
ಪ್ರತಿಯೊಬ್ಬ ಪಾಲಕರೂ ಮಗು ವಿಷ್ಯಕ್ಕೆ ಬಂದಾಗ ಗಂಭೀರವಾಗ್ತಾರೆ. ಮಗುವಿನ ಆರೋಗ್ಯದ ಬಗ್ಗೆ ಗಮನ ನೀಡ್ತಾರೆ. ಮಕ್ಕಳ ಆರೋಗ್ಯವನ್ನು ಸುಧಾರಿಸುವತ್ತ ಸದಾ ಚಿತ್ತ ಹರಿಸ್ತಾರೆ. ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ನೀಡಲು ಪಾಲಕರು ಬಯಸ್ತಾರೆ. ಸಾಮಾಜಿಕ ಜಾಲತಾಣವಿರಲಿ, ವೈದ್ಯರಿರಲಿ ಇಲ್ಲ ಅಕ್ಕಪಕ್ಕದವರಿರಲಿ ಎಲ್ಲರಿಂದ ಮಕ್ಕಳಿಗೆ ನೀಡಬೇಕಾದ ಪೋಷಕಾಂಶದ ಆಹಾರದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಪಾಲಕರು ಕೆಲ ವಿಷ್ಯಗಳನ್ನು ಯಾವುದೇ ಆಲೋಚನೆ ಮಾಡದೆ ನಂಬುತ್ತಾರೆ. ಆದ್ರೆ ಕೆಲ ವಿಷ್ಯಗಳು ಸತ್ಯವಾಗಿರುವುದಿಲ್ಲ. ಬೇರೆಯವರು ಹೇಳಿದ ಸಂಗತಿಯನ್ನು ನಂಬುವ ಮೊದಲು ಪಾಲಕರು ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ತಿಳಿಯಬೇಕಾಗುತ್ತದೆ. ನಾವಿಂದು ಪೋಷಕರು ನಂಬುವ ಕೆಲ ಮಿಥ್ಯದ ಬಗ್ಗೆ ನಿಮಗೆ ಹೇಳ್ತೆವೆ.
ಆಗಾಗ ಮಕ್ಕಳಿ (Children) ಗೆ ಆಹಾರ ನೀಡುವುದ್ರಿಂದ ಮಕ್ಕಳ ಆರೋಗ್ಯ (Health) ಸುಧಾರಿಸುತ್ತದೆ : ಇದು ಮಕ್ಕಳ ಪೋಷಣೆಗೆ ಸಂಬಂಧಿಸಿದ ಸಾಮಾನ್ಯ ಮಿಥ್ಯವಾಗಿದೆ. ಮಕ್ಕಳಿಗೆ ಆಹಾರವನ್ನು ಆಗಾಗ ನೀಡ್ತಿದ್ದರೆ ಮಕ್ಕಳ ಆರೋಗ್ಯ ವೃದ್ಧಿಸುತ್ತದೆ ಎಂಬುದನ್ನು ಪೋಷಕರು ನಂಬುತ್ತಾರೆ. ಇದು ನಿಜವಲ್ಲ. ಅತಿಯಾಗಿ ತಿನ್ನುವುದು ಮಗುವಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಆಗ ಮಗು ಊಟ ಸೇವನೆ ಕಡಿಮೆ ಮಾಡುತ್ತದೆ. ಮಗುವಿಗೆ ಮೂರು ಮುಖ್ಯ ಊಟ ಮತ್ತು ಎರಡು ಮಧ್ಯದ ಆಹಾರ ಸಾಕಾಗುತ್ತದೆ. ಒಟ್ಟಾರೆ ಮಕ್ಕಳು ಆಹಾರ ಸೇವನೆ ಮಾಡುವುದು ಸೂಕ್ತವಲ್ಲ. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಆಹಾರ ನೀಡುವುದು ಮುಖ್ಯ.
Pranayama Benefits: ಚಂದ್ರನಾಡಿ ಪ್ರಾಣಾಯಾಮ ಮಾಡಿದ್ರೆ ಸಂತಾನೋತ್ಪತ್ತಿ ಸುಲಭ
ಮಕ್ಕಳಿಗೆ ದ್ರವ (Liquid) ಆಹಾರ ನೀಡಬೇಕು : ಮಕ್ಕಳಿಗೆ ಜ್ಯೂಸ್ ನೀಡುವುದ್ರಿಂದ ಅವರ ಆರೋಗ್ಯ ಸುಧಾರಿಸುತ್ತದೆ ಎಂದು ಬಹುತೇಕ ಪಾಲಕರು ನಂಬುತ್ತಾರೆ. ಇದು ಕೂಡ ನೂರಕ್ಕೆ ನೂರು ಸತ್ಯವಲ್ಲ. ದ್ರವ ಆಹಾರವನ್ನು ಮಕ್ಕಳಿಗೆ ನೀಡುವುದು ಒಳ್ಳೆಯದು. ಆದ್ರೆ ಪ್ಯಾಕ್ ಜ್ಯೂಸ್ ನೀಡುವುದು ಸೂಕ್ತವಲ್ಲ. ಜ್ಯೂಸ್ ಬದಲಿಗೆ ನೀವು ಹಣ್ಣುಗಳನ್ನು ನೀಡಬೇಕು. ಹಣ್ಣು ಮಕ್ಕಳಿಗೆ ಪೋಷಕಾಂಶ (Nutrient) ಮತ್ತು ಫೈಬರನ್ನು ನೀಡುತ್ತದೆ.
ಮಕ್ಕಳಿಗೆ ಮಲ್ಟಿವಿಟಮಿನ್ ನೀಡ್ಬೇಕು : ಅನೇಕ ಬಾರಿ ಪೋಷಕರು ತಮ್ಮ ಮಕ್ಕಳ ಪೌಷ್ಟಿಕಾಂಶದ ಮಟ್ಟವನ್ನು ಕಾಪಾಡಿಕೊಳ್ಳಲು ಮಲ್ಟಿವಿಟಮಿನ್‌ಗಳನ್ನು ನೀಡಲು ಪ್ರಾರಂಭಿಸುತ್ತಾರೆ. ಆದರೆ ಎಂದಿಗೂ ಮಕ್ಕಳಿಗೆ ಮಲ್ಟಿವಿಟಾಮಿನ್‌ಗಳನ್ನು ನೀಡಬಾರದು. ಮಲ್ಟಿವಿಟಮಿನ್‌ಗಳು ಆಹಾರಕ್ಕೆ ಬದಲಿಯಾಗಿರುವುದಿಲ್ಲ. ನೀವು ಆಹಾರದಲ್ಲಿಯೇ ಎಲ್ಲಾ ಪೌಷ್ಟಿಕಾಂಶ ಇರುವಂತೆ ನೋಡಿಕೊಳ್ಳಬೇಕೇ ಹೊರತು ಪ್ರತ್ಯೇಕವಾಗಿ ಮಲ್ಟಿವಿಟಾಮಿನ್ ಆಹಾರ ನೀಡಬಾರದು. ಅಗತ್ಯವಿದ್ದರೆ ವೈದ್ಯರ ಸಲಹೆಯ ಮೇರೆಗೆ ಮಾತ್ರ ನೀವು ಮಲ್ಟಿವಿಟಮಿನ್ ನೀಡಬೇಕು.
ಮಕ್ಕಳು ನಿಯಮಿತವಾಗಿ ಮೊಟ್ಟೆ (Egg) ಸೇವನೆ ಮಾಡ್ಬೇಕು : ಮೊಟ್ಟೆ ಆರೋಗ್ಯಕರ ಆಹಾರದಲ್ಲಿ ಒಂದು. ಇದರಲ್ಲಿ ಪ್ರೋಟೀನ್, ಕಬ್ಬಿಣ, ಕೊಬ್ಬು, ವಿಟಮಿನ್ ಡಿ, ಇ, ಎ ಮತ್ತು ಬಿ 12 ಇರುತ್ತದೆ. ಹಾಗಾಗಿ ಅದನ್ನು ಮಕ್ಕಳು ಸೇವನೆ ಮಾಡೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎನ್ನಲಾಗುತ್ತದೆ. ಆದ್ರೆ ಮಗುವಿಗೆ ಪ್ರತಿದಿನ ಮೊಟ್ಟೆ ನೀಡಬೇಕಾಗಿಲ್ಲ. ಮೊಟ್ಟೆ ಬದಲಾಗಿ ನೀವು ಸೋಯಾ, ಡ್ರೈ ಫ್ರೂಟ್ಸ್, ಸೊಪ್ಪು, ಕಾಳು ಸೇರಿದಂತೆ ಪ್ರೋಟೀನ್ ಇರುವ ಆಹಾರ ನೀಡಬಹುದು. ಮಗುವಿಗೆ ಮೊಟ್ಟೆ ಸೇವನೆ ಇಷ್ಟವಿಲ್ಲವೆಂದ್ರೆ ಒತ್ತಾಯ ಮಾಡಬೇಡಿ.
Winter Health: ಸ್ವೆಟ್ಟರ್ ಹಾಕಿದ್ರೂ ಚಳಿ ಕಡಿಮೆಯಾಗ್ತಿಲ್ವಾ? ರಾಗಿ ತಿನ್ನಿ ಸಾಕು
ಆಟದಲ್ಲಿ ಮಗು ಪಾಲ್ಗೊಳ್ಳುತ್ತಿದ್ದರೆ ಕಾರ್ಬೋಹೈಡ್ರೇಟ್ (Corbohydrates) ಹೆಚ್ಚಾಗಿ ನೀಡ್ಬೇಕು : ಕಾರ್ಬೋಹೈಡ್ರೇಟ್ ಶಕ್ತಿಯ ಉತ್ತಮ ಮೂಲ. ಹಾಗಾಗಿ ದೈಹಿಕ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ಇದನ್ನು ಹೆಚ್ಚಾಗಿ ತಿನ್ನಬೇಕು ಎಂದುಕೊಳ್ತಾರೆ ಪಾಲಕರು. ಆದ್ರೆ ಇದು ತಪ್ಪು. ಮಗು ಸಮತೋಲಿತ ಆಹಾರವನ್ನು (Balanced Food) ತೆಗೆದುಕೊಳ್ಳುತ್ತಿದ್ದರೆ, ಕ್ರೀಡಾ ಸಮಯದಲ್ಲಿ ಅವನಿಗೆ ಪ್ರತ್ಯೇಕವಾಗಿ ಕಾರ್ಬೋಹೈಡ್ರೇಟ್ಸ್ ನೀಡುವ ಅಗತ್ಯವಿಲ್ಲ. ಮಗು ವಾರಾಂತ್ಯದ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದರೆ ಒಂದೇ ಸಮಯದಲ್ಲಿ ಹಲವಾರು ಗಂಟೆಗಳ ಕಾಲ ಆಡುತ್ತಿದ್ದರೆ ಆಟದ ಮೊದಲು ಹೆಚ್ಚುವರಿ ಕಾರ್ಬೋಹೈಡ್ರೇಟ್‌ಗಳನ್ನು ಊಟದಲ್ಲಿ ಸೇರಿಸುವುದು ಪ್ರಯೋಜನಕಾರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.