ಕೆಮ್ಮಿದಾಗ ಕಫ ಬರೋದು ಕಾಮನ್, ಆದರೆ ಆ ಕಫ ಗಂಭೀರ ಅನಾರೋಗ್ಯದ ಸೂಚಕವಾಗಿರಬಹುದು!

By Suvarna News  |  First Published Nov 22, 2022, 3:28 PM IST

ಮಾಲಿನ್ಯ ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ನಮಗೆ ತಿಳಿಯದೆ ನಾವು ಸಾವಿಗೆ ಹತ್ತಿರವಾಗ್ತಿದ್ದೇವೆ. ಆರೋಗ್ಯ ಚೆನ್ನಾಗಿರಬೇಕೆಂದ್ರೆ ವಾಯು ಮಾಲಿನ್ಯದಿಂದ ಉಂಟಾಗುವ ದೊಡ್ಡ ಖಾಯಿಲೆ ಬಗ್ಗೆ ತಿಳಿಬೇಕು.
 


ಕ್ರೊನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ) ಒಂದು ಶ್ವಾಸಕೋಶದ ಖಾಯಿಲೆ. ತಡೆಗಟ್ಟಬಹುದಾದ ಹಾಗೂ ಚಿಕಿತ್ಸೆ ನೀಡಬಹುದಾದ ಖಾಯಿಲೆಗಳಲ್ಲಿ ಇದೂ ಒಂದು. ಆದ್ರೆ ದೇಶದಲ್ಲಿ ಇದ್ರ ಅಂಕಿ – ಅಂಶ ಭಯಹುಟ್ಟಿಸುತ್ತದೆ. ಯಾಕೆಂದ್ರೆ ಸಾಂಕ್ರಾಮಿಕವಲ್ಲ ರೋಗದಲ್ಲಿ ಎರಡನೇ ಅತಿ ಹೆಚ್ಚು ಸಾವು ಈ ಕ್ರೊನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ ನಿಂದ ಆಗ್ತಿದೆ.

ಈ ರೋಗ (Disease) ಕ್ಕೆ ಮುಖ್ಯ ಕಾರಣ ವಾಯುಮಾಲಿನ್ಯ (Air Pollution) . ಸಾಮಾನ್ಯವಾಗಿ ಜನರು ವಾಯು ಮಾಲಿನ್ಯದಿಂದ ಉಸಿರಾಟ (Breath)ದ ತೊಂದರೆಯಾಗುತ್ತದೆ ಎಂದು ಭಾವಿಸಿದ್ದಾರೆ. ಆದ್ರೆ ಮಾಲಿನ್ಯದಿಂದ ಉಸಿರಾಟದ ತೊಂದ್ರೆ ಮಾತ್ರವಲ್ಲ ಜನರ ಒಟ್ಟಾರೆ ಆರೋಗ್ಯದ ಮೇಲೆ ಇದು ಆಳವಾದ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಮಾಲಿನ್ಯ ಹೆಚ್ಚಾದ ಕಾರಣ  ಕ್ರೊನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (COPD) ಪ್ರಕರಣಗಳು  ಹೆಚ್ಚಾಗಲು ಪ್ರಾರಂಭಿಸಿವೆ. ಪ್ರತಿ ವರ್ಷ ಚಳಿಗಾಲದ ಸಮಯದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ (Delhi) ಹಾಗೂ ಮತ್ತು ಎನ್‌ಸಿಆರ್ ನಲ್ಲಿ ಇದು ಹೆಚ್ಚಿನ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲಿನ ಕೆಟ್ಟ ಗಾಳಿ ಮತ್ತು ಮಾಲಿನ್ಯದಿಂದಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರ ಜೀವನ ಕಷ್ಟವಾಗುತ್ತದೆ. ಉಸಿರಾಟದ ಕಾಯಿಲೆಯು ಕ್ರೊನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ ಗೆ ಕಾರಣವಾಗಬಹುದು. ಜನರು ಹೀಗಂದ್ರೆ ಏನು ಎಂಬುದನ್ನು ತಿಳಿಯಬೇಕು.

Latest Videos

undefined

ಕ್ರೊನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ ಬಗ್ಗೆ ತಜ್ಞರ ಎಚ್ಚರಿಕೆ : ದೀರ್ಘಕಾಲದವರೆಗೆ ನಿರಂತರವಾಗಿ ನೀವು ಕೆಮ್ಮಿ (Cough) ನಿಂದ ಬಳಲುತ್ತಿದ್ದರೆ ಅಥವಾ ಉಸಿರಾಟದ ತೊಂದರೆ ನಿಮ್ಮನ್ನು ಕಾಡ್ತಿದ್ದರೆ ನೀವು ನಿರ್ಲಕ್ಷ್ಯ ಮಾಡಬಾರದು. ಯಾಕೆಂದ್ರೆ ಇದು ಮುಂದೆ ತೊಂದರೆಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. 

ಕ್ರೊನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ ರೋಗ ಲಕ್ಷಣಗಳು : ಮುಖ್ಯವಾಗಿ ಈ ಕಾಯಿಲೆಯಲ್ಲಿ ರೋಗಿಯು ಉಸಿರಾಟದ ತೊಂದರೆ (Breathing Problem) ಎದುರಿಸಬೇಕಾಗುತ್ತದೆ. ಈ ರೋಗವು ಮುಖ್ಯವಾಗಿ ಧೂಮಪಾನಿ (Smoke)ಗಳಿಗೆ ಕಾಡುತ್ತದೆ. ಇದು ವ್ಯಕ್ತಿಯ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದ್ರ ಲಕ್ಷಣಗಳು ಒಮ್ಮೆಲೇ ಕಾಣಿಸಿಕೊಳ್ಳುವುದಿಲ್ಲ. ನಿಧಾನವಾಗಿ ನೀವು ಲಕ್ಷಣಗಳನ್ನು ಗಮನಿಸಬೇಕು. 

Winter Tips: ಚಳಿಗಾಲದಲ್ಲಿ ಕಿವಿನೋವಿನ ಕಾಟನಾ ? ಇಲ್ಲಿದೆ ಪರಿಹಾರ

ಕ್ರೊನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (Chronic Obstructive Pulmonary Disease) ನಿಂದ ಬಳಲುವವರಿಗೆ ದೀರ್ಘ ಕಾಲದವರೆಗೆ ಕೆಮ್ಮು ಕಾಡುತ್ತದೆ. ನೀವು ಕೆಮ್ಮಿದಾಗ ಲೋಳೆಗಳು ಹೊರಬರುವ ಸಾಧ್ಯತೆಯಿರುತ್ತದೆ. ಹಾಗೆಯೇ ಕೆಮ್ಮಿದಾಗ ರಕ್ತ (Blood) ಕೂಡ ಬರುವ ಸಂಭವವಿರುತ್ತದೆ. ಇದಲ್ಲದೆ ಈ ರೋಗದಿಂದ ಬಳಲುವವರು ಉಸಿರಾಟದ ತೊಂದರೆ ಅನುಭವಿಸುತ್ತಾರೆ. ನಿದ್ರೆಯ ವೇಳೆ ಗೊರಕೆ ಸಮಸ್ಯೆ ಎದುರಿಸುತ್ತಾರೆ. ಸಾಕಷ್ಟು ಆಯಾಸ ಅವರನ್ನು ಕಾಡುತ್ತದೆ. ಸೌಮ್ಯ ಜ್ವರ ಕೂಡ ಕಾಣಿಸಿಕೊಳ್ಳುತ್ತದೆ. ಶೀತ ಕೂಡ ಈ ರೋಗದ ಲಕ್ಷಣಗಳಲ್ಲಿ ಒಂದಾಗಿದೆ. ಇದೆಲ್ಲವೂ ಸಾಮಾನ್ಯರಲ್ಲಿ ಬಂದು ಹೋಗುವ ಸಮಸ್ಯೆಯಾದ ಕಾರಣ ಜನರು ಈ ರೋಗ ಲಕ್ಷಣವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.ಮೊದಲೇ ಹೇಳಿದಂತೆ ಇದನ್ನು ಪತ್ತೆ ಹಚ್ಚಿದ್ರೆ ಇದನ್ನು ಸುಲಭವಾಗಿ ತಡೆಗಟ್ಟಬಹುದು. ಕೆಲ ವಿಷ್ಯಗಳ ಬಗ್ಗೆ ಜನರು ಕಾಳಜಿ ವಹಿಸಬೇಕಾಗುತ್ತದೆ. 

ಕುದಿಸಿದಷ್ಟೂ ಟೀ ರುಚಿಯಾಗೋದು ಹೌದು, ಆದರೆ ಎಷ್ಟು ಕುದಿಸಿದರೆ ಓಕೆ?

ಧೂಮಪಾನಿಗಳಲ್ಲಿ  ಕ್ರೊನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಧೂಮಪಾನ (Smoking) ಅಭ್ಯಾಸ ಬಿಡುವುದು ಒಳ್ಳೆಯದು. ಮನೆಗೆ ಪೇಂಟ್ ಮಾಡಿದ್ದರೆ ಅಥವಾ ಸ್ಪ್ರೇ ಹಾಕಿದ್ದರೆ ಅದರ ವಾಸನೆ ಹೋಗುವವರೆಗೆ ಅಲ್ಲಿರಬೇಡಿ. ಹೆಚ್ಚಿನ ಮಾಲಿನ್ಯ ಸ್ಥಳದಿಂದ ದೂರವಿರುವುದು ಕೂಡ ಮುಖ್ಯವಾಗುತ್ತದೆ. ವೈದ್ಯರ ಸಲಹೆ ಮೇರೆಗೆ ನೀವು ಔಷಧಿಯನ್ನು ತೆಗೆದುಕೊಳ್ಳಿ. ವೈದ್ಯರ ಸಲಹೆಯ ಪ್ರಕಾರ  ಜ್ವರ, ನ್ಯುಮೋನಿಯಾ ಲಸಿಕೆ ಪಡೆಯಬೇಕಾಗುತ್ತದೆ. ಪೋಷಕಾಂಶದ ಆಹಾರ ಸೇವನೆ ಜೊತೆಗೆ ಸ್ನಾನಗಳು ಬಲಪಡೆಯಲು ನೀವು ದೈಹಿಕ ಚಟುವಟಿಕೆಗಳಿಗೂ ಮಹತ್ವ ನೀಡಬೇಕಾಗುತ್ತದೆ. 
 

click me!