ಹೈದರಾಬಾದ್ ಮೂಲದ ಬೂಸ್ಟರ್ ಡೋಸ್‌ ಕಾರ್ಬೆವಾಕ್ಸ್ ಗೆ ಅನುಮತಿ ನೀಡಿದ ಡಿಸಿಜಿಐ

Published : Jun 05, 2022, 12:10 PM IST
ಹೈದರಾಬಾದ್ ಮೂಲದ ಬೂಸ್ಟರ್ ಡೋಸ್‌ ಕಾರ್ಬೆವಾಕ್ಸ್ ಗೆ ಅನುಮತಿ ನೀಡಿದ ಡಿಸಿಜಿಐ

ಸಾರಾಂಶ

ದೇಶಾದ್ಯಂತ ಮತ್ತೆ ಕೋವಿಡ್ (Covid) ಕೇಸ್‌ಗಳು ಹೆಚ್ಚಾಗುತ್ತಿದೆ. ಹೀಗಿರುವಾಗ್ಲೇ ಹೈದರಾಬಾದ್ (Hyderabad) ಮೂಲದ ಲಸಿಕೆ (Vaccine) ತಯಾರಕ ಬಯೋಲಾಜಿಕಲ್ ಇ ಶನಿವಾರ ಕಾರ್ಬೆವಾಕ್ಸ್ ಅನ್ನು ಬೂಸ್ಟರ್ ಡೋಸ್‌ (Booster dose)ಗಾಗಿ ಡಿಸಿಜಿಐ ಒಪ್ಪಿಗೆ ಪಡೆದಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ. 

ಹೈದರಾಬಾದ್ (Hyderabad) ಮೂಲದ ಲಸಿಕೆ ತಯಾರಕ ಬಯೋಲಾಜಿಕಲ್ ಇ, ಕಾರ್ಬೆವಾಕ್ಸ್ (Corbevax) ಅನ್ನು ಬೂಸ್ಟರ್ ಡೋಸ್‌ಗಾಗಿ ಡಿಸಿಜಿಐ (ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ನಿಂದ ಒಪ್ಪಿಗೆ ಪಡೆದಿದೆ. ಕಾರ್ಬೆವಾಕ್ಸ್ 5-12-ವರ್ಷ ವಯಸ್ಸಿನವರಿಗೆ ತುರ್ತು ಬಳಕೆಯ ಅಧಿಕಾರಕ್ಕಾಗಿ DCGIನಿಂದ ಒಪ್ಪಿಗೆ ದೊರಕಿದೆ. ಲಸಿಕೆಯ ಮಧ್ಯಂತರ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿ ಡೇಟಾದ ಪರಿಶೀಲನೆಯ ಆಧಾರದ ಮೇಲೆ ವಿಷಯ ತಜ್ಞರ ಸಮಿತಿ (SEC) ಶಿಫಾರಸಿನ ನಂತರ ಅನುಮೋದನೆ ನೀಡಲಾಗಿದೆ. 

12 ಮತ್ತು 15 ವರ್ಷದೊಳಗಿನ ಮಕ್ಕಳಿಗೆ (Children) ಲಸಿಕೆಯನ್ನು ನೀಡಿದ ಕೇವಲ ಒಂದು ತಿಂಗಳ ನಂತರ ಈ ಅನುಮೋದನೆ ದೊರಕಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರು ಕಾರ್ಬೆವ್ಯಾಕ್ಸ್ ಅನ್ನು ಬೂಸ್ಟರ್‌ಡೋಸ್ (Booster dose) ಆಗಿ ಬಳಸಬಹುದು ಎಂದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ತಿಳಿಸಿದೆ. ಎಪ್ರಿಲ್ ಅಂತ್ಯದ ವೇಳೆ ಕಾರ್ಬೆವ್ಯಾಕ್ಸ್ ಅನ್ನು 5 ರಿಂದ 15 ವರ್ಷದೊಳಗಿನ ಮಕ್ಕಳಿಗೆ ತುರ್ತು ಬಳಕೆಗೆ ಭಾರತದ ಔಷಧ ನಿಯಂತ್ರಕ ಅಧಿಕಾರ ನೀಡಿತ್ತು. ಬಳಿಕ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿತ್ತು. 

Covid Crisis: ದೇಶದಲ್ಲಿ ಕೊರೋನಾ ಭಾರೀ ಏರಿಕೆ: ಆತಂಕದಲ್ಲಿ ಜನತೆ..!

ಕಾರ್ಬೆವಾಕ್ಸ್ ಬೂಸ್ಟರ್ ಡೋಸ್ ಪ್ರತಿರಕ್ಷಣಾ ಪ್ರತಿಕ್ರಿಯೆಯಲ್ಲಿ ಗಮನಾರ್ಹ ವರ್ಧನೆ ಮತ್ತು ಉತ್ತಮ ಸುರಕ್ಷತಾ ಪ್ರೊಫೈಲ್ ಅನ್ನು ಒದಗಿಸಿದೆ ಎಂದು ಕ್ಲಿನಿಕಲ್ ಟ್ರಯಲ್ ಡೇಟಾ ವರದಿ ಮಾಡಿದೆ. ತಜ್ಞರ ಸಮಿತಿಯೊಂದಿಗೆ ವಿವರವಾದ ಮೌಲ್ಯಮಾಪನ ಮತ್ತು ಚರ್ಚೆಯ ನಂತರ, ಡಿಸಿಜಿಐ  ರೊಲಾಜಸ್ ಬೂಸ್ಟರ್ ಡೋಸ್ ಆಗಿ ನೀಡಲು ತಮ್ಮ ಅನುಮೋದನೆಯನ್ನು ನೀಡಿತು ಎಂದು ಪ್ರಕಟಣೆ ತಿಳಿಸಿದೆ.

ಭಾರತೀಯ ಜೈವಿಕ ತಂತ್ರಜ್ಞಾನ ಹಾಗೂ ಜೈವಿಕ ಔಷಧಿ ಕಂಪನಿ ಬಯೋಲಾಜಿಕಲ್ ಇ ತಯಾರಿಸಿರುವ ಲಸಿಕೆಯ ಬೆಲೆಯನ್ನು ಮೇ ತಿಂಗಳಿನಲ್ಲಿ ಇಳಿಸಿತ್ತು. ಖಾಸಗಿ ಲಸಿಕಾ ಕೇಂದ್ರಗಳಿಗೆ ಸರಕು ಹಾಗೂ ಸೇವಾ ತೆರಿಗೆಯನ್ನು ಒಳಗೊಂಡಂತೆ ಕಾರ್ಬೆವ್ಯಾಕ್ಸ್‌ನ ಬೆಲೆ 840 ರಿಂದ 250 ರೂ.ಗೆ ಇಳಿಸಲಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಪ್ರಕ್ರಿಯೆ ಪ್ರಾರಂಭವಾದಾಗ, ಕಾರ್ಬೆವಾಕ್ಸ್ ಲಸಿಕೆಯನ್ನು ಬಳಸಲಾಯಿತು. ಮತ್ತು ಸರ್ಕಾರದ ಲಸಿಕಾ ಕಾರ್ಯಕ್ರಮಕ್ಕಾಗಿ ಅದರ ಬೆಲೆಯನ್ನು 145 ರೂ.ಗೆ ನಿಗದಿಪಡಿಸಿತು.

Corbevax ಸುರಕ್ಷಿತವಾಗಿದೆ ಎಂದು ಕಂಪನಿಯು ಹೇಳಿದೆ. ಬೂಸ್ಟರ್ ಡೋಸ್ ನೀಡಿದ ನಂತರ 3 ತಿಂಗಳ ಫಾಲೋ-ಅಪ್‌ಗೆ ಯಾವುದೇ ತೀವ್ರ ಅಥವಾ ಪ್ರತಿಕೂಲ ಘಟನೆಗಳು ಕಂಡುಬಂದಿಲ್ಲ. Corbevax ವ್ಯಾಕ್ಸಿನೇಷನ್ ಸ್ಲಾಟ್ ಅನ್ನು Co-WIN ಅಪ್ಲಿಕೇಶನ್ ಅಥವಾ Co-WIN ಪೋರ್ಟಲ್ ಮೂಲಕ ಬುಕ್ ಮಾಡಬಹುದು. ಇಲ್ಲಿಯವರೆಗೆ, ಎರಡು ಡೋಸ್ ಕಟ್ಟುಪಾಡುಗಳನ್ನು ಪೂರ್ಣಗೊಳಿಸಿದ 17.4 ಮಿಲಿಯನ್ ಸೇರಿದಂತೆ ದೇಶಾದ್ಯಂತ 51.7 ಮಿಲಿಯನ್ ಡೋಸ್ ಕಾರ್ಬೆವಾಕ್ಸ್ ಅನ್ನು ಮಕ್ಕಳಿಗೆ ನೀಡಲಾಗಿದೆ ಎಂದು ಕಂಪನಿ ಹೇಳಿದೆ.

ಲಂಡನ್‌ನಲ್ಲಿ ಪುರುಷರಲ್ಲಿ ಹೆಚ್ಚಾಗುತ್ತಿದೆ ಮಂಕಿಪಾಕ್ಸ್ ಸೋಂಕಿನ ಅಪಾಯ !

ದೇಶಾದ್ಯಂತ ಮತ್ತೆ ಕೋವಿಡ್ ಕೇಸ್‌ಗಳು (Covid cases) ಹೆಚ್ಚಾಗುತ್ತಿದ್ದು, ಕೇಂದ್ರ ಆರೋಗ್ಯ ಸಚಿವಾಲಯ 5 ರಾಜ್ಯಗಳಿಗೆ ಕಣ್ಗಾವಲು ಹಾಗೂ ಪರೀಕ್ಷೆಗಳನ್ನು ಮುಂದುವರಿಸಲು ಸೂಚನೆ ನೀಡಿದೆ. ಈ 5 ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್ ಪ್ರಕರಣಗಳ ಹಿನ್ನೆಲೆ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ. 

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಈ 5 ರಾಜ್ಯಗಳಿಗೆ ಕಣ್ಗಾವಲು ಹಾಗೂ ಪರೀಕ್ಷೆಗಳನ್ನು ಹೆಚ್ಚಿಸಲು ತಿಳಿಸಿದ್ದಾರೆ. ಜನರಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಹಾಗೂ ಉಸಿರಾಟದ ಸಮಸ್ಯೆ ಇದ್ದಲ್ಲಿ ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಬಹುದು ಎಂದಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ