ಈ 4 ಔಷಧಿಗಳು ನಕಲಿ: 48 ಔಷಧಿಗಳಲ್ಲಿ ಗುಣಮಟ್ಟವೇ ಇಲ್ಲ: CDSCO ವಾರ್ನಿಂಗ್

By Anusha KbFirst Published Oct 26, 2024, 1:30 PM IST
Highlights

ಶೆಲ್ಕಾಲ್ 500 ಮತ್ತು ಪ್ಯಾನ್ ಡಿ ಸೇರಿದಂತೆ ನಾಲ್ಕು ಔಷಧಿಗಳನ್ನು ನಕಲಿ ಎಂದು CDSCO ಘೋಷಿಸಿದೆ ಮತ್ತು 48 ಔಷಧಿಗಳು ಕಳಪೆ ಗುಣಮಟ್ಟದವು ಎಂದು ಪಟ್ಟಿ ಮಾಡಿದೆ. 

ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಕ್ಯಾಲ್ಸಿಯಂ ಸಪ್ಲಿಮೆಂಟರಿ ಆದ ಶೆಲ್ಕಾಲ್ 500 ಮತ್ತು ಆಂಟಾಸಿಡ್ ಪ್ಯಾನ್ ಡಿ ಸೇರಿದಂತೆ ನಾಲ್ಕು ಔಷಧಿಗಳನ್ನು ನಕಲಿ ಎಂದು ಗುರುತಿಸಿದೆ ಹಾಗೂ ಇತರ 48 ಔಷಧಿಗಳನ್ನು ಪ್ರಮಾಣಿಕರಿಸಿದ ಗುಣಮಟ್ಟದಲ್ಲಿ ಇಲ್ಲ ಎಂದು ಪಟ್ಟಿ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ ತಿಂಗಳ ಔಷಧಿಗಳ ಬಗ್ಗೆ ಎಚ್ಚರಿಕೆಯ ವರದಿಯಲ್ಲಿ ಸಿಡಿಎಸ್‌ಸಿಒ ಈ ವಿಚಾರವನ್ನು ತಿಳಿಸಿದೆ.

ಸಾರ್ವಜನಿಕರಿಗೆ ಲಭ್ಯವಿರುವ ಔಷಧಿಗಳ ಸುರಕ್ಷತೆಯನ್ನು ನಿರ್ಧರಿಸುವ ಗುರಿಯನ್ನು ಹೊಂದಿರುವ ಕಠಿಣ ಪರೀಕ್ಷೆಯಿಂದ ಈ ವಿಚಾರ ಸಾಬೀತಾಗಿದೆ. ಸಂಸ್ಥೆ ನಡೆಸಿದ ಗುಣಮಟ್ಟದ ಪರೀಕ್ಷೆಯಲ್ಲಿ 48 ಔಷಧಿಗಳು ವಿಫಲವಾಗಿವೆ. ಇವುಗಳಲ್ಲಿ ಜನಪ್ರಿಯ ಔಷಧಿಗಳಾದ ಪ್ಯಾರಸಿಟಮಾಲ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ-3 ಪೂರಕ ಮಾತ್ರೆಗಳು ಸೇರಿವೆ ಹೆಚ್ಚುವರಿಯಾಗಿ, ಆಕ್ಸಿಟೋಸಿನ್, ಮೆಟ್ರೋಡಜೋಲ್ ಮತ್ತು ಫ್ರುಕೋನಜೋಲ್‌ನಂತಹ ಔಷಧಗಳಲ್ಲಿ ಗುಣಮಟ್ಟದ ಕೊರತೆ ಇದೆ ಎಂಬ ವಿಚಾರ ಪರೀಕ್ಷೆಯಲ್ಲಿ ಸಾಬೀತಾಗಿದೆ.

Latest Videos

ಬೆನಿಗ್ನ್ ಪ್ರಾಸ್ಟೇಟ್ ಹೈಪರ್‌ಪ್ಲಾಸಿಯಾ (BPH)ಗೆ ಅಥವಾ ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆ ಕಾಯಿಲೆಗೆ ನೀಡುವ ಯೂರಿಮ್ಯಾಕ್ಸ್ ಡಿ (Urimax D), ಹಾಗೂ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ಚಿಕಿತ್ಸೆಗಾಗಿ ಬಳಸಲಾಗುವ ಇಂಜೆಕ್ಷನ್ ಡೆಕಾ ಡರ್ಬೊಲಿನ್ 25  (Deca-Durabolin 25) ಕೂಡ ಈ ಕಳಪೆ ಗುಣಮಟ್ಟದ ಪಟ್ಟಿಯಲ್ಲಿವೆ. ಈ ಔಷಧಗಳ ತಯಾರಕರ ಬಗ್ಗೆ ವಿಚಾರಣೆ ನಡೆಯುತ್ತಿದ್ದರು, ಸಿಡಿಎಸ್‌ಸಿಒ ಅವರ ಹೆಸರನ್ನು ಉಲ್ಲೇಖಿಸಿಲ್ಲ, ಕಳೆದ ತಿಂಗಳು ಎಚ್ಚರಿಕೆಯ ಜೊತೆಗೆ ಈ ಹೆಸರು ಉಲ್ಲೇಖಿಸದ ಸಂಸ್ಥೆಗಳಿಂದ ಪ್ರತ್ಯುತ್ತರಗಳನ್ನು ಸಿಡಿಎಸ್‌ಸಿಒ ಬಯಸಿದೆ.

ನಿಜವಾದ ತಯಾರಕರು (ಲೇಬಲ್ ಕ್ಲೈಮ್ ಪ್ರಕಾರ) ಉತ್ಪನ್ನ ದೋಷದ ಆರೋಪಕ್ಕೆ ಒಳಗಾದ ಉತ್ನನ್ನವನ್ನು ಅವರು ತಯಾರಿಸಿಲ್ಲ ಮತ್ತು ಇದು ನಕಲಿ ಔಷಧವಾಗಿದೆ ಎಂದು ತಿಳಿಸಿದ್ದಾರೆ. ಪ್ರಮುಖ ಡ್ರಗ್ ರೆಗ್ಯುಲೇಟರಿ ಸಂಸ್ಥೆಯು 40 ಕಂಪನಿಗಳಿಂದ ತಯಾರಿಸಲ್ಪಟ್ಟ 48 ಔಷಧಗಳು ಅದರ ಫಾರ್ಮುಲವನ್ನು ಸಹ ಪಟ್ಟಿ ಮಾಡಿದೆ, ಇವುಗಳು ಪ್ರಮಾಣಿತ ಗುಣಮಟ್ಟದಲಿಲ್ಲ, ಈ  ಔಷಧಗಳು ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಅಧಿಕಾರಿಗಳು ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದಿಲ್ಲ  ಎಂದು ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಈ ಔಷಧಿಗಳಲ್ಲಿ ಆಲ್ಕೆಮ್ ಹೆಲ್ತ್ ಸೈನ್ಸ್ ತಯಾರಿಸಿದ ಆಂಟಿಬಯೋಟಿಕ್ ಕ್ಲಾವಮ್ 625 ಮತ್ತು ಆಂಟಾಸಿಡ್ ಪ್ಯಾನ್ 40 ಮಾತ್ರೆಗಳು ಮತ್ತು ಅರಿಸ್ಟೋ ಫಾರ್ಮಾಸ್ಯುಟಿಕಲ್ಸ್  ತಯಾರಿಸಿದ  ಪ್ರತಿಜೀವಕಗಳಾದ ಮೊನೊಸೆಫ್  ಹಾಗೂ ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ  ಸಿಪ್ರೊಡಾಕ್ 500 ಒಳಗೊಂಡಿದೆ.

ತಮ್ಮ ಕಂಪನಿಯು ರೋಗಿಗಳಿಗೆ ಗುಣಮಟ್ಟದ ಔಷಧಿಗಳನ್ನು ನೀಡಲು ಬದ್ಧವಾಗಿದೆ ಎಂದು ಹೇಳುವ ಅಲ್ಕೆಮ್ ಲ್ಯಾಬೊರೇಟರೀಸ್ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಂಪನಿಯು ಸಿಡಿಎಸ್‌ಸಿಒ ಸಂಗ್ರಹಿಸಿದ ಮಾದರಿಗಳನ್ನು ಪರಿಶೀಲಿಸಿದೆ ಮತ್ತು ಅವುಗಳನ್ನು ಅಲ್ಕೆಮ್ ತಯಾರಿಸಿದ ಎರಡೂ ಉತ್ಪನ್ನಗಳ ನಿಜವಾದ ಬ್ಯಾಚ್‌ಗಳೊಂದಿಗೆ ಹೋಲಿಕೆ ಮಾಡಿದೆ ಎಂದು ಹೇಳಿದೆ. ಅಲ್ಲದೇ ಸಿಡಿಎಸ್‌ಸಿಒ  ಪರೀಕ್ಷೆಗಾಗಿ ಆಯ್ದುಕೊಂಡ ಮಾದರಿಗಳು ನಕಲಿ ಮತ್ತು ಅಲ್ಕೆಮ್‌ನಿಂದ ಅವುಗಳನ್ನು ತಯಾರಿಸಲಾಗಿಲ್ಲ ಎಂದು ಕಂಡುಬಂದಿದೆ. ನಾವು ಔಷಧ ನಿಯಂತ್ರಕರಿಗೆ ಈ ಬಗ್ಗೆ ತಿಳಿಸಿದ್ದೇವೆ ಮತ್ತು ದೇಶದಲ್ಲಿ ನಕಲಿ ಔಷಧಿಗಳ ಹಾವಳಿಯನ್ನು ತಡೆಯಲು ಅಧಿಕಾರಿಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ವಕ್ತಾರರು ಹೇಳಿದ್ದಾರೆ.

ಇಂತಹ ಔಷಧಿ ಘಟಕಗಳಲ್ಲಿ ಹೆಚ್ಚಿನವು ಹಿಮಾಚಲ ಪ್ರದೇಶದ ಬಡ್ಡಿ ಮತ್ತು ಉತ್ತರಾಖಂಡದ ಹರಿದ್ವಾರ ಮತ್ತು ರೂರ್ಕಿಯಂತಹ ನಗರಗಳಲ್ಲಿವೆ, ಆದರೆ ಕೋಲ್ಕತ್ತಾ, ಮುಂಬೈ, ಹೈದರಾಬಾದ್, ಗುವಾಹಟಿ ಮತ್ತು ಚಂಡೀಗಢ ಸೇರಿದಂತೆ ಕೇಂದ್ರ ಪ್ರಯೋಗಾಲಯಗಳಲ್ಲಿ ಇವುಗಳ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಿಡಿಎಸ್‌ಸಿಒ 18 ಔಷಧಿಗಳ ರಾಜ್ಯ ಪಟ್ಟಿಯನ್ನು ಸಹ ಬಿಡುಗಡೆ ಮಾಡಿತು, ಇದನ್ನು 14 ಕಂಪನಿಗಳು ವಿವಿಧ ಹಂತದ ಎಣಿಕೆಗಳ ಅಡಿಯಲ್ಲಿ  ನಿಗದಿಪಡಿಸಿದ ಗುಣಮಟ್ಟ ಹೊಂದಿಲ್ಲ ಎಂದು ಕಂಡುಬಂದಿವೆ. ಇವುಗಳಲ್ಲಿ ಉತ್ತರಾಖಂಡ್‌ನಿಂದ ತಯಾರಿಸಿದ ಏಳು ಮತ್ತು ಕೇರಳದ ಐದು ಔಷಧಗಳು ಸೇರಿವೆ, ಕೇರಳ ವೈದ್ಯಕೀಯ ಸೇವೆಗಳ ನಿಗಮದಿಂದ ತಯಾರಿಸಿದ ನಾಲ್ಕು ಔಷಧಗಳು ಇದರಲ್ಲಿವೆ ಎಂದು ತಿಳಿದು ಬಂದಿದೆ.

click me!