ಜ್ವರ, ತಲೆನೋವು ಬಂದಾಗಲ್ಲೆಲ್ಲಾ ಪ್ಯಾರಸಿಟಮಾಲ್ ತಿನ್ಬೋದು ಬಿಟ್ಬಿಡಿ, ಇಲ್ಲಾಂದ್ರೆ ಆರೋಗ್ಯಕ್ಕೇ ಅಪಾಯ !

Published : Apr 28, 2022, 07:23 PM ISTUpdated : Apr 07, 2025, 04:09 PM IST
ಜ್ವರ, ತಲೆನೋವು ಬಂದಾಗಲ್ಲೆಲ್ಲಾ ಪ್ಯಾರಸಿಟಮಾಲ್ ತಿನ್ಬೋದು ಬಿಟ್ಬಿಡಿ, ಇಲ್ಲಾಂದ್ರೆ ಆರೋಗ್ಯಕ್ಕೇ ಅಪಾಯ !

ಸಾರಾಂಶ

ಜ್ವರ (Fever), ನೆಗಡಿ, ತಲೆನೋವು ಏನೇ ಬರ್ಲಿ ಹೆಚ್ಚಿನವರು ತೆಗೆದುಕೊಳ್ಳೋದು ಪ್ಯಾರಸಿಟಮಾಲ್ (Paracetamol) ಮಾತ್ರೆಯನ್ನು. ಆದ್ರೆ ಇದರ ಸೇವನೆ ಹೆಚ್ಚಾದರೆ ಆರೋಗ್ಯ (Health)ಕ್ಕೆ ಒಳ್ಳೇದಲ್ಲ. ಪ್ರಿಸ್ಕ್ರಿಪ್ಶನ್ ಇಲ್ಲದೆಯೇ ತೆಗೆದುಕೊಳ್ಳುವ ಮಾತ್ರೆಯ ಸೇವನೆಯಿಂದ ಹಲವು ಅಡ್ಡಪರಿಣಾಮಗಳಿವೆ ಅನ್ನೋದು ನಿಮಗೆ ಗೊತ್ತಾ ?

ಪ್ಯಾರಸಿಟಮಾಲ್ (Paracetamol) ಎಂದರೆ ಎಲ್ಲರಿಗೆ ಗೊತ್ತಿರುವ ಹಾಗೇ ಜ್ವರಕ್ಕೆ ತೆಗೆದುಕೊಳ್ಳುವ ಮಾತ್ರೆ. ಇದನ್ನು ಅಸಿಟಮಿನೋಫಿನ್ ಎಂದು ಸಹ ಕರೆಯಲಾಗುತ್ತದೆ. ಜ್ವರವನ್ನು ಗುಣಪಡಿಸಲು, ನೋವು ಕಡಿಮೆಯಾಗಲು ಪ್ಯಾರಸಿಟಮಾಲ್ ಟ್ಯಾಬ್ಲೆಟ್ ಅನ್ನು ಬಳಸಲಾಗುತ್ತದೆ. ತಲೆನೋವು, ಹಲ್ಲುನೋವು, ನೆಗಡಿ ಜ್ವರಕ್ಕೂ ಈ ಮಾತ್ರೆಯ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.  ಕೊರೋನಾ (Corona) ಸೋಂಕು ಆರಂಭವಾದಗಿನಿಂದಲೂ ಜ್ವರವನ್ನು ಕಡಿಮೆ ಮಾಡಲು ಪ್ಯಾರಸಿಟಮಾಲ್ ಬಳಕೆಯು ಇನ್ನೂ ಹೆಚ್ಚಾಗಿದೆ. ಜ್ವರ, ಶೀತ ಮೊದಲಾದ ಸಮಸ್ಯೆಗೆ ಪ್ಯಾರಸಿಟಮಾಲ್ ತ್ವರಿತವಾಗಿ ಚಿಕಿತ್ಸೆ ನೀಡಿದರೂ, ಇದರ ಮಿತಿ ಮೀರಿದ ಸೇವನೆ ಅಪಾಯಕಾರಿಯಾಗಿದೆ.

ದೈನಂದಿನ ಪ್ಯಾರಸಿಟಮಾಲ್ ಹೃದಯಾಘಾತ, ಪಾರ್ಶ್ವವಾಯು ಮತ್ತು ಆರಂಭಿಕ ಸಾವಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ. ಹಿಂದಿನ ವೀಕ್ಷಣಾ ಅಧ್ಯಯನಗಳ ಹೊಸ ವಿಮರ್ಶೆಯು ಪ್ಯಾರೆಸಿಟಮಾಲ್‌ನ ದೀರ್ಘಾವಧಿಯ ಬಳಕೆಯು ಹೃದಯಾಘಾತಗಳು, ಜಠರಗರುಳಿನ ರಕ್ತಸ್ರಾವಗಳು ಮತ್ತು ದುರ್ಬಲಗೊಂಡ ಮೂತ್ರಪಿಂಡದ ಕಾರ್ಯಚಟುವಟಿಕೆಗಳಂತಹ ಪ್ರತಿಕೂಲ ಘಟನೆಗಳ ಸಣ್ಣ ಹೆಚ್ಚಿದ ಅಪಾಯದೊಂದಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ.

ಮೆಂತೆ, ಅರಿಶಿನ, ವಿಟಮಿನ್ ಡಿ ಅತೀಯಾದರೆ ಆರೋಗ್ಯಕ್ಕೆ ಕುತ್ತು

ಪ್ಯಾರೆಸಿಟಮಾಲ್ ವಯಸ್ಕರು ಮತ್ತು ಮಕ್ಕಳಲ್ಲಿ ಸೌಮ್ಯದಿಂದ ಮಧ್ಯಮ ನೋವು ಮತ್ತು ಜ್ವರಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ, ಉತ್ಪನ್ನದ ಮಾಹಿತಿಯಲ್ಲಿ ನಿರ್ದೇಶಿಸಿದಂತೆ ಬಳಸಿದಾಗ. 24-ಗಂಟೆಗಳ ಅವಧಿಯಲ್ಲಿ ಗರಿಷ್ಠ ಪ್ರಮಾಣವನ್ನು ಎಂದಿಗೂ ಮೀರಬಾರದು. ಶಿಫಾರಸು ಮಾಡುವುದಕ್ಕಿಂತ ಒಂದು ಅಥವಾ ಎರಡು ಹೆಚ್ಚು ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಗಂಭೀರವಾದ ಯಕೃತ್ತು ಹಾನಿ ಮತ್ತು ಪ್ರಾಯಶಃ ಸಾವಿಗೆ ಕಾರಣವಾಗಬಹುದು. ಪ್ಯಾರೆಸಿಟಮಾಲ್ ಮಿತಿಮೀರಿದ ಸೇವನೆಯು ಯಕೃತ್ತಿನ ವೈಫಲ್ಯದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಅಲ್ಲದೆ, ಕೆಲವೊಂದು ಪಾನೀಯಗಳ ಜತೆ, ಕೆಲವೊಂದು ಪಾನೀಯಗಳನ್ನು ಕುಡಿದ ನಂತರ ಪ್ಯಾರಸಿಟಮಾಲ್ ಅನ್ನು ಸೇವಿಸಲೇಬಾರದು. ಅಷ್ಟೇ ಅಲ್ಲ, ಪ್ಯಾರಸಿಟಮಾಲ್ ತಿಂದ ನಂತರವೂ ಕೆಲವು ಪಾನೀಯಗಳನ್ನು ಕುಡಿಯುವುದು ಒಳ್ಳೆಯದಲ್ಲ. ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆ ಅಥವಾ ತಪ್ಪಾದ ಪಾನೀಯದೊಂದಿಗೆ ಔಷಧವನ್ನು ಮಿಶ್ರಣ ಮಾಡುವುದು ತೀವ್ರವಾದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಇದು ಜೀವಕ್ಕೆ ಸಹ ಅಪಾಯವನ್ನು ಉಂಟುಮಾಡಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

Covid-19 : ಡೋಲೋ ಇದ್ರೆ ಚಿಂತೆಯ ಮಾತೆಲ್ಲಿ, ಕೋವಿಡ್ ಟೈಮ್ ಅಲ್ಲಿ ಕಂಪನಿಗೆ ಆದ ಲಾಭ ಇಷ್ಟು!

ಪ್ರತಿಯೊಂದು ಔಷಧವು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ಆರೋಗ್ಯ (Health)ದ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ. ಹೀಗಾಗಿ ಯಾವತ್ತೂ ಡಾಕ್ಟರ್ ನೀಡಿದ ಪ್ರಿಸ್ಕ್ರಿಪ್ಷನ್ ಅನ್ನು ಸರಿಯಾಗಿ ನೋಡಿಕೊಂಡೇ ಮಾತ್ರೆಗಳನ್ನು ತೆಗೆದುಕೊಳ್ಳಿ. ಸಂಶಯಗಳಿದ್ದಾಗ ಅವರಲ್ಲಿ ಕೇಳಿ ಸರಿಯಾಗಿ ಮಾಹಿತಿ ಪಡೆಯಿರಿ. ಕೆಲವು ಔಷಧಿಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು, ಕೆಲವೊಂದು ಮಾತ್ರೆಗಳು ಆಹಾರದ ಮೊದಲು, ಕೆಲವೊಂದು ಮಾತ್ರೆಗಳನ್ನು ಆಹಾರ ಸೇವನೆಯ ನಂತರ ತೆಗೆದುಕೊಳ್ಳಲು ವೈದ್ಯರು ಹೇಳುತ್ತಾರೆ. ಈ ಸೂಚನೆಯನ್ನು ಸರಿಯಾಗಿ ಪಾಲಿಸಬೇಕು. 

ಪ್ಯಾರಸಿಟಮಾಲ್‌ ಮಾತ್ರೆಯ ಜತೆ ಮದ್ಯಪಾನ ಮಾಡಬಾರದು 
ಪ್ಯಾರಸಿಟಮಾಲ್‌ ತೆಗೆದುಕೊಳ್ಳುವಾಗ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಈ ಮಾತ್ರೆಯನ್ನು ತೆಗೆದುಕೊಳ್ಳುವ ಮೊದಲು ಅಥವಾ ನಂತರ ಮದ್ಯಪಾನ (Alchohol) ಮಾಡಲೇಬಾರದು. ಅಲ್ಕೋಹಾಲ್ ಸೇವನೆಯು ದೇಹದ ಮೇಲೆ ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡಬಹುದು. ಇದಲ್ಲದೆ, ಅಲ್ಕೋಹಾಲ್ ಎಥೆನಾಲ್ ಅಂಶವನ್ನು ಹೊಂದಿರುತ್ತದೆ. ಎಥೆನಾಲ್ ಜೊತೆಗೆ ಪ್ಯಾರಸಿಟಮಾಲ್ ಅನ್ನು ಮಿಶ್ರಣ ಮಾಡುವುದರಿಂದ ವಾಕರಿಕೆ, ವಾಂತಿ, ತಲೆನೋವು, ಮೂರ್ಛೆ ಹೋಗುವುದು ಮೊದಲಾದ ಸಮಸ್ಯೆಗಳಿಗೆ ಕಾರಣವಾಗಬಹುದು. ರಾತ್ರಿಯ ಅತಿಯಾದ ಮದ್ಯಪಾನದ ನಂತರ ಬೆಳಗ್ಗೆ ಹ್ಯಾಂಗೋವರ್ ತೊಡೆದುಹಾಕಲು ಪ್ಯಾರಸಿಟಮಾಲ್ ತೆಗೆದುಕೊಳ್ಳುವುದು ಗಂಭೀರ ಅಪಾಯ (Danger)ಕ್ಕೆ ಸಿಲುಕಿಸಬಹುದು. 

ಮದ್ಯ ಹಾಗೂ ಪ್ಯಾರಸಿಟಮಾಲ್ ಸಂಯೋಜನೆಯು ಯಕೃತ್ತಿನ ಸಮಸ್ಯೆಗೂ ಕಾರಣವಾಗಬಹುದು, ಇದು ಜೀವಕ್ಕೂ ಮಾರಕವಾಗಬಹುದು. ಪ್ಯಾರಸಿಟಮಾಲ್ ಮಾತ್ರವಲ್ಲ, ಆಲ್ಕೋಹಾಲ್‌ನ್ನು ಬೇರೆ ಯಾವುದೇ ಔಷಧಿಗಳೊಂದಿಗೆ ಸಂಯೋಜಿಸುವುದು ಉತ್ತಮ ಆಯ್ಕೆಯಲ್ಲ. 

ಸುರಕ್ಷಿತ ಮಿತಿಯಲ್ಲಿ ಔಷಧಿ ತೆಗೆದುಕೊಳ್ಳಬೇಕು
ಪ್ಯಾರಸಿಟಮಾಲ್ ಒಂದು ಸೌಮ್ಯವಾದ ಔಷಧವಾಗಿದ್ದರೂ ಸಹ, ಅದನ್ನು ಮಿತಿಯಾಗಿ ಸೇವಿಸಬೇಕು. ವಯಸ್ಕರಿಗೆ, ಪ್ರತಿ ಡೋಸ್‌ಗೆ 1 ಗ್ರಾಂ ಪ್ಯಾರಸಿಟಮಾಲ್ ಮತ್ತು ದಿನಕ್ಕೆ 4 ಗ್ರಾಂ (4000 ಮಿಗ್ರಾಂ) ಸೇವನೆಗೆ ಸುರಕ್ಷಿತವಾಗಿದೆ. ಈ ಮಿತಿಯನ್ನು ಮೀರಿ ಹೋಗುವುದು ಯಕೃತ್ತಿನ ತೊಂದರೆಗೆ ಕಾರಣವಾಗಬಹುದು. ಪ್ರತಿದಿನ ಅಲ್ಕೋಹಾಲ್ ಸೇವಿಸುವವರು, 2 ಗ್ರಾಂಗಿಂತ ಹೆಚ್ಚು ಪ್ಯಾರಸಿಟಮಾಲ್ ಸೇವಿಸಲೇಬಾರದು. 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಪ್ಯಾರಸಿಟಮಾಲ್ ಕೊಡುವಾಗ ತಪ್ಪದೇ ವೈದ್ಯರನ್ನು ಸಂಪರ್ಕಿಸಬೇಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Fenugreek Water: 11 ದಿನ ಮೆಂತ್ಯ ನೀರು ಕುಡಿದ್ರೆ ದೇಹದಲ್ಲಿ ಈ 5 ಬದಲಾವಣೆ ಆಗೋದು ಗ್ಯಾರಂಟಿ!
ನೀವು ಬಳಸುವ ಸೋಪ್ ಯಾವ ದೇಶದ್ದು ಅಂತ ಗೊತ್ತಾ ನಿಮ್ಗೆ? ಈ ಸಾಬೂನು ನಿಮ್ಮದಾಗಿದ್ದರೆ.. ಇಲ್ಲಿ ನೋಡಿ!