
ಹಲ್ಲುಗಳ ಆರೋಗ್ಯ ಬಹಳ ಮುಖ್ಯವಾದದ್ದು. ಅದನ್ನು ಕಾಪಾಡಿಕೊಳ್ಳಲು ದಿನಕ್ಕೆ ಎರಡು ಬಾರಿ ಬ್ರಶ್ ಮಾಡಲು ದಂತ ವೈದ್ಯರು ಸಲಹೆ ನೀಡುತ್ತಾರೆ. ಹೀಗೆ ಬ್ರಶ್ ಮಾಡಲು ಟೂತ್‌ಪೇಸ್ಟ್ ಬಳಸುತ್ತೇವೆ. ಈಗಂತೂ ಟೂತ್‌ಪೇಸ್ಟ್‌ಗಳಲ್ಲಿ ಎಷ್ಟು ಆಯ್ಕೆ ಇದೆ ಎಂದರೆ, ಯಾವುದನ್ನು ಆರಿಸುವುದೆನ್ನುವುದೇ ಒಂದು ಗೊಂದಲದ ಕೆಲಸವಾದೀತು.
ಬಿಳಿಮಾಡುವಿಕೆ! ಆಂಟಿಕ್ವಿಟಿ! ಟಾರ್ಟರ್ ನಿಯಂತ್ರಣ! ತಾಜಾ ಉಸಿರು! ಟೂತ್‌ಪೇಸ್ಟ್‌ನ ಟ್ಯೂಬ್‌ನಲ್ಲಿ ನೀವು ನೋಡುವ ಎಲ್ಲಾ ಸಾಮಾನ್ಯ ಪ್ರಯೋಜನಗಳ ಪಟ್ಟಿ. ಟೂತ್‌ಪೇಸ್ಟ್ ಅನ್ನು ಆಯ್ಕೆ ಮಾಡುವಾಗ, ಹೆಚ್ಚಿನ ಜನರು ಅದು ಒಳಗೊಂಡಿರುವ ಪದಾರ್ಥಗಳು, ಮುಕ್ತಾಯ ದಿನಾಂಕ, ಆರೋಗ್ಯ ಪ್ರಯೋಜನಗಳು ಮತ್ತು ಕೆಲವೊಮ್ಮೆ ಪರಿಮಳವನ್ನು ಪರಿಗಣಿಸುತ್ತಾರೆ. ಮತ್ತೆ ಕೆಲವರು ಟೂತ್‌ಪೇಸ್ಟ್ ಟ್ಯೂಬ್ ಕೆಳಗಿನ ಬಾರ್‌ನಲ್ಲಿರುವ ಬಣ್ಣವನ್ನು ಪರಿಗಣಿಸಿ ಪೇಸ್ಟ್ ಆಯ್ಕೆ ಮಾಡುವುದೂ ಉಂಟು. ಆದರೆ, ಟೂತ್‌ಪೇಸ್ಟ್ ಅನ್ನು ನಿರ್ಧರಿಸಲು ನೀವು ಟ್ಯೂಬ್‌ನ ಕೆಳಗಿನ ಬಾರ್‌ನಲ್ಲಿರುವ ಬಣ್ಣವನ್ನು ಬಳಸಬಾರದು.
ಟೂತ್‌ಪೇಸ್ಟ್ ಬಣ್ಣದ ಕೋಡ್‌ಗಳ ಅರ್ಥವೇನು?
ಟೂತ್‌ಪೇಸ್ಟ್ ಟ್ಯೂಬ್‌ಗಳ ಬಣ್ಣದ ಕೋಡ್‌ಗಳ ಬಗ್ಗೆ ನಕಲಿ ಸುದ್ದಿಯನ್ನು ಇಂಟರ್ನೆಟ್ ಹರಡುತ್ತಿದೆ. ಅದರಂತೆ ನಿಮ್ಮ ಟೂತ್‌ಪೇಸ್ಟ್ ಕೊಳ್ಳುವಾಗ ಟ್ಯೂಬ್‌ಗಳ ಕೆಳಭಾಗಕ್ಕೆ ನೀವು ಹೆಚ್ಚು ಗಮನ ಹರಿಸಬೇಕು. ಕೆಳಭಾಗದಲ್ಲಿ ಸಣ್ಣ ಬಣ್ಣದ ಚೌಕವಿದೆ ಮತ್ತು ಬಣ್ಣವು ಕಪ್ಪು, ನೀಲಿ, ಕೆಂಪು ಅಥವಾ ಹಸಿರು ಇರುತ್ತದೆ. ಇದು ಟೂತ್‌ಪೇಸ್ಟ್‌ನ ಇನ್‌ಗ್ರೀಡಿಯಂಟ್ಸ್ ಬಗ್ಗೆ ಬಹಿರಂಗಪಡಿಸುತ್ತದೆ ಎಂಬ ವಿಷಯ ನೀವು ಕೇಳಿರಬಹುದು. ಅದರಂತೆ,
ಹಸಿರು: ಎಲ್ಲಾ ನೈಸರ್ಗಿಕ
ನೀಲಿ: ನೈಸರ್ಗಿಕ ಜೊತೆಗೆ ಔಷಧ
ಕೆಂಪು: ನೈಸರ್ಗಿಕ ಮತ್ತು ರಾಸಾಯನಿಕ
ಕಪ್ಪು: ಶುದ್ಧ ರಾಸಾಯನಿಕ
ನೀವೂ ಕೂಡಾ ಈ ಬಣ್ಣ ನೋಡಿ ಪೇಸ್ಟ್ ಖರೀದಿಸುವವರಾದರೆ ಕೂಡಲೇ ಈ ಅಭ್ಯಾಸ ನಿಲ್ಲಿಸಿ. ಏಕೆಂದರೆ, ನಿಜವಾಗಿ ನಿಮ್ಮ ಟೂತ್‌ಪೇಸ್ಟ್‌ನ ಕೆಳಭಾಗದಲ್ಲಿರುವ ಬಣ್ಣವು ಪದಾರ್ಥಗಳ ಬಗ್ಗೆ ಯಾವುದೇ ಸೂಚನೆ ನೀಡುವುದಿಲ್ಲ. ಇಂಟರ್ನೆಟ್ ಹರಡಿರುವ ಈ ವಿಷಯ ಸಂಪೂರ್ಣ ಸುಳ್ಳು.
ಬಣ್ಣ ಏಕಿರುತ್ತದೆ?
ಬಣ್ಣದ ಚೌಕವು ವಾಸ್ತವವಾಗಿ ಟೂತ್‌ಪೇಸ್ಟ್‌ನ ಇನ್‌ಗ್ರೀಡಿಯಂಟ್ಸ್‌ಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇದು ಕೇವಲ ಉತ್ಪಾದನಾ ಪ್ರಕ್ರಿಯೆಯಲ್ಲಿ ಮಾಡಿದ ಗುರುತು. ಇದು ಪ್ಯಾಕೇಜಿಂಗ್ ಅನ್ನು ಎಲ್ಲಿ ಕತ್ತರಿಸಬೇಕು, ಮಡಚಬೇಕು ಅಥವಾ ಮುಚ್ಚಬೇಕು ಎಂದು ಯಂತ್ರಗಳಿಗೆ ತಿಳಿಸುತ್ತದೆ.
ಈ ಗುರುತುಗಳು ಹಲವು ಬಣ್ಣಗಳಲ್ಲಿ ಬರುತ್ತವೆ ಮತ್ತು ಅವು ಹಸಿರು, ನೀಲಿ, ಕೆಂಪು ಮತ್ತು ಕಪ್ಪು ಬಣ್ಣಗಳಿಗೆ ಸೀಮಿತವಾಗಿಲ್ಲ. ವಿಭಿನ್ನ ರೀತಿಯ ಪ್ಯಾಕೇಜಿಂಗ್‌ಗಳಲ್ಲಿ ಅಥವಾ ವಿಭಿನ್ನ ಸಂವೇದಕಗಳು ಮತ್ತು ಯಂತ್ರಗಳೊಂದಿಗೆ ವಿಭಿನ್ನ ಬಣ್ಣಗಳನ್ನು ಬಳಸಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಎಲ್ಲಾ ಬಣ್ಣಗಳು ಒಂದೇ ವಿಷಯವನ್ನು ಅರ್ಥೈಸುತ್ತವೆ.
ಬೇಕಾ ಬಿಟ್ಟಿ ಸ್ವೀಟ್ಸ್ ತಿಂದ್ರೆ ಆರೋಗ್ಯಕ್ಕೆ ನೂರೆಂಟ್ ಅಪಾಯ ಗ್ಯಾರಂಟಿ!
ನಿಮ್ಮ ಟೂತ್‌ಪೇಸ್ಟ್‌ನಲ್ಲಿ ಏನಿದೆ ಎಂದು ನೀವು ನಿಜವಾಗಿಯೂ ತಿಳಿದುಕೊಳ್ಳಲು ಬಯಸಿದರೆ, ಟೂತ್‌ಪೇಸ್ಟ್ ಬಾಕ್ಸ್‌ನಲ್ಲಿ ಮುದ್ರಿಸಲಾದ ಇನ್‌ಗ್ರೀಡಿಯಂಟ್ಸ್ ಲಿಸ್ಟನ್ನು ನೀವು ಯಾವಾಗಲೂ ಓದಬಹುದು.
ಟೂತ್‌ಪೇಸ್ಟ್‌ನಲ್ಲಿ ಏನಿರುತ್ತದೆ?
ಹೆಚ್ಚಿನ ಟೂತ್‌ಪೇಸ್ಟ್‌ಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತವೆ.
ತೆರೆದ ನಂತರ ಟೂತ್‌ಪೇಸ್ಟ್ ಗಟ್ಟಿಯಾಗುವುದನ್ನು ತಡೆಯಲು ಗ್ಲಿಸರಾಲ್, ಕ್ಸಿಲಿಟಾಲ್, ಸೋರ್ಬಿಟೋಲ್ ಬಳಸಲಾಗಿರುತ್ತದೆ.
ಆಹಾರದ ಅವಶೇಷಗಳನ್ನು ತೆಗೆದುಹಾಕಲು ಮತ್ತು ಹಲ್ಲುಗಳನ್ನು ಹೊಳಪು ಮಾಡಲು ಕ್ಯಾಲ್ಸಿಯಂ ಕಾರ್ಬೋನೇಟ್, ಸಿಲಿಕಾದಂಥ ರಾಸಾಯನಿಕ ಬಳಸಲಾಗಿರುತ್ತದೆ.
ಟೂತ್‌ಪೇಸ್ಟ್ ದಪ್ಪವಾಗಿಸುವ ಏಜೆಂಟ್ ಆಗಿ ಕಾರ್ಬಾಕ್ಸಿಮಿಥೈಲ್ ಸೆಲ್ಯುಲೋಸ್, ಕ್ಯಾರೇಜಿನನ್ಸ್, ಕ್ಸಾಂಥನ್ ಗಮ್ ಮುಂತಾದವನ್ನು ಬಳಸಲಾಗುತ್ತದೆ.
ಪೇಸ್ಟಿಗೆ ಸಿಹಿ ರುಚಿ ಸೇರಿಸಲು ಸೋಡಿಯಂ ಸ್ಯಾಕ್ರರಿನ್,
ಪರಿಮಳ ಸೇರಿಸಲು ಪುದೀನಾ, ಸೋಂಪು, ಬಬಲ್ಗಮ್ ಅಥವಾ ದಾಲ್ಚಿನ್ನಿಗಳಂತಹ ಸುವಾಸನೆಯ ಏಜೆಂಟ್ ಬಳಸಲಾಗಿರುತ್ತದೆ.
ನೊರೆ ಬರಿಸಲು ಸೋಡಿಯಂ ಲಾರಿಲ್ ಸಲ್ಫೇಟ್, ಸೋಡಿಯಂ ಎನ್-ಲೌರಾಯ್ಲ್ ಸಾರ್ಕೊಸಿನೇಟ್ ಬಳಸಿದರೆ
ಫ್ಲೋರೈಡನ್ನು ದಂತಕವಚವನ್ನು ಬಲಪಡಿಸುವ ಮತ್ತು ಕುಳಿಗಳನ್ನು ತಡೆಯುವ ಕಾರಣದಿಂದ ಬಳಸಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.