ಹಿಡಿದುಕೊಂಡ ಗ್ಯಾಸ್ ಹೊರ ಬಿಟ್ಟರೆ ಮನಸ್ಸಿಗೂ ನಿರಾಳ, ಆರೋಗ್ಯವೂ ವೃದ್ಧಿ

By Suvarna NewsFirst Published Jul 16, 2022, 1:42 PM IST
Highlights

ಡರ್, ಪೊರ್ ಅಂತಾ ಗ್ಯಾಸ್ ಹೊರಗೆ ಬಂದ್ರೆ ಸುತ್ತಲಿದ್ದವರು ನಗ್ತಾರೆ. ನಮಗೆ ಮುಜುಗರವಾಗುತ್ತೆ. ಹಾಗಾಗಿ ಗ್ಯಾಸ್ ಕಂಟ್ರೋಲ್ ಮಾಡೋಕೆ ಜನರು ಮುಂದಾಗ್ತಾರೆ. ಗ್ಯಾಸ್ ಹೊರಗೆ ಬಿಡದೆ ಒಳಗಿಟ್ಟುಕೊಂಡ ಮಹಿಳೆಯೊಬ್ಬಳು ಸಾಕಷ್ಟು ಸಮಸ್ಯೆ ಎದುರಿಸಿದ್ದಾಳೆ.
 

ಹೊಟ್ಟೆಯಲ್ಲಿ ಗ್ಯಾಸ್ ತುಂಬೋದು ಅನೇಕರ ಸಮಸ್ಯೆ. ಆದ್ರೆ ಅದನ್ನು ಹೊರಗೆ ಬಿಡೋದು ಮುಜಗರದ ಸಂಗತಿ. ಸಾರ್ವಜನಿಕ ಪ್ರದೇಶದಲ್ಲಿ ಗ್ಯಾಸ್ ಬಿಟ್ಟರೆ ಮರ್ಯಾದಿ ಹೋದಂತೆ. ಇದೇ ಕಾರಣಕ್ಕೆ ಬಹುತೇಕರು ಇದನ್ನು ತಡೆದುಕೊಳ್ಳುವ ಪ್ರಯತ್ನ ಮಾಡ್ತಾರೆ. ಆದ್ರೆ ಹೊಟ್ಟೆಯಲ್ಲಿರುವ ಗ್ಯಾಸ್ ಹೊರಗೆ ಬಿಡದೆ ಹೋದ್ರೆ ಅದು ಮಾರಣಾಂತಿಕವಾಗ್ಬಹುದು. ಯಸ್, ನಾವು ಹೇಳ್ತಿರೋದು ತಮಾಷೆಯಲ್ಲ. ವಿಹ್ ಟ್ಯೂಬ್ ಎಂಬ ಬ್ರೆಜಿಲಿಯನ್ ಮಹಿಳೆಗೆ ಭಯಾನಕ ಅನುಭವವಾಗಿದೆ. ಗ್ಯಾಸ್ ತಡೆದುಕೊಂಡಿದ್ರಿಂದ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಕೆ ವೀಲ್ ಚೇರ್ ಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. 21 ವರ್ಷದ ವಿಹ್ ಟ್ಯೂಬ್ ಆಕೆ ಪೂರ್ಣ ಹೆಸರು ವಿಟ್ಟೋರಿಯಾ ಡಿ ಫೆಲಿಸ್ ಮೊರೇಸ್. ಪೋರ್ಚುಗಲ್‌ನಲ್ಲಿ ರಿಯೊ ಲಿಸ್ಬೋವಾ 2022 ರ ಸಂಗೀತ ಉತ್ಸವಕ್ಕೆ ಹೋದಾಗ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದೆ. ಬಾಯ್ ಫ್ರೆಂಡ್ ಜೊತೆಗಿದ್ದ ಕಾರಣ ವಿಹ್ ಟ್ಯೂಬ್, ಗ್ಯಾಸ್ ಹೊರಗೆ ಬಿಡಲಿಲ್ಲ. ಗ್ಯಾಸ್ ಹೊರಗೆ ಬಿಡ್ದೆ ಹೋದ್ರೆ ನನ್ನ ಸ್ಥಿತಿ ಹೀಗಾಗುತ್ತೆ ಎಂದು ವಿಹ್ ಎಂದೂ ಯೋಚನೆ ಮಾಡಿರಲಿಲ್ಲ. ಈಗ ವೀಲ್ ಚೇರ್ ನಲ್ಲಿ ಕುಳಿತಿರುವ ಫೋಟೋ ಹಂಚಿಕೊಂಡಿರುವ ವಿಹ್, ಆ ಪೋಸ್ಟನ್ನು ಬ್ರೆಜಿಲಿಯನ್ ಸಿಂಗರ್ ಪೊಚಾಗೆ ಟ್ಯಾಗ್ ಮಾಡಿದ್ದಾಳೆ.

ವಿಹ್ ಆ ಸಂದರ್ಭದಲ್ಲಿ ವಿಮಾನ ನಿಲ್ದಾಣ (Airport) ದಲ್ಲಿದ್ದಳು. ಅಲ್ಲಿ ಬಾಯ್ ಫ್ರೆಂಡ್ (Boy Friend ) ಜೊತೆಗಿದ್ದ. ಮುಜುಗರವಾಗುತ್ತೆ ಎಂಬ ಕಾರಣಕ್ಕೆ ಗ್ಯಾಸ್ ಹಿಡಿದಿಟ್ಟುಕೊಂಡಿದ್ದಳು. ಇದ್ರಿಂದ ಹೊಟ್ಟೆ ನೋವು ಹೆಚ್ಚಾಗಿ ವೀಲ್ ಚೇರ್ ಸಹಾಯ ಪಡೆಯಬೇಕಾಯ್ತು. ಆಕೆ ಪೋಸ್ಟ್ ಗೆ ಪೊಚಾ ಪ್ರತಿಕ್ರಿಯೆ ನೀಡಿದ್ದಾರೆ. ಪೊಚಾ ಕೂಡ ಕೆಲ ದಿನಗಳ ಹಿಂದೆ ಗ್ಯಾಸ್ ಕಾರಣಕ್ಕೆ ಆಸ್ಪತ್ರೆ ಸೇರಿದ್ದರು. ಗ್ಯಾಸ್ ಹೊಟ್ಟೆಯಲ್ಲೇ ಇದ್ರೆ ಅನೇಕ ಸಮಸ್ಯೆಗಳು ಕಾಡುತ್ತವೆ. ಇಂದು ನಾವು ಟ್ರಾಪ್ ಗ್ಯಾಸ್ ಎಂದರೇನು ಹಾಗೆ ಅದರಿಂದಾಗುವ ಸಮಸ್ಯೆ ಏನು ಎಂಬುದನ್ನು ಹೇಳ್ತೇವೆ. 

ಇದನ್ನೂ ಓದಿ: ಹೂಸುವುದರ ಬಗ್ಗೆ ನಿಮಗೆ ತಿಳಿಯದ 10 ಸತ್ಯಗಳು

ಟ್ರಾಪ್ ಗ್ಯಾಸ್ (Trap Gas) ಅಂದರೇನು? : ಗ್ಯಾಸ್ ಹೊರಗೆ ಬಿಡದೆ ಅದನ್ನು ಹೊಟ್ಟೆಯಲ್ಲಿಟ್ಟುಕೊಂಡ್ರೆ ಅದನ್ನು ಟ್ರಾಪ್ ಗ್ಯಾಸ್ ಎಂದು ಕರೆಯುತ್ತಾರೆ.  ಟ್ರಾಪ್ ಗ್ಯಾಸ್ ನಲ್ಲಿ ಹೊಟ್ಟೆ ಹಾಗೂ ಎದೆ ಭಾಗದಲ್ಲಿ ವಿಪರೀತ ನೋವಾಗುತ್ತದೆ. ಗ್ಯಾಸ್ ನಿಂದ ಆಗುವ ಈ ನೋವನ್ನು ಅನೇಕ ಬಾರಿ ಹೃದಯದ ಸಮಸ್ಯೆ ಅಥವಾ ಬೇರೆ ಸಮಸ್ಯೆ ಎಂದುಕೊಳ್ತೇವೆ. ಅನೇಕ ಬಾರಿ ನಾವು ತಿನ್ನುವ ಆಹಾರ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಸೃಷ್ಟಿಸುತ್ತದೆ. ಆ ಗ್ಯಾಸ್ ಹೊರಗೆ ಹೋಗದೆ ಹೋದಾಗ ಅನೇಕ ಸಮಸ್ಯೆ ಕಾಡಲು ಶುರುವಾಗುತ್ತದೆ.

ಟ್ರಾಪ್ ಗ್ಯಾಸ್ ಲಕ್ಷಣವೇನು ? : ಹೊಟ್ಟೆ ಉರಿ, ಹೊಟ್ಟೆ ನೋವು, ಹೊಟ್ಟೆ ಉಬ್ಬರ,ಹೊಟ್ಟೆಯಲ್ಲಿ ಗಾಳಿ ಸಿಕ್ಕಿದಂತ ಅನುಭವ, ತೇಗು, ಎದೆ ಭಾಗದಲ್ಲಿ ನೋವು ಇವೆಲ್ಲವೂ ಟ್ರಾಪ್ ಗ್ಯಾಸ್ ಲಕ್ಷಣವಾಗಿದೆ.

ಇದನ್ನೂ ಓದಿ: ಹೂಸಿನ ವಾಸನೆಯಿಂದ ನಿಮ್ಮ ಆರೋಗ್ಯ ಸಮಸ್ಯೆಯೇನು ತಿಳಿದುಕೊಳ್ಳಿ

ಟ್ರಾಪ್ ಗ್ಯಾಸಿಗೆ ಕಾರಣ : ನಾವು ಆಹಾರ, ನೀರು ಸೇವನೆ ಮಾಡ್ತಿರುವಾಗ ಸ್ವಲ್ಪ ಮಾತ್ರದ ಗಾಳಿ ನಮ್ಮ ದೇಹ ಸೇರುತ್ತದೆ. ಈ ಗಾಳಿ ಜೀರ್ಣಾಂಗವನ್ನು ಸೇರುತ್ತದೆ. ಈ ಗಾಳಿ ಹೊಟ್ಟೆ ಆಸುಪಾಸು ಒತ್ತಡವನ್ನುಂಟು ಮಾಡುತ್ತದೆ. ಇದೇ ಕಾರಣಕ್ಕೆ ತೇಗಿನ ಮೂಲಕ ಅಥವಾ ಗ್ಯಾಸಿನ ಮೂಲಕ ಈ ಗಾಳಿ ಹೊರಗೆ ಬರುತ್ತದೆ. ಗಾಳಿ ಹೆಚ್ಚಿನ ಪ್ರಮಾಣದಲ್ಲಿ ಹೊಟ್ಟೆ ಸೇರಿದ್ರೆ ಗ್ಯಾಸ್ ಸಮಸ್ಯೆ ಹೆಚ್ಚಾಗುತ್ತದೆ. ಅನೇಕ ಬಾರಿ ಕೆಲ ರೋಗಗಳಿಂದಲೂ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ.

ಗ್ಯಾಸ್ ಗೆ ಇವೂ ಕಾರಣ : ಬೀನ್ಸ್ ಮತ್ತು ಬಟಾಣಿ, ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು ಹೊಟ್ಟೆಯಲ್ಲಿ ಅನಿಲವನ್ನು ಉಂಟುಮಾಡುತ್ತವೆ.  ಸೋಡಾ, ಬಿಯರ್ ಸೇವನೆ, ಆತುರದಲ್ಲಿ ಆಹಾರ ಸೇವನೆ ಇವೆಲ್ಲವೂ ಗ್ಯಾಸ್ ಗೆ ಕಾರಣವಾಗುತ್ತದೆ. ಹೊಟ್ಟೆಯಲ್ಲಿ ಒತ್ತಡ ಹೆಚ್ಚಾಗ್ತಿದೆ ಅಂದರೆ ಮುಜುಗರ ಬಿಟ್ಟು ಗ್ಯಾಸ್ ಬಿಡಿ. ಇಲ್ಲವೆಂದ್ರೆ ಆಸ್ಪತ್ರೆ ಸೇರ್ಬೇಕಾಗುತ್ತದೆ.
 

click me!