Earth Day: ಇಂದು ವಿಶ್ವ ಭೂ ದಿನ: ಭೂಮಿ ರಕ್ಷಣೆ ಮಾಡೋ ಮನಸ್ಸಿದ್ಯಾ? ಏನ್ ಮಾಡ್ಬೋದು?

By Suvarna News  |  First Published Apr 22, 2023, 5:35 PM IST

ಅಬ್ಬಬ್ಬಾ...ಎಂತಹ ಸೆಕೆ. ಬೇಸಿಗೆಯ ಪರಿತಾಪಕ್ಕೆ ಮನುಷ್ಯ ಸೊರಗುತ್ತಿದ್ದಾನೆ. ಬಿಸಿಲಿನ ಆಘಾತಕ್ಕೆ ಪ್ರಾಣವನ್ನೂ ತೆತ್ತವರಿದ್ದಾರೆ. ರಾಜ್ಯದಲ್ಲೇ ಕೆಲವು ಕಡೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೂ ಅಧಿಕ ಉಷ್ಣತೆ ದಾಖಲಾಗಿದ್ದು, ಭೂಗ್ರಹದ ಹವಾಮಾನ ಏರಿಕೆಯ ಪರಿಣಾಮವನ್ನು ಸಾಕ್ಷಾತ್ ಅನುಭವಿಸುತ್ತಿದ್ದೇವೆ. ಇದು ಭೂಮಿ ಕೇಂದ್ರಿತವಾದ ನೈಸರ್ಗಿಕ ವ್ಯವಸ್ಥೆಗೆ ಗೌರವ ನೀಡದೆ ಬೇಕಾಬಿಟ್ಟಿ ವರ್ತನೆ ಮಾಡಿದ ಪರಿಣಾಮ. ಇನ್ನಾದರೂ ತಪ್ಪನ್ನು ತಿದ್ದಿಕೊಂಡು ಭೂಗ್ರಹದ ರಕ್ಷಣೆಗಾಗಿ ಸಂಘಟಿತ ಹೆಜ್ಜೆ ಹಾಕಬೇಕಿದೆ. 


ಹವಾಮಾನ ಏರಿಕೆಯ ಪರಿಣಾಮಗಳನ್ನು ದಿನದಿನವೂ ನೋಡುತ್ತಿದ್ದೇವೆ. ಎಲ್ಲರನ್ನೂ ಪೊರೆಯುವ ತಾಯಿ ಎನಿಸಿರುವ ಭೂಮಿ ಮುನಿಸಿಕೊಂಡಿದ್ದಾಳೆ. ಮಾನವ ಕುಲ ಭೂತಾಯಿಯನ್ನು ನಿರ್ದಾಕ್ಷಿಣ್ಯವಾಗಿ ಕಠಿಣವಾಗಿ ನಡೆಸಿಕೊಂಡ ಪರಿಣಾಮವೇ ಹವಾಮಾನ ಏರಿಕೆ.  ಭೂಗ್ರಹದ ವ್ಯವಸ್ಥೆಯಲ್ಲಿ ಚೂರೇ ಚೂರು ವ್ಯತ್ಯಾಸವಾದರೂ ಎಲ್ಲರೂ ಏರುಪೇರಾಗುತ್ತದೆ. ಭೂಮಿಯೆಂದರೆ ಬೇರೆಯಲ್ಲ, ಸಕಲ ನೈಸರ್ಗಿಕ ವ್ಯವಸ್ಥೆಗಳು ಬೇರೆಯಲ್ಲ. ಅವೆಲ್ಲ ಚೆನ್ನಾಗಿದ್ದರೆ ಮಾತ್ರ ಭೂಮಿ ಚೆನ್ನಾಗಿರುತ್ತದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನು ಇಂಚಿಂಚೂ ಕಬಳಿಸಿದ್ದಾನೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆ ಆಗುತ್ತಲೇ ಇದೆ. ಭೂಮಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಜಾಗ್ರತಗೊಳಿಸಲು ಪ್ರತಿವರ್ಷ ಏಪ್ರಿಲ್ 22ರಂದು ಭೂ ದಿನವನ್ನು ಆಚರಿಸಲಾಗುತ್ತದೆ. ಭೂಮಿಯನ್ನು ಸಹಜ ಸ್ಥಿತಿಗೆ ಮರಳಿಸುವುದು ಖಂಡಿತ ಮನುಷ್ಯನಿಂದಾಗ ಕೆಲಸ. ಆದರೆ, ಅದರ ಬಗ್ಗೆ ಪ್ರಯತ್ನವನ್ನಾದರೂ ಮಾಡಬಹುದು. ಇದೇ ವಿಶ್ವ ಭೂಮಿ ದಿನವನ್ನು ಆಚರಿಸುವ ಮುಖ್ಯ ಉದ್ದೇಶ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಮಾಲಿನ್ಯ ಮತ್ತು ಜೀವವೈವಿಧ್ಯತೆಯ ನಾಶ ಇವೆಲ್ಲವುಗಳ ತಡೆಗೆ ನಮ್ಮಿಂದಾದ ಕೊಡುಗೆ ನೀಡಬೇಕು. ಭೂಮಿಯ ಕೋಟ್ಯಂತರ ಜನ ಸೇರಿ ಮನಸ್ಸು ಮಾಡಿದರೆ ಸಾಧ್ಯವಾಗದೆ ಇರುವಂಥದ್ದು ಏನಿದೆ?

53 ವರ್ಷಗಳ ಮೊದಲು ವಿಶ್ವ ಭೂ ದಿನದ (World Earth Day) ಆಚರಣೆಗೆ ಶುಭಾರಂಭ ಮಾಡಲಾಯಿತು. ಅಮೆರಿಕದ ಸಿನೇಟರ್ ಜೆರಾಲ್ಡ್ ನೆಲ್ಸನ್ (Jerald Nelson) ಈ ದಿನಾಚರಣೆ ಹಿಂದಿನ ರೂವಾರಿ. ಶಾಲೆಗಳಿಗೆ ಪರೀಕ್ಷೆ ಇಲ್ಲದ ಈ ದಿನಗಳು ಅವರಿಗೆ ಭೂಮಿ ದಿನ ಆಚರಿಸಲು ಸರಿಯಾದ ಸಮಯ ಎಂದೆನಿಸಿತು. ಈ ದಿನದಂದು ಅಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಸಂಸ್ಥೆಗಳು ಒಗ್ಗೂಡಿ ಗಿಡ ನೆಡುವುದು, ಸ್ವಚ್ಛತೆ (Cleaning) ಕಾರ್ಯಕ್ರಮ ಮುಂತಾದವುಗಳನ್ನು ನಡೆಸುತ್ತಾರೆ. ಪರಿಸರಸ್ನೇಹಿ ಜೀವನಪದ್ಧತಿ (Lifestyle) ಅಳವಡಿಸಿಕೊಳ್ಳುವ ಕುರಿತು ಅರಿವು ಮೂಡಿಸಲಾಗುತ್ತದೆ. ಭಾರತದಲ್ಲೂ ಭೂಮಿ ದಿನದ ಅಂಗವಾಗಿ ಪ್ರತಿವರ್ಷ ಹಲವಾರು  ಕಾರ್ಯಕ್ರಮಗಳನ್ನು (Program) ನಡೆಸಲಾಗುತ್ತದೆ. 

ಆಂಧ್ರಪ್ರದೇಶದ ಅನಂತಪುರದಲ್ಲಿ 15 'ಭೂಮಿಯ ಅಪರೂಪದ ಅಂಶ' ಪತ್ತೆ ಮಾಡಿದ ವಿಜ್ಞಾನಿಗಳು!

ಕಳೆದ ಶತಮಾನ ಅತ್ಯಧಿಕ ಪ್ರಮಾಣದ ಕಾಡಿನ (Forest) ನಾಶಕ್ಕೆ ಸಾಕ್ಷಿಯಾಗಿದೆ. ಇಡೀ ವಿಶ್ವದಲ್ಲಿ ಅರಣ್ಯದ ಪ್ರಮಾಣ ಗಣನೀಯ ಕುಸಿತ ಕಂಡಿದೆ. ಜನರು ಮತ್ತು ಆಯಾ ಸ್ಥಳೀಯ ಸರ್ಕಾರಗಳು ಯಾವುದೇ ನಿಯಂತ್ರಣವಿಲ್ಲದೆ ಕಾಡನ್ನು ನಾಶಪಡಿಸಿದ ಪರಿಣಾಮವನ್ನು ನಾವೀಗ ಉಣ್ಣುತ್ತಿದ್ದೇವೆ. ಭಾರತದಲ್ಲಿ ಸ್ವಾತಂತ್ರ್ಯಾನಂತರ ಕೆಲವು ಕಾನೂನುಗಳನ್ನು (Acts) ಜಾರಿಗೊಳಿಸಲಾಗಿದೆಯಾದರೂ ಅಲ್ಲಿಯವರೆಗೆ ಹಾನಿಯಾದ ಪ್ರಮಾಣ ಅಪಾರ. ಆದರೆ, ನಿಯಮಾವಳಿ (Rules) ರೂಪುಗೊಂಡ ಕಾರಣದಿಂದ ಇಂದು ಮರ ಕಡಿದು (Cutting Tree) ಅದನ್ನು ಬಳಕೆ ಮಾಡಿಕೊಳ್ಳುವುದು ಸುಲಭವಲ್ಲ. 

ಜನ ಸಂಘಟಿತರಾಗಿ ಏನ್ ಮಾಡ್ಬೋದು?
•    ಅರಣ್ಯೀಕರಣ (Forestation) ಹೆಚ್ಚಿಸಲು ಸರ್ಕಾರದಿಂದ ಹಿಡಿದು ಸಾಮಾನ್ಯ ಜನರೂ ಮುಂದಾಗಬೇಕು. ಅರಣ್ಯವೆಂದರೆ, ನೆಡುತೋಪುಗಳಲ್ಲ, ನೈಸರ್ಗಿಕ (Natural) ಅರಣ್ಯ ಬೆಳೆಯಲು ಅವಕಾಶ ನೀಡಬೇಕು.
•    ಅರಣ್ಯದ ಅಸ್ತಿತ್ವ ನಾಶಪಡಿಸುವ ಅಭಿವೃದ್ಧಿ (Development) ಯೋಜನೆಗಳನ್ನು ಕೈಬಿಡಲೇಬೇಕು. ಇದಕ್ಕೆ ಪರ್ಯಾಯ ಮಾರ್ಗ ಹುಡುಕಲೇಬೇಕಾದ ಅನಿವಾರ್ಯತೆ ಇರುವುದನ್ನು ಸರ್ಕಾರಗಳು ಅರಿಯಬೇಕು. 

Tap to resize

Latest Videos

'ನನ್ನ ಪ್ರೀತಿಯ ಭಾರತ..' ಸ್ಯಾಟಲೈಟ್‌ನಿಂದ ತೆಗೆದ ಭೂಮಿಯ ಆಕರ್ಷಕ ಚಿತ್ರ ರಿಲೀಸ್‌ ಮಾಡಿದ ಇಸ್ರೋ!

•    ವಾಹನಗಳ (Vehicles) ಓಡಾಟಕ್ಕೆ ಇತಿಮಿತಿ ಇರಲಿ. ಇಲೆಕ್ಟ್ರಿಕ್ ವಾಹನ, ಸೌರವಿದ್ಯುತ್, ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಲಿ.
•    ವಿದ್ಯುತ್ (Power) ಗಾಗಿ ಅಣುಸ್ಥಾವರಗಳಂಥ ನಿರ್ಮಾಣದ ಬದಲು ಕಿರು ಯೋಜನೆಗಳಿಗೆ ಆದ್ಯತೆ ನೀಡಬೇಕು. ಸ್ಥಳೀಯ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಬೇಕು.

click me!