
ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿಯೇ ಬದಲಾಗಿದೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರಿದ್ದು, ವಿವಿಧ ಸಮಸ್ಯೆಗಳು ಶುರುವಾಗುತ್ತಿವೆ. ಇದರಲ್ಲಿ ದೇಹದ ತೂಕ ಹೆಚ್ಚಳ ಕೂಡ ಒಂದು. ಈ ಸಮಸ್ಯೆ ಅನೇಕ ಜನರಿಗೆ ತಲೆ ನೋವಾಗ ಪರಿಣಮಿಸಿದೆ. ಹಲವರು ತೂಕ ಇಳಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನ ಪಡುತ್ತಾರೆ. ಡಯಟ್ ಮಾಡುವುದು, ಔಷಧಿ ಸೇವಿಸುವುದು ಸೇರಿ ಅನೇಕ ಕಸರತ್ತು ಮಾಡಿದರೂ ಅವರ ತೂಕ ಕಡಿಮೆ ಆಗಲ್ಲ. ಅವರು ಮಾಡುವ ಕೆಲವು ತಪ್ಪುಗಳಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವುಗಳ ಮಾಹಿತಿ ಇಲ್ಲಿದೆ.
ಸಣ್ಣ ಆಗಲು ಊಟ ಬಿಡುವುದು:
ತುಂಬಾ ಜನರು ಊಟ ಬಿಟ್ಟರೆ ಸಣ್ಣ ಆಗಬಹುದೆಂದು ತಿಳಿದಿರುತ್ತಾರೆ. ದಪ್ಪಗಿದ್ದೀರಿ ಎಂದ ಮಾತ್ರಕ್ಕೆ ಊಟ ಬಿಡುವ ಯೋಚನೆ ಒಳ್ಳೆಯದಲ್ಲ. ಈ ತಪ್ಪು ಎಂದಿಗೂ ಮಾಡಬೇಡಿ. ಆಹಾರ (Food) ಸೇವನೆ ಅತಿಮುಖ್ಯವಾಗಿದ್ದು, ಆಹಾರದಲ್ಲಿ ಪ್ರೋಟೀನ್ (Protein), ಕಾರ್ಬೋಹೈಡ್ರೇಟ್ (Carbohydrate)ಮತ್ತು ಕೊಬ್ಬಿನಂತಹ ಅಂಶಗಳು ಇರುತ್ತವೆ. ಇವು ಆರೋಗ್ಯವನ್ನು ಸುಧಾರಿಸುತ್ತದೆ. ಹಿತಮಿತವಾದ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯವನ್ನು (Health) ಕಾಪಾಡಿಕೊಳ್ಳಬೇಕು. ಊಟ ಬಿಟ್ಟರೆ ಸಣ್ಣ ಆಗುವುದಿಲ್ಲ, ಆರೋಗ್ಯ ಹದಗೆಟ್ಟು ಹೋಗುತ್ತದೆ. ಈ ರೀತಿಯಾಗಿ ಊಟ ಬಿಡುವುದರಿಂದ ತೂಕವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಇನ್ನು ಕೆಲವರು ಅವಸರದಿಂದ ಊಟ ಮಾಡುತ್ತಾರೆ. ಹೀಗೆ ಮಾಡಿದರೆ ಆಹಾರದ (Food) ಪ್ರಮಾಣ ಹೆಚ್ಚುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಊಟದ ಪ್ರತಿಯೊಂದು ತುತ್ತನ್ನು ನಿಧಾನವಾಗಿ ತಿನ್ನಬೇಕು. ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಆಹಾರವನ್ನು ತಿನ್ನಬೇಕು.
ಅತಿಯಾದ ಜಂಕ್ ಫುಡ್ ಸೇವನೆ:
ತುಂಬಾ ಜನರು ಹೆಚ್ಚಾಗಿ ಉಪಾಹಾರವನ್ನು ಬಿಟ್ಟುಬಿಡುತ್ತಾರೆ. ಆ ಸಮತೋಲನ ಸರಿದೂಗಿಸಲು ಜಂಕ್ ಫುಡ್ಗಳ (junk food) ಮೊರೆ ಹೋಗುತ್ತಾರೆ. ಜಂಕ್ ಫುಡ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಬಾಯಿಗೆ ರುಚಿ ಎಂದು ಅತಿಯಾಗಿ ಜಂಕ್ ಫುಡ್ಗಳನ್ನು ಸೇವಿಸುವುದರಿಂದಾಗಿ ಮತ್ತೆ ತೂಕ ಹೆಚ್ಚಳವಾಗುತ್ತದೆ. ಅವುಗಳಲ್ಲಿ ಕ್ಯಾಲೊರಿ(calorie) ಅಂಶ ಹೆಚ್ಚಾಗಿರುವದರಿಂದ, ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ದೇಹದ ತೂಕ ಇಳಿಸಿಕೊಳ್ಳಬೇಕು ಎಂಬ ಆಸೆ ಹೊಂದಿದ್ದರೆ ಜಂಕ್ ಫುಡ್ಗಳ ಸೇವನೆಯನ್ನು ತ್ಯಜಿಸಬೇಕು.
ಇದನ್ನೂ ಓದಿ: ನಿಮ್ಮ ದಿನನಿತ್ಯದ ಆಹಾರದ ಪಟ್ಟಿ ಹೀಗಿರಲಿ, ಅನಾರೋಗ್ಯ ದೂರ ಮಾಡಿ..
ಸರಿಯಾಗಿ ನಿದ್ರೆ ಮಾಡದಿರುವುದು:
ನಿದ್ರೆಯು ಆರೋಗ್ಯಕ್ಕೆ ಅತ್ಯಗತ್ಯವಾಗಿದ್ದರೂ, ನಿದ್ರೆಯ (sleep) ಸಮಯವನ್ನು ಕಡಿತಗೊಳಿಸುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ. ಸಮಯದ ಕೊರತೆ, ಕೆಲಸಗಳು, ಟಿವಿ ಕಾರ್ಯಕ್ರಮಗಳಿಗಾಗಿ ನಿದ್ರೆಯು ಯಾವಾಗಲೂ ರಾಜಿ ಮಾಡಿಕೊಳ್ಳಲು ಇರುವ ಮೊದಲ ವಿಷಯವಾಗಿಬಿಟ್ಟಿದೆ. ಸರಿಯಾದ ನಿದ್ರೆ ಮಾಡದಿರುವುದು ತೂಕ (weight) ಹೆಚ್ಚಾಗಲು ಕಾರಣವಾಗುತ್ತದೆ. ಅಸಮರ್ಪಕ ನಿದ್ರೆ ತೂಕವನ್ನು ಹಲವಾರು ವಿಧಾನಗಳಲ್ಲಿ ಹೆಚ್ಚಿಸುತ್ತದೆ. ಸರಿಯಾದ ನಿದ್ರೆ ನಮ್ಮ ದೇಹದ ಸಮತೋಲನ ಕಾಪಾಡುತ್ತದೆ. ಸರಿಯಾಗಿ ನಿದ್ರೆ ಮಾಡದಿದ್ದರೆ ತೂಕ ಹೆಚ್ಚಾಗುತ್ತದೆ. ನಿದ್ರೆ ಪೂರ್ಣಗೊಳ್ಳದಿದ್ದರೆ ಖಿನ್ನತೆ (stress) ಮತ್ತು ಬೊಜ್ಜಿನಂತಹ ಸಮಸ್ಯೆಗಳು ಉಂಟಾಗುತ್ತವೆ, ಇದರಿಂದ ತೂಕ ಹೆಚ್ಚಳವಾಗುತ್ತದೆ.
ಇದನ್ನೂ ಓದಿ: Healthy Diet: ಅಬ್ಬಾ.. ರಾಗಿಯಿಂದ ನಮಗೆ ಸಿಗುತ್ತಾ ಈ ಅಚ್ಚರಿಯ ಲಾಭಗಳು
ವ್ಯಾಯಾಮ, ವಾಕಿಂಗ್ ಮರೆತಿರುವುದು:
ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ವ್ಯಾಯಾಮ (exercise)ತುಂಬಾ ಮುಖ್ಯವಾಗಿದೆ. ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸವನ್ನು ಎಂದಿಗೂ ನಾವು ಮರೆಯದಿರಿ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿಗಳನ್ನು ಸುಡಲು ವ್ಯಾಯಾಮ ಅತ್ಯಗತ್ಯ. ಇದರಿಂದ ತೂಕ ಇಳಿಯುತ್ತದೆ. ಜೊತೆಗೆ ವಾಕಿಂಗ್ ಮಾಡುವುದು ಕೂಡ ತೂಕ (weight)ಇಳಿಸಲು ಸಹಾಯಕಾರಿ. ವ್ಯಾಯಾಮ ಹಾಗೂ ವಾಕಿಂಗ್ (walking) ಮರೆತರೆ ತೂಕ ಇಳಿಸುವುದು ಅಸಾಧ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.