Butter vs Cheese: ಬೆಣ್ಣೆ ಅಥವಾ ಚೀಸ್, ಆರೋಗ್ಯಕ್ಕೆ ಯಾವುದು ಉತ್ತಮ

By Suvarna News  |  First Published Dec 28, 2021, 7:29 PM IST

ಬೆಣ್ಣೆ (Butter) ಅಥವಾ ಚೀಸ್ (Cheese) ಹಲವರಿಗೆ ಇಷ್ಟ. ಬೆಣ್ಣೆಯನ್ನು ರೊಟ್ಟಿ, ಪರೋಟದ ಜತೆಗೆ, ಚೀಸ್ ಅನ್ನು ಸ್ಯಾಂಡವಿಚ್ (Sandwich) ಮೊದಲಾದ ಸ್ನ್ಯಾಕ್ಸ್ ಜತೆ ಸೇರಿಸಿ ತಿನ್ನಲಾಗುತ್ತದೆ. ಹಾಲಿನ ಉತ್ಪನ್ನಗಳಾದ ಇವೆರಡೂ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರಿಗೆ ತಿಳಿದಿದ್ದರೂ, ಇದರಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ.


ಬೆಣ್ಣೆ ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಅದರ ಮೃದುತ್ವ, ಪರಿಮಳ ಬಾಯಿ ಚಪ್ಪರಿಸಿಕೊಂಡು ತಿನ್ನುವಂತೆ ಮಾಡುತ್ತದೆ. ಹೀಗಾಗಿಯೇ ಇದನ್ನು ಇತರ ಹಲವು ಆಹಾರ ಪದಾರ್ಥಗಳೊಂದಿಗೆ ಸೇರಿಸಿ ತಿನ್ನುತ್ತಾರೆ. ಬಿಸಿ ರೊಟ್ಟಿ, ಪರೋಟ, ಬಿಸಿಬೇಳೆ ಬಾತ್ ಮೊದಲಾದವುಗಳ ಮೇಲೆ ಬೆಣ್ಣೆಯನ್ನು ಹಾಕಿ ಸವಿಯುತ್ತಾರೆ. ಹಾಲಿನ ಉತ್ಪನ್ನವಾಗಿರುವ ಬೆಣ್ಣೆ ಆರೋಗ್ಯಕ್ಕೂ ಉತ್ತಮವಾಗಿರುವ ಕಾರಣ ದಿನನಿತ್ಯದ ಆಹಾರದಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಹಾಲಿನೊಂದಿಗೆ ತಯಾರಿಸಲಾದ ಬೆಣ್ಣೆ ಮತ್ತು ಚೀಸ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವಂತೆ ಪೌಷ್ಟಿಕತಜ್ಞರು ಮತ್ತು ವೈದ್ಯರು ಶಿಫಾರಸು ಮಾಡುತ್ತಾರೆ.

ಹಾಲನ್ನು ಮೊಸರು ಮಾಡಿ, ಮೊಸರಿನಿಂದ ಬೆಣ್ಣೆಯನ್ನು ತೆಗೆಯಲಾಗುತ್ತದೆ. ಬೆಣ್ಣೆ ಆರೋಗ್ಯಕರ ಕೊಬ್ಬಿನ ಪ್ರಮಾಣವನ್ನು ಹೊಂದಿದ್ದು, ಇದು ಮೂಳೆಗಳನ್ನು ಬಲಪಡಿಸಲು ಮತ್ತು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ಚೀಸ್ ಎಂದರೆ ಘನೀಕೃತ ಮೊಸರು ಎಂದು ಸುಲಭವಾಗಿ ಹೇಳಬಹುದು. ಆದರೆ, ಇದು ಸಂಸ್ಕರಿತ ಡೈರಿ ಉತ್ಪನ್ನವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿದೆ ಎಂದು ಭಾವಿಸಿ ಹಲವರು ಇದನ್ನು ತಿನ್ನುವುದಿಲ್ಲ. ಕೆಲವರಿಗೆ ಹುಳಿಮಿಶ್ರಿತವಾಗಿರುವ ಇದರ ರುಚಿ ಹಿಡಿಸುವುದಿಲ್ಲ. ಆದರೆ ಎಲ್ಲಾ ಬಗ್ಗೆಯ ಚೀಸ್‌ಗಳು ಆರೋಗ್ಯಕ್ಕೆ ಹಾನಿಕರವಲ್ಲ. 

Latest Videos

undefined

ಮಗುವಿಗೆ ಯಾವ ವಯಸ್ಸಿನಲ್ಲಿ ಪೀನಟ್ ಬಟರ್ ನೀಡಬೇಕು?

ತೂಕ ಕಳೆದುಕೊಳ್ಳಬೇಕೆಂದು ಅಂದುಕೊಳ್ಳುವವರು, ಡಯಟ್ ಪ್ಲಾನ್‌ನಲ್ಲಿರುವವರು ಬೆಣ್ಣೆ (Butter), ಚೀಸ್ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಆದರೆ ಬೆಣ್ಣೆಯ ಸೇವನೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಡೈರಿ ಉತ್ಪನ್ನಗಳನ್ನು ನಿಯಮಿತವಾಗಿ ಸೇವಿಸುವ ಜನರು ಕಡಿಮೆ ತೂಕ, ಕಡಿಮೆ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ಹಾಲಿನ ಉತ್ಪನ್ನವಾಗಿರುವ ಬೆಣ್ಣೆ ಅಥವಾ ಚೀಸ್‌ (Cheese)ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವಂತೆ ನ್ಯೂಟ್ರಿಷಿಯನ್‌ಗಳು ಸಲಹೆ ನೀಡುತ್ತಾರೆ. ಹೀಗಿದ್ದೂ ಬೆಣ್ಣೆ ಅಥವಾ ಚೀಸ್‌ನಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ.

ಬೆಣ್ಣೆ ಪ್ರೊಟೀನ್ ಸ್ಯಾಚುರೇಟೆಡ್ ಕೊಬ್ಬುಗಳನ್ನು, ವಿಟಮಿನ್ (Vitamin) ಡಿ ಮತ್ತು ಎಯಿಂದ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಚಯಾಪಚಯ ಪ್ರಕ್ರಿಯೆ ಸುಗಮವಾಗಿ ನಡೆಯಲು ನೆರವಾಗುತ್ತದೆ. ಆದರೆ, ಅಧ್ಯಯನವೊಂದರ ಪ್ರಕಾರ, ಚೀಸ್‌ನಲ್ಲಿ ಬಟರ್‌ಗಿಂತ ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಅಂಶಗಳಿವೆ ಎಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲ ಕೆಲವೊಂದು ಚೀಸ್ ಗಳು ಪನ್ನೀರ್‌ಗಿಂತಲೂ ಅಧಿಕ ಪ್ರಮಾಣದಲ್ಲಿ ಪ್ರೊಟೀನ್‌ನ್ನು ಹೊಂದಿದೆ ಎಂಬುದು ಅಧ್ಯಯನದಲ್ಲಿ ಸಾಬೀತಾಗಿದೆ. ಬೆಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿದ್ದರೆ ಚೀಸ್‌ನಲ್ಲಿ ಅತ್ಯಧಿಕ ಪ್ರಮಾಣದ ಪ್ರೊಟೀನ್ ಹಾಗೂ ಕ್ಯಾಲ್ಸಿಯಂನ ಅಂಶವಿದೆ.

ಮೊಸರಿಗಿಂತ ಮಜ್ಜಿಗೆ ಬೆಸ್ಟ್ ಎನ್ನುತ್ತಿವೆ ಸಂಶೋಧನೆಗಳು: ಯಾಕೆ ನೋಡಿ?

ಪೌಷ್ಟಿಕತಜ್ಞ ಭುವನ್ ರಸ್ತೋಗಿ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಆರೋಗ್ಯ (Healht)ಕ್ಕೆ ಬೆಣ್ಣೆ ಉತ್ತಮವೇ, ಚೀಸ್ ಉತ್ತಮವೇ ಎಂಬುದರ ಬಗ್ಗೆ ಅಧ್ಯಯನ ನಡೆಸಿದ್ದಾಗಿ ತಿಳಿಸಿದ್ದಾರೆ. ಸಮೀಕ್ಷೆಯಲ್ಲಿ ಸುಮಾರು 40% ಜನರು ಬೆಣ್ಣೆಯು ಚೀಸ್ ಗಿಂತ ಆರೋಗ್ಯಕರ ಎಂದು ಭಾವಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಆದರೆ, ಚೀಸ್ ಬೆಣ್ಣೆಗಿಂತ ಉತ್ತಮವಾಗಿದೆ. ಅಷ್ಟೇ ಅಲ್ಲ ಕೆಲವು ಚೀಸ್‌ಗಳು ಪನೀರ್‌ಗಿಂತ ಹೆಚ್ಚಿನ ಪ್ರೊಟೀನ್‌ (Protein)ಗಳನ್ನು ಹೊಂದಿರುತ್ತವೆ ಎಂದು ಭುವನ್ ರಸ್ತೋಗಿ ಮಾಹಿತಿ ಹಂಚಿಕೊಂಡಿದ್ದಾರೆ. ಬೆಣ್ಣೆಯು ಸಂಪೂರ್ಣವಾಗಿ ಕೊಬ್ಬಾಗಿದ್ದರೆ, ಮತ್ತೊಂದೆಡೆ ಚೀಸ್ ಗಣನೀಯ ಪ್ರಮಾಣದ ಪ್ರೋಟೀನ್‌ನ್ನು ಹೊಂದಿದೆ ಮತ್ತು ಕ್ಯಾಲ್ಸಿಯಂ ಅನ್ನು ಸಹ ನೀಡುತ್ತದೆ ಎಂದು ರಸ್ತೋಗಿ ಹೇಳುತ್ತಾರೆ. ಚೀಸ್‌ನಲ್ಲಿ ಪ್ರೊಟೀನ್ ಉತ್ತಮ ಪ್ರಮಾಣದಲ್ಲಿದ್ದು, ಕೊಬ್ಬು ಮಿತ ಪ್ರಮಾಣದಲ್ಲಿದೆ. ಹೀಗಾಗಿ ತೂಕ ಇಳಿಕೆಯ ಪ್ರಯತ್ನದಲ್ಲಿರುವವರಿಗೆ ಚೀಸ್ ಸೇವನೆ ಉತ್ತಮ ಆಯ್ಕೆಯಾಗಿದೆ.

click me!