ಮಕ್ಕಳ ಎಡಿಎಚ್ ಡಿ ಸಮಸ್ಯೆ ಹಲವು ಪಾಲಕರಿಗೆ ಬೇಗ ಅರಿವಿಗೆ ಬರುವುದಿಲ್ಲ. ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ಮಾಡಿದರೆ ಮಾನಸಿಕ ಆರೋಗ್ಯ ಸದೃಢವಾಗಲು ನೆರವಾಗುತ್ತದೆ. ಇಲ್ಲವಾದಲ್ಲಿ ಅದೇ ಸಮಸ್ಯೆಯಾಗಬಹುದು. ಆದರೆ, ಬಹಳಷ್ಟು ಮಕ್ಕಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲದಿರುವುದನ್ನು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ನಮ್ಮ ಸುತ್ತಮುತ್ತ ಹಲವು ಮಕ್ಕಳನ್ನು ಕಾಣುತ್ತೇವೆ, ಅವರಿಗೆ ದೊಡ್ಡವರ ನಿರ್ದೇಶನಗಳನ್ನು ಸರಿಯಾಗಿ ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ. ಮಾತನಾಡಲು, ತಮ್ಮ ವಿಚಾರಗಳನ್ನು ಸೂಕ್ತವಾಗಿ ಇತರರಿಗೆ ತಿಳಿಸಲು ಸಾಧ್ಯವಾಗುವುದಿಲ್ಲ. “ಮಗುವಿನ ಬೆಳವಣಿಗೆ ಏನೋ ಸರಿಯಿಲ್ಲ’ ಎನಿಸಿದರೂ ಅದನ್ನು ಪಾಲಕರ ಬಳಿ ಹೇಳಲು ಯಾರೂ ಮುಂದಾಗುವುದಿಲ್ಲ. ಬೇರೆಯವರ ಮಾತು ಬಿಡಿ, ಸ್ವತಃ ಪಾಲಕರೂ ಮಗುವಿನ ಬೆಳವಣಿಗೆಗೆ ಎಲ್ಲೋ ಧಕ್ಕೆಯಾಗುತ್ತಿದೆ ಎನ್ನುವುದು ಅರಿವಿಗೆ ಬರುವುದಿಲ್ಲ. ಹೀಗೆಯೇ ದಿನಗಳು ಕಳೆದರೂ, ಕೊನೆಗೊಂದು ದಿನ ಮಗು ಶಾಲೆಗೆ ಹೋಗಲೇಬೇಕಲ್ಲ? ಆಗಿನಿಂದ ಸಮಸ್ಯೆ ಶುರುವಾದಂತೆ ಅನಿಸುತ್ತದೆ. ಏಕೆಂದರೆ, ಶಾಲೆಯಿಂದ ಕಂಪ್ಲೇಂಟ್ ಬರಲು ಆರಂಭವಾಗಬಹುದು. ಮೊದಮೊದಲು ಶಾಲೆಯ ಬಗ್ಗೆಯೇ ಅನುಮಾನಪಟ್ಟರೂ ಕೊನೆಗೆ ಮಗುವಿನಲ್ಲೇ ಸಮಸ್ಯೆ ಇರುವುದು ಅರಿವಾಗುತ್ತದೆ. ಆದರೆ, ಅಲ್ಲಿಗೆ ಸಾಕಷ್ಟು ಸಮಯ ಸರಿದುಹೋಗಿರುತ್ತದೆ. ಪಾಲಕರು ಗುರುತಿಸಲು ವಿಫಲವಾಗುವ ಬೆಳವಣಿಗೆಗೆ ಸಂಬಂಧಿಸಿದ ಇಂತಹ ಸಮಸ್ಯೆಗಳಲ್ಲಿ ಎಡಿಎಚ್ ಡಿಯೂ ಒಂದು. ಇದು ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್. ಇದರ ಬಗ್ಗೆ ಅರಿವಿಲ್ಲದಿರುವುದು ಮೊದಲ ಸಮಸ್ಯೆ. ಇತ್ತೀಚಿನ ನೂತನ ಅಧ್ಯಯನದ ಪ್ರಕಾರ, ಎಡಿಎಚ್ ಡಿ ಮಕ್ಕಳಿಗೆ ಸೂಕ್ತವಾದ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವುದು ಬಹಿರಂಗವಾಗಿದೆ.
ಎಡಿಎಚ್ ಡಿ (Attention Deficit Hyperactivity Disorder)) ಸಮಸ್ಯೆ ಹೊಂದಿರುವ 9-10ರ ವಯೋಮಾನದ ಮಕ್ಕಳಿಗೆ (Children) ಅಗತ್ಯ ಚಿಕಿತ್ಸೆಯೇ (Treatment) ದೊರೆಯುತ್ತಿಲ್ಲ ಎಂದು ಹೊಸ ಅಧ್ಯಯನ ಹೇಳಿದೆ. ಇದು ಆತಂಕದ ವಿಚಾರ. ಅಷ್ಟೇ ಅಲ್ಲ, ಈ ಸಮಸ್ಯೆ ಹೊಂದಿರುವ ಗಂಡು (Male) ಮಕ್ಕಳಿಗೆ ಚಿಕಿತ್ಸೆ ದೊರೆಯುವಷ್ಟು ಸುಲಭವಾಗಿ ಹೆಣ್ಣು (Girl) ಮಕ್ಕಳಿಗೆ ಲಭ್ಯವಾಗುವುದಿಲ್ಲ. ಅಮೆರಿಕದ ಮೆಡಿಕಲ್ ಅಸೋಸಿಯೇಷನ್ ಪ್ರಕಟಿಸುವ ಜರ್ನಲ್ ಒಂದರಲ್ಲಿ ಈ ಕುರಿತ ಅಧ್ಯಯನ (Study) ಪ್ರಬಂಧ ಪ್ರಕಟವಾಗಿದೆ. ಹೀಗಾಗಿ, ಪಾಲಕರಲ್ಲಿ (Parents) ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ಹೇಳಲಾಗಿದೆ.
Childrens Health: ಮಕ್ಕಳಿಗೆ ಚಿಕ್ಕಂದಿನಲ್ಲೇ ಮಾಂಸಾಹಾರ ಕೊಡಬಹುದಾ..ತಜ್ಞರು ಏನಂತಾರೆ?
ಎಡಿಎಚ್ ಡಿ ಬಗ್ಗೆ ಅರಿವು (Awareness) ಅಗತ್ಯ: ಮಕ್ಕಳಲ್ಲಿರುವ ಎಡಿಎಚ್ ಡಿ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವುದು ತುರ್ತು ಅಗತ್ಯವಾಗಿದೆ ಎಂದು ನಾರ್ತ್ ಕೆರೋಲಿನಾದ ಮನೋವೈದ್ಯ ಡಾ.ಹರಾಲ್ಡ್ ಹಾಂಗ್ ಹೇಳುತ್ತಾರೆ. ಈ ಸಮಸ್ಯೆಯ (Problem) ಲಕ್ಷಣಗಳ (Symptoms) ಬಗ್ಗೆ ಪಾಲಕರಲ್ಲಿ ತಿಳಿವಳಿಕೆ ಇಲ್ಲದಿರುವುದೇ ಚಿಕಿತ್ಸೆ ದೊರೆಯದೆ ಇರಲು ಪ್ರಮುಖ ಕಾರಣ. ಭಾರತದಂತಹ ದೇಶದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಿದೆ. ಮಕ್ಕಳು ಹೇಗೆ ವರ್ತನೆ ಮಾಡುತ್ತಿದ್ದರೂ ಇಲ್ಲಿ ಗಮನ ಹರಿಸುವುದು ಕಡಿಮೆ. ಹೀಗಾಗಿ, ಪಾಲಕರು ಮಕ್ಕಳಿಗೆ ಅಗತ್ಯವಾಗಿ ಬೇಕಾಗುವ ಆರೋಗ್ಯ ಸೇವೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅಧ್ಯಯನ ಗುರುತಿಸಿದೆ. ಬಹಳಷ್ಟು ಪಾಲಕರು ಗಂಡು ಮಕ್ಕಳ ವರ್ತನೆಯಲ್ಲಿ ವ್ಯತ್ಯಾಸ ಕಂಡುಬಂದರೆ ವೈದ್ಯರ (Doctor) ಬಳಿ ತೆರಳುತ್ತಾರೆ. ಆದರೆ, ಹೆಣ್ಣುಮಕ್ಕಳ ಬಗ್ಗೆ ಗಮನ ಹರಿಸುವುದಿಲ್ಲ. ಅರಿವಿನ ಕೊರತೆಯ ಜತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಡೆತಡೆಗಳು ಇದಕ್ಕೆ ಕಾರಣವಿರಬಹುದು.
ಪಾಲಕರು ಗುರುತಿಸಬೇಕಾದುದೇನು?: ಎಡಿಎಚ್ ಡಿ ಸಮಸ್ಯೆಯನ್ನು ಸೂಕ್ತ ಥೆರಪಿ (Therapy), ಚಿಕಿತ್ಸೆ, ವರ್ತನೆ (Behaviour) ಸಂಬಂಧಿ ತರಬೇತಿ, ಜೀವನಶೈಲಿ ಬದಲಾವಣೆ (Lifestyle Changes) ಮುಂತಾದವುಗಳ ಮೂಲಕ ಕಡಿಮೆ ಮಾಡಲು ಸಾಧ್ಯ. ಇದರಿಂದ ಸಮಸ್ಯೆಯನ್ನು ಮೊದಲಿಗೇ ಗುರುತಿಸುವುದು ಮುಖ್ಯವಾಗುತ್ತದೆ. ಸೂಕ್ತ ತರಬೇತಿ ದೊರೆತಾಗ ಮಾನಸಿಕ ಆರೋಗ್ಯವೂ (Mental Health) ಸ್ವಸ್ಥವಾಗಿರುತ್ತದೆ. ಇಲ್ಲವಾದಲ್ಲಿ ಅದೇ ಮುಂದೆ ದೊಡ್ಡ ಸಮಸ್ಯೆಯಾಗಿ ಕಾಡಬಹುದು.
Health Tips : 30 ನಿಮಿಷದ ಕಡಿಮೆ ನಿದ್ರೆ ಮಾಡಿದ್ರೂ ಮಕ್ಕಳ ಆರೋಗ್ಯಕ್ಕೆ ಕುತ್ತು!
ಪ್ರಮುಖ ಲಕ್ಷಣಗಳು
• ನಿರ್ದೇಶನ (Directions) ಪಾಲನೆ ಮಾಡುವಲ್ಲಿ ಸಮಸ್ಯೆ
• ಕೆಲಸದ (Task) ಕುರಿತು ಗಮನ ಹರಿಸಲು ವಿಫಲವಾಗುವುದು
• ಮಾತುಕತೆಯಲ್ಲಿ (Talking Problem) ಸಮಸ್ಯೆ
• ಕುಳಿತುಕೊಳ್ಳಲು (Sit) ಹಿಂಸೆ
• ಬೇರೆಯವರು ಮಾತನಾಡುತ್ತಿರುವಾಗ ಮಧ್ಯೆ ಬರುವುದು
• ತಲೆಬುಡವಿಲ್ಲದ ಅಧಿಕ ಮಾತು (Excessive Talking)
• ಭಾವನೆಗಳ (Emotions) ಮೇಲೆ ನಿಯಂತ್ರಣ ಇಲ್ಲದಿರುವುದು
• ಕೆಲ ಸಂದರ್ಭದಲ್ಲಿ ವರ್ತನೆ ಮೇಲೆ ನಿಯಂತ್ರಣ (Control) ಸಾಧ್ಯವಿಲ್ಲ
• ಬಹುಬೇಗ ಗಮನ (Attention) ಬೇರೆ ಹರಿಯುತ್ತದೆ
• ಏಕಾಗ್ರತೆ (Focus) ಬಯಸುವ ಕೆಲಸಗಳನ್ನು ಅವಾಯ್ಡ್ ಮಾಡುವುದು