ಚೀನಾದಲ್ಲಿ ಕೋವಿಡ್ ಅಬ್ಬರ ಮತ್ತೆ ಶುರುವಾಗಿದೆ. ಅಚ್ಚರಿಯ ವಿಚಾರವೆಂದರೆ 2019ರಲ್ಲಿ ವುಹಾನ್‌ನಲ್ಲಿ ಕೋವಿಡ್ ಪತ್ತೆಯಾದಾಗಿನಿಂದ ಇಲ್ಲಿವರೆಗೆ ಮೊದಲ ಬಾರಿಗೆ ದಿನವೊಂದಕ್ಕೆ 31,444 ದೈನಂದಿನ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರ ಬೆನ್ನಲ್ಲೇ ಚೀನಾದ ಕಠಿಣ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೀಜಿಂಗ್: ಚೀನಾದಲ್ಲಿ ಗುರುವಾರ ದಾಖಲೆಯ 31,444 ದೈನಂದಿನ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು 2019ರಲ್ಲಿ ವುಹಾನ್‌ನಲ್ಲಿ ಕೋವಿಡ್ ಪತ್ತೆಯಾದಾಗಿನಿಂದ ಈವರೆಗಿನ ದೈನಂದಿನ ಪ್ರಕರಣಗಳ ಸಾರ್ವಕಾಲಿಕ ಗರಿಷ್ಠವಾಗಿದೆ. ಇದರ ಬೆನ್ನಲ್ಲೇ ಚೀನಾದ ಕಠಿಣ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ.
ಝೆಂಗ್‌ಝೌನಲ್ಲಿ 8 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾಡಲಾಗಿದ್ದು, ಇಲ್ಲಿನ 66 ಲಕ್ಷ ಜನರು ಮನೆಯಲ್ಲೇ ಬಂಧಿಯಾಗಿದ್ದಾರೆ. ಕೇವಲ ಆಹಾರ (Food) ಖರೀದಿಸಲು ಹಾಗೂ ವೈದ್ಯಕೀಯ ಚಿಕಿತ್ಸೆ (Treatment) ಪಡೆದುಕೊಳ್ಳಲು ಮಾತ್ರ ಮನೆಯಿಂದ ಹೊರ ಹೋಗಲು ಅನುಮತಿ ನೀಡಲಾಗಿದೆ. ಬೈಯುನ್ ಜಿಲ್ಲೆಯಲ್ಲಿ 37 ಲಕ್ಷ ಜನರು, ಶಿಜಿಯಾಜುಆಂಗ್ 110 ಲಕ್ಷ ಜನರು ಕೂಡಾ ಮನೆಯಲ್ಲೇ ಬಂಧಿಯಾಗಿದ್ದು ಸಾಮೂಹಿಕ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಶಾಲೆ, ಕಾಲೇಜು, ಕಚೇರಿಗಳು, ಶಾಪಿಂಗ್ ಮಾಲ್‌ಗಳನ್ನು ಮುಚ್ಚಲಾಗಿದ್ದು, ಸಾರ್ವಜನಿಕ ಸಾರಿಗೆ (Public transport) ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ.
ಚೀನಾದ ಪ್ರಮುಖ ಉತ್ಪಾದನಾ ಕೇಂದ್ರದಲ್ಲಿ ಲಾಕ್ ಡೌನ್; ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ
ಒಮಿಕ್ರೋನ್ ಬಿಎ.5 ರೂಪಾಂತರಿಯಿಂದಲೇ ಕೋವಿಡ್ ಸ್ಫೋಟ
ಚೀನಾದಲ್ಲಿ ಒಮಿಕ್ರೋನ್ ಬಿಎ.5 ರೂಪಾಂತರಿಯಿಂದಲೇ ಕೋವಿಡ್ ಸ್ಫೋಟವಾಗುತ್ತಿದೆ. ಬಹುತೇಕ ರಾಷ್ಟ್ರಗಳು ತೀವ್ರ ಲಸಿಕಾಕರಣದ ನೀತಿಯನ್ನು ಅನುಸರಿಸಿ ಕೋವಿಡ್ ನಿಯಂತ್ರಿಸಲು ಯಶಸ್ವಿಯಾದರೆ ಚೀನಾ ಮಾತ್ರ ಇಂದಿಗೂ ಹೊಸ ಕೇಸು ವರದಿಯಾಗುತ್ತಿದ್ದಂತೆ ಲಾಕ್‌ಡೌನ್ ವಿಧಿಸಿ ಸೋಂಕಿನ ಹರಡುವಿಕೆ ನಿಯಂತ್ರಿಸಲು ಮುಂದಾಗುತ್ತಿದೆ. ರೋಗಲಕ್ಷಣ (Symptoms) ಸೌಮ್ಯವಾಗಿದ್ದರೂ ಕಠಿಣ ಲಾಕ್‌ಡೌನ್ ಹಾಗೂ ಕಡ್ಡಾಯ ಕ್ವಾರೆಂಟೈನ್ ಹೇರುವ ಚೀನಾದ ಶೂನ್ಯ ಕೋವಿಡ್ ನೀತಿಯ ವಿರುದ್ಧ ಜನರು ಸಾಕಷ್ಟುಅಸಮಾಧಾನ ವ್ಯಕ್ತಪಡಿಸಿದ್ದಾರೆ.
37 ಲಕ್ಷ ಜನರು , ಶಿಜಿಯಾಜುಂಗ್ 110 ಲಕ್ಷ ಜನರು ಕೂಡಾ ಮನೆಯಲ್ಲಿ ಬಂಧಿಯಾಗಿದ್ದು ಸಾಮೂಹಿಕ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಶಾಲೆ, ಕಾಲೇಜು, ಕಚೇರಿಗಳು, ಶಾಪಿಂಗ್ ಮಾಲ್‌ಗಳನ್ನು ಮುಚ್ಚಲಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ.
ಚಳಿಗಾಲ ಕಾರಣ: ಈಗಾಗಲೇ ಭಾರತ ಸೇರಿ ಹಲವು ದೇಶಗಳಲ್ಲಿ ಇರುವ ಓಮಿಕ್ರೋನ್ ಬಿಎ.5 ರೂಪಾಂತರಿಯಿಂದ ಚೀನಾದಲ್ಲಿ ಕೋವಿಡ್ ಸ್ಫೋಟವಾಗುತ್ತಿದೆ. ಬೇರೆ ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರೂ ಈಗ ಚೀನಾದಲ್ಲಿ ಕೊರೆವ ಚಳಿಗಾಲ ಆರಂಭವಾಗಿದೆ. ಅನೇಕ ಕಡೆ ಸೊನ್ನೆ ಅಥವಾ ಒಂದು ಡಿಗ್ರಿ ಕನಿಷ್ಠ ತಾಪಮಾನವಿದೆ. ಇದು ಕೋವಿಡ್ ಸ್ಫೋಟಕ್ಕೆ ಕಾರಣ ಎನ್ನಲಾಗುತ್ತಿದೆ. ಚೀನಾದ ಬಹುತೇಕ ವೃದ್ಧರ ಆರೋಗ್ಯದ (Health) ಮೇಲೆ ದುಷ್ಪರಿಣಾಮ ಭೀತಿಯಿಂದ ಲಸಿಕೆ ಪಡೆದಿಲ್ಲ. ಇದೂ ಕೂಡಾ ಕೋವಿಡ್ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.
ಕೋವಿಡ್ -19ರಿಂದಾಗಿ ಸಣ್ಣ ವಯಸಲ್ಲೇ ದೊಡ್ಡವರಾಗ್ತಿದ್ದಾರೆ ಹೆಣ್ಣು ಮಕ್ಕಳು
ಬಹುತೇಕ ರಾಷ್ಟ್ರಗಳು ತೀವ್ರ ಲಸಿಕಾಕರಣದ ನೀತಿಯನ್ನು ಅನುಸರಿಸಿ ಕೋವಿಡ್ ನಿಯಂತ್ರಿಸಲು ಯಶಸ್ವಿಯಾದರೆ ಚೀನಾ ಮಾತ್ರ ಇಂದಿಗೂ ಹೊಸ ಕೇಸು ವರದಿಯಾಗುತ್ತಿದ್ದಂತೆ ಲಾಕ್‌ಡೌನ್ ವಿಧಿಸಿ ಸೋಂಕಿನ ಹರಡುವಿಕೆ ನಿಯಂತ್ರಿಸಲು ಮುಂದಾಗುತ್ತಿದೆ. ರೋಗ ಲಕ್ಷಣ ಸೌಮ್ಯವಾಗಿದ್ದರೂಕಠಿಣ ಲಾಕ್‌ಡೌನ್ ಹಾಗೂ ಕಡ್ಡಾಯ ಕ್ವಾರಂಟೈನ್ ಹೇರುವ ಚೀನಾದ ಶೂನ್ಯ ಕೋವಿಡ್ ನೀತಿಯ ವಿರುದ್ಧ ಜನರು ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ 38 ಜನರಲ್ಲಿ ಕೊರೋನಾ ಸೋಂಕು ದೃಢ
ನಗರದಲ್ಲಿ ಗುರುವಾರ 38 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇ.3.12 ದಾಖಲಾಗಿದೆ. ಸೋಂಕಿನಿಂದ 27 ಮಂದಿ ಗುಣಮುಖರಾಗಿದ್ದು, ಮೃತಪಟ್ಟ ವರದಿಯಾಗಿಲ್ಲ. ಸದ್ಯ ನಗರದಲ್ಲಿ 1,431 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ ಇಬ್ಬರು ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1041 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು, 180 ರಾರಯಪಿಡ್ ಆ್ಯಂಟಿಜಿನ್ ಪರೀಕ್ಷೆಗೆ ಮತ್ತು 861 ಮಂದಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು. 307 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 36 ಮಂದಿ ಮೊದಲ ಡೋಸ್, 55 ಮಂದಿ ಎರಡನೇ ಡೋಸ್ ಮತ್ತು 216 ಮಂದಿ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.