ಜನರೇ ಇಲ್ಲದೆ ಲಾಕ್ ಆಗಿದ್ದ ಬಾತ್‌ರೂಂನ ಟಾಯ್ಲೆಟ್ ಕಾಸೆಟ್, ಶವರ್ ಹ್ಯಾಂಡ್‌ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಗಾಳಿ ಮೂಲಕ ಕೊರೋನಾ ಹರಡಿದೆಯಾ ಎಂದ ಆತಂಕ ಸೃಷ್ಟಿಸಿದೆ.
ಚೀನಾದ ಗಂಗ್ಝವ್‌ನಲ್ಲಿ ಖಾಲಿ ಇದ್ದ ಅಪಾರ್ಟ್‌ಮೆಂಟ್‌ನಲ್ಲಿ ವೈರಸ್ ಪತ್ತೆಯಾಗಿದೆ. ಜನರೇ ಇಲ್ಲದೆ ಲಾಕ್ ಆಗಿದ್ದ ಫ್ಲಾಟ್‌ನ ಬಾತ್‌ರೂಂನಲ್ಲಿ ವೈರಸ್ ಪತ್ತೆಯಾಗಿದೆ. ಜನರೇ ಇಲ್ಲದೆ ಲಾಕ್ ಆಗಿದ್ದ ಬಾತ್‌ರೂಂನ ಟಾಯ್ಲೆಟ್ ಕಾಸೆಟ್, ಶವರ್ ಹ್ಯಾಂಡ್‌ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಗಾಳಿ ಮೂಲಕ ಕೊರೋನಾ ಹರಡಿದೆಯಾ ಎಂದ ಆತಂಕ ಸೃಷ್ಟಿಸಿದೆ.
ಒಣ ಪೈಪ್, ಸಿಂಕ್‌ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಹಾಂಗ್‌ಕಾಂಗ್‌ನಲ್ಲಿ 17 ವರ್ಷ ಹಿಂದೆ ವೈರಸ್‌ನಿಂದಾದ ಪರಿಸ್ಥಿತಿ ಮತ್ತೊಮ್ಮೆ ಬರಲಿದೆಯಾ ಎಂಬ ಆತಂಕದಲ್ಲಿದ್ದಾರೆ ಜನ.
undefined
ಬೆಂಗಳೂರು: 17 ದಿನದಲ್ಲಿ 50 ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ
ಫೆಬ್ರವರಿಯಲ್ಲಿ ಖಾಲಿ ಇದ್ದ ಫ್ಲಾಟ್‌ನ ಸಿಂಕ್, ಶವರ್ ಹ್ಯಾಂಡಲ್‌ನಲ್ಲಿ ವೈರಸ್ ಪತ್ತೆಯಾಗಿತ್ತು ಎಂದು ಚೀನಾದ ರೋಗ ನಿಯಂತ್ರಣ ಕೇಂದ್ರದ ಸಂಶೋಧಕರು ತಿಳಿಸಿದ್ದಾರೆ. ವೈರಸ್ ಪತ್ತೆಯಾದ ಬಾತ್ ರೂಂನ ಸರಿ ಕೆಳಗಿನ ಕೋಣೆಯಲ್ಲಿದ್ದ ಕುಟುಂಬದ ಐವರಲ್ಲಿ ಕೊರೋನಾ ವೈರಸ್ ಪತ್ತೆಯಾಗಿತ್ತು.
ವೇಸ್ಟ್ ಪೈಪ್ ಮೂಲಕ ಕೊರೋನಾ ಹರಡಿದೆಯಾ ಎಂದು ತಜ್ಞರು ಪರೀಕ್ಷೆ ಮಾಡಿದ್ದಾರೆ. ಈ ಸಂದರ್ಭ ಇಂತಹ ಏರೋಸೆಲ್ಸ್ ಬಾತ್‌ರೂಂನ 10-12 ಹಂತದಲ್ಲಿ ಕಂಡುಬಂದಿದೆ.
ಅಂಡಮಾನ್ ದ್ವೀಪದ ಬುಡಕಟ್ಟು ಜನರಿಗೂ ಕೊರೋನಾ ಸೋಂಕು
ಸುಮಾರು 20 ವರ್ಷಗಳ ಹಿಂದೆ ಹಾಂಗ್‌ಕಾಂಗ್‌ನ ಅಮೋಯ್ ಗಾರ್ಡ್‌ನ್‌ನ ಖಾಸಗಿ ಎಸ್ಟೇಟ್‌ನಲ್ಲಿ ಒಳಚರಂಡಿ ಪೈಪ್ ಸರಿ ಇಲ್ಲದೆ 329 ಜನ ಉಸಿರಾಟದ ತೊಂದರೆಯಿಂದ ಬಳಲಿದ್ದರು. 42 ಜನ ಮೃತಟ್ಟಿದ್ದರು. ಈ ಸಂದರ್ಭ ಸಾರ್ಸ್ ಸಾಮೂಹಿಕ ಹಂತಕ್ಕೆ ಹರಡಿತ್ತು. ಹಲವು ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಒಳಚರಂಡಿ ಪೈಪ್‌ಗಳು ಕನೆಕ್ಟ್ ಅಗುತ್ತವೆ. ಇದರ ಮೂಲಕ ವೈರಸ್ ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.