಿತ ಆಹಾರಕ್ರಮದಿಂದ ಸ್ವಲ್ಪ ಹಾನಿಯಿದೆ. ನಿಮ್ಮ ದೇಹವು ಮೂಲಭೂತ ದೈನಂದಿನ ಕೆಲಸವನ್ನು ನಿರ್ವಹಿಸಲು ಶಕ್ತಿಯನ್ನು ಉಳಿಸಲು ಒತ್ತಾಯಿಸುತ್ತದೆ. ನಿಮ್ಮ ದೇಹವು ಈ ಕ್ಯಾಲೊರಿಗಳಿಗೆ ಅಂಟಿಕೊಂಡಿರುವುದರಿಂದ ಹೆಚ್ಚಿನ ಶಕ್ತಿಗೆ ಹಿನ್ನಡೆಯಾಗಬಹುದು.

ಕನಸಿನಲ್ಲಿ ಸ್ತನಗಳು ಕಾಣಿಸಿಕೊಂಡರೇನರ್ಥ?

 

click me!