Weight Loss Tips: ತೂಕ ಇಳಿಬೇಕಾ? ಎಳ ನೀರಿಗೆ ಈ ಬೀಜ ಸೇರಿಸಿ ಕುಡಿದ್ನೋಡಿ

By Suvarna NewsFirst Published Feb 12, 2024, 2:56 PM IST
Highlights

ಆರೋಗ್ಯ ಇದ್ರೆ ಏನು ಬೇಕಾದ್ರೂ ಸಾಧನೆ ಮಾಡ್ಬಹುದು ಎನ್ನುವ ಕಾಲ ಇದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ರೋಗದಿಂದ ದೂರ ಇರ್ಬೇಕು ಅಂದ್ರೆ ಮನೆ ಮದ್ದನ್ನು ಬಳಸ್ಬೇಕು. 

ಯಾವುದೇ ಖಾಯಿಲೆ ಬರಲಿ, ದೇಹ ಉಷ್ಣವಾಗಿರಲಿ, ಎಳೆ ನೀರು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಬೇಸಿಗೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಬಹುತೇಕ ಎಲ್ಲರಿಗೂ ಎಳೆನೀರಿನ ಮಹತ್ವದ ಬಗ್ಗೆ ತಿಳಿದಿದೆ. ಎಳೆನೀರು ನಮ್ಮ ಶರೀರವನ್ನು ಹೈಡ್ರೇಟ್ ಆಗಿರಿಸುತ್ತದೆ. ಇದು ನೀರಿನಲ್ಲಿ ಕರಗುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾಲೊರಿಗಳ ಪ್ರಮಾಣವೂ ಬಹಳ ಕಡಿಮೆ ಇರುತ್ತದೆ.

ಎಳೆನೀರಿ (Coconut Water) ನೊಂದಿಗೆ ಸಬ್ಜಾ (Sabja) ಬೀಜ ಅಥವಾ ತುಳಸಿ ಬೀಜವನ್ನು ಸೇರಿಸುವುದರಿಂದ ಎಳೆನೀರಿನ ಪ್ರಯೋಜನ ದ್ವಿಗುಣಗೊಳ್ಳುತ್ತದೆ. ಇದರಿಂದ ತೂಕ ನಷ್ಟ, ಅಧಿಕ ಕೊಲೆಸ್ಟ್ರಾಲ್ (Cholesterol) ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ದೂರವಾಗುತ್ತವೆ. ಎಳೆನೀರಿನೊದಿಗೆ ತುಳಸಿ ಬೀಜವನ್ನು ಸೇರಿಸಿ ಕುಡಿಯುವುದರಿಂದ ಅನೇಕ ಅದ್ಭುತ ಪ್ರಯೋಜನಗಳು ಉಂಟಾಗುತ್ತವೆ. ಎಳೆನೀರಿನಲ್ಲಿ ಮ್ಯಾಗ್ನೀಶಿಯಂ, ಪೊಟ್ಯಾಶಿಯಂ, ಎಲೆಕ್ಟ್ರೋಲೈಟ್ಸ್, ವಿಟಮಿನ್ ಮುಂತಾದ ಅನೇಕ ಖನಿಜಾಂಶಗಳಿವೆ. ಇದರ ಸೇವನೆಯಿಂದ ದೇಹದಲ್ಲಿ ನೀರಿನ ಪ್ರಮಾಣ ಚೆನ್ನಾಗಿರುತ್ತದೆ ಮತ್ತು ಇದರಿಂದ ಶರೀರದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ತುಳಸಿ ಬೀಜವನ್ನು ಎಳೆನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ತೂಕ ನಿಯಂತ್ರಣ, ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ಮುಂತಾದ ಗಂಭೀರ ಸಮಸ್ಯೆಗಳನ್ನು ನಿವಾರಿಸಬಹುದು. ಎಳೆನೀರು ಮತ್ತು ತುಳಸಿ ಬೀಜದ ಮಿಶ್ರಣವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಕೊಳಕು ಅಥವಾ ವಿಷ ಹೊರಹೋಗುತ್ತದೆ.

ಲತಾ ಮಂಗೇಶ್ಕರ್ ಏ ಮೇರೆ ವತನ್ ಹಾಡಿನ ಮೂಲಕ ಬ್ರೈನ್ ಸ್ಟ್ರೋಕ್‌ಗೆ ಚಿಕಿತ್ಸೆ, AIIMS ಪ್ರಯೋಗ!

ಎಳೆನೀರು ಮತ್ತು ತುಳಸಿ ಬೀಜವನ್ನು ಸೇರಿಸಿ ಕುಡಿಯುವುದರಿಂದ ಉಂಟಾಗುವ ಪ್ರಯೋಜನಗಳು : 

ತೂಕ ನಿಯಂತ್ರಣಕ್ಕೆ ಸಹಕಾರಿ :  ಎಳೆ ನೀರಿನೊಂದಿಗೆ ಸಬ್ಜಾ ಬೀಜವನ್ನು ಸೇರಿಸಿ ಕುಡಿಯುವುದರಿಂದ ತೂಕದ ನಿಯಂತ್ರಣವಾಗುತ್ತದೆ. ಇದರಲ್ಲಿ ಕರಗುವ ನಾರು ಮತ್ತು ಎಂಟಿ ಆಕ್ಸಿಡೆಂಟ್ ಗಳು ಕಂಡುಬರುತ್ತವೆ. ಪ್ರತಿನಿತ್ಯ ಬೆಳಿಗ್ಗೆ ಈ ನೀರನ್ನು ಕುಡಿಯುವುದರಿಂದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. 

ಹೃದಯಾಘಾತ ತಪ್ಪಿಸೋಕೆ ವ್ಯಾಯಾಮ ಸಾಕಾಗೋಲ್ಲ, ಈ ಅಭ್ಯಾಸ ಬಿಡಲೇಬೇಕು!

ಹೊಟ್ಟೆಯ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು : ಹೊಟ್ಟೆಗೆ ಸಂಬಂಧಿಸಿದ ತೊಂದರೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಯನ್ನು ಹೊಂದಿದವರು ಎಳೆನೀರು ಮತ್ತು ತುಳಸಿ ಬೀಜದ ನೀರನ್ನು ಕುಡಿಯಬೇಕು. ಇದರಿಂದ ಎಸಿಡಿಟಿ, ಅಜೀರ್ಣ, ಹೊಟ್ಟೆಯ ಊತ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರ ಸೇವನೆಯಿಂದ ದೇಹದಲ್ಲಿ ಎಚ್ ಸಿ ಎಲ್ ನ ಆಮ್ಲೀಯ ಪರಿಣಾಮವನ್ನು ಕಡಿಮೆ ಮಾಡಬಹುದು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಬಹುದು.

ಶರೀರದಲ್ಲಿ ನೀರಿನ ಕೊರತೆಯನ್ನು ನೀಗಿಸುತ್ತದೆ : ಎಳೆನೀರಿನೊಂದಿಗೆ ತುಳಸಿ ಬೀಜವನ್ನು ಸೇರಿಸಿ ಕುಡಿಯುವುದರಿಂದ ದೇಹದಲ್ಲಿನ ನೀರಿನ ಕೊರತೆ ದೂರವಾಗುತ್ತದೆ ಹಾಗೂ ದೇಹಕ್ಕೆ ಎಲೆಕ್ಟ್ರೋಲೈಟ್ಸ್ ಕೂಡ ಪೂರೈಕೆಯಾಗುತ್ತದೆ.

ಪೋಷಕಾಂಶಗಳ ಆಗರ : ಸಬ್ಜಾ ಬೀಜ ಅಥವಾ ತುಳಿ ಬೀಜವು ಕ್ಯಾಲ್ಸಿಯಂ, ಫೈಬರ್ ಮೆಗ್ನೀಸಿಯಂ ಮತ್ತು ಕಬ್ಬಿಣ ಇತ್ಯಾದಿಗಳಿಂದ ಸಮೃದ್ಧವಾಗಿದೆ. ಆರೋಗ್ಯಕರವಾದ ಎಳೆ ನೀರಿನೊಂದಿಗೆ ಇದನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಸಿಗುತ್ತವೆ ಮತ್ತು ಇದು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಎಳೆನೀರು ಮತ್ತು ತುಳಸಿ ಬೀಜದ ನೀರನ್ನು ಹೀಗೆ ಸೇವಿಸಿ : ಮೊದಲು ಅರ್ಧ ಕಪ್ ನೀರು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ತುಳಸಿ ಬೀಜವನ್ನು ಸೇರಿಸಿ 20 ನಿಮಿಷ ಹಾಗೇ ಬಿಡಿ. ನಂತರ ಒಂದು ಲೋಟ ತಾಜಾ ಎಳೆನೀರಿಗೆ ನೆನೆದ ತುಳಸಿ ಬೀಜವನ್ನು ಸೇರಿಸಿ. ಈ ಎಳೆ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ಅಧಿಕ ಕೊಲೆಸ್ಟ್ರಾಲ್, ಹೆಚ್ಚಿನ ಯೂರಿಕ್ ಆಮ್ಲದ ನಿಯಂತ್ರಣ ಮಾಡಬಹುದು. ಬೆಳಿಗ್ಗೆಯ ಹೊರತಾಗಿ ಹಗಲಿನಲ್ಲಿ ಅಥವಾ ಸಂಜೆಯ ಸಮಯದಲ್ಲಿ ಕೂಡ ಎಳೆ ನೀರು ಮತ್ತು ತುಳಸಿ ಬೀಜದ ಮಿಶ್ರಣವನ್ನು ಸೇವಿಸಬಹುದು. 

click me!