200 ಮಿಲಿಯನ್‌ಗಳಲ್ಲಿ ಒಬ್ಬರಿಗಷ್ಟೇ ಜನಿಸುವ ವಿಶೇಷ ತ್ರಿವಳಿಗಳ ಜನನ..

Published : May 17, 2023, 04:59 PM ISTUpdated : May 17, 2023, 05:29 PM IST
200 ಮಿಲಿಯನ್‌ಗಳಲ್ಲಿ ಒಬ್ಬರಿಗಷ್ಟೇ ಜನಿಸುವ ವಿಶೇಷ ತ್ರಿವಳಿಗಳ ಜನನ..

ಸಾರಾಂಶ

ದಂಪತಿ, ಒಂದೇ ರೀತಿಯ ತ್ರಿವಳಿಗಳಿಗೆ ಜನ್ಮ ನೀಡಿದ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಎಲ್ಲಾ ಮೂರು ಹೆಣ್ಣು ಮಕ್ಕಳು ಒಂಬತ್ತು ವಾರಗಳ ಮುಂಚೆಯೇ ಜನಿಸಿದರು.. ಇದು 200 ಮಿಲಿಯನ್‌ನಲ್ಲಿ ಒಂದು ಪ್ರಕರಣ ಎಂದು ಹೇಳಲಾಗ್ತಿದೆ.

ಅವಳಿ ಮಕ್ಕಳು ಹುಟ್ಟುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಆದರೆ ಒಂದೇ ರೀತಿಯ ತ್ರಿವಳಿಗಳ (Identical Triplets) ಜನನವು ಅತ್ಯಂತ
ಅಪರೂಪವಾಗಿದೆ. ಇಂಥಾ ಸಾಧ್ಯತೆಗಳು 200 ಮಿಲಿಯನ್‌ನಲ್ಲಿ ಒಂದರಷ್ಟಿರುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಆದರೆ ಇಂಗ್ಲೆಂಡಿನ ದಂಪತಿಗಳಾದ ಜೆನ್ನಿ ಮತ್ತು ಜೇಮ್ಸ್ ಕ್ಯಾಸ್ಪರ್, ಇತ್ತೀಚೆಗೆ ತಮ್ಮ ಜೀವನದಲ್ಲಿ 200 ಮಿಲಿಯನ್‌ನಲ್ಲಿ ಒಬ್ಬರಿಗೆ ನಡೆಯುವ ಇಂಥಾ ಅದ್ಭುತಕ್ಕೆ ಸಾಕ್ಷಿಯಾಗಿದ್ದಾರೆ. ಈ ದಂಪತಿ ಒಂದೇ ರೀತಿಯ ತ್ರಿವಳಿಗಳಿಗೆ ಜನ್ಮ ನೀಡಿದ್ದು, ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

ಜೆನ್ನಿ ಮತ್ತು ಜೇಮ್ಸ್ ಅವರು ಅವಳಿ ಮಕ್ಕಳಾ (Twins)ಗುತ್ತದೆಯೆಂದು ವೈದ್ಯರು ಆರಂಭದಲ್ಲಿ ಹೇಳಿದರು. ಆದರೆ 12 ನೇ ವಾರದ ಸ್ಕ್ಯಾನ್‌ನಲ್ಲಿ ಅವರು ತ್ರಿವಳಿಗಳನ್ನು ಹೊಂದುತ್ತಾರೆ ಎಂದು ವೈದ್ಯರು ಹೇಳಿದಾಗ ಜೋಡಿಯು ಆಶ್ಚರ್ಯಚಕಿತರಾದರು. ಒಂದೇ ಫಲವತ್ತಾದ ತ್ರಿವಳಿಗಳು ಬಹಳ ವಿರಳವಾಗಿರುತ್ತವೆ. ಏಕೆಂದರೆ ಒಂದೇ ಫಲವತ್ತಾದ ಮೊಟ್ಟೆಯು ಮೂರು ಭಾಗಗಳಾಗಿ ವಿಭಜಿಸಿದಾಗ ಮಾತ್ರ ಗರ್ಭ ಧರಿಸಲಾಗುತ್ತದೆ. ವಿಜ್ಞಾನಿಗಳು ತಾಯಿಯು ಒಂದೇ ರೀತಿಯ ತ್ರಿವಳಿಗಳನ್ನು (Triplets) ಹೊಂದುವ ಸಾಧ್ಯತೆಗಳನ್ನು ಸಂಪೂರ್ಣವಾಗಿ ಲೆಕ್ಕಾಚಾರ ಮಾಡಲು ನಿರ್ವಹಿಸದಿದ್ದರೂ, ಇದು ಒಂದು ಮಿಲಿಯನ್ ಜನನದಲ್ಲಿ ಪ್ರತಿ ಒಂದು ಸಂಭವಿಸುತ್ತದೆ ಎಂದು ತಿಳಿಸಿದ್ದಾರೆ. ಈ ಗಮನಾರ್ಹ ಘಟನೆ ದಂಪತಿಗಳು (Couple) ಮತ್ತು ವೈದ್ಯಕೀಯ ವೃತ್ತಿಪರರನ್ನು ಬೆರಗುಗೊಳಿಸಿದೆ.

ಎಲ್ಲ ಅವಳಿಗಳಿಂತಿಲ್ಲ ಈ ಅವಳಿಗಳು.. ಗಿನ್ನೆಸ್ ಪುಟ ಸೇರಿದ ಜಪಾನ್‌ನ ಟ್ವಿನ್ಸ್

ಒಂಬತ್ತು ವಾರಗಳ ಅವಧಿಗೆ ಮುಂಚಿತವಾಗಿ ತ್ರಿವಳಿಗಳ ಜನನ
'ಜೆನ್ನಿ ನಮಗೆ ತ್ರಿವಳಿ ಮಕ್ಕಳಾಗುತ್ತವೆ ಎಂದು ತಿಳಿದ ತಕ್ಷಣ ನನಗೆ ಕರೆ ಮಾಡಿದಳು ಮತ್ತು ವಿಷಯ ತಿಳಿಸಿದಳು. ಮೊದಲಿಗೆ ನಾನು ಅವಳನ್ನು ನಂಬಲಿಲ್ಲ. ಇದನ್ನು ತಮಾಷೆಯೆಂದು ಭಾವಿಸಿದೆ. ಆದರೆ ಆಕೆ ಸ್ಕ್ಯಾನ್‌ನ ಫೋಟೋವನ್ನು ಕಳುಹಿಸಿದಾಗ ನಾನು ನಂಬಲೇ ಬೇಕಾಯಿತು' ಎಂದು ಜೇಮ್ಸ್ ಹೇಳಿದ್ದಾರೆ. ಮಾರ್ಚ್ 31 ರಂದು ಒಂಬತ್ತು ವಾರಗಳ ಅವಧಿಗೆ ಮುಂಚಿತವಾಗಿ ಜೆನ್ನಿ ಮಕ್ಕಳಿಗೆ ಜನ್ಮ ನೀಡಿದರು. ಹೆಣ್ಣು ಮಕ್ಕಳಾದ  Harper-Gwen, Marvella ಮತ್ತು Evalynn ಎಲ್ಲರೂ ಒಂದೇ ರೀತಿಯಿದ್ದಾರೆ ಎಂದು ಜೆನ್ನಿ ತಿಳಿಸಿದರು..

ಮೂವರು ಮಕ್ಕಳನ್ನು ಮನೆಗೆ ಕರೆದೊಯ್ಯುವ ಮೊದಲು ದಂಪತಿ ಯಾರ್ಕ್ ಆಸ್ಪತ್ರೆಯಲ್ಲಿ (Hospital) ವಿಶೇಷ ಆರೈಕೆ ಬೇಬಿ ಘಟಕದಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಳೆದರು. 'ಈಗ ನಾವು ಮನೆಯಲ್ಲಿದ್ದೇವೆ. ಮೂವರು ಮಕ್ಕಳನ್ನು ಪಡೆದ ಖುಷಿಯಲ್ಲಿ ಮುಳುಗಿದ್ದೇವೆ' ಎಂದು ಜೇಮ್ಸ್ ಹೇಳಿದರು. 'ಮಕ್ಕಳು ನೋಡಲು ಒಂದೇ ರೀತಿ ಇರುವುದರಿಂದ ಎಲ್ಲರನ್ನೂ ಬೇರೆ ಬೇರೆ ತೊಟ್ಟಿಲಲ್ಲಿ ಮಲಗಿಸಿ ಆರೈಕೆ (Care) ಮಾಡಲಾಗುತ್ತಿದೆ. ಮಕ್ಕಳ ಮುಖ ಒಂದೇ ರೀತಿ ಇರುವ ಕಾರಣ, ಆರಂಭದಲ್ಲಿ ಅವರ ಪರಿಚಯ ಸಿಗಲು ಕಷ್ಟವಾಗುತ್ತಿತ್ತು. ಹೀಗಾಗಿ ಆಸ್ಪತ್ರೆಯ ರಿಸ್ಟ್‌ಬ್ಯಾಂಡ್‌ಗಳನ್ನು ತಮ್ಮ ಮಕ್ಕಳ ಕೈಯಲ್ಲಿ ಕೆಲವು ದಿನಗಳವರೆಗೆ ಬಿಡಲು ನಿರ್ಧರಿಸಿದೆವು' ಎಂದ ಜೇಮ್ಸ್ ಹೇಳಿದ್ದಾರೆ.

ಎರಡು ಗರ್ಭಕೋಶ ಹೊಂದಿರುವ ಮಹಿಳೆಗೆ ಅವಳಿ ಮಕ್ಕಳು, ಇದು ವೈದ್ಯಲೋಕದ ಅಚ್ಚರಿ

ತ್ರಿವಳಿಗಳು ಒಂದೇ ರೀತಿ ಇರುವುದರಿಂದ ಪೋಷಕರು ಇವರ ಗುರುತಿಗಾಗಿ ಹಲವಾರು ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಪ್ರತಿ ಮಗುವಿಗೆ ನಿರ್ದಿಷ್ಟ ಸ್ಥಳವನ್ನು ನಿಗದಿಪಡಿಸಲಾಗಿದೆ. ತ್ರಿವಳಿಗಳು ಕಣ್ಣು ಮುಚ್ಚಿದರೆ ಅವುಗಳ ನಡುವೆ ವ್ಯತ್ಯಾಸವನ್ನು ತೋರಿಸುವುದು ತುಂಬಾ ಸವಾಲಿನ ಸಂಗತಿ ಎಂದು ಜೇಮ್ಸ್ ಹಾಸ್ಯಮಯವಾಗಿ ಒಪ್ಪಿಕೊಳ್ಳುತ್ತಾರೆ.

ವೈದ್ಯಲೋಕದ ಅಚ್ಚರಿ: 30 ವರ್ಷದ ಹಿಂದಿನ ಭ್ರೂಣದಿಂದ ಜನಿಸಿದ ಅವಳಿ ಮಕ್ಕಳು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ
ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?