
ರಕ್ತದ ಗುಂಪು ಅಥವಾ ಬ್ಲಡ್ ಗ್ರೂಪ್ ಅನ್ನು ಸಾಮಾನ್ಯವಾಗಿ ಎಲ್ಲರೂ ಪರೀಕ್ಷೆ ಮಾಡಿಸಿರುತ್ತಾರೆ. ಅತ್ಯಧಿಕವಾಗಿ ಮನುಷ್ಯರಲ್ಲಿ ಕಂಡುಬರುವ ಬ್ಲಡ್ ಗ್ರೂಪ್ಗಳು ಎಂಟು. ಅವುಗಳು A+, A-, B+, B-, AB+, AB-, O+, and O-. ನಿಮ್ಮ ಬ್ಲಡ್ ಗ್ರೂಪ್ ಕೂಡ ಇದರಲ್ಲಿ ಒಂದಾಗಿರಲಿಕ್ಕೆ ಸಾಕು. ಆದರೆ ಇದನ್ನು ಮೀರಿದ ಇನ್ನೊಂದು ಕುತೂಹಲ ಬ್ಲಡ್ ಗ್ರೂಪ್ ಇದೆ. ಅದೇ ಬಾಂಬೆ ಬ್ಲಡ್ ಗ್ರೂಪ್. ಆಗಿನ ಬಾಂಬೆ (ಈಗಿನ ಮುಂಬೈ)ನ ವ್ಯಕ್ತಿಯೊಬ್ಬರಲ್ಲಿ ಕಂಡುಹಿಡಿದ ವಿಚಿತ್ರ ಬ್ಲಡ್ ಗ್ರೂಪ್ ಇದಾಗಿದ್ದರಿಂದ ಇದಕ್ಕೆ ಅದೇ ಹೆಸರು ಬಂದಿದೆ. ಕಳೆದ ವರ್ಷ ವಿಜಯಪುರ ಜಿಲ್ಲೆಯ ನಿಡಗುಂದಿಯ ಚಾಲಕ ಮಹಾಂತೇಶ್ ಎನ್ನುವವರ ರಕ್ತದ ಗುಂಪು ಇದೇ ಆಗಿದ್ದರ ಬಗ್ಗೆ ಬಹಳ ಚರ್ಚೆಯಾಗಿತ್ತು. ಐದು ಲಕ್ಷ ಜನರಲ್ಲಿ ಹತ್ತು ಮಂದಿ ಈ ರಕ್ತದ ಗುಂಪನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.
ಅಷ್ಟಕ್ಕೂ ಏನಿದು ಬ್ಲಡ್ ಗ್ರೂಪ್? ಇದು ಹೆಚ್ಚು ಪ್ರಚಾರಕ್ಕೆ ಬಂದದ್ದು ಯಾವಾಗ? ಕೆಲ ತಿಂಗಳ ಹಿಂದೆ, ಮುಂಬೈನಲ್ಲಿ ಒಂದು ಪರೇಡ್ ನಡೆಯಿತು. ಸುಮಾರು 50 ಮಂದಿ ಇದರಲ್ಲಿ ಇದ್ದರು. ಇದರ ವಿಶೇಷ ಎಂದರೆ, ಇವರೆಲ್ಲವೂ ಬಾಂಬೆ ಬ್ಲಡ್ ಗ್ರೂಪ್ ಹೊಂದಿದ್ದವರು. ಈ ಬ್ಲಡ್ ಗ್ರೂಪ್ ಹೊಂದಿರುವ ವ್ಯಕ್ತಿಗಳಷ್ಟೇ ಅಲ್ಲ, ಅವರ ಕುಟುಂಬದ ಸದಸ್ಯರೂ ಇದರಲ್ಲಿ ಭಾಗವಹಿಸಿದ್ದರು. ಅಂದು ಬಾಂಬೆ ರಕ್ತದ ಗುಂಪು ಹೊಂದಿರುವ ವ್ಯಕ್ತಿಗಳ ಕುಟುಂಬದ ಸದಸ್ಯರೆಲ್ಲ ಅಂದು ಪರೀಕ್ಷೆಗೆ ಒಳಗಾದರು. ರಾಷ್ಟ್ರೀಯ ದತ್ತಾಂಶ ನಿರ್ಮಾಣದ ಉದ್ದೇಶದಿಂದ ನಡೆದ ಈ ಕಾರ್ಯಕ್ರಮ ಇದಾಗಿತ್ತು. ಜೊತೆಗೆ ಈ ವಿಭಿನ್ನ ರಕ್ತದ ಗುಂಪಿನ ಬಗ್ಗೆ ಅರಿವು ಮೂಡಿಸುವುದೂ ಇದರ ಉದ್ದೇಶವಾಗಿತ್ತು. ಅಷ್ಟಕ್ಕೂ, ಪ್ರತಿಯೊಬ್ಬ ಮನುಷ್ಯನ ರಕ್ತಕಣಗಳಲ್ಲಿ ಸಕ್ಕರೆ ಅಣುಗಳು ಕಂಡು ಬರುತ್ತದೆ. ಈ ರಕ್ತಕಣಗಳಿಂದಲೇ ವ್ಯಕ್ತಿಯ ರಕ್ತದ ಗುಂಪು ಯಾವುದು ಎಂದು ಕಂಡು ಹಿಡಿಯಲಾಗುತ್ತದೆ. ಆದರೆ ಬಾಂಬೆ ರಕ್ತದ ಗುಂಪಿನಲ್ಲಿ ಯಾವುದೇ ಸಕ್ಕರೆ ಅಣುಗಳು ಕಾಣಿಸುವುದಿಲ್ಲ. ಈ ರಕ್ತದ ಗುಂಪಿನಲ್ಲಿರುವ ಜನರು ತಮ್ಮ ಪ್ಲಾಸ್ಮಾದಲ್ಲಿ A, B ಮತ್ತು H ಪ್ರತಿಕಾಯಗಳನ್ನು ಹೊಂದಿರುತ್ತಾರೆ.
ಬದಲಾಗ್ತಿರೋ ಹವಾಮಾನಕ್ಕೆ ಬೆಟ್ಟದ ನೆಲ್ಲಿ: ಆರೋಗ್ಯಕರ ಪೇಯ ಹೇಳಿಕೊಟ್ಟ ಡಾ.ಪದ್ಮಿನಿ ಪ್ರಸಾದ್
ಇನ್ನು ಇದರ ಇತಿಹಾಸ ನೋಡುವುದಾದರೆ, 1952ರಲ್ಲಿ ಡಾ.ವೈ.ಎಂ.ಭೆಂಡೆ ಎನ್ನುವವರು ಇದನ್ನು ಪತ್ತೆ ಮಾಡಿದರು. ಬ್ಲಡ್ ಗ್ರೂಪ್ ರೆಫರೆನ್ಸ್ ಕೇಂದ್ರದಲ್ಲಿ ಇದು ಮೊದಲು ಪತ್ತೆಯಾಯಿತು. ಇದೇ ಸಂಸ್ಥೆಯನ್ನು ಈಗ ಐಸಿಎಂಆರ್-ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇಮ್ಯೂನೋಹೆಮಟಾಲಜಿ ಎಂಬುದಾಗಿ ಕರೆಯಲಾಗುತ್ತದೆ. ಈ ರಕ್ತದ ಗುಂಪು ಭಾರತ ಹಾಗೂ ಭಾರತದ ಉಪಖಂಡಗಳಲ್ಲಿ ಮಾತ್ರ ಕಂಡುಬರುತ್ತದೆ ಎಂದು ಸಂಶೋಧನೆಯಿಂದ ತಿಳಿದಿದೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಇರಾನ್ನಲ್ಲಿಯೂ ಕೆಲವರಲ್ಲಿ ಇದುದ ಕಂಡುಬಂದಿದೆ. ಈ ರಕ್ತದ ಗುಂಪು ಇತರ ಗುಂಪಿಗಿಂತಲೂ ಅತಿ ವಿಶಿಷ್ಟವಾಗಿ ವರ್ತಿಸುತ್ತದೆ. ಇವರ ರಕ್ತಸಾರ ಅಥವಾ ಸೀರಮ್ ಎನ್ನುವ ಅಂಶ ಬೇರೆ ಎಬಿಒ ರಕ್ತದ ಗುಂಪಿನಲ್ಲಿರುವ ಎಲ್ಲ ಕೆಂಪು ರಕ್ತಕಣಗಳ ಮೇಲೆ ದಾಳಿ ಮಾಡುತ್ತದೆ!
ವಿಶ್ವದಲ್ಲೇ ಪ್ರಸ್ತುತ ಈ ಬಾಂಬೆ ಬ್ಲಡ್ ಗ್ರೂಪ್ ಕೇವಲ 0.0004% ಮಾತ್ರ ಇದೆ. ಭಾರತದಲ್ಲಿ ಸುಮಾರು 10 ಸಾವಿರ ಜನರಲ್ಲಿ ಒಬ್ಬರು ಬಾಂಬೆ ರಕ್ತದ ಗುಂಪಿಗೆ ಸೇರಿರುತ್ತಾರೆ. ಇದನ್ನು HH ರಕ್ತದ ಗುಂಪು ಅಥವಾ ಅಸಾಮಾನ್ಯವಾದ ABO ರಕ್ತದ ಗುಂಪು ಎಂದೂ ಕರೆಯಲಾಗುತ್ತದೆ. ಅಗತ್ಯ ಸಮಯದಲ್ಲಿ ಇವರಿಗೆ ರಕ್ತ ದೊರೆಯಲು ಎಷ್ಟು ಕಷ್ಟವಾಗಬಹುದು. ಹೀಗಾಗಿ, ಬಾಂಬೆ ಬ್ಲಡ್ ಗ್ರೂಪ್ ಹೊಂದಿರುವ ವ್ಯಕ್ತಿಗಳು ಬೇರೆ ಬೇರೆ ಸ್ಥಳಗಳಲ್ಲಿ ಹಂಚಿಹೋಗಿದ್ದಾರೆ, ಸಂಘಟಿತರಾಗಿಲ್ಲ. ಅವರು ಬ್ಲಡ್ ಬ್ಯಾಂಕ್‌ನಂತಹ ಸೌಲಭ್ಯ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ರಕ್ತದಾನಿಗಳು ಅಗತ್ಯ ಸಮಯದಲ್ಲಿ ರಕ್ತ ದಾನ ಮಾಡಲೆಂದೇ ದೇಶದ ಒಂದು ನಗರದಿಂದ ಮತ್ತೊಂದು ನಗರಕ್ಕೂ ಪ್ರಯಾಣಿಸುವುದು ಅನಿವಾರ್ಯವಾಗಿದೆ.
ವಾಸಿಯಾಗದ ಕೆಮ್ಮು- ಸ್ಕ್ಯಾನ್ನಲ್ಲಿ ಕಂಡದ್ದು ಗಡ್ಡೆ, ಆಪರೇಷನ್ ವೇಳೆ ಸಿಕ್ಕಿದ್ದೇ ಬೇರೆ: ವೈದ್ಯರೇ ಕಂಗಾಲು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.