ತೂಕ (Weight) ಹೆಚ್ಚಾಗ್ತಿದ್ದಂತೆ ಟೆನ್ಷನ್ ಜಾಸ್ತಿಯಾಗುತ್ತೆ. ಒತ್ತಡ (Pressure) ಹೆಚ್ಚಾದಂತೆ ತೂಕ ಮತ್ತಷ್ಟು ಏರುತ್ತದೆ. ಕೆ.ಜಿ ಇಳಿಸಿಕೊಳ್ಳೋಕೆ ಸಾಕಷ್ಟು ಪ್ರಯತ್ನ ಪಟ್ಟು ವಿಫಲವಾಗಿದ್ರೆ ತಲೆ ಕೆಡಿಸಿಕೊಳ್ಬೇಡಿ. ನಿಮ್ಮ ತೂಕ ಇಳಿಕೆಗೆ ಇಲ್ಲಿದೆ ಟಿಪ್ಸ್.
ತೂಕ (Weight ) ಏರಿಕೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರ ತೂಕ ವೇಗವಾಗಿ ಹೆಚ್ಚಾಗ್ತಿದೆ. ಆದ್ರೆ ತೂಕ ಇಳಿಸೋದು ಮಾತ್ರ ಸುಲಭದ ಮಾತಲ್ಲ. ತ್ವರಿತವಾಗಿ ತೂಕ ಇಳಿಸಬೇಕೆಂದು ಜಿಮ್ (gym) ,ವ್ಯಾಯಾಮ (Exercise),ಡಯೆಟ್ ಜೊತೆ ಅಡ್ಡ ದಾರಿಗಳನ್ನು ಹಿಡಿಯುತ್ತಾರೆ. ಅನೇಕ ಸರ್ಜರಿ (Surgery) ಗಳನ್ನು ಕೂಡ ಮಾಡಿಕೊಳ್ತಿದ್ದಾರೆ. ಆದ್ರೆ ಈ ಸರ್ಜರಿ ಹಾಗೂ ಕೆಲ ರಾಸಾಯನಿಕಗಳ ಸೇವನೆ ಪ್ರಾಣಕ್ಕೆ ಕುತ್ತು ತರ್ತಿದೆ. ತೂಕವನ್ನು ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ತೂಕ ಕಡಿಮೆ ಮಾಡಲು ಕೆಲವು ನೈಸರ್ಗಿಕ ಮಾರ್ಗಗಳಿವೆ. ಅದು ನಿಮಗೆ ಸಹಾಯ ಮಾಡುತ್ತದೆ.
ಕೆಲವು ಗಿಡಮೂಲಿಕೆ (Herbal)ಗಳನ್ನು ಪ್ರತಿದಿನ ಬಳಸಿದರೆ ತೂಕ ನಷ್ಟ ಸುಲಭವಾಗುತ್ತದೆ. ಕೊತ್ತಂಬರಿ (Coriander) ಸೊಪ್ಪಿನಿಂದ ಹಿಡಿದು ಪುದೀನಾ ಸೊಪ್ಪಿನವರೆಗೆ ಅನೇಕ ಸೊಪ್ಪುಗಳು ಹಾರ್ಮೋನುಗಳ ಸಮತೋಲನವನ್ನು ಸುಧಾರಿಸಲು ನೆರವಾಗುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಗ್ಯಾಸ್ ಸೇರಿದಂತೆ ಹೊಟ್ಟೆ (Stomach)ಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ. ಸೊಪ್ಪಿನ ಮೂಲಕ ತೂಕ ಇಳಿಕೆ ಮಾಡೋದು ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ.
ಒಂದಲ್ಲ..ಎರಡಲ್ಲ, ವ್ಯಕ್ತಿಯ ದೇಹದಿಂದ ಬರೋಬ್ಬರಿ 206 ಕಿಡ್ನಿ ಸ್ಟೋನ್ ಹೊರತೆಗೆದ ವೈದ್ಯರು !
ಸೊಪ್ಪಿನ ಮೂಲಕ ತೂಕ ಇಳಿಕೆ :
ಸ್ಥೂಲಕಾಯಕ್ಕೆ ಕೊತ್ತಂಬರಿ ಸೊಪ್ಪು ರಾಮಬಾಣ : ತೂಕ ಇಳಿಕೆಗೆ ಕೊತ್ತಂಬರಿ ಸೊಪ್ಪು ಉತ್ತಮ ಮದ್ದಾಗಿದೆ. ಇದು ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊತ್ತಂಬರಿಯಲ್ಲಿ ಫೈಬರ್ (Fiber) ಅಂಶ ಕೂಡ ಅಧಿಕವಾಗಿರುತ್ತದೆ. ಇದು ತೂಕ ನಷ್ಟಕ್ಕೆ ಅತ್ಯುತ್ತಮ ಮೂಲಿಕೆಯಾಗಿದೆ. ಕೊತ್ತಂಬರಿ ಸೊಪ್ಪು ರಕ್ತದಲ್ಲಿನ ಸಕ್ಕರೆ (Sugar) ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೈಪರ್ಗ್ಲೈಸೀಮಿಯಾಕ್ಕೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ.
ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತೆ ಪುದೀನ ಎಲೆಗಳು : ಹಸಿರು ಬಣ್ಣದ ಮತ್ತು ಸುಗಂಧಭರಿತವಾದ ಪುದೀನಾ ಎಲೆಗಳು ಆಹಾರ (Food) ಪದಾರ್ಥಗಳ ರುಚಿಯನ್ನು ಹೆಚ್ಚಿಸುವುದಲ್ಲದೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಪುದೀನಾ ಹಸಿವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಹಸಿವು ಕಡಿಮೆಯಾದಂತೆ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡ್ತೇವೆ. ಇದರಿಂದಾಗಿ ತೂಕ ಕಡಿಮೆಯಾಗುತ್ತದೆ. ಪುದೀನಾ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪುದೀನಾ ಅನಿಲ ಮತ್ತು ಆಮ್ಲೀಯತೆಯನ್ನು ಸರಾಗಗೊಳಿಸುತ್ತದೆ. ಜೀರ್ಣಕ್ರಿಯೆ ಸರಾಗವಾದಂತೆ ತೂಕ ಇಳಿಯುತ್ತದೆ.
ತೂಕ ನಷ್ಟಕ್ಕೆ ಮೊಟ್ಟೆ ಅಥವಾ ಚಿಕನ್, ಯಾವುದು ಉತ್ತಮ ?
ತೂಕ ಇಳಿಸಲು ನೆರವಾಗುತ್ತೆ ಅಜ್ವೈನ್ ಎಲೆಗಳು : ತೂಕ ಇಳಿಸಲು ಅಜ್ವೈನ ಸೊಪ್ಪು ಕೂಡ ಒಳ್ಳೆಯದು. ಅಜ್ವೈನ ಎಲೆಗಳು ಮಧುಮೇಹವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಚಯಾಪಚಯ ದರವನ್ನು ಸುಧಾರಿಸುತ್ತದೆ ಮತ್ತು ಸಕ್ಕರೆಯನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ಇದು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅಜ್ವೈನ ಎಲೆಗೆ ಮಲಬದ್ಧತೆಯನ್ನು ಕಡಿಮೆ ಮಾಡುವ ಸಾಮರ್ಥ್ಯವೂ ಇದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ರೋಸ್ ಮರಿ ಎಲೆ : ರೋಸ್ಮರಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ರೋಸ್ ಮರಿ ಎಲೆಗಳು ತೂಕ ನಷ್ಟಕ್ಕೆ ಅತ್ಯುತ್ತಮ ಮೂಲಿಕೆಯಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಲ್ಲಿರುವ ಕಾರ್ನೋಸಿಕ್ ಆಮ್ಲವು ಸ್ಥೂಲಕಾಯತೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಪುದೀನಾ ಎಲೆ : ಪಿಸಿಒಎಸ್ ನಂತಹ ಕೆಲವು ಹಾರ್ಮೋನುಗಳ ಅಸಮತೋಲನದಿಂದಾಗಿ ತೂಕದ ಸಮಸ್ಯೆ ಕಾಡ್ತಿದ್ದರೆ ಪುದೀನಾ ನಿಮಗೆ ಸಹಾಯ ಮಾಡುತ್ತದೆ. ಪುದೀನಾ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾರ್ಮೋನ್ ಸಮತೋಲನವನ್ನು ಮರುಸ್ಥಾಪಿಸುತ್ತದೆ. ಪುದೀನವು ವಿಶೇಷವಾಗಿ ಮಹಿಳೆಯರಲ್ಲಿ ಹೆಚ್ಚುವರಿ ಕ್ಯಾಲೋರಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ.