ಪರಪರ ಅಂತಾ ಮಕ್ಕಳು ತಲೆ ತುರಿಸಿಕೊಳ್ತಿದ್ದರೆ ಹೇನಾಗಿದ್ಯಾ ಅಂತಾ ಕೇಳ್ತೇವೆ. ಇಷ್ಟು ಸಣ್ಣ ವಯಸ್ಸಲ್ಲೇ ಹೊಟ್ಟಾಗಿದೆ ಅಂತೇವೆ. ಮಕ್ಕಳಿಗೆ ಆಗಿರುವ ತಲೆ ಹೊಟ್ಟಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋಕೆ ಹೋಗಲ್ಲ. ಆದ್ರೆ ಇದು ಇಗ್ನೋರ್ ಮಾಡುವ ವಿಷ್ಯವಲ್ಲ
ದಟ್ಟವಾದ,ಕಪ್ಪಾದ ಕೂದಲು (Hair) ಎಲ್ಲರನ್ನು ಆಕರ್ಷಿಸುತ್ತದೆ. ವಯಸ್ಕರು ಮಾತ್ರವಲ್ಲ ಮಕ್ಕಳಿಗೂ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು,ಬಿಳಿ ಕೂದಲು,ತಲೆ ಹೊಟ್ಟಿ (dandruff )ನ ಸಮಸ್ಯೆ ಕಾಡ್ತಿದೆ. ನೆತ್ತಿಯ ಸಿಪ್ಪೆ ಸುಲಿಯುವುದನ್ನು ಹೊಟ್ಟು ಎನ್ನಲಾಗುತ್ತದೆ. ಹಳದಿ ಅಥವಾ ಬಿಳಿ ಬಣ್ಣದಲ್ಲಿ ಇದು ಕಾಣಿಸಿಕೊಳ್ಳುತ್ತದೆ. ನವಜಾತ ಶಿಶುಗಳು ಮತ್ತು ವಯಸ್ಕರಲ್ಲಿ ತಲೆಹೊಟ್ಟು ಸಾಮಾನ್ಯವಾಗಿದೆ. ಆದರೆ ಎರಡರಿಂದ ನಾಲ್ಕು ವರ್ಷದ ಮಕ್ಕಳ (Children)ಲ್ಲೂ ತಲೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ತಲೆ ಹೊಟ್ಟು ಸೆಬೊರ್ಹೆಕ್ ಡರ್ಮಟೈಟಿಸ್ (Seborrheic Dermatitis )ಆಗಿರುವ ಸಾಧ್ಯತೆಯಿದೆ. ಅದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅದರ ಬಗ್ಗೆ ಸರಿಯಾಗಿ ತಿಳಿದು,ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ಇಲ್ಲವಾದ್ರೆ ಮಕ್ಕಳು ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತೆ. ಮಕ್ಕಳಲ್ಲಿ ತಲೆಹೊಟ್ಟುಗೆ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ಇಂದು ಹೇಳ್ತೆವೆ.
ಮಕ್ಕಳಲ್ಲಿ ತಲೆ ಹೊಟ್ಟಿನ ಲಕ್ಷಣ :
ಎರಡರಿಂದ ನಾಲ್ಕು ವರ್ಷದ ಮಕ್ಕಳಲ್ಲಿ ತಲೆ ಹೊಟ್ಟಿನ ಲಕ್ಷಣ ಬೇರೆ ಬೇರೆಯಾಗಿರುತ್ತದೆ. ತಲೆಯ ಮೇಲ್ಭಾಗದಲ್ಲಿ ಹಳದಿ ಅಥವಾ ಬಿಳಿ ಡ್ಯಾಂಡ್ರಫ್ ಪದರಗಳು ರೂಪುಗೊಳ್ಳುತ್ತವೆ. ಇದು ಮುಖ್ಯ ಲಕ್ಷಣ. ಹೊಟ್ಟು ಹೆಚ್ಚಾಗಿ ನೆತ್ತಿ ಮತ್ತು ಭುಜದ ಮೇಲೆ ಕಂಡುಬರುತ್ತವೆ.
ಇನ್ನು ಸೆಬೊರ್ಹೆರಿಕ್ ಡರ್ಮಟೈಟಿಸ್ ನಿಂದ ಉಂಟಾಗುವ ತಲೆಹೊಟ್ಟು ಗಂಭೀರ ಸ್ವರೂಪವನ್ನು ತೆಗೆದುಕೊಳ್ಳಬಹುದು. ಇದರ ಲಕ್ಷಣಗಳೆಂದ್ರೆ, ಕಿವಿ, ಹಣೆ, ಹುಬ್ಬು ಮತ್ತು ನೆತ್ತಿಯ ಸುತ್ತ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ. ಚರ್ಮ ಶುಷ್ಕವಾಗುತ್ತದೆ. ಸ್ವಲ್ಪ ಸಮಯದವರೆಗೆ ಕೂದಲು ಉದುರುತ್ತದೆ. ತುರಿಕೆ ಕಾಣಿಸಿಕೊಳ್ಳುತ್ತದೆ.
ಶಿಲೀಂಧ್ರಗಳ ಸೋಂಕಿ(Fungal infections)ನಿಂದ ತಲೆಹೊಟ್ಟು ಉಂಟಾದರೆ, ಮಗುವಿಗೆ ಕೂದಲು ಉದುರುವ ಸಾಧ್ಯತೆಯಿದೆ.ನೆತ್ತಿಯ ಮೇಲಿರುವ ಕೂದಲು ಹೆಚ್ಚಾಗಿ ಉದುರುತ್ತದೆ.
ಮಕ್ಕಳಲ್ಲಿ ಕಾಣಿಸಿಕೊಳ್ಳುವ ತಲೆಹೊಟ್ಟಿಗೆ ಕಾರಣಗಳು : ಮಕ್ಕಳಲ್ಲಿ ಯಾವ ಕಾರಣಕ್ಕೆ ತಲೆ ಹೊಟ್ಟು ಕಾಣಿಸಿಕೊಳ್ಳುತ್ತದೆ ಎನ್ನುವ ಬಗ್ಗೆ ನಿಖರವಾದ ಕಾರಣವಿಲ್ಲ. ಆದರೆ ಕೆಲ ಕಾರಣಗಳನ್ನು ತಜ್ಞರು ಅಂದಾಜಿಸಿದ್ದಾರೆ.
ಮಕ್ಕಳ ಚರ್ಮ(Skin)ಎಣ್ಣೆಯುಕ್ತ ಚರ್ಮವಾಗಿದ್ದರೆ ತಲೆ ಹೊಟ್ಟು ಕಾಡುವ ಸಾಧ್ಯತೆಗಳಿರುತ್ತವೆ. ಶಿಲೀಂದ್ರಗಳ ಸೋಂಕಿನಿಂದಲೂ ಮಕ್ಕಳಿಗೆ ತಲೆಹೊಟ್ಟು ಕಾಣಿಸಿಕೊಳ್ಳುತ್ತದೆ. ಚಳಿಗಾಲದಂತಹ ಹವಾಮಾನದಲ್ಲಿ ಬದಲಾವಣೆಯಾದ ವೇಳೆ ಹೊಟ್ಟು ಕಾಣಿಸಿಕೊಳ್ಳುವ ಸಂಭವವಿದೆ. ಆನುವಂಶಿಕ ಕಾರಣಗಳಿಂದಲೂ ಹೊಟ್ಟು ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ತಲೆ ಹೊಟ್ಟಿಗೆ ಶಾಂಪೂ ಒಂದು ಕಾರಣವಾಗಿದೆ. ಮಕ್ಕಳಿಗೆ ಶಾಂಪೂ (Shampoo) ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಶಾಂಪೂವಿನಲ್ಲಿರುವ ರಾಸಾಯನಿಕದಿಂದಾಗಿ ಮಕ್ಕಳಲ್ಲಿ ಅಲರ್ಜಿಯಾಗುವ ಸಾಧ್ಯತೆಯಿರುತ್ತದೆ. ಇದರಿಂದ ತಲೆ ಹೊಟ್ಟು ಕಾಣಿಸಿಕೊಳ್ಳುತ್ತದೆ.
ವೈದ್ಯರ (Doctor )ಬಳಿ ಯಾವಾಗ ಹೋಗಬೇಕು?
ಸಾಮಾನ್ಯವಾಗಿ ಕಡಿಮೆ ರಾಸಾಯನಿಕ ಶ್ಯಾಂಪೂಗಳು, ಔಷಧೀಯ ಶ್ಯಾಂಪೂಗಳು ಅಥವಾ ಕೆಲವು ಮನೆಮದ್ದುಗಳಿಂದ ತಲೆಹೊಟ್ಟು ಹೋಗುತ್ತದೆ. ಶಾಂಪೂ ಬಳಸಿಯೂ ತಲೆ ಹೊಟ್ಟು ಕಡಿಮೆಯಾಗಿಲ್ಲವೆಂದರೆ ಅಥವಾ ತಲೆ ಹೊಟ್ಟಿನ ಪ್ರಮಾಣ ಹೆಚ್ಚಾಗುತ್ತಲೇ ಇದ್ದರೆ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ. ಇದರಿಂದ ತುಂಬಾ ತುರಿಕೆಯಾಗುತ್ತಿದ್ದರೆ, ಕೂದಲು ನಿರಂತರವಾಗಿ ಉದುರುತ್ತಿದ್ದರೆ ಅಥವಾ ಹೊಟ್ಟಿನ ಜಾಗದಲ್ಲಿ ದುದ್ದಿನ ಜೊತೆ ಕೀವಾಗಿದ್ದರೆ,ರಕ್ತಸ್ರಾವವಾಗಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.
undefined
Health Tips: ಇಮ್ಯೂನಿಟಿ ಹೆಚ್ಚಿಸೋಕೆ ಮಕ್ಕಳನ್ನು ಮಣ್ಣಿಗೆ ಬಿಡಿ..
ಮಕ್ಕಳಲ್ಲಿ ತಲೆಹೊಟ್ಟಿಗೆ ಚಿಕಿತ್ಸೆ : ತಲೆಹೊಟ್ಟು ಚಿಕಿತ್ಸೆಗಾಗಿ ವೈದ್ಯರು ಆಂಟಿ-ಡ್ಯಾಂಡ್ರಫ್ ಶಾಂಪೂ ಅಥವಾ ಮುಲಾಮುವನ್ನು ಶಿಫಾರಸು ಮಾಡಬಹುದು. ಇದಲ್ಲದೆ, ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ.
ಪ್ರತಿ ದಿನ ಮಗುವಿಗೆ ತಲೆ ಸ್ನಾನ ಮಾಡಿಸಬೇಕಾಗುತ್ತದೆ. ಕೂದಲಿಗೆ ಸ್ವಚ್ಛವಾದ ಮತ್ತು ಮೃದುವಾದ ಹಲ್ಲಿನ ಬಾಚಣಿಗೆಯನ್ನು ಬಳಸಬೇಕಾಗುತ್ತದೆ. ಅನೇಕ ಬಾರಿ ಪಾಲಕರು ಬಳಸಿದ ಬಾಚಣಿಕೆಯನ್ನು ಮಕ್ಕಳಿಗೆ ಬಳಸುತ್ತೇವೆ. ಇದು ಒಳ್ಳೆಯ ಹವ್ಯಾಸವಲ್ಲ. ಪ್ರತಿಯೊಬ್ಬರೂ ಪ್ರತ್ಯೇಕ ಬಾಚಣಿಕೆ ಹೊಂದಿರಬೇಕು. ಅದರಲ್ಲೂ ಮಕ್ಕಳ ಬಾಚಣಿಕೆ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಆಗಾಗ ಬಾಚಣಿಗೆಯನ್ನು ಬದಲಾಯಿಸುತ್ತಿರಬೇಕು.
Children Food : ನಿಮ್ಮ ಮಕ್ಕಳು ಏನ್ ತಿಂತಾರೆ? ಆಹಾರ ಕ್ರಮ ಹೀಗಿರಬೇಕು!
ಮಾರುಕಟ್ಟೆಯಲ್ಲಿ ಸಿಗುವ ಶಾಂಪೂಗಳನ್ನು ಮಕ್ಕಳ ಮೇಲೆ ಪ್ರಯೋಗಿಸಬಾರದು. ಮಕ್ಕಳಿಗಾಗಿಯೇ ವಿಶೇಷ ಶಾಂಪೂಗಳು ಲಭ್ಯವಿದೆ. ತಲೆ ಹೊಟ್ಟಿನ ಸಮಸ್ಯೆಯಿರುವ ಮಕ್ಕಳಿಗೆ ಆಂಟಿ ಡ್ಯಾಂಡ್ರಫ್ ಶಾಂಪೂ ಬಳಸುವುದು ಬಹಳ ಉತ್ತಮ.
ವೈದ್ಯರು ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿರುವ ಶಾಂಪೂವನ್ನು ಶಿಫಾರಸು ಮಾಡಬಹುದು. ಇದು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮನೆಮದ್ದುಗಳು : ನೀರಿಗೆ ನಿಂಬೆ ರಸವನ್ನು ಸೇರಿಸಿ,ಮಗುವಿನ ಕೂದಲಿಗೆ ಹಚ್ಚಬೇಕು. ಅಲೋವೆರಾ ತಿರುಳನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಮತ್ತು ನೆತ್ತಿಯ ತುರಿಕೆ ಕಡಿಮೆಯಾಗುತ್ತದೆ.
ಯಾವುದೇ ಮನೆ ಮದ್ದು ನೀಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.