ಹಸಿಮೆಣಸಿನ ಕಾಯಿ ಇಲ್ಲದೆ ಅಡುಗೆ ಇಲ್ಲ ಅಂತಿರೋ ಸ್ಥಿತಿಯಲ್ಲಿರುವಾಗ ಬ್ಯಾಡಗಿ ಮೆಣಸು ಬಳಸಿದ್ರೆ ವೈಟ್ ಲಾಸ್ ಮಾಡಬಹುದು ಅನ್ನೋ ವಾದ ಕೇಳಿ ಬರ್ತಿದೆ. ಅದು ನಿಜವಾ? ತಪ್ಪು ಕಲ್ಪನೆಯಾ?
ಯೂನಿವರ್ಸಿಟಿ ಆಫ್ ರಾಚೆಸ್ಟರ್ ಅಂತಿದೆ. ಅಲ್ಲಿ ಆಹಾರ ಪದಾರ್ಥಗಳಿಂದ ದೇಹದ ಮೇಲಾಗುವ ಪರಿಣಾಮಗಳ ಬಗ್ಗೆ ಸಂಶೋಧನೆ ನಡೀತಿರುತ್ತೆ. ಇವರ ಲೇಟೆಸ್ಟ್ ಸಂಶೋಧನೆ ನಮ್ಮ ಬ್ಯಾಡಗಿ ಮೆಣಸಿನ ಮೇಲೆ. ಅಂದರೆ ಕೇನ್ ಪೆಪ್ಪರ್ ಅಂತ ಅವರು ಬಳಸೋ ಒಣ ಮೆಣಸು ವಿಶೇಷ ಗುಣ ಹೊಂದಿದೆ ಅಂತ ಇವರು ಸಂಶೋಧನೆ ಮೂಲಕ ಹೇಳಿದ್ದಾರೆ. ನಿಮಗೆಲ್ಲ ಗೊತ್ತಿರುವಂತೆ ಅಧಿಕ ತೂಕ ಅಥವಾ ಬೊಜ್ಜು ನಾನಾ ರೋಗಗಳಿಗೆ ಕಾರಣವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ತೂಕವನ್ನು ಕಂಟ್ರೋಲ್‌ನಲ್ಲಿಡುವುದು ಮುಖ್ಯ ಅಂತ ಡಾಕ್ಟರ್ ಸಹ ಹೇಳ್ತಾರೆ. ಡಾಕ್ಟರ್ ಮಾತಿಗೆ ಗೋಣು ಅಲ್ಲಾಡಿಸಿ ಅಧಿಕ ತೂಕವನ್ನು ಇಳಿಸಲು ಬಹಳಷ್ಟು ಜನರು ನಾನಾ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಆದರೆ ತೂಕ ಇಳಿಸುವುದೆಂದರೆ ಅಷ್ಟೊಂದು ಸುಲಭದ ಕೆಲಸವಲ್ಲ. 'ಏನ್ ಮಾಡಿದ್ರೂ ತೂಕ ಇಳೀತಿಲ್ಲ ಕಣ್ರೀ, ಮಂಡಿನೋವು ಕಡಿಮೆ ಆಗಬೇಕು ಅಂದರೆ ತೂಕ ಇಳಿಸಲೇ ಬೇಕಂತೆ' ಅಂತ ಮಧ್ಯ ವಯಸ್ಸು ಅಥವಾ ವಯಸ್ಸಾದ ಹೆಂಗಸರು ಪಾರ್ಕಲ್ಲಿ ಮಾತಾಡೋದು ಕೇಳಿರಬಹುದು. ಆದರೆ ಅಡುಗೆಮನೆಯಲ್ಲಿರುವ ಈ ಒಂದು ಮಸಾಲೆಯಿಂದ ತೂಕ ಇಳಿಸಬಹುದು ಅನ್ನೋದು ಅವರಿಗೂ ಗೊತ್ತಾದ ಹಾಗಿಲ್ಲ.
ಈಗ ಈ ವಿಚಾರ ನಿಜವಾ, ನಿಜ ಆದರೆ ಹೇಗೆ ನಿಜ ಅನ್ನೋದನ್ನು ತಿಳಿದುಕೊಳ್ಳೋಣ. ನಾವು ಅಡುಗೆಯಲ್ಲಿ ಬಳಸುವ ಬ್ಯಾಡಗಿ ಮೆಣಸಿನಲ್ಲಿ ಕ್ಯಾಪ್ಸೈಸಿನ್ ಎಂಬ ಅಂಶ ಇದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಕ್ಯಾಲೊರಿ ಬರ್ನ್ ಮಾಡೋದಕ್ಕೂ ಸಹಾಯ ಮಾಡುತ್ತದೆ ಮತ್ತು ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಬ್ಯಾಡಗಿ ಮೆಣಸು ಹಸಿವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸುತ್ತೀರಿ. ಇದು ಶಾಖವನ್ನು ಉತ್ಪಾದಿಸಲು ಕ್ಯಾಲೊರಿಗಳನ್ನು ಸುಡುವ ಕಂದು ಕೊಬ್ಬಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಇದು ಉಬ್ಬುವಿಕೆಯನ್ನು ತಡೆಯುತ್ತದೆ.
ಚಳಿಗಾಲದಲ್ಲಿ ರಾತ್ರಿ ಏನು ಧರಿಸಿ ಮಲಗಬೇಕು? 99 ರಷ್ಟು ಜನರಿಗೆ ಈ ವಿಷಯ ಗೊತ್ತಿಲ್ಲ
ಇದು ನಿಮ್ಮನ್ನು ವ್ಯಾಯಾಮ ಮಾಡಲು ಪ್ರೇರೇಪಿಸುತ್ತದೆ. ಡಾಕ್ಟರ್ ಕೂಡ ಇದನ್ನು ಒಪ್ಪುತ್ತಾರೆ. ಬ್ಯಾಡಗಿ ಮೆಣಸಿನಲ್ಲಿ ಥರ್ಮೋಲಾಜಿಕಲ್ ಗುಣಲಕ್ಷಣಗಳಿವೆ. ಇದು ಪೈಪರಿನ್ ಅನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡೋದು ಇದರ ಪಾಸಿಟಿವ್ ಅಂಶ ಅಂತಾರೆ ಡಾಕ್ಟರ್. ಹಸಿಮೆಣಸು ಅಥವಾ ಬೇರೆ ಮೆಣಸಿನ ಬದಲಾಗಿ ಈ ಬ್ಯಾಡಗಿ ಮೆಣಸು ಬಳಸಿದರೆ ತೂಕ ಕಡಿಮೆ ಮಾಡಬಹುದು ಅನ್ನೋದನ್ನೂ ವೈದ್ಯರು ಒಪ್ತಾರೆ.
ಇದೀಗ ಸಂಶೋಧನೆಯೂ ಇದನ್ನೇ ಹೇಳ್ತಿದೆ. ಬ್ಯಾಡಗಿ ಮೆಣಸು ತಿಂದರೆ ಕೊಲೆಸ್ಟ್ರಾಲ್ ಕಡಿಮೆ ಆಗುತ್ತೆ. ಕೊಲೆಸ್ಟ್ರಾಲ್ ಅಂದರೆ ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ಇದರಿಂದ ನಿವಾರಿಸಬಹುದು. ಹಾಗಂತ ವೈಟ್ ಲಾಸ್ ಮಾಡ್ಕೊಳ್ಳೋಣ ಅಂದ್ಕೊಂಡು ಯರ್ರಾಬಿರ್ರಿ ಬ್ಯಾಡಗಿ ಮೆಣಸು ತಿಂದ್ಬಿಟ್ಟೀರ! ಹಾಗೇನಾದರೂ ಮಾಡಿದರೆ ಉಲ್ಟಾ ಎಫೆಕ್ಟ್ ಆಗಬಹುದು.
ಮಕ್ಕಳಲ್ಲಿ ಮದುವೆ ಬೇಡ ಎಂಬ ಭಾವನೆ ಬರಲು ಇದೇ ಕಾರಣ; ಪೋಷಕರೇ ಎಚ್ಚರ
ಹಾಗಂತ ಬರೀ ವ್ಯಾಯಾಮ ಮಾಡದೇ, ಸಿಕ್ಕಾಪಟ್ಟೆ ತಿಂತಿದ್ರೆ ನಿಮ್ಮ ತೂಕ ಇಳಿಯೋದಿಲ್ಲ. ಈ ಮೆಣಸಿನ ಬಳಕೆ ಜೊತೆಗೆ ವ್ಯಾಯಾಮವನ್ನೂ ಚೆನ್ನಾಗಿ ಮಾಡಿ. ಹೆಚ್ಚಿನವರಿಗೆ ಹೊಟ್ಟೆ ಉಬ್ಬರ, ಅಜೀರ್ಣ ಇತ್ಯಾದಿಗಳಿಂದ ಅನಾರೋಗ್ಯ ಹೆಚ್ಚಿ ಬೊಜ್ಜೂ ಹೆಚ್ಚಾಗೋದಿದೆ. ಅಂಥವರಿಗೆ ಈ ಮೆಣಸಿನ ಬಳಕೆ ಸಹಕಾರಿ. ಆರೋಗ್ಯ ಚೆನ್ನಾಗಿದ್ರೆ ವ್ಯಾಯಾಮ ಸಖತ್ತಾಗಿ ಮಾಡಿದರೆ ವೈಟ್ ಲಾಸ್ ಆಗುತ್ತೆ. ಸೋ ಯೋಚ್ನೆ ಮಾಡಿ. ಹಸಿಮೆಣಸು ಸೇವನೆಯಿಂದ ಹೊಟ್ಟೆ ಉಬ್ಬರ ಹೆಚ್ಚಾಗಬಹುದು, ಜೀರ್ಣ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದರ ಬದಲು ಬ್ಯಾಡಗಿ ಮೆಣಸನ್ನು ಅಡುಗೆಯಲ್ಲಿ ಬಳಸಿದರೆ ತೂಕ ಕಡಿಮೆ ಆಗಬಹುದು, ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತೆ.