
ಗ್ಯಾಸ್ಟಿಕ್ ಕ್ಯಾನ್ಸರ್ ಎಂದೂ ಕರೆಯಲಾಗುವ ಹೊಟ್ಟೆಯ ಕ್ಯಾನ್ಸರ್ ಅಪಾಯಕಾರಿ ಏಕೆಂದರೆ ಅದು ಕ್ಯಾನ್ಸರ್ ಸೆಲ್‌ಗಳು ಹೊಟ್ಟೆಯ ತುಂಬಾ ಹಬ್ಬುವವರೆಗೂ ತಿಳಿಯುವುದೇ ಇಲ್ಲ. ಹೌದು, ಸ್ಟೊಮಕ್ ಕ್ಯಾನ್ಸರ್‌ನ ಲಕ್ಷಣಗಳು ಅದು ಗಂಭೀರ ಹಂತ ತಲುಪುವವರೆಗೆ ಸೈಲೆಂಟ್ ಆಗಿಯೇ ಇರುತ್ತವೆ. ಆರಂಭದ ಹಂತಗಳಲ್ಲಿಯೇ ಗುರುತಿಸಿದರೆ ಶೇ.90ರಷ್ಟು ಜನರನ್ನು ಗುಣಮುಖರಾಗಿಸಬಹುದು. ಆದರೆ ಕ್ಯಾನ್ಸರ್ ಅಂತಿಮ ಹಂತ ತಲುಪಿದ್ದರೆ ಮಾತ್ರ ಉಳಿಸಬಹುದಾದ ಸಾಧ್ಯತೆ ಕೇವಲ ಶೇ.1ರಷ್ಟು ಮಾತ್ರವಿರುತ್ತದೆ.
ಹೊಟ್ಟೆಯ ಕ್ಯಾನ್ಸರ್ ಎಂದರೇನು ?
ಜೀರ್ಣಾಂಗ ವ್ಯವಸ್ಥೆಯಲ್ಲಿ ಹೊಟ್ಟೆಯು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ನಾವು ಸೇವಿಸುವ ಆಹಾರವು (Food) ಅನ್ನನಾಳದ ಮೂಲಕ ಹೊಟ್ಟೆಗೆ ಹಾದುಹೋಗುತ್ತದೆ. ಆದರೆ ಯಾವುದೇ ಕಾರಣಗಳಿಂದ ಹೊಟ್ಟೆಯ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಿದರೆ.. ಅದರ ಎಲ್ಲಾ ಕಾರ್ಯಗಳು ಪರಿಣಾಮ ಬೀರುತ್ತವೆ. ಆದರೆ ಕೆಲವು ರೀತಿಯ ಜೀರ್ಣಕ್ರಿಯೆಯ (Digestion) ಸಮಸ್ಯೆಗಳು ಹೊಟ್ಟೆಯ ಕ್ಯಾನ್ಸರ್‌ಗ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.ಈ ರೋಗವು ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಹೊಟ್ಟೆಯ ಕ್ಯಾನ್ಸರ್ ಎನ್ನುವುದು ಹೊಟ್ಟೆಯ ಯಾವುದೇ ಭಾಗದಲ್ಲಿ ಅಸಹಜ ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗುವ ಸ್ಥಿತಿಯಾಗಿದೆ.
ತೀವ್ರ ಹೊಟ್ಟೆ ನೋವಿಗೆ ಡೈರಿಯಾ ಆಗಬಹುದು ಕಾರಣ, ಪರಿಹಾರ ಏನು?
ಹೊಟ್ಟೆಯ ಕ್ಯಾನ್ಸರ್ ಉಂಟಾಗಲು ಕಾರಣಗಳು
ಹೊಟ್ಟೆಯ ಕ್ಯಾನ್ಸರ್ ಬೆಳವಣಿಗೆಯಾಗಲು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅದನ್ನು ಗುರುತಿಸುವುದು ತುಂಬಾ ಕಷ್ಟ. ಈ ಕಾರಣದಿಂದಾಗಿ, ಈ ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡುವ ಅಪಾಯ (Danger)ವಿದೆ. ಈ ಕ್ಯಾನ್ಸರ್ ಹೊಟ್ಟೆಯಿಂದ ಶ್ವಾಸಕೋಶ, ಯಕೃತ್ತು ಮತ್ತು ಮೂಳೆಗಳಿಗೆ ಹರಡುತ್ತದೆ. ಇತರ ಕ್ಯಾನ್ಸರ್‌ಗಳಂತೆ ಹೊಟ್ಟೆಯ ಕ್ಯಾನ್ಸರ್ ಏಕೆ ಸಂಭವಿಸುತ್ತದೆ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರವಿಲ್ಲ. ಇದರ ಹಿಂದೆ ಹಲವು ಕಾರಣಗಳಿವೆ ಎಂದು ಅಧ್ಯಯನಗಳು ತೋರಿಸುತ್ತವೆ. ಅಧ್ಯಯನದ (Study) ಪ್ರಕಾರ, ಹೊಟ್ಟೆಯ ಅಂಗಾಂಶಗಳನ್ನು ರೂಪಿಸುವ ಡಿಎನ್‌ಎ ಕೋಶಗಳಲ್ಲಿನ ಬದಲಾವಣೆಯೊಂದಿಗೆ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಈ ಬದಲಾವಣೆಗಳಿಂದಾಗಿ.. ಜೀವಕೋಶಗಳು ವೇಗವಾಗಿ ಬೆಳೆಯುತ್ತವೆ ಮತ್ತು ದ್ವಿಗುಣಗೊಳ್ಳುತ್ತವೆ. ಇವುಗಳೆಲ್ಲ ಸೇರಿ ಗಡ್ಡೆಯನ್ನು ರೂಪಿಸುತ್ತವೆ.
ಅನುವಂಶಿಕತೆ, ಸ್ಥೂಲಕಾಯತೆ, ಖಾರದ ಆಹಾರಗಳ ಹೆಚ್ಚಿನ ಸೇವನೆ, ಎ ಮಾದರಿಯ ರಕ್ತದ ಹೆಚ್ಚಿನ ಸೇವನೆ, ಮಾಂಸಾಹಾರ ಮತ್ತು ತರಕಾರಿ ಮತ್ತು ಹಣ್ಣುಗಳ ಕಡಿಮೆ ಸೇವನೆ, ಧೂಮಪಾನ, ವಿವಿಧ ಸೋಂಕುಗಳು ಇತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವಾಗಬಹುದು.
ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣಗಳು
ಹೊಟ್ಟೆಯ ಕ್ಯಾನ್ಸರ್ ಅನ್ನು ಮೊದಲೇ ಕಂಡುಹಿಡಿಯಲಾಗುವುದಿಲ್ಲ. ಅದಕ್ಕಾಗಿಯೇ ಅನೇಕ ಜನರು ತಮ್ಮ ಅರಿವಿಲ್ಲದೆ ತಮ್ಮ ಜೀವವನ್ನು ಕಳೆದುಕೊಳ್ಳುತ್ತಾರೆ. ಆದರೆ ಕೆಲವು ಸಾಮಾನ್ಯ ಲಕ್ಷಣಗಳಿದ್ದರೂ..ಉದರ ಸಂಬಂಧಿ ಕಾಯಿಲೆಗಳೆಂದು ಭಾವಿಸಿ ಸುಮ್ಮನಾಗುತ್ತಾರೆ. ಅದಕ್ಕಾಗಿಯೇ ಹೊಟ್ಟೆಯ ಕ್ಯಾನ್ಸರ್ ಲಕ್ಷಣಗಳನ್ನು ತಿಳಿದುಕೊಂಡಿರುವುದು ಮುಖ್ಯ. ಹೊಟ್ಟೆಯ ಕ್ಯಾನ್ಸರ್‌ನ ಕೆಲವು ಲಕ್ಷಣಗಳೆಂದರೆ ವಾಕರಿಕೆ, ಎದೆಯುರಿ, ಹಸಿವಾಗದಿರುವುದು, ಹೊಟ್ಟೆ ನೋವು, ಜೀರ್ಣಕಾರಿ ಸಮಸ್ಯೆಗಳು, ಮಲದಲ್ಲಿ ರಕ್ತಸ್ರಾವ, ಆಹಾರ ನುಂಗಲು ತೊಂದರೆ, ತೂಕ ಇಳಿಕೆ, ಕಣ್ಣು ಮತ್ತು ಚರ್ಮ ಹಳದಿಯಾಗುವುದು, ಉಬ್ಬುವುದು, ವಾಂತಿ ಮೊದಲಾದವು.
ಖಾಲಿ ಹೊಟ್ಟೆಗೆ ಟೀ ಕುಡಿದರೆ ಆರೋಗ್ಯದ ಮೇಲೆ ಬೀರುತ್ತಾ ಪರಿಣಾಮ?
ದೇಹದಲ್ಲಿ ಬಹಳಷ್ಟು ಸಣ್ಣಪುಟ್ಟ ಸಮಸ್ಯೆಗಳಾದಗಲೂ ಹಸಿವಿಲ್ಲದಂತೆ ಆಗುತ್ತದೆ. ಅಲ್ಸರ್ ಆದಾಗಲೂ ಹಸಿವು ಕಳೆದುಕೊಳ್ಳುತ್ತಾರೆ. ಆದರೆ, ಆಹಾರದ ಮೇಲೆ ಬಹಳ ದಿನದ ಕಾಲ ಈ ಜಿಗುಪ್ಸೆ ಉಳಿದರೆ ಅದು ಹೊಟ್ಟೆಯಲ್ಲಿ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ಸೂಚಿಸುತ್ತಿರಬಹುದು. ತೂಕ ಇಳಿಯುವಿಕೆ ನಿಧಾನವಾಗಿದ್ದರೆ, ಹಂತಹಂತವಾಗಿ ಸಕಾರಣವಾಗಿದ್ದರೆ ತಲೆ ಕೆಡಿಸಿಕೊಳ್ಳುವ ಪ್ರಮೇಯವಿಲ್ಲ. ಆದರೆ, ನೀವು ಡಯಟ್ ಮಾಡದೆಯೂ, ಸುಖಾಸುಮ್ಮನೆ ತೂಕ ಇಳಿಯುತ್ತಲೇ ಹೋಗುತ್ತಿದೆ ಎಂದರೆ ಇದು ಕಡೆಗಣಿಸುವಂಥ ವಿಷಯವೇ ಅಲ್ಲ. ಇದು ಹೊಟ್ಟೆಯ ಕ್ಯಾನ್ಸರ್‌ನ ವಾರ್ನಿಂಗ್ ಸೈನ್.
ಆದರೆ ಈ ರೋಗಲಕ್ಷಣಗಳು ಅನೇಕ ಕಿಬ್ಬೊಟ್ಟೆಯ ಅಸ್ವಸ್ಥತೆಗಳ ಲಕ್ಷಣಗಳಾಗಿವೆ. ನೀವು ದೀರ್ಘಕಾಲದವರೆಗೆ ಈ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ತಡಮಾಡದೆ ಆಸ್ಪತ್ರೆಗೆ ಹೋಗಿ. ಏಕೆಂದರೆ ಇದು ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣ ಕೂಡಾ ಆಗಿರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.