Tips for Weight Gain: ಅತಿಯಾಗಿ ತೂಕ ಹೊಂದಿದ್ರೂ ಕಷ್ಟ. ಕಡಿಮೆ ತೂಕ ಹೊಂದಿದ್ರೂ ತೊಂದರೆ ತಪ್ಪಿದ್ದಲ್ಲ. ಆರೋಗ್ಯವಂತ ವ್ಯಕ್ತಿ, ಎತ್ತರಕ್ಕೆ ತಕ್ಕಂತೆ ಹಾಗೂ ವಯಸ್ಸಿಗೆ ಸರಿಯಾಗಿ ತೂಕ ಹೊಂದಿರಬೇಕು. ಉತ್ತಮ ಆರೋಗ್ಯಗಳು ನಮ್ಮ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ.
ಕೆಟ್ಟ ಜೀವನ ಶೈಲಿ (Lifestyle) ಯಿಂದಾಗಿ ಬಹುತೇಕ ಜನರು ಬೊಜ್ಜಿ (Fat) ನ ಸಮಸ್ಯೆ ಎದುರಿಸುತ್ತಿದ್ದಾರೆ. ಜನರಿಗೆ ತೂಕ (Weight) ಇಳಿಸಿಕೊಳ್ಳೋದು ದೊಡ್ಡ ತಲೆಬಿಸಿಯಾಗಿದೆ. ಆದ್ರೆ ಅಲ್ಲಿ ಇಲ್ಲಿ ಎನ್ನುವಂತೆ ಕೆಲವರ ತೂಕ ವಿಪರೀತ ಕಡಿಮೆಯಿದೆ. ತೂಕ ಹೆಚ್ಚಿಸಿಕೊಂಡು, ದೇಹದಲ್ಲಿ ಶಕ್ತಿ (Strength) ಪಡೆಯಬೇಕೆಂಬ ಬಯಕೆ ಅವರಿಗಿರುತ್ತದೆ. ಏನೇ ತಿಂದ್ರೂ ತೂಕ ಹೆಚ್ಚಾಗೋದಿಲ್ಲ ಎನ್ನುವವರು ಡಯಟ್ ಬದಲಿಸಬೇಕಾಗುತ್ತದೆ. ಇಂದು ನಾವು ತೂಕ ಕಡಿಮೆ ಇರುವ ವ್ಯಕ್ತಿಗಳು ಏನು ತಿನ್ಬೇಕು ಅನ್ನೋದನ್ನು ಹೇಳ್ತೇವೆ.
ತ್ವರಿತ ತೂಕ ಹೆಚ್ಚಿಸುವ ಆಹಾರಗಳು :
ಪ್ರೋಟೀನ್ ಸಪ್ಲಿಮೆಂಟ್ಸ್: ತೂಕ ಹೆಚ್ಚಿಸಲು ಪ್ರೋಟೀನ್ ಪೂರಕಗಳು ಹೆಚ್ಚು ಪರಿಣಾಮಕಾರಿ. ಹಾಲೊಡಕು, ಸೋಯಾ, ಮೊಟ್ಟೆ ಮತ್ತು ಬಟಾಣಿ ಸೇರಿದಂತೆ ಪ್ರೋಟೀನ್ ಹೆಚ್ಚಿರುವ ಆಹಾರವನ್ನು ಸೇವನೆ ಮಾಡ್ಬೇಕು. ಹಾಲೊಡಕನ್ನು ವ್ಯಾಯಾಮದ ಮೊದಲು ಅಥವಾ ನಂತರ ಅಥವಾ ದಿನದ ಯಾವುದೇ ಸಮಯದಲ್ಲಿ ನೀವು ಇದನ್ನು ಸೇವನೆ ಮಾಡ್ಬಹುದು. ಇದಲ್ಲ ನೀವು ಮನೆಯಲ್ಲಿ ಪ್ರೋಟೀನ್ ಶೇಕ್ ತಯಾರಿಸಿ ಕುಡಿಯಬಹುದು. ಪ್ರೋಟೀನ್‌ಗಾಗಿ, ಕಡಲೆಕಾಯಿ ಬಟರ್, ಬಾದಾಮಿ ಬಟರ್, ಅಗಸೆಬೀಜ ಅಥವಾ ಚಿಯಾ ಬೀಜಗಳನ್ನು ಸೇವನೆ ಮಾಡ್ಬಹುದು. ಪ್ರೋಟೀನ್ ಅಂಶವನ್ನು ಹೆಚ್ಚಿಸಲು, ನೀವು ಸೂಪ್, ಹಿಸುಕಿದ ಆಲೂಗಡ್ಡೆ ಮತ್ತು ಓಟ್ಮೀಲ್ ನಂತಹ ಆಹಾರ ತೆಗೆದುಕೊಳ್ಳಬೇಕು.
ಡ್ರೈ ಫ್ರೂಟ್ಸ್: ತೂಕ ಹೆಚ್ಚಾಗ್ಬೇಕು ಎನ್ನುವವರು ಡ್ರೈ ಫ್ರೂಟ್ಸ್ ಸೇವನೆ ಮಾಡ್ಬೇಕು. ನಟ್ಸ್ ಬಟರ್ ಕೂಡ ಸೇವನೆ ಮಾಡ್ಬಹುದು. ಇದು ವೇಗವಾಗಿ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಕೇವಲ ಒಂದು ಕೈಬೆರಳೆಣಿಕೆಯಷ್ಟು ಕಚ್ಚಾ ಬಾದಾಮಿ (ಸುಮಾರು 1/4 ಕಪ್) 170 ಕ್ಯಾಲೋರಿಗಳು, 6 ಗ್ರಾಂ ಪ್ರೋಟೀನ್, 4 ಗ್ರಾಂ ಫೈಬರ್ ಮತ್ತು 15 ಗ್ರಾಂ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ.
ಹಾಲಿನೊಂದಿಗೆ ಬಾಳೆಹಣ್ಣು: ತೂಕ ವೇಗವಾಗಿ ಹೆಚ್ಚಾಗ್ಬೇಕೆಂದ್ರೆ ಹಾಲಿನ ಜೊತೆ ಬಾಳೆ ಹಣ್ಣನ್ನು ಸೇವನೆ ಮಾಡ್ಬೇಕು. ತ್ವರಿತ ತೂಕ ಹೆಚ್ಚಿಸಲು ಹಾಲು ಮತ್ತು ಬಾಳೆಹಣ್ಣು ಉತ್ತಮ ಆಯ್ಕೆಯಾಗಿದೆ. ಅದರಲ್ಲಿ ಸಕ್ಕರೆ ಮತ್ತು ಕ್ಯಾಲೋರಿಗಳ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಇದು ನಿಮ್ಮ ತೂಕವನ್ನು ತ್ವರಿತವಾಗಿ ಹೆಚ್ಚಿಸಲು ಕೆಲಸ ಮಾಡುತ್ತದೆ.
ಕೆಂಪು ಮಾಂಸ: ಸ್ನಾಯುಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಬಯಸಿದರೆ ಪ್ರತಿದಿನ ಕೆಂಪು ಮಾಂಸವನ್ನು ಸೇವಿಸಬೇಕು. ಇದು ಸ್ನಾಯುಗಳನ್ನು ಬಲಪಡಿಸುವ ಜೊತೆಗೆ ತೂಕವನ್ನು ತುಂಬಾ ಸುಲಭವಾಗಿ ಹೆಚ್ಚಿಸುತ್ತದೆ. ಕೆಂಪು ಮಾಂಸದಲ್ಲಿ ಪ್ರೋಟೀನ್ ಮತ್ತು ಕೊಬ್ಬು ಕೂಡ ಕಂಡುಬರುತ್ತದೆ. ಆದರೆ ಕೆಂಪು ಮಾಂಸವನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಎಂಬುದನ್ನು ನೆನಪಿಡಬೇಕು.
ತೂಕ ಹೆಚ್ಚಿಸುತ್ತೆ ಪನ್ನೀರ್: ಪನ್ನೀರ್ ವೇಗವಾಗಿ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕ್ಯಾಲೋರಿಗಳು ಮತ್ತು ಕೊಬ್ಬಿನಿಂದ ಸಮೃದ್ಧವಾಗಿದೆ. ಪನೀರ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ದೇಹವು ಅದರಿಂದ ಸಾಕಷ್ಟು ಪ್ರೋಟೀನ್ ಪಡೆಯುತ್ತದೆ. ಇದನ್ನು ಆಹಾರ ಮತ್ತು ತರಕಾರಿಗಳ ರೂಪದಲ್ಲಿ ಸೇವಿಸಬಹುದು.
ಇದನ್ನೂ ಓದಿ: ಮಳೆಗಾಲದಲ್ಲಿ ಮಶ್ರೂಮ್‌ನಿಂದ ತಯಾರಿಸಿದ ಆಹಾರ ತಿನ್ಬೋದಾ ?
ಸಾಲ್ಮನ್ ಮೀನು: ಕೆಂಪು ಮಾಂಸದಂತೆ, ಸಾಲ್ಮನ್ ಮೀನುಗಳು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಅತ್ಯುತ್ತಮ ಮೂಲಗಳಾಗಿವೆ. ಸಾಲ್ಮನ್ ಮೀನಿನಲ್ಲಿರುವ ಎಲ್ಲಾ ಪೋಷಕಾಂಶಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಪ್ರಮುಖವಾದದ್ದು. ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ತೂಕಕ್ಕೆ ಹಾಲು: ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ವಿಟಮಿನ್‌ಗಳು ಮತ್ತು ಖನಿಜಗಳು ಹಾಲಿನಲ್ಲಿ ಅತ್ಯಂತ ಸಮತೋಲಿತ ಪ್ರಮಾಣದಲ್ಲಿರುತ್ತವೆ. ಹಾಗಾಗಿ ನೀವು ಹಾಲಿನ ಸೇವನೆ ಮಾಡ್ಬಹುದು.
ಇದನ್ನೂ ಓದಿ: ಮಳೆಯಲ್ಲಿ ಕರಿದ ತಿಂಡಿ ತಿನ್ನೋ ಮಜಾನೇ ಬೇರೆ, ಒಳ್ಳೇದಲ್ಲ ಆರೋಗ್ಯಕ್ಕೆ!
ಡಾರ್ಕ್ ಚಾಕೋಲೇಟ್: ಡಾರ್ಕ್ ಚಾಕೊಲೇಟ್‌ನಲ್ಲಿ ಕೋಕೋ ಅಂಶವು ಶೇಕಡಾ 70ರಷ್ಟಿದೆ. ಕೊಬ್ಬಿನ ಆಹಾರದಂತೆಯೇ ಡಾರ್ಕ್ ಚಾಕೋಲೇಟ್‌ನಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ಇದನ್ನು ತಿನ್ನುವುದರಿಂದ ನಿಮ್ಮ ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಪಡೆಯುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ.