ಲತಾ ಮಂಗೇಶ್ಕರ್ ಏ ಮೇರೆ ವತನ್ ಹಾಡಿನ ಮೂಲಕ ಬ್ರೈನ್ ಸ್ಟ್ರೋಕ್‌ಗೆ ಚಿಕಿತ್ಸೆ, AIIMS ಪ್ರಯೋಗ!

By Suvarna NewsFirst Published Feb 11, 2024, 7:23 PM IST
Highlights

ಮ್ಯೂಸಿಕ್ ಥೆರಪಿ ಅಥವಾ ಮ್ಯೂಸಿಕ್ ಚಿಕಿತ್ಸಾ ವಿಧಾನ ಹೊಸದೇನಲ್ಲ. ಆದರೆ ಭಾರತದಲ್ಲಿ ಈ ಪ್ರಯೋಗ ಕಡಿಮೆ. ಇದೀಗ ದೇಶದ ಪ್ರತಿಷ್ಠಿತ  AIIMS ಸಂಸ್ಥೆ ಮ್ಯೂಸಿಕ್ ಥೆರಪಿ ಮೂಲಕ ಬ್ರೈನ್ ಸ್ಟ್ರೋಕ್‌ಗೆ ಚಿಕಿತ್ಸೆ ನೀಡುತ್ತಿದೆ. ಅದರಲ್ಲೂ ಲತಾ ಮಂಗೇಶ್ಕರ್ ಅವರ ಏ ಮೇರೆ ವತನ್ ನಂತಹ ಹಾಡುಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.  AIIMS ಹೊಸ ಚಿಕಿತ್ಸೆ ಹೇಗೆ ಕೆಲಸ ಮಾಡುತ್ತದೆ?

ದೆಹಲಿ(ಫೆ.12) ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಮ್ಯೂಸಿಕ್ ಥರಪಿ ಅಥವಾ ಮ್ಯೂಸಿಕ್ ಚಿಕಿತ್ಸಾ ವಿಧಾನ ಭಾರತಕ್ಕೆ ಹೊಸದು.  ಇದೀಗ ದೇಶದ ಪ್ರತಿಷ್ಠಿತ ಏಮ್ಸ್ ಸಂಸ್ಥೆ ಮ್ಯೂಸಿಕ್ ಥೆರಪಿ ಮೂಲಕ ಬ್ರೇನ್ ಸ್ಟ್ರೋಕ್‌ಗೆ ಚಿಕಿತ್ಸೆ ನೀಡುತ್ತಿದೆ. ಅದರಲ್ಲೂ ಪ್ರಮುಖವಾಗಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಏ ಮೇರೆ ವತನ್ ನಂತಹ ಹಾಡುಗಳ ಮೂಲಕ ಬ್ರೇನ್ ಸ್ಟ್ರೋಕ್‌ಗೆ ಚಿಕಿತ್ಸೆ ನೀಡುತ್ತಿದೆ. ಈ ಪ್ರಯೋಗದ ಮೂಲಕ ಬ್ರೈನ್ ಸ್ಟ್ರೋಕ್‌ಗೆ ತುತ್ತಾಗಿರುವ ರೋಗಿಗಳ ಬಾಳಲ್ಲಿ ಬೆಳಕು ಮೂಡಿಸಲಾಗುತ್ತಿದೆ.

ಮ್ಯೂಸಿಕ್ ಥೆರಪಿ ಪ್ರಯೋಗದ ಕುರಿತು ಏಮ್ಸ್ ವೈದ್ಯೆ ದೀಪ್ತಿ ವಿಭಾ, ಬ್ರೈನ್ ಸ್ಟ್ರೋಕ್ ರೋಗಿಗಳು ಮಾತನಾಡುವಂತೆ, ತೊದಲು ಉಚ್ಚರಿಸುವಂತೆ, ಭಾವನೆಗಳನ್ನು ವ್ಯಕ್ತಪಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬ್ರೇನ್ ಸ್ಟ್ರೋಕ್‍‌ನಿಂದ ಮಾತು, ಕೇಳುವಿಕೆ ನಷ್ಟವಾದ ರೋಗಿಗಳಿಗೆ ಈ ಮ್ಯೂಸಿಕ್ ಥೆರಪಿ ಉಪಯುಕ್ತವಾಗಿದೆ ಎಂದು ದೀಪ್ತಿ ವಿಭಾ ಹೇಳಿದ್ದಾರೆ. ಇದೇ ಮೊದಲ ಭಾರಿಗೆ ಭಾರತದಲ್ಲಿ ಮ್ಯೂಸಿಕ್ ಥೆರಪಿ ಮೂಲಕ ಅಫಾಸಿಯಾ, ನ್ಯೂರೋಲಜಿ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಏಮ್ಸ್ ಚಿಕಿತ್ಸೆ ನೀಡುತ್ತಿದೆ ಎಂದು ದೀಪ್ತಿ ವಿಭಾ ಹೇಳಿದ್ದಾರೆ. ಐಐಟಿ ದೆಹಲಿಯ ಸಹಯೋಗದೊಂದಿಗೆ ದೆಹಲಿಯ ಏಮ್ಸ್ ಮ್ಯೂಸಿಕ್ ಥೆರಪಿ ಮೂಲಕ ಪರಿಣಾಮಕಾರಿ ಚಿಕಿತ್ಸೆ ಆರಂಭಿಸುತ್ತಿದೆ.

Latest Videos

ಸ್ಟ್ರೋಕ್ ಆಗೋ ಮುನ್ನ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಇಗ್ನೋರ್ ಮಾಡ್ಬೇಡಿ!

ಅಫಾಸಿಯಾ ಎಂದರೇನು?
ಬ್ರೇನ್ ಸ್ಟ್ರೋಕ್‌ಗೆ ತುತ್ತಾಗುವ ವ್ಯಕ್ತಿಗಳಲ್ಲಿ ಶೇಕಡಾ 21 ರಿಂದ 38 ರಷ್ಟು ಮಂದಿಯಲ್ಲಿ ಅಫಾಸಿಯಾ ಸಮಸ್ಯೆ ಕಾಣಿಸಿಕೊಳ್ಳಲಿದೆ. ಅಫಾಸಿಯಾ ಎಂದರೆ ಮೆದಳಿನ ಎಡ ಭಾಗ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದೇ ಈ ರೋಗದ ಪ್ರಮುಖ ಅಂಶ. ಮೆದಿಳಿನ ಎಡ ಭಾಗ ಪ್ರಮುಖವಾಗಿ ವ್ಯಕ್ತಿ ಮಾತನಾಡಲು, ಯಾರು ಏನೇ ಹೇಳಿದರೂ ಅರ್ಥ ಮಾಡಿಕೊಳ್ಳಲು, ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅಫಾಸಿಯಾ ಕಾಣಿಸಿಕೊಂಡ ವ್ಯಕ್ತಿಗಳು ಒಂದು ಪದ ಮಾತನಾಡಲು, ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಮ್ಸ್‌ನ ನ್ಯೂರಾಲಜಿ ವಿಭಾಗ ಇದೀಗ ಮ್ಯೂಸಿಕ್ ಥೆರಪಿ ಮೂಲಕ ಅಫಾಸಿಯಾ ಸಮಸ್ಯೆಗೆ ಚಿಕಿತ್ಸೆ ನೀಡುತ್ತಿದೆ. ವಿದೇಶಗಳಲ್ಲಿರುವ ಈ ರೀತಿಯ ಮ್ಯೂಸಿಕಿ ಥೆರಪಿ ಚಿಕಿತ್ಸೆ ಇದೀಗ ಏಮ್ಸ್ ನೀಡಲು ಮುಂದಾಗಿದೆ..

ಅಫಾಸಿಯಾ ರೋಗಿಗಳ ಮೆದುಳಿನ ಬಲ ಭಾಗ ಸಂಪೂರ್ಣವಾಗಿ ಆರೋಗ್ಯವಾಗಿರುತ್ತದೆ. ಕೇವಲ ಎಡ ಭಾಗ ನಿಷ್ಕ್ರೀಯವಾಗಿರುವ ಕಾರಣ ಮಾತನಾಡುವ, ಭಾವನೆ ವ್ಯಕ್ತಪಡಿಸುವ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿರುತ್ತಾರೆ. ಈ ರೋಗಿಗಳಿಗೆ ಮ್ಯೂಸಿಕ್ ಥೆರಪಿ ಮೂಲಕ ಚಿಕಿತ್ಸೆ ಆರಂಭಿಸಿದರೆ, ಆರಂಭಿಕ ಹಂತದಲ್ಲಿ ಹಾಡಿನ ಅರ್ಥವಾಗಲಿ, ಪದವಾಗಲಿ ಅರ್ಥವಾಗುವುದಿಲ್ಲ. ಜೊತೆಗೆ ಉಚ್ಚರಿಸಲು ಸಾಧ್ಯವಾಗುವುದಿಲ್ಲ. ಆದರೆ ಹಾಡಿನ ಟ್ಯೂನ್ ತೊದಲಲು ಆರಂಭಿಸುತ್ತಾರೆ. 

ಹೆಚ್ಚು ಉಪ್ಪು ತಿನ್ನೋ ಅಭ್ಯಾಸದಿಂದ ಕಾಡುತ್ತೆ ಬ್ರೈನ್ ಸ್ಟ್ರೋಕ್

ಮ್ಯೂಸಿಕ್ ಥೆರಪಿಯಿಂದ ಅಫಾಸಿಯಾ ಸಮಸ್ಯೆ ಕಾಣಿಸಿಕೊಂಡರವ ಬಲ ಭಾಗದ ಮೆದಳು ಹೆಚ್ಚು ಸಕ್ರಿಯವಾಗುತ್ತದೆ. ಇದರಿಂದ ಬಲಭಾಗದ ಮೆದಳು ನಿರಂತರವಾಗಿ ಎಡ ಭಾಗದ ಮೆದುಳಿಗೆ ಸಂಜ್ಞೆಗಳನ್ನು ನೀಡಲಿದೆ. ಇದರ ಜೊತೆಗೆ ರೋಗಿಗಳು ನಿಧಾನವಾಗಿ ಟ್ಯೂನ್ ಗುನುಗಲು ಆರಂಭಿಸುತ್ತಾರೆ. ಇಷ್ಟೇ ಅಲ್ಲ ನಿಧಾನವಾಗಿ ಹಾಡನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ. ತೊದಲು ಪದಗಳಿಂದ ವಾಕ್ಯಗಳವರೆಗೂ ಚಿಕಿತ್ಸೆ ನೆರವು ನೀಡಲಿದೆ. ರಘುಪತಿ ರಾಘವ ರಾಜಾ ರಾಮ್, ಏ ಮೇರೆ ವತನ್ ನಂತಹ ಹಾಡುಗಳು ಈ ಮ್ಯೂಸಿಕ್ ಥೆರಪಿಗೆ ಸೂಕ್ತವಾಗಿದೆ ಎಂದು ವೈದ್ಯ ದೀಪ್ತಿ ವಿಭಾ ಹೇಳಿದ್ದಾರೆ.

ಈ ಚಿಕಿತ್ಸೆಗೆ ಎಷ್ಟು ಸಮಯಾವಕಾಶ ಬೇಕು?
ದೆಹಲಿ ಏಮ್ಸ್ ಹಾಗೂ ಐಐಟಿ ದೆಹಲಿ ಜಂಟಿಯಾಗಿ ಈ ಕುರಿತು ಸಂಶೋಧನೆ ನಡೆಸುತ್ತಿದೆ. ನಿರಂತರ ಅಧ್ಯಯನಗಳು ನಡೆಯುತ್ತಿದೆ. ವೈದ್ಯೆ ದೀಪ್ತಿ ವಿಭಾ, ಕರ್ನಾಟಿಕ್ ಮ್ಯೂಸಿಕ್‌ನಲ್ಲಿ ತಜ್ಞರಾಗಿದ್ದಾರೆ. ಇಷ್ಟೇ ಅಲ್ಲ ಮ್ಯೂಸಿಕ್ ಹಾಗೂ ಚಿಕಿತ್ಸೆಯನ್ನು ಜೊತೆಜೊತೆಯಲ್ಲಿ ತೆಗೆದುಕೊಂಡು ಹೋಗಲು ಸಮರ್ಥರಾಗಿದ್ದಾರೆ. ವೈದ್ಯರ ವಿಶೇಷ ಆಸಕ್ತಿ ಮೂಲಕ ಕೆಲ ಹಾಡುಗಳನ್ನು ಥರಪಿಗಾಗಿ ಆಯ್ಕೆ ಮಾಡಲಾಗಿದೆ. ಸದ್ಯ ನಿರಂತರ ಸಂಶೋಧನೆ ನಡೆಸಲಾಗುತ್ತಿದೆ. ಮೆದಳು ಸ್ಟ್ರೋಕ್‌ನಿಂದ ಬಳಲುತ್ತಿರುವ 60 ರೋಗಿಗಳ ಪೈಕಿ 30 ರೋಗಿಗಳಿಗೆ ಮ್ಯೂಸಿಕ್ ಥೆರಪಿ ಹಾಗೂ ಇನ್ನುಳಿದ 30 ರೋಗಿಗಳಿಗೆ ಸ್ಟಾಂಡರ್ಟ್ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ಮೂರು ತಿಂಗಳಿಗೆ ಇವರಲ್ಲಿ ಆಗಿರವ ಬದಲಾವಣೆ, ಚಿಕಿತ್ಸೆ ಪ್ರಗತಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ವಿವರವಾಗಿ ದಾಖಿಸಲಾಗುತ್ತಿದೆ. ಶೀಘ್ರದಲ್ಲೇ ಈ ಮ್ಯೂಸಿಕ್ ಥೆರಪಿಯ ಸಿದ್ಧ ಸೂತ್ರ ರೆಡಿಯಾಗಲಿದೆ.

click me!