ಛೇ ಮುಟ್ಟಿನ ನೋವೆಂದು ಮಾತ್ರೆ ತಿಂದ ಹುಡುಗಿ ಸತ್ತೇ ಹೋದ್ಲು!

By Suvarna News  |  First Published Dec 19, 2023, 2:39 PM IST

ಮುಟ್ಟಿನ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆ ತನ್ನದೇ ಸಮಸ್ಯೆ ಎದುರಿಸುತ್ತಾಳೆ. ಒಬ್ಬೊಬ್ಬರಿಗೆ ಒಂದೊಂದು ನೋವು ಕಾಡುತ್ತದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಾಗ ಮಾತ್ರೆಯ ಮೊರೆ ಹೋಗ್ತಾರೆ. ಆದ್ರೆ ಮಾತ್ರೆ ನಿಮ್ಮ ಜೀವ ತೆಗೆಯಬಹುದು ಎಚ್ಚರ.
 


ಮುಟ್ಟಿನ ಸಮಯದಲ್ಲಿ ನೋವಾಗೋದು ಸಾಮಾನ್ಯ. ಕೆಲವರು ವಿಪರೀತ ನೋವು ತಿನ್ನುತ್ತಾರೆ. ನೋವು ಅತಿಯಾದಾಗ ನಿತ್ಯದ ಕೆಲಸ ಮಾಡುವುದು ಕಷ್ಟ. ಈ ಸಮಯದಲ್ಲಿ ಮಹಿಳೆಯರು ಮಾತ್ರೆ ಮೊರೆ ಹೋಗ್ತಾರೆ. ಮಾರುಕಟ್ಟೆಯಲ್ಲಿ ಮುಟ್ಟಿನ ನೋವು ಕಡಿಮೆ ಮಾಡಲು ಕೆಲ ಮಾತ್ರೆಗಳು ಲಭ್ಯವಿದೆ. ಈ ಮಾತ್ರೆಗಳನ್ನು ವೈದ್ಯರ ಸಲಹಗೆ ಪ್ರಕಾರ, ವಯಸ್ಸಿಗೆ ತಕ್ಕಂತೆ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂಬ ಜ್ಞಾನವಿರಬೇಕು. 

ಈಗಷ್ಟೆ ಮುಟ್ಟಾಗಿರುವ ಅಥವಾ ಕೆಲವೇ ಕೆಲವು ವರ್ಷದಿಂದ ಪಿರಿಯಡ್ಸ್ (Period) ಸರ್ಕಲ್ ಗೆ ಒಳಗಾಗುತ್ತಿರುವ ಹುಡುಗಿಯರಿಗೆ ಇದ್ರ ಬಗ್ಗೆ ಶಿಕ್ಷಣ ನೀಡುವ ಅಗತ್ಯವಿರುತ್ತದೆ. ದೊಡ್ಡವರು ಹಾಗೂ ವೈದ್ಯ (Doctor) ರ ಬದಲು ಅನೇಕ ಹುಡುಗಿಯರು ತಮ್ಮ ಸ್ನೇಹಿತರ ಬಳಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುತ್ತಾರೆ. ಅನೇಕ ಬಾರಿ ಇದೇ ಯಡವಟ್ಟಿಗೆ ಕಾರಣವಾಗುತ್ತದೆ. ಯಾವುದೇ ಮಾತ್ರೆ (Pill) ಸೇವನೆ ಮಾಡೋದಿದ್ರೂ ವೈದ್ಯರ ಸಲಹೆ ಅತ್ಯಗತ್ಯ. ಇಲ್ಲವೆಂದ್ರೆ ಹದಿನಾರು ವರ್ಷದ ಹುಡುಗಿ ಸ್ಥಿತಿ ನಿಮಗೂ ಬರಬಹುದು. ವೈದ್ಯರ ಸಲಹೆ ಇಲ್ಲದೆ ಮುಟ್ಟಿನ ಸಮಯದಲ್ಲಿ ಕಾಡುವ ನೋವನ್ನು ಕಡಿಮೆ ಮಾಡಿಕೊಳ್ಳಲು ಮಾತ್ರೆ ಸೇವನೆ ಮಾಡಿ ಆಕೆ ಸಾವನ್ನಪ್ಪಿದ್ದಾಳೆ. 

Tap to resize

Latest Videos

ಭ್ರೂಣ ಹತ್ಯೆ: ಸುಳಿವು ಕೊಟ್ಟರೆ 1 ಲಕ್ಷ ರೂ. ನಗದು ಬಹುಮಾನ; ಆರೋಗ್ಯ ಇಲಾಖೆ ಘೋಷಣೆ

ಆಕ್ಸ್‌ಫರ್ಡ್‌ಗೆ ಹೋಗಬೇಕೆಂಬ ಹಂಬಲದಲ್ಲಿದ್ದ 16 ವರ್ಷದ ಕಾಲೇಜು ಹುಡುಗಿ ಲೈಲಾ, ಪಿರಿಯಡ್ ನೋವನ್ನು ಕಡಿಮೆ ಮಾಡಲು ಮಾತ್ರೆ ಸೇವಿಸಿದ್ದಾಳೆ. ನಂತ್ರ ಆಕೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ದುರಂತ ಸಂಭವಿಸಿದೆ. ಲೈಲಾ, ಪಿರಿಯಡ್ಸ್ ವೇಳೆ ವಿಪರೀತ ನೋವು ತಿನ್ನುತ್ತಿದ್ದಳು. ಈ ನೋವನ್ನು ಕಡಿಮೆ ಮಾಡಲು ಪಾಲ್ಸ್ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸ್ನೇಹಿತರು ಸಲಹೆ ನೀಡಿದ್ದರು. ಅದರಂತೆ ಲೈಲಾ ಗರ್ಭನಿರೋಧಕ ಮಾತ್ರೆ ಸೇವಿಸಿದ್ದಾಳೆ.  ಲೈಲಾ ಕಾಲೇಜಿಗೆ ಸೇರಿ ಮೂರು ತಿಂಗಳಾಗಿತ್ತು. ಆಕೆಯ ಶಿಕ್ಷಕರು ಈಗಾಗಲೇ ಸಂಭಾವ್ಯ ಆಕ್ಸ್‌ಫರ್ಡ್ ಪ್ರವೇಶಾತಿಯಲ್ಲಿ ಲೈಲಾ ಹೆಸರನ್ನು ಸೂಚಿಸಿದ್ದರು.  

ಮುಟ್ಟಿನ ನೋವು ಹೆಚ್ಚಾಗ್ತಿದ್ದಂತೆ ಈ ಸಮಸ್ಯೆಯನ್ನು ಲೈಲಾ ತನ್ನ ಸ್ನೇಹಿತರ ಜೊತೆ ಹಂಚಿಕೊಂಡಿದ್ದಳು. ನಂತ್ರ ಸ್ನೇಹಿತರು ಪಾಲ್ಸ್ ಗರ್ಭನಿರೋಧಕ ಮಾತ್ರೆ ಸೇವನೆ ಮಾಡುವಂತೆ ಸಲಹೆ ನೀಡಿದ್ದಾರೆ. ಲೈಲಾ25 ರಿಂದ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾಳೆ. ಡಿಸೆಂಬರ್ 5 ರ ವೇಳೆಗೆ ಲೈಲಾಗೆ ತಲೆನೋವು ಕಾಣಿಸಿಕೊಂಡಿದೆ. ವಾರದ ಕೊನೆಯಲ್ಲಿ ಆಕೆಗೆ ವಾಂತಿಯಾಗಿದೆ. ಈ ಸಮಯದಲ್ಲಿ ಸಹಾಯವಾಣಿಗೆ ಕರೆ ಮಾಡಿ ವೈದ್ಯರನ್ನು ಸಂಪರ್ಕಿಸಿದ್ದ ಲೈಲಾ ತಾಯಿಗೆ ಮರುದಿನ ಆಸ್ಪತ್ರೆಗೆ ಹೋಗುವಂತೆ ವೈದ್ಯರು ಸಲಹೆ ನೀಡಿದ್ದರು ಎನ್ನಲಾಗಿದೆ.  

ಟಾಯ್ಲೆಟ್‌ನಲ್ಲಿ ಪ್ರೆಶರ್ ಹಾಕಿದಷ್ಟು, ಸಾವಿಗೆ ಸಮೀಪಿಸುತ್ತಿದ್ದೀರಿ ಎಂದರ್ಥ!

ಸೋಮವಾರ ಸಂಜೆ ಲೈಲಾ ನೋವಿನಿಂದ ಕಿರುಚಲು ಪ್ರಾರಂಭಿಸಿದ್ದಲ್ಲದೆ ಮನೆಯ ಬಾತ್ರೂಮ್ನಲ್ಲಿ ಬಿದ್ದಿದ್ದಾಳೆ. ಆಕೆಯ ಕುಟುಂಬದವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಿಟಿ ಸ್ಕ್ಯಾನ್ ಮೂಲಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ಗುರುತಿಸಲಾಯ್ತು. ತಕ್ಷಣ ಲೈಲಾಳನ್ನು ದೊಡ್ಡ ಆಸ್ಪತ್ರೆಗೆ ಕಳುಹಿಸಿ, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಶುರುವಾಗಿತ್ತು. ಆದ್ರೆ ಲೈಲಾಗೆ ನೀಡಿದ ಚಿಕಿತ್ಸೆ ಫಲ ನೀಡಲಿಲ್ಲ. ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. 

ಸಾಮಾಜಿಜಾಲತಾಣದಲ್ಲಿ ಲೈಲಾ ದುರ್ಘಟನೆ ವರದಿ ಆಗ್ತಿದ್ದಂತೆ ಅನೇಕರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮುಟ್ಟಿನ ಸಮಯದಲ್ಲಿ ಕಾಡುವ ನೋವಿಗೆ ಏನು ಮಾಡ್ಬೇಕು ಎಂಬುದನ್ನು ಹೇಳಲಾಗಿದೆ.
ಬಳಕೆದಾರರೊಬ್ಬರು ಲವಂಗವನ್ನು ತುಪ್ಪದಲ್ಲಿ ಹುರಿದು ಸಕ್ಕರೆ ಜೊತೆ ತಿನ್ನಲು ನೀಡಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಸ್ವಲ್ಪ ಅನಾನಸ್ ತಿನ್ನಬೇಕು. ಇದು ಸೆಳೆತವನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ. ವ್ಯಾಯಾಮ ಮಾಡುವ ಜೊತೆಗೆ ಎಳ ನೀರು  ಕುಡಿದರೆ ಪಿರಿಯಡ್ಸ್ ನೋವು ಕಡಿಮೆ ಆಗುತ್ತದೆ ಎಂದು ಬರೆದಿದ್ದಾರೆ.  

click me!