ಮಕ್ಕಳಾಗುವುದಕ್ಕೆ, ವಿವಿಧ ರೋಗಗಳ ನಿವಾರಣೆ, ಶುಭ ಫಲಕ್ಕೆ ಅರಳಿ ಮರ ಹೇಗೆ ನೆರವಾಗುತ್ತದೆ? ಖ್ಯಾತ ವೈದ್ಯೆ ಡಾ. ಗೌರಿಯಮ್ಮ ಹೇಳಿದ್ದಾರೆ ಕೇಳಿ...
ಹಿಂದೂ ಧರ್ಮದ ಪ್ರಕಾರ, ಅರಳಿ ಮರ ಬ್ರಹ್ಮ ವೃಕ್ಷವಾಗಿದೆ. ತುಳಸಿ ಮತ್ತು ಅರಳಿ ಮರಕ್ಕೆ ತುಂಬಾ ಪ್ರಾಧಾನ್ಯತೆಯಿದೆ. ಪ್ರಾಚೀನ ಕಾಲದಿಂದಲೂ ಅರಳಿ ವೃಕ್ಷವನ್ನು ಪೂಜಿಸಲಾಗುತ್ತದೆ. ಅರಳಿ ಮರದ ಕುರಿತು ಹಲವಾರು ರೀತಿಯ ಮಾತುಗಳಿವೆ. ಸೂರ್ಯೋದಯಕ್ಕೆ ಮೊದಲು ಅರಳಿ ಮರಕ್ಕೆ ನೀರನ್ನು ನೀಡುವುದರಿಂದ ಹಲವಾರು ಪ್ರಯೋಜನಗಳು ಇವೆ. ಅರಳಿ ಮರವನ್ನು ದಿನವೂ ಸುತ್ತಿದರೆ ಮಕ್ಕಳಾಗದಿದ್ದವರಿಗೆ ಸಂತಾನ ಭಾಗ್ಯ ಬರುತ್ತದೆ... ಹಲವು ರೋಗಗಳು ನಿವಾರಣೆಯಾಗುತ್ತದೆ.. ಹೀಗೆ ಹಲವಾರು ಪ್ರಯೋಜನಗಳನ್ನು ಹೇಳಲಾಗಿದೆ. ಈಭಗವಾನ್ ಬುದ್ಧನು ಈ ಮರದ ಕೆಳಗೆ ಕುಳಿತು ಜ್ಞಾನೋದಯವನ್ನು ಪಡೆದ ಹಿನ್ನೆಲೆಯಲ್ಲಿ, ಮರವನ್ನು ಬೋಧಿ ವೃಕ್ಷ ಎಂದೂ ಕರೆಯುತ್ತಾರೆ. ಆದ್ದರಿಂದಲೇ ಬೌದ್ಧ ಧರ್ಮದಲ್ಲಿ ಈ ಮರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಶಾಸ್ತ್ರಗಳ ಪ್ರಕಾರ, ಈ ಮರವನ್ನು ಕತ್ತರಿಸುವುದು ಅಶುಭ. ಈ ಮರವನ್ನು ಕಡಿಯುವುದರಿಂದ ಪಾಪದ ಪಾಲುದಾರರಾಗುತ್ತಾರೆ ಎಂದೂ ಹೇಳಲಾಗುತ್ತದೆ.
ಹಾಗಿದ್ದರೆ ಅರಳಿಮರ ಸುತ್ತುವುದರಿಂದ ಮಕ್ಕಳಾಗುತ್ತದೆ ಎನ್ನುವುದು ನಿಜವೇ? ಕೆಲವು ಸಮಸ್ಯೆಗಳನ್ನು ದೂರ ಮಾಡುತ್ತದೆ ಎನ್ನುವುದು ಸತ್ಯವೆ? ಈ ಕುರಿತು ಖ್ಯಾತ ವೈದ್ಯೆ ಡಾ.ಗೌರಿಯಮ್ಮ ಅವರು ಮಾಹಿತಿ ನೀಡಿದ್ದಾರೆ. ರ್ಯಾಪಿಡ್ ರಶ್ಮಿ ಷೋನಲ್ಲಿ ಅವರು ಅರಳಿ ಮರದ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದ್ದಾರೆ. ಅವರು ಹೇಳಿರುವ ಪ್ರಕಾರ, ಅರಳಿಮರದ ಕೆಳಗೆ ಐದು ನಿಮಿಷ ಕುಳಿತುಕೊಳ್ಳಿ, ಜೀವಮಾನದಲ್ಲಿಯೇ ಶ್ವಾಸಕೋಶದ ಸಮಸ್ಯೆ ಬರಲ್ಲ. ಅರಳಿ ಮರಕ್ಕೆ ಬೆಳಗಿನ ಜಾವವೇ ಪ್ರದಕ್ಷಿಣೆ ಮಾಡಬೇಕು. ಅದರಲ್ಲಿ ಸೋಮರಸ ಎನ್ನುವ ಅಂಶ ಇರುತ್ತದೆ. ಅದು ಮತ್ತು ಅರಳಿಮರದ ವಾಯು ಸೇರಿದಾಗ ಗರ್ಭಕೋಶದಲ್ಲಿರುವ ದೋಷ ನಿವಾರಣೆ ಮಾಡುತ್ತದೆ. ಇದೇ ಕಾರಣಕ್ಕೆ ಮಕ್ಕಳಾಗದವರಿಗೂ ಮಕ್ಕಳಾಗುತ್ತದೆ ಎನ್ನುವುದು ಎಂದಿದ್ದಾರೆ. ಸುಮ್ಮನೇ ಅರಳಿಮರಕ್ಕೆ ಹೋಗಿ ಎಂದರೆ ಯಾರೂ ಹೋಗಲ್ಲ. ಅದಕ್ಕಾಗಿ ಪ್ರದಕ್ಷಿಣೆ ಮಾಡಿ, ಪೂಜೆ ಮಾಡಿ ಅನ್ನುತ್ತಾರೆ. ಹಾಗೆ ಮಾಡಿದ್ರೆ 15-20 ನಿಮಿಷ ಅಲ್ಲಿರುವ ಕಾರಣ ಆ ಮರದ ಹತ್ತಿರ ಇರುತ್ತಾರೆ. ಎಂಥ ಅದ್ಭುತವಾಗಿರುವ ಶಕ್ತಿ ಇದು ಎಂದಿದ್ದಾರೆ ಡಾ.ಗೌರಿಯಮ್ಮ.
undefined
ಆರತಿಯನ್ನು ಒಂದೇ ಕೈಯಿಂದ ಸ್ವೀಕರಿಸಬೇಕು ಎನ್ನೋದು ಗೊತ್ತಾ? ಸರಿಯಾದ ವಿಧಾನ ಹೀಗಿದೆ ನೋಡಿ...
ಸ್ಕಂದ ಪುರಾಣದಲ್ಲಿ, ವಿಷ್ಣುವು ಅರಳಿ ಮರದ ಬೇರುಗಳಲ್ಲಿ ನೆಲೆಸಿದ್ದಾನೆ, ಕೇಶವನು ಕಾಂಡದಲ್ಲಿ ನೆಲೆಸಿದ್ದಾನೆ, ಭಗವಾನ್ ಶ್ರೀ ಹರಿಯು ಎಲೆಗಳಲ್ಲಿ ಮತ್ತು ನಾರಾಯಣನು ಕೊಂಬೆಗಳಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ. ಈ ಮರವನ್ನು ಪಾಪಗಳ ನಾಶಕ ಎಂದು ಪರಿಗಣಿಸಲಾಗುತ್ತದೆ. ಇದನ್ನು ಪೂಜಿಸುವುದರಿಂದ ಮತ್ತು ನೀರನ್ನು ಅರ್ಪಿಸುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಅರಳಿ ಮರದ ಕುರಿತು ಪದ್ಮ ಪುರಾಣದಲ್ಲಿ ವಿವರಿಸಲಾಗಿದೆ. ತಾಯಿ ಪಾರ್ವತಿಯ ಶಾಪದಿಂದಾಗಿ ಅರಳಿ ಮರವನ್ನು ವಿಷ್ಣುವಿನ ರೂಪವೆಂದು ಈ ಪುರಾಣದಲ್ಲಿ ಪರಿಗಣಿಸಲಾಗಿದೆ. ಸೋಮಾವತಿ ಅಮಾವಾಸ್ಯೆಯ ದಿನ, ವಿಷ್ಣು ಮತ್ತು ತಾಯಿ ಲಕ್ಷ್ಮಿ ಪ್ರತ್ಯಕ್ಷವಾಗಿ ಬಂದು ಅರಳಿ ಮರದಲ್ಲಿ ನೆಲೆಸುತ್ತಾರೆ. ಅರಳಿ ವೃಕ್ಷವನ್ನು ಉಪನಿಷತ್ತುಗಳಲ್ಲಿಯೂ ವಿವರವಾಗಿ ಚರ್ಚಿಸಲಾಗಿದೆ. ಯಾರು ಅರಳಿ ಮರವನ್ನು ಕಡಿಯುತ್ತಾರೋ ಅವರು ಪಾಪದ ಪಾಲುದಾರರಾಗುತ್ತಾರೆ ಎಂದು ಉಪನಿಷತ್ತುಗಳಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಧರ್ಮಗ್ರಂಥಗಳ ಪ್ರಕಾರ, ಮನೆಯಲ್ಲಿ ಅರಳಿ ಮರವನ್ನು ಬೆಳೆಸಬಾರದು. ಈ ಮರವು ದೇವತೆಗಳ ವಾಸಸ್ಥಾನ ಎಂದು ನಂಬಲಾಗಿದೆ, ಆದರೆ ಅದು ಮನೆಯಲ್ಲಿ ಬೆಳೆದರೆ ಅದು ಪಿತೃ ದೋಷಕ್ಕೆ ಕಾರಣ ಆಗುತ್ತದೆ ಎನ್ನಲಾಗಿದೆ. ಅರಳಿ ಮರದ ಬೇರುಗಳು ದಟ್ಟವಾಗಿ, ದಪ್ಪವಾಗಿ ಮತ್ತು ಹರಡಿಕೊಂಡಿರುವುದು ಇದಕ್ಕೆ ಒಂದು ಕಾರಣ. ಇಂತಹ ಸಂದರ್ಭದಲ್ಲಿ ಮನೆಯ ಗೋಡೆಯಲ್ಲಿ ಅರಳಿ ಮರ ಬೆಳೆದರೆ ಮನೆಯಲ್ಲಿ ಬಿರುಕು ಮೂಡುತ್ತದೆ. ಇದು ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ವಾಸ್ತು ಪ್ರಕಾರ, ಅರಳಿ ಮರವು ಮನೆಯಲ್ಲಿರುವ ಜನರ ಸ್ವಭಾವದ ಮೇಲೂ ಪರಿಣಾಮ ಬೀರುತ್ತದೆ.
ನಟರ ಜಾಹೀರಾತುಗಳ ಮೋಡಿಗೆ ಒಳಗಾಗಿ ಅದನ್ನೇ ಬಳಸ್ತೀರಾ? ಈ ವಿಡಿಯೋದಲ್ಲಿದೆ ನೋಡಿ ಭಯಾನಕ ಅಸಲಿಯತ್ತು!