ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಯಾರಿಗೆ ಜಾಸ್ತಿ? ಯಾರಿಗೆ ಕಡಿಮೆ? ನಿತ್ಯ ಸ್ಖಲನ ಪರಿಹಾರವೇ?

By Suvarna NewsFirst Published Aug 30, 2021, 5:10 PM IST
Highlights

ಬಹುತೇಕ ವಯಸ್ಸಾದ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆರೋಗ್ಯಕರ ಲೈಂಗಿಕ ಜೀವನ ನಡೆಸಿದ, ಆರೋಗ್ಯಕರ ಡಯಟ್ ಪಾಲಿಸಿದ ಪುರುಷನಿಗೆ ಈ ಸಮಸ್ಯೆ ಕಾಡುವುದು ಕಡಿಮೆ. ಯಾರಿಗೆ ಬರುತ್ತೆ, ಏನು ಪರಿಹಾರ ಅಂತ ತಿಳಿಯೋಣ ಬನ್ನಿ.
 

ಪುರುಷರ ಜನನಾಂಗದ ಹಿಂಭಾಗದಲ್ಲಿರುವ ಪ್ರಾಸ್ಟೇಟ್ ಗ್ರಂಥಿ ಒಂದು ಸೂಕ್ಷ್ಮ ಅಂಗವಾಗಿದ್ದು ಇದರ ಕಾರ್ಯ ಮುಖ್ಯವಾಗಿ ವೀರ್ಯದ ಜೊತೆಗಿರುವ ಪ್ರಾಸ್ಟೇಟ್ ದ್ರವವನ್ನು ಸ್ರವಿಸುವುದು. ವೃಷಣಗಳು ಸತತವಾಗಿ ವೀರ್ಯಾಣುಗಳನ್ನು ಉತ್ಪಾದಿಸುತ್ತಲೇ ಇರುತ್ತವೆ, ಮತ್ತು ಇವು ಕಾಲಕಾಲಕ್ಕೆ ಖಾಲಿಯಾಗುತ್ತಲೂ ಇರಬೇಕು. ಹೀಗಾಗದೇ ಇದ್ದರೆ ಎದುರಾಗುವ ತೊಂದರೆಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಸಹಾ ಒಂದು.

ಲಕ್ಷಣಗಳೇನು? 
ಪ್ರಾಸ್ಟ್ರೇಟ್ ಕ್ಯಾನ್ಸರ್‌ನ ಲಕ್ಷಣಗಳೆಂದರೆ ಮೂತ್ರ ವಿಸರ್ಜನೆಯಾಗಲು ಅತಿ ಹೆಚ್ಚು ಸಮಯ ತೆಗೆದುಕೊಳ್ಳುವುದು. ಮೂತ್ರದ ರಭಸ ಅತಿ ಕ್ಷೀಣವಾಗಿರುವುದು. ಹೆಚ್ಚು ಹೊತ್ತು ಮೂತ್ರ ತಡೆದುಕೊಳ್ಳಲು ಸಾಧ್ಯವಾಗದೇ ಕೊಂಚಹೊತ್ತಿಗೇ ಮೂತ್ರಕ್ಕೆ ಅವಸರವಾಗುವುದು, ಮೂತ್ರ ವಿಸರ್ಜನೆ ಮುಗಿದ ಬಳಿಕವೂ ಮೂತ್ರಕೋಶ ಖಾಲಿಯಾಗಿಲ್ಲ, ಇನ್ನೂ ಇದೆ ಎಂದು ಅನ್ನಿಸುವುದು ಮೊದಲಾದವು. ಇದರೊಂದಿಗೆ ನಿಮಿರು ದೌರ್ಬಲ್ಯತನ ಅಥವಾ ನಿಮಿರುತನವನ್ನು ಹೆಚ್ಚು ಹೊತ್ತು ಉಳಿಸಿಕೊಳ್ಳಲು ಸಾಧ್ಯವಾಗದೇ ಇರುವುದೂ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್‌ನ ಇನ್ನೊಂದು ಲಕ್ಷಣ.

ನೀವೂ ಕೋವಿಡ್ ಲಸಿಕೆ ಮೂರನೇ ಡೋಸ್ ತೆಗೆದುಕೊಳ್ಳಬೇಕೇ?

ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಕಾರಣವೇನು?
ಸ್ಪಷ್ಟ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ಆದರೆ ವಯಸ್ಸು ಏರುತ್ತಿದ್ದಂತೆಯೇ ಈ ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ಏರುತ್ತಾ ಹೋಗುತ್ತದೆ. ಈ ಕ್ಯಾನ್ಸರ್ ಆವರಿಸಿದ ಪ್ರಾರಂಭದಲ್ಲಿ ಇದರ ಇರುವಿಕೆಯೇ ಗೊತ್ತಾಗುವುದಿಲ್ಲ. ಇದರ ಬೆಳವಣಿಗೆಯೂ ತೀರಾ ನಿಧಾನ. ಪ್ರಾರಂಭಿಕ ಹಂತದಲ್ಲಿದ್ದು ಮುಂದಿನ ಹಂತಕ್ಕೆ ಬರುವವರೆಗೂ ಈ ಕಾಯಿಲೆ ಇರುವುದೇ ಗೊತ್ತಿಲ್ಲದ ವ್ಯಕ್ತಿ ದಶಕಗಳನ್ನೇ ಕಳೆದಿರುತ್ತಾನೆ. 
ಪುರುಷರ ಕಾಮಪರಾಕಾಷ್ಠೆಯಾಗಿರುವ ವೀರ್ಯಸ್ಖಲನ ವೃಷಣಗಳನ್ನು ಬರಿದು ಮಾಡುವ ನಿಸರ್ಗದ ವ್ಯವಸ್ಥೆಯೂ ಆಗಿದೆ. ಹೀಗೆ ಬರಿದಾಗಲು ಕಾಮಕೂಟ, ಹಸ್ತಮೈಥುನ ಅಥವಾ ಸ್ವಪ್ನಸ್ಖಲನ ದಾರಿಗಳಿವೆ. ಇವುಗಳಲ್ಲಿ ಮೊದಲೆರಡು ಪ್ರಜ್ಞಾಪೂರ್ವಕವಾಗಿದ್ದರೆ ಮೂರನೆಯದು ದೇಹದ ವ್ಯವಸ್ಥೆಯ ಸ್ವಯಂಚಾಲಿತ ಕ್ರಿಯೆಯಾಗಿದೆ. ವಿಧಾನ ಏನೇ ಇದ್ದರೂ, ಮುಖ್ಯ ಉದ್ದೇಶ ವೃಷಣಗಳಲ್ಲಿ ಸಂಗ್ರಹಗೊಳ್ಳುತ್ತಿರುವ ವೀರ್ಯಾಣುಗಳನ್ನು ಆಗಾಗ ಖಾಲಿ ಮಾಡುತ್ತಿರುವುದು.

ಹೀಗೆ ಸ್ಖಲನದ ಮೂಲಕ ಖಾಲಿಯಾಗುತ್ತಿದ್ದಷ್ಟೂ ಪ್ರಾಸ್ಟೇಟ್ ಗ್ರಂಥಿಗಳೂ ಆರೋಗ್ಯಕರವಾಗಿದ್ದು ಕ್ಯಾನ್ಸರ್ಗೆ ಒಳಗಾಗುವ ಸಾಧ್ಯತೆ ಕನಿಷ್ಟವಾಗಿರುತ್ತದೆ. ವಿಶೇಷವಾಗಿ ವಯಸ್ಸಾಗುತ್ತಿದ್ದಂತೆ ಈ ಕ್ರಿಯೆಗೆ ಸ್ವಾಭಾವಿಕ ಹಿನ್ನಡೆ ದೊರಕುತ್ತಾ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಎದುರಾಗುವ ಸಾಧ್ಯತೆಯೂ ಹೆಚ್ಚುತ್ತಾ ಹೋಗುತ್ತದೆ. 

ದಿನಕ್ಕೆ ಬರೀ 200 ಕ್ಯಾಲೊರಿ ಇಳಿಸಿದರೂ ಹೃದಯ ಸಮಸ್ಯೆ ಗಾಯಬ್‌!

ಹಾಗಿದ್ದರೆ ಎಷ್ಟು ಬಾರಿ ಸ್ಖಲನ ಮಾಡಬೇಕು?
ಪ್ರಾಸ್ಟೇಟ್ ಕ್ಯಾನ್ಸರ್ ಸಂಭವ ಕಡಿಮೆ ಮಾಡಲು ಪುರುಷರು ನಿಗದಿತ ಸಂಖ್ಯೆಯಲ್ಲಿ ಸ್ಖಲನ ಮಾಡಬೇಕು. 
ಒಂದು ಅಧ್ಯಯನದ ತಂಡ 20ರ ಹರೆಯದ ಪುರುಷರಲ್ಲಿ ತಿಂಗಳಿಗೆ 21 ಬಾರಿ ಸ್ಖಲನ ಮಾಡಿದವರು ತಿಂಗಳಿಗೆ ಏಳು ಬಾರಿ ಸ್ಖಲನ ಪಡೆದವರಿಗಿಂತಲೂ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯವನ್ನು ಶೇಕಡಾ 19ರಷ್ಟು ಕಡಿಮೆ ಹೊಂದಿರುತ್ತಾರೆ ಎಂದು ವಿವರಿಸಿದೆ. ನಲವತ್ತರ ಹರೆಯದಲ್ಲಿರುವ ಪುರುಷರು ಸಾಕಷ್ಟು ಸ್ಖಲನಗಳನ್ನು ಹೊಂದುತ್ತಿದ್ದರೆ ಇವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಇನ್ನಷ್ಟು ತಗ್ಗುತ್ತದೆ, ಅಂದರೆ ಸುಮಾರು ಶೇ.22ರಷ್ಟು ಎಂದು ತಜ್ಞರು ವಿವರಿಸಿದ್ದಾರೆ. ವೈದ್ಯಕೀಯ ಅಂಕಿ ಅಂಶಗಳ ಪ್ರಕಾರ ಈ ಪ್ರಮಾಣ ಹೆಚ್ಚೇ ಆಗಿದೆ. 

ಆಸ್ಟ್ರೇಲಿಯಾದಲ್ಲಿ ನಡೆಸಿದ ಇನ್ನೊಂದು ಸಂಶೋಧನೆಯ ಪ್ರಕಾರ ಎಪ್ಪತ್ತು ವರ್ಷಕ್ಕಿಂದ ಕೆಳಗಿನ ವಯಸ್ಸಿನ ಪುರುಷರು ವಾರದಲ್ಲಿ ಸರಾಸರಿ 4ರಿಂದ 7 ಬಾರಿ ಸ್ಖಲನ ಪಡೆದರೆ ಇವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಎದುರಾಗುವ ಸಾಧ್ಯತೆ 36 ಶೇಖಡಾದಷ್ಟು ತಗ್ಗುತ್ತದೆ. ಅಂದರೆ ವಾರದಲ್ಲಿ 2.3 ಅಥವಾ ಇದಕ್ಕೂ ಕಡಿಮೆ ಸರಾಸರಿ ಬಾರಿ ಸ್ಖಲನ ಹೊಂದುವ ಪುರುಷರಲ್ಲಿ ಈ ಸಾಧ್ಯತೆ ಹೆಚ್ಚಿರುತ್ತದೆ.

ತಡೆಯುವುದು ಹೇಗೆ? 
ಪ್ರಾಸ್ಟೇಟ್ ಗ್ರಂಥಿಯ ಸ್ನಾಯುಗಳು ಸ್ಖಲನದ ಸಮಯದಲ್ಲಿ ಈ ಮೂಲ ದ್ರವವನ್ನು ಮೂತ್ರನಾಳಕ್ಕೆ ತಳ್ಳಲು ಸಹಾಯ ಮಾಡುತ್ತದೆ. ಈ ಕಾರ್ಯಕ್ಕಾಗಿ ದೇಹದ ತಾಪಮಾನ ಅತಿ ಹೆಚ್ಚೂ ಅಲ್ಲದೇ ಅತಿ ಕಡಿಮೆಯೂ ಅಲ್ಲದೇ ಇರಬೇಕು. ವೀರ್ಯಾಣುಗಳು ಉತ್ಪತ್ತಿಯಾಗುವ ವೃಷಣಗಳು ಕೊಂಚ ಕಡಿಮೆ ತಾಪಮಾನದಲ್ಲಿರಬೇಕು. ಇದೇ ಕಾರಣಕ್ಕೆ ಇವು ದೇಹದಿಂದ ಹೊರಭಾಗದಲ್ಲಿ ಅತಿಯಾಗಿ ಸಂಕುಚನಗೊಳ್ಳಬಲ್ಲ ಅಥವಾ ವಿಕಸಿಸಬಲ್ಲ ಚರ್ಮದ ಚೀಲದಲ್ಲಿರುತ್ತವೆ. ಒಂದು ವೇಳೆ ಪ್ರಾಸ್ಟೇಟ್ ಗ್ರಂಥಿಯ ತಾಪಮಾನ ಅಗತ್ಯಕ್ಕೂ ಕಡಿಮೆಯಾದರೆ ಇದು ಮೂತ್ರವಿಸರ್ಜನೆಗೆ ಅಗತ್ಯವಾದ ಪ್ರಚೋದನೆಯನ್ನು ನೀಡದೇ ಹೆಚ್ಚಿನ ಹೊತ್ತು ಮೂತ್ರವಿಸರ್ಜನೆ ಆಗದಂತೆ ತಡೆಯುತ್ತದೆ.
 


ಸಾಮಾನ್ಯವಾಗಿ ದೇಹದ ರಕ್ತದಲ್ಲಿ ಅಸಮತೋಲನ ಉಂಟುಮಾಡುವ ಆಹಾರಗಳು ಇದಕ್ಕೆ ಕಾರಣ. ಮದ್ಯ ಮತ್ತು ಕಾಫಿಯಲ್ಲಿರುವ ಕೆಫೀನ್ ಇದಕ್ಕೆ ಮುಖ್ಯ ಕಾರಣವಾಗಿವೆ. ಹಾಗಾಗಿ ಪ್ರಾಸ್ಟೇಟ್ ಗ್ರಂಥಿಯ ತೊಂದರೆ ಇರುವವರು ಇವುಗಳನ್ನು ಸೇವಿಸಬಾರದು. ಉಳಿದವರೂ ಇವುಗಳ ಸೇವನೆಯನ್ನು ಆದಷ್ಟೂ ಮಿತಿಯಾಗಿರಿಸಬೇಕು. ಅಲ್ಲದೇ ಪ್ರಾಸ್ಟೇಟ್ ಗ್ರಂಥಿಯ ಆರೋಗ್ಯವನ್ನು ಹೆಚ್ಚಿಸುವ ಬಾದಾಮಿ ಮತ್ತು ಅಕ್ರೋಟುಗಳನ್ನು ಕೊಂಚ ಪ್ರಮಾಣದಲ್ಲಿ ಆಹಾರದಲ್ಲಿ ಅಳವಡಿಸಬೇಕು.

click me!