How To Clean Ears: ಕಿವಿಗಳನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸುವುದು ಹೇಗೆ?

By Suvarna News  |  First Published Dec 3, 2022, 10:50 AM IST

ಮನುಷ್ಯನ ದೇಹ ಸ್ವಚ್ಛವಾಗಿದ್ದರಷ್ಟೇ ಕಾಯಿಲೆಗಳಿಂದ ದೂರವಿರ್ಬೋದು. ಹೀಗಾಗಿಯೇ ಮನುಷ್ಯ ಹಲ್ಲುಜ್ಜುವ, ಸ್ನಾನ ಮಾಡುವ ಮೊದಲಾದ ಅಭ್ಯಾಸಗಳನ್ನು ಹೊಂದಿದ್ದಾನೆ. ಇದೇ ರೀತಿ ಕಿವಿ ಕ್ಲೀನ್ ಮಾಡೋ ಅಭ್ಯಾಸ ಸಹ ರೂಢಿಯಲ್ಲಿದೆ. ಆದರೆ ಸುರಕ್ಷಿತವಾಗಿ ಕಿವಿ ಕ್ಲೀನ್ ಮಾಡೋದು ಹೇಗೆ ?


ದೇಹದ ಎಲ್ಲಾ ಅಂಗಾಂಗಳಂತೆ ಕಿವಿಯೂ (Ears) ಸಹ ತುಂಬಾ ಮುಖ್ಯವಾಗಿದೆ. ಮತ್ತೊಬ್ಬರ ಮಾತನ್ನು ಆಲಿಸಲು ನಮಗೆ ಆಲಿಸುವ ಶಕ್ತಿಯಿರಬೇಕು. ಇದಕ್ಕಾಗಿ ಕಿವಿಯ ಆರೋಗ್ಯವನ್ನು ತುಂಬಾ ಚೆನ್ನಾಗಿಟ್ಟುಕೊಳ್ಳಬೇಕು. ಆದರೆ ಕಿವಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ. ಹೆಚ್ಚಿನವರು ಇಯರ್ ಬಡ್ ಬಳಸಿ ಕಿವಿಗಳನ್ನು ಸ್ವಚ್ಛಗೊಳಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಇದು ಎಷ್ಟರಮಟ್ಟಿಗೆ ಸುರಕ್ಷಿತ. ಹೆಚ್ಚಿನ ಮಾಹಿತಿಗೆ ಹೋಗುವ ಮೊದಲು, ಈ ಅಭ್ಯಾಸವು (Habit) ಸಂಪೂರ್ಣವಾಗಿ ತಪ್ಪು ಎಂದು ತಿಳಿಯುವುದು ಮುಖ್ಯ. ಇಯರ್ ವ್ಯಾಕ್ಸ್ ಅನ್ನು ಸ್ವಚ್ಛ (Clean)ಗೊಳಿಸಲು ಇಯರ್‌ಬಡ್ ಅನ್ನು ಬಳಸುವ ತಂತ್ರ, ಅಥವಾ ಕೆಲವೊಮ್ಮೆ ಪೆನ್, ಹೇರ್ ಪಿನ್‌ಗಳು, ಪೇಪರ್ ಕ್ಲಿಪ್‌ಗಳು ಅಥವಾ ಟೂತ್‌ಪಿಕ್‌ಗಳ ಬಳಕೆಯೂ ತೊಂದರೆಯನ್ನುಂಟು ಮಾಡಬಹುದು. ವೈದ್ಯರ ಪ್ರಕಾರ, ಹೀಗೆ ಮಾಡುವುದರಿಂದ ಕಿವಿ ಮತ್ತು ಶ್ರವಣ ಸಾಮರ್ಥ್ಯಕ್ಕೆ ಶಾಶ್ವತ ಹಾನಿ ಉಂಟಾಗುವ ಸಾಧ್ಯತೆಯೂ ಇದೆ.

ಕಿವಿಯ ಮೇಣವನ್ನು ಸ್ವಚ್ಛಗೊಳಿಸುವ ಅಗತ್ಯವಿದೆಯೇ ?
ಪ್ರತಿಯೊಬ್ಬರೂ ಕಿವಿಯ ಮೇಣ (Ear wax)ವನ್ನು ತೆಗೆದುಹಾಕುವ ಅಗತ್ಯವಿಲ್ಲ. ಆದರೂ, ಇದು ಕಿವಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾದರೆ ಕಿವಿನೋವು, ಸೋಂಕಿನ ಅಪಾಯ, ತಾತ್ಕಾಲಿಕ ಶ್ರವಣ ನಷ್ಟ ಮತ್ತು ಆಘಾತಕಾರಿ ಸಾಮಾಜಿಕ ಪ್ರತ್ಯೇಕತೆ ಮತ್ತು ಖಿನ್ನತೆಗೆ ಕಾರಣವಾಗಬಹುದು. ಹೀಗಾಗಿ ಇಂಥಾ ಆರೋಗ್ಯ ಸಮಸ್ಯೆಗಳು ತಲೆದೋರಬಾರದು ಎಂದಾದರೆ ಮೊದಲೇ ಕಿವಿ ಸ್ವಚ್ಛಗೊಳಿಸೋ ಅಭ್ಯಾಸ ಒಳ್ಳೆಯದು.

Tap to resize

Latest Videos

Winter Tips: ಚಳಿಗಾಲದಲ್ಲಿ ಕಿವಿನೋವಿನ ಕಾಟನಾ ? ಇಲ್ಲಿದೆ ಪರಿಹಾರ

ಕಿವಿಯನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸುವುದು ಹೇಗೆ ?
ಕಿವಿಯನ್ನು ಕ್ಲೀನ್ ಮಾಡುವ ಅಭ್ಯಾಸವನ್ನು ಹೆಚ್ಚಿನವರು ಹೊಂದಿದ್ದಾರೆ. ಆದರೆ ಕ್ಲೀನ್ ಮಾಡೋ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿದೆ. ಕೆಲವೊಬ್ಬರು ಇಯರ್‌ ಬಡ್ಸ್‌ಗಳನ್ನು ಬಳಸ್ತಾರೆ. ಇನ್ನು ಕೆಲವರು ಕಿವಿಯಿಂದ ಗಲೀಜು ಹೊರತೆಗೆಯುವ ಪಿನ್‌ನ್ನು ಬಳಸುತ್ತಾರೆ. ಆದ್ರೆ ಕಿವಿ ಕ್ಲೀನ್ ಮಾಡೋದಷ್ಟೇ ಮುಖ್ಯವಲ್ಲ. ಕಿವಿಯನ್ನು ಯಾವ ರೀತಿ ಕ್ಲೀನ್ ಮಾಡುತ್ತೀರಿ ಎಂಬುದು ಸಹ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಕಿವಿ ಸ್ವಚ್ಛಗೊಳಿಸುವ ರೀತಿಯೇ ಕಿವಿಯ ಆರೋಗ್ಯ (Health)ವನ್ನು ಹಾಳು ಮಾಡಬಹುದು. ಹಾಗಿದ್ರೆ ಯಾವ ರೀತಿ ಕಿವಿ ಕ್ಲೀನ್ ಮಾಡಬಹುದು.

ಮನೆಯಲ್ಲೇ ಕಿವಿಯನ್ನು ಸ್ವಚ್ಛಗೊಳಿಸುವ ವಿಧಾನ
ಮನೆಯಲ್ಲೇ ಸುಲಭವಾಗಿ ಕಿವಿಯನ್ನು ಕ್ಲೀನ್ ಮಾಡಲು ಹೀಗೆ ಮಾಡಬಹುದು. ಎರಡರಿಂದ ಮೂರು ಹನಿ ಬಾದಾಮಿ ಎಣ್ಣೆ (Almond oil)ಯನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ 3-5 ದಿನಗಳ ವರೆಗೆ ಕಿವಿಗೆ ಹಾಕಿಕೊಳ್ಳಿ. ಕಿವಿ ಕಾಲುವೆಯ ಮೂಲಕ ತೈಲವು ಕೆಲಸ ಮಾಡಲು ಕೆಲವು ನಿಮಿಷಗಳ ಕಾಲ ಒಂದು ಬದಿಯಲ್ಲಿ ತಲೆಯನ್ನು ಮಲಗಿರುವಾಗ ಡ್ರಾಪರ್ ಅನ್ನು ಬಳಸಲು ವೈದ್ಯರು (Doctors) ಸಲಹೆ ನೀಡುತ್ತಾರೆ. ಸುಮಾರು ಎರಡು ವಾರಗಳಲ್ಲಿ, ಕಿವಿ ಮೇಣದ ಉಂಡೆಗಳು ಕಿವಿಯಿಂದ ಬೀಳುತ್ತವೆ. ಹೆಚ್ಚಾಗಿ ರಾತ್ರಿಯಲ್ಲಿ ಒಬ್ಬರು ನಿದ್ದೆ ಮಾಡುವಾಗ ಕಿವಿ ಕ್ಲೀನ್ ಆಗಿ ಬಿಡುತ್ತದೆ.

ಕೇವಲ ಕಿವಿಯ ಮೇಣದ ಶುಚಿಗೊಳಿಸುವ ಸೆಷನ್‌ಗಾಗಿ ವೈದ್ಯರನ್ನು ಭೇಟಿ ಮಾಡುವುದು ಯಾವಾಗಲೂ ಉತ್ತಮ ಆಯ್ಕೆಯಲ್ಲ. ಕೆಲವೊಮ್ಮೆ ಇದು ವಿನಾಕಾರಣ ಹೆಚ್ಚು ವೆಚ್ಚಕ್ಕೆ ಕಾರಣವಾಗಬಹುದು. ಆ ಸಂದರ್ಭದಲ್ಲಿ, ಮೇಲಿನ ಸರಳ ಪರಿಹಾರಗಳು ಯಾವುದೇ ಸಮಯದಲ್ಲಿ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ.

ಹೆಡ್‌ಫೋನ್ ಬಳಕೆ ಮಾಡ್ತೀರಾ ಹುಷಾರ್‌, ವಿಶ್ವದ 135 ಕೋಟಿ ಜನರಿಗೆ ಕಿವುಡುತನದ ಭೀತಿ !

ಕಿವಿಗಳನ್ನು ಸ್ವಚ್ಛಗೊಳಿಸುವಾಗ ಹೀಗೆಲ್ಲಾ ಮಾಡದಿರಿ
ಮನೆಯಲ್ಲಿ ಇಯರ್ ವ್ಯಾಕ್ಸ್‌ನ್ನು ಸ್ವಚ್ಛಗೊಳಿಸುವಾಗ ಹೆಚ್ಚಿನವರು ತಪ್ಪುಗಳನ್ನು ಮಾಡುತ್ತಾರೆ. ಕೆಲವೊಬ್ಬರು ಹೇರ್‌ಕ್ಲಿಪ್‌, ಸೀರೆ ಪಿನ್‌ಗಳನ್ನೆಲ್ಲಾ ಕಿವಿಯೊಳಗೆ ಹಾಕಿ ಕ್ಲೀನ್ ಮಾಡಲು ಯತ್ನಿಸುತ್ತಾರೆ. ಇದು ಕಿವಿಯಲ್ಲಿ ಗಾಯ (Injury)ಗಳನ್ನು ಉಂಟು ಮಾಡಬಹುದು, ಹೀಗಾಗಿ ತಪ್ಪಿಯೂ ಇಂಥಾ ವಿಧಾನದ ಮೊರೆ ಹೋಗಬೇಡಿ.  ಹೇರ್‌ಪಿನ್ ಅಥವಾ ಟೂತ್‌ಪಿಕ್‌ನಂತಹ ಕಿವಿಯ ಮೇಣವನ್ನು ಸ್ವಚ್ಛಗೊಳಿಸಲು ಮೊನಚಾದ ವಸ್ತುವನ್ನು ಬಳಸುವುದು ಕಿವಿಯಲ್ಲಿ ಶಾಶ್ವತವಾದ ತೊಂದರೆಯನ್ನುಂಟು ಮಾಡಬಹುದು. ಇಯರ್ ಕ್ಯಾಂಡಲ್ ಅಥವಾ ಇಯರ್ ವ್ಯಾಕ್ಯೂಮ್‌ಗಳನ್ನು ಬಳಸುವುದು ಸಹ ಅಷ್ಟು ಒಳ್ಳೆಯದಲ್ಲ. ಇಎನ್‌ಟಿ ಸ್ಪೆಷಲಿಸ್ಟ್ ಹೇಳುವಂತೆ ನಮ್ಮ ದೇಹದ ಇತರ ಅಂಗಾಂಗಳಂತೆ ಕಿವಿಯೂ ಸ್ವತಃ ಸ್ವಚ್ಛವಾಗುವ ಪ್ರವೃತ್ತಿಯನ್ನು ಹೊಂದಿರುತ್ತೆ. ಹೀಗಾಗಿ ಕಿವಿಯನ್ನು ಆಗಾಗ ಸ್ವಚ್ಛಗೊಳಿಸುವ ಪರಿಪಾಠ ಅಭ್ಯಾಸ ಬೇಕಿಲ್ಲ. 

click me!