International Plastic Bag Free Day 2022: ಪ್ಲಾಸ್ಟಿಕ್ ಪರಿಸರಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಡೇಂಜರ್ !

Published : Jul 03, 2022, 02:05 PM IST
International Plastic Bag Free Day 2022: ಪ್ಲಾಸ್ಟಿಕ್ ಪರಿಸರಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಡೇಂಜರ್ !

ಸಾರಾಂಶ

ಮನುಷ್ಯನ ಜೀವನ (Life) ಸಂಪೂರ್ಣ ಪ್ಲಾಸ್ಟಿಕ್ (Plastic) ಮಯವಾಗಿದೆ. ಬೆಳಗ್ಗೆ ಎದ್ದು ರಾತ್ರಿ ಮಲಗುವ ವರೆಗೆ ಪ್ರತಿ ಕ್ಷಣವೂ ನಾವು ಒಂದಲ್ಲಾ ಒಂದು ಪ್ಲಾಸ್ಟಿಕ್ ವಸ್ತುವನ್ನು ಬಳಸುತ್ತಿರುತ್ತೇವೆ. ಇದು ಪರಿಸರಕ್ಕೆ (Environment) ಮಾರಕ ಹೌದು. ಜೊತೆಗೆ ಇದರಿಂದ ಆರೋಗ್ಯ (Health)ಕ್ಕೆಷ್ಟು ತೊಂದ್ರೆಯಿದೆ ಗೊತ್ತಾ ?

ಜುಲೈ 3. ಇಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್​ ಬ್ಯಾಗ್​ ಮುಕ್ತ ದಿನ (International Plastic Bag Free Day). ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ಬಟ್ಟೆ, ಕಾಗದ ಹಾಗೂ ಇತರ ಪರಿಸರ ಸ್ನೇಹಿ ಕೈಚೀಲಗಳನ್ನು ಬಳಸಲು ಸರ್ಕಾರಗಳು ಗೋಗರೆಯುತ್ತಿದ್ದರೂ ಸಾರ್ವಜನಿಕ ವಲಯದಲ್ಲಿ ಆಗುತ್ತಿರುವುದೇ ಬೇರೆ. ಪ್ಲಾಸ್ಟಿಕ್ ಮಾಲಿನ್ಯವು (Pollution) ಮಾನವನ ಆರೋಗ್ಯದ (Health) ಸಮಸ್ಯೆಯಾಗಿದೆ. ನಾವು ಪ್ಲಾಸ್ಟಿಕ್‌ನಿಂದ ಸುತ್ತುವರೆದಿದ್ದೇವೆ. ನಮ್ಮ ಪೀಠೋಪಕರಣಗಳು, ಬಟ್ಟೆ, ಎಲೆಕ್ಟ್ರಾನಿಕ್ಸ್ ಮತ್ತು ಆಹಾರ ಪ್ಯಾಕೇಜಿಂಗ್‌ನ ಹೆಚ್ಚಿನ ಭಾಗವು ಅದರಿಂದ ತಯಾರಿಸಲ್ಪಟ್ಟಿದೆ. ಜುಲೈ 1 ರಿಂದ ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್  ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಮಾಲಿನ್ಯವನ್ನು ಎದುರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮಾಲಿನ್ಯದ ದೊಡ್ಡ ಮೂಲವಾಗಿದ್ದು, ಪ್ರತಿ ವರ್ಷ ಸುಮಾರು 14 ಮಿಲಿಯನ್ ಟನ್ ಪ್ಲಾಸ್ಟಿಕ್ ಬಳಕೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದರಿಂದ ಜನರು ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ.  ಕಳೆದ ದಶಕಗಳಲ್ಲಿ, ಕಾಗದ, ಗಾಜು ಮತ್ತು ಹತ್ತಿಯಂತಹ ಉತ್ಪಾದನೆಯಲ್ಲಿ ಬಳಸುವ ನೈಸರ್ಗಿಕ ವಸ್ತುಗಳನ್ನು ಪ್ಲಾಸ್ಟಿಕ್‌ನಿಂದ ಬದಲಾಯಿಸಲಾಗಿದೆ. ಪ್ಲಾಸ್ಟಿಕ್‌ನ ಈ ಸಂಪೂರ್ಣ ಬಳಕೆಯು ನಮ್ಮ ಪರಿಸರದಲ್ಲಿ ವಿಪರೀತ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ನಮಗೆ ತಿಳಿದಿದೆ. ಆದರೆ, ಪ್ಲಾಸ್ಟಿಕ್ ಕೇವಲ ಪರಿಸರ ಸಮಸ್ಯೆಯಲ್ಲ, ಇದು ಮನುಷ್ಯನಲ್ಲಿ ಆರೋಗ್ಯ ಸಮಸ್ಯೆಗೂ ಕಾರಣವಾಗ್ತಿದೆ. ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬುದನ್ನು ನಾವು ತಜ್ಞರಿಂದ ತಿಳಿಯೋಣ.

ಪ್ಲಾಸ್ಟಿಕ್ ಮೇಲೆ ನಿಷೇಧ : ಹಾಗಿದ್ರೆ ಇನ್ನೇನು ಬಳಸೋದು?

ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೂ ತೊಂದ್ರೆ 
ಪ್ಲಾಸ್ಟಿಕ್ ಹಲವು ರೀತಿಯ ಮೂಲಕ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಪ್ಲಾಸ್ಟಿಕ್ ಎಷ್ಟೇ ವರ್ಷಗಳು ಬಿಟ್ಟರು ಅದು ಕೊಳೆಯುವುದಿಲ್ಲ. ಮತ್ತು ಇದು ಜಲ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಮಣ್ಣಿನ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದರಿಂದ ಜನರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಸಮುದ್ರವನ್ನು ತಲುಪುತ್ತದೆ ಮತ್ತು ಸಮುದ್ರದ ಪ್ರಾಣಿಗಳು ಪ್ಲಾಸ್ಟಿಕ್​ನ್ನು ತಿನ್ನುತ್ತವೆ. ಆಹಾರ ಪದಾರ್ಥಗಳ ಪ್ಯಾಕೇಜಿಂಗ್‌ನಲ್ಲಿ ಅನೇಕ ಬಾರಿ ರಾಸಾಯನಿಕಗಳನ್ನು ಬಳಸುತ್ತಾರೆ. ಇದರಿಂದಾಗಿ ಜನರ ರೋಗನಿರೋಧಕ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ನಾವು ಪ್ರತಿದಿನ ಮೈಕ್ರೋಪ್ಲಾಸ್ಟಿಕ್‌ಗಳನ್ನು ತಿನ್ನುತ್ತೇವೆ, ಕುಡಿಯುತ್ತೇವೆ ಮತ್ತು ಉಸಿರಾಡುತ್ತೇವೆ. ಈ ಸಣ್ಣ ಪ್ಲಾಸ್ಟಿಕ್ ಕಣಗಳು ನಮ್ಮ ದೇಹವನ್ನು ಪ್ರವೇಶಿಸಿದ ನಂತರ ನಮ್ಮ ಆರೋಗ್ಯವನ್ನು ಹಾನಿಗೊಳಿಸಬಹುದು. ಪ್ಲಾಸ್ಟಿಕ್ ಉತ್ಪನ್ನಗಳು ರಾಸಾಯನಿಕ ಸೇರ್ಪಡೆಗಳನ್ನು ಹೊಂದಿರುತ್ತವೆ. ಈ ಹಲವಾರು ರಾಸಾಯನಿಕಗಳು ಹಾರ್ಮೋನ್-ಸಂಬಂಧಿತ ಕ್ಯಾನ್ಸರ್, ಬಂಜೆತನ ಮತ್ತು ಎಡಿಎಚ್‌ಡಿ ಮತ್ತು ಸ್ವಲೀನತೆಯಂತಹ ನರಗಳ ಬೆಳವಣಿಗೆಯ ಅಸ್ವಸ್ಥತೆಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿವೆ.

ಜುಲೈ 1ರಿಂದ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ, ಕಠಿಣ ಕ್ರಮಕ್ಕೆ ಸರ್ಕಾರ ಸಜ್ಜು!

ಪ್ಲಾಸ್ಟಿಕ್‌ಗಳು ಮತ್ತು ಮೈಕ್ರೋಪ್ಲಾಸ್ಟಿಕ್‌ಗಳು ಪರಿಸರದಲ್ಲಿ ಬೆರೆತಾಗ, ಅವು ಹಾನಿಕಾರಕ ಬ್ಯಾಕ್ಟೀರಿಯಾ (ರೋಗಕಾರಕಗಳು) ನಂತಹ ಸೂಕ್ಷ್ಮ ಜೀವಿಗಳನ್ನು ಆಕರ್ಷಿಸುತ್ತವೆ. ಈ ರೋಗಕಾರಕಗಳನ್ನು ಹೊಂದಿರುವ ಮೈಕ್ರೋಪ್ಲಾಸ್ಟಿಕ್‌ಗಳು ನಮ್ಮ ದೇಹವನ್ನು ಪ್ರವೇಶಿಸಿದರೆ, ಅವು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಎಲ್ಲಾ ಜನರು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡುವುದನ್ನು ತಪ್ಪಿಸಬೇಕು ಮತ್ತು ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ಬಿದಿರು ಅಥವಾ ಗಾಜಿನ ಬಾಟಲಿಗಳನ್ನು ನೀರಿಗಾಗಿ ಬಳಸಬೇಕು ಎಂದು ತಜ್ಞರು ಸೂಚಿಸುತ್ತಾರೆ.

ಜುಲೈ 1ರಿಂದ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ
ಇನ್ನು ಮುಂದೆ ತರಕಾರಿ ಅಥವಾ ದಿನಸಿ ತರಲು ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಹಿಡಿದು ಹೊರಗೆ ಹೋಗುವಂತಿಲ್ಲ. ತೀವ್ರತರ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಏಕಬಳಕೆ (ಸಿಂಗಲ್‌ ಯೂಸ್‌) ಪ್ಲಾಸ್ಟಿಕ್‌ ದೇಶಾದ್ಯಂತ ಜು.1ರಿಂದ ನಿಷೇಧವಾಗಿದೆ. ಈ ಪ್ಲಾಸ್ಟಿಕ್‌ನ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಹಾಗೂ ಬಳಕೆ ಎಲ್ಲವನ್ನೂ ನಿಷೇಧಿಸಲಾಗಿದೆ. ಈ ಬಾರಿ ಕಟ್ಟುನಿಟ್ಟಾಗಿ ನಿಷೇಧ ಜಾರಿಗೊಳಿಸಲು ಆ್ಯಪ್‌, ಕಂಟ್ರೋಲ್‌ ರೂಮ್‌ಗಳು ಹಾಗೂ ವಿಶೇಷ ತಂಡಗಗಳನ್ನು ಕೇಂದ್ರ ಸರ್ಕಾರ ರಚಿಸಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..
ಮೊಟ್ಟೆ ಸೇವಿಸುವ ಮುನ್ನ ಎಚ್ಚರ.. ಜನಪ್ರಿಯ ಬ್ರಾಂಡ್‌ನಲ್ಲೇ ಕ್ಯಾನ್ಸರ್ ಕಾರಕ ಅಂಶ ಪತ್ತೆ!