ಶೀತ – ಜ್ವರಕ್ಕೆ ಈ ಯೋಗ ಮುದ್ರೆ ಬೆಸ್ಟ್

By Suvarna NewsFirst Published Nov 22, 2022, 1:14 PM IST
Highlights

ಚಳಿಗಾಲ ಶುರುವಾಗ್ತಿದ್ದಂತೆ ಶೀತ, ಜ್ವರ ಮಾಮೂಲಿ. ಇದು ಬಿಡ್ತಿದ್ದಂತೆ ಕೆಮ್ಮು ಕಾಡುತ್ತದೆ. ಇದ್ರಿಂದ ಮುಕ್ತಿ ಪಡೆಯಲು ಜನರು ನಾನಾ ಔಷಧಿ ಟ್ರೈ ಮಾಡ್ತಾರೆ. ಔಷಧಿ ಜೊತೆ ಈ ಮುದ್ರೆ ಹಾಕಿದ್ರೆ ಅನಾರೋಗ್ಯದಿಂದ ನೀವು ಬೇಗ ಹೊರಬರಬಹುದು.
 

ಹವಾಮಾನ ಬದಲಾದಾಗ ನೆಗಡಿ, ಜ್ವರದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ನೆಗಡಿಗೆ ಔಷಧಿ ತೆಗೆದುಕೊಳ್ಳಲು ಎಲ್ಲರೂ ಮನಸ್ಸು ಮಾಡೋದಿಲ್ಲ. ಆದ್ರೆ ವೈದ್ಯರ ಸಲಹೆ ಇಲ್ಲದೆ ನೀವು ಮಾತ್ರೆ – ಔಷಧಿಗಳನ್ನು ಸೇವನೆ ಮಾಡಬಾರದು. ಆದ್ರೆ ನಿಮ್ಮ ಚಿಕಿತ್ಸೆ ಬೇಗ ಪರಿಣಾಮ ಬೀರಬೇಕೆಂದ್ರೆ ನೀವು ಯೋಗ, ಮುದ್ರೆಗಳ ಸಹಾಯ ಪಡೆಯಬಹುದು.  

ನೆಗಡಿ (Cold) ಮತ್ತು ಜ್ವರ (Fever) ದ ನಂತ್ರ ನಮ್ಮನ್ನು ಕಾಡುವುದು ಕೆಮ್ಮು. ಈ ಕೆಮ್ಮು (Cough) ತುಂಬಾ ಅಹಿತಕರವಾಗಿರುತ್ತದೆ. ಕೆಮ್ಮಿನಿಂದ ಹೊರಬರುವುದು ಕಷ್ಟವಾಗುತ್ತದೆ. ಕೆಮ್ಮಿ ಕೆಮ್ಮಿ ಹೊಟ್ಟೆ ಹಾಗೂ ಎದೆ ನೋವು ಬರುವುದಿದೆ. ಈ ಕೆಮ್ಮಿನಿಂದ ಮುಕ್ತಿ ಬೇಕು ಎನ್ನುವವರು ಭ್ರಮರ ಮುದ್ರೆ (Bhramar Mudra )ಯನ್ನು ಅಭ್ಯಾಸ (Practice) ಮಾಡಬಹುದು. ಈ ಮುದ್ರೆಯು ಆಯಾಸ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಭ್ರಮರ ಮುದ್ರೆಯ ಅಭ್ಯಾಸವು ಮನಸ್ಸನ್ನು ಶಾಂತಗೊಳಿಸಲು ಸಹಕಾರಿ. ಭ್ರಮರ ಮುದ್ರೆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.  

ಭ್ರಮರ ಮುದ್ರೆ : ಭ್ರಮರ ಮುದ್ರೆಯನ್ನು ಮಧ್ಯ ಮತ್ತು ತೋರು ಬೆರಳಿನಿಂದ ಅಭ್ಯಾಸ ಮಾಡಲಾಗುತ್ತದೆ. ಈ ಮುದ್ರೆ ಮಾಡಿದಾಗ ನಿಮ್ಮ ಕೈಯ ಆಕಾರವು ಜೇನುನೊಣದಂತೆ ಕಾಣುತ್ತದೆ. ಹಾಗಾಗಿ ಇದನ್ನು ಭ್ರಮರ ಮುದ್ರೆ ಎಂದು ಕರೆಯಲಾಗುತ್ತದೆ. 

ಚಳಿಗಾಲದಲ್ಲಿ ಜೀರ್ಣಕ್ರಿಯೆ ಚೆನ್ನಾಗಿರ್ಬೇಕು ಅಂದ್ರೆ ಸೀತಾಫಲ ತಿನ್ನಿ

ಭ್ರಮರ ಮುದ್ರೆಯ ಪ್ರಯೋಜನಗಳು : 
ಅಲರ್ಜಿ ಸಮಸ್ಯೆಗೆ ಮುಕ್ತಿ :
ಚರ್ಮದ ಕಲೆಗಳು,  ದೇಹದಲ್ಲಿ ಕಾಣಿಸಿಕೊಳ್ಳುವ ತುರಿಕೆ, ಸೀನು ಮುಂತಾದ ಅಲರ್ಜಿಗಳನ್ನು ತೊಡೆದು ಹಾಕಲು ಭ್ರಮರ ಮುದ್ರೆಯು ಹೆಚ್ಚಾಗಿ ಪ್ರಯೋಜನಕಾರಿಯಾಗಿದೆ.

ನೆಗಡಿಗೆ ಒಳ್ಳೆಯದು : ಈ ಮುದ್ರೆ ನೆಗಡಿ, ಜ್ವರ, ಮೂಗು ಸೋರೋದು, ಉರಿಯೂತ, ಜ್ವರ ಇತ್ಯಾದಿಗಳನ್ನು ಕಡಿಮೆ ಮಾಡಲು ಉತ್ತಮ ಚಿಕಿತ್ಸೆಯಾಗಿದೆ.

ಸೈನಸ್ ಗೆ ಒಳ್ಳೆಯದು : ಸದಾ ಹಿಂಸೆ ನೀಡುವ ಸೈನಸ್, ಶ್ವಾಸಕೋಶಗಳಲ್ಲಿನ ಲೋಳೆ ತೊಡೆದು ಹಾಕಲು ಸಹಕಾರಿ. ಬ್ರಾಂಕೈಟಿಸ್ ಮತ್ತು ಅಸ್ತಮಾದಂತಹ ಉಸಿರಾಟದ ಕಾಯಿಲೆಗಳನ್ನು ಇದು ಕಡಿಮೆ ಮಾಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಳ : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಯಸುವವರು ಈ ಮುದ್ರೆ ಅಭ್ಯಾಸ ಮಾಡಬಹುದು.  

ಏಕಾಗ್ರತೆ :  ಭ್ರಮರ ಮುದ್ರೆಯು ಮೆದುಳಿನ ಏಕಾಗ್ರತೆ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. 

ಹೀಗಿರಲಿ ಭ್ರಮರ ಮುದ್ರೆ ಅಭ್ಯಾಸ : ಭ್ರಮರ ಯೋಗ ಮುದ್ರೆಯನ್ನು ಅಭ್ಯಾಸ ಮಾಡಲು, ಎರಡೂ ಕೈಗಳ ತೋರು ಬೆರಳುಗಳನ್ನು ಮಡಚಿ ಹೆಬ್ಬೆರಳಿನ ಕೆಳಗೆ ಇರಿಸಿ. ಹೆಬ್ಬೆರಳಿನ ತುದಿಯನ್ನು ಮಧ್ಯದ ಬೆರಳಿನ ತುದಿಗೆ ಒತ್ತಿ. ಉಂಗುರ ಬೆರಳು ಮತ್ತು ಕಿರುಬೆರಳನ್ನು ಹಾಗೆಯೇ ಬಿಡಿ. ಇನದನ್ಉ ಯೋಗ ಮ್ಯಾಟ್ ಅಥವಾ ಕುರ್ಚಿಯ ಮೇಲೆ ಆರಾಮದಾಯಕವಾಗಿ ಕುಳಿತು ಮಾಡಬಹುದು. ಆಳವಾದ ಮತ್ತು ಸ್ಥಿರವಾದ ಉಸಿರನ್ನು ತೆಗೆದುಕೊಳ್ಳಬೇಕು. ನೀವು ಇದನ್ನು ಕುಳಿಯಲ್ಲಿ ಮಾತ್ರವಲ್ಲ, ನಿಂತಾಗ, ವಾಕಿಂಗ್ ಮಾಡುವಾಗ ಕೂಡ ಮಾಡಬಹುದು. 

ಬೆಳಿಗ್ಗೆ ಭ್ರಮರ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಬೇಕು. ದಿನಕ್ಕೆ ಎರಡು ಬಾರಿ 5 ನಿಮಿಷಗಳ ಕಾಲ ಅಭ್ಯಾಸ ಮಾಡುವ ಮೂಲಕ ನೀವು ಈ ಮುದ್ರೆ ಶುರು ಮಾಡಬಹುದು. ನಂತ್ರ ನಿಧಾನವಾಗಿ ಸಮಯವನ್ನು ಹೆಚ್ಚಿಸಬಹುದು.  

ಹೃದಯಾಘಾತದ ಬಗ್ಗೆ ಬೇಡ ಭಯ, ತಿಂಗಳ ಮುಂಚೆಯೇ ಸಿಕ್ಕಿರುತ್ತೆ ಸೂಚನೆ

ಮುದ್ರೆ ಮಾಡುವ ವೇಳೆ ಇದನ್ನು ಗಮನಿಸಿ :  ಯಾವುದೇ ರೀತಿಯ ಅಲರ್ಜಿಯನ್ನು ತಡೆಗಟ್ಟಲು ನೀವು ಈ ಮುದ್ರೆಯನ್ನು ಅಭ್ಯಾಸ ಮಾಡುತ್ತಿದ್ದರೆ ಹಾಲು, ಮೊಸರು ಮುಂತಾದ ಯಾವುದೇ ಡೈರಿ ಉತ್ಪನ್ನಗಳನ್ನು ಸೇವಿಸಬೇಡಿ. 12 ವರ್ಷದೊಳಗಿನ ಮಕ್ಕಳು ಇದನ್ನು ಅಭ್ಯಾಸ ಮಾಡಬಾರದು.

click me!