ಚಳಿ ಅಂತ ಹೊದ್ದು ಮಲಗುವ ಬದಲು ವಾಕಿಂಗ್ ಮಾಡಿ, ಸ್ಟ್ರಾಂಗ್ ಆಗಿ

By Suvarna News  |  First Published Jan 31, 2024, 7:00 AM IST

ಚಳಿಗಾಲ ಬಂತೆಂದ್ರೆ ಸೋಮಾರಿತನ ಕಾಡುತ್ತೆ. ಚಳಿಗೆ ಚೆನ್ನಾಗಿ ನಿದ್ರೆ ಬರುವ ಕಾರಣ ಜನರು ವಾಕಿಂಗ್ ಹೋಗಲು ಮನಸ್ಸು ಮಾಡೋದಿಲ್ಲ. ನೀವೂ ಈ ಋತುವಿನಲ್ಲಿ ವಾಕಿಂಗ್ ಗೆ ಗೈರಾಗ್ತಿದ್ದರೆ ಇಂದಿನಿಂದ್ಲೇ ಅಟೆಂಡೆನ್ಸ್ ನೀಡಲು ಶುರು ಮಾಡಿ.  
 


 ಪ್ರತಿ ದಿನ ಬೆಳಿಗ್ಗೆ ಐದು ಗಂಟೆಗೆ ಎದ್ದು ಎಲ್ಲ ಕೆಲಸ ಮುಗಿಸಿ ವಾಕಿಂಗ್ ಹೋಗ್ತೇನೆ ಎನ್ನುವವರು ಕೂಡ ಚಳಿಗಾಲದಲ್ಲಿ ಸ್ವಲ್ಪ ಹಿಂದೇಟು ಹಾಕ್ತಾರೆ. ಮೈಕೊರೆಯುವ ಚಳಿಯಲ್ಲಿ ಹಾಸಿಗೆಯಿಂದ ಏಳೋದೇ ಬೇಸರ. ಇನ್ನು ಆ ಚಳಿಯಲ್ಲಿ ಪಾರ್ಕ್ ಅಥವಾ ರಸ್ತೆಯಲ್ಲಿ ವಾಕಿಂಗ್ ಮಾಡೋದು ಕಷ್ಟ ಕಷ್ಟ. ಸ್ವಲ್ಪ ಬಿಸಿಲು ಬಂದ್ಮೇಲೆ ವಾಕಿಂಗ್ ಮಾಡ್ತೇನೆ ಎನ್ನುವವರೇ ಹೆಚ್ಚು. ಅನೇಕರು ಚಳಿಗಾಲದಲ್ಲಿ ಮಾರ್ನಿಂಗ್ ವಾಕ್ ಮಾಡೋದೇ ಇಲ್ಲ. 

ಚಳಿ (Cold) ಎನ್ನುವ ಕಾರಣಕ್ಕೆ ನೀವೂ ವಾಕಿಂಗ್ (Walking) ನಿಲ್ಲಿಸಿದ್ದರೆ ಇಂದಿನಿಂದೇ ಮತ್ತೆ ಶುರು ಮಾಡಿ. ಚಳಿಗಾಲದಲ್ಲಿ ವಾಕಿಂಗ್ ಮಾಡೋದ್ರಿಂದ ಅನೇಕ ಪ್ರಯೋಜನಗಳಿವೆ. ಚಳಿಗಾಲದ ನಡಿಗೆ ನಮ್ಮ ದೇಹಕ್ಕೆ ಅದ್ಭುತ ಔಷಧ (Medicine) ಎಂದು ಹಾರ್ವರ್ಡ್ ಹೆಲ್ತ್ ಹೇಳಿದೆ. ಚಳಿಗಾಲದಲ್ಲಿ ಹೆಚ್ಚು ತೇವ ಮತ್ತು ತಣ್ಣನೆಯ ವಾತಾವರಣ ಇರುವ ಕಾರಣ ಮನಸ್ಸು ವ್ಯಾಯಾಮ, ವಾಕಿಂಗ್ ಬಯಸೋದಿಲ್ಲ. ಮನೆಯಲ್ಲಿ ಬೆಚ್ಚಗೆ ಇರೋಣ ಎನ್ನುವ   ಸೋಮಾರಿತನ ನಮ್ಮನ್ನು ಕಾಡುತ್ತದೆ. ಈ ಕಾರಣಕ್ಕೆ ನೀವು ಮನೆಯಲ್ಲಿ ಮಲಗಬೇಡಿ. ಚಳಿ ಇದ್ರೂ  ವಾಕಿಂಗ್ ಅನ್ನು ಮುಂದುವರೆಸಿ ಎಂದು ಹಾರ್ವರ್ಡ್ ಹೆಲ್ತ್ ಹೇಳಿದೆ.

Latest Videos

undefined

ಮಕ್ಕಳಿಗೆ ಕಾಯಿಲೆ; ದಯಾಮರಣ ಕೋರಲು ಕೇರಳದ ಐವರ ಕುಟುಂಬ ನಿರ್ಧಾರ

ಚಳಿಗಾಲದ ವಾಕಿಂಗ್ ನಲ್ಲಿವೆ ಬೆರಗುಗೊಳಿಸುವ ಪ್ರಯೋಜನ : ಇತ್ತೀಚೆಗೆ ಅನೇಕ ಮಂದಿ ಮಹಿಳೆಯರನ್ನು ಬಲಿ ತೆಗೆದುಕೊಂಡ ಕ್ಯಾನ್ಸರ್ ನಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದು. ಚಳಿಗಾಲದಲ್ಲಿ ಹೆಚ್ಚಿನ ಸಮಯ ವಾಕಿಂಗ್ ಮಾಡೋದ್ರಿಂದ ಸ್ತನ ಕ್ಯಾನ್ಸರ್ ಅನ್ನು ದೂರ ಮಾಡಬಹುದು. ಅಮೇರಿಕನ್ ಕ್ಯಾನ್ಸರ್ ಸೊಸೈಟಿ ನಡೆಸಿದ ಅಧ್ಯಯನದಲ್ಲಿ, ವಾರದಲ್ಲಿ ಮೂರು ಗಂಟೆ ಅಥವಾ ಅದಕ್ಕಿಂತ ಕಡಿಮೆ ನಡೆದವರಿಗಿಂತ, ಏಳು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ನಡೆದವರು ಪ್ರತಿಶತ 14ರಷ್ಟು ಕಡಿಮೆ ಸ್ತನ ಕ್ಯಾನ್ಸರ್ ಅಪಾಯವನ್ನು ಹೊಂದಿದ್ದಾರೆ ಎನ್ನುವುದು ತಿಳಿದುಬಂದಿದೆ.

 ಕಾಲು ನೋವು, ಸಂಧಿವಾತ, ಉರಿಯೂತ ಮುಂತಾದವು ಈಗಿನ ದಿನಗಳಲ್ಲಿ ಅನೇಕರನ್ನು ಕಾಡ್ತಿದೆ. ಈ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಹಳೆ ನೋವುಗಳು ಕಾಡುತ್ತವೆ. ಅಧ್ಯಯನಗಳ ಪ್ರಕಾರ, ಶೀತದ ವಾತಾವರಣದಲ್ಲಿ ವಾರಕ್ಕೆ 5-6 ಮೈಲುಗಳಷ್ಟು ದೂರ ವಾಕಿಂಗ್ ಮಾಡುವುದರಿಂದ ಮೂಳೆಗಳ ನೋವು, ಸಂಧಿವಾತವನ್ನು ತಡೆಯಬಹುದು. ಚಳಿಗಾಲದ ವಾಕಿಂಗ್ ಕೀಲುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅಸ್ಥಿಸಂಧಿವಾತಕ್ಕೆ ಒಳಗಾಗುವ ಮೊಣಕಾಲು, ಸೊಂಟವನ್ನು ರಕ್ಷಿಸುತ್ತದೆ. ಚಳಿಗಾಲದ ನಿಯಮಿತ ವಾಕಿಂಗ್ ಕೀಲುಗಳನ್ನು ನಯಗೊಳಿಸುತ್ತದೆ ಮತ್ತು ಬಲಪಡಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.

ವಾಕಿಂಗ್ ನಿಮ್ಮ ರೋಗ ನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಶೀತ (Cold) ಮತ್ತು ಜ್ವರ (Fever) ಹಾಗೂ ಇನ್ನಿತರ ಖಾಯಿಲೆಗಳಿಗೆ ಒಳಗಾಗದಂತೆ ನಮ್ಮನ್ನು ರಕ್ಷಿಸುತ್ತದೆ. ವಾಕಿಂಗ್ ನಿಂದ ರಕ್ತದ ಹರಿವು ಹೆಚ್ಚಾಗಿ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದ ಪ್ರತಿಕಾಯಗಳು ಬಲಗೊಳ್ಳುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.  

ನಾವು ಧರಿಸುವ ಬಟ್ಟೆಯಲ್ಲಿದೆ ನಮ್ಮ ಆರೋಗ್ಯ, ಸದ್ಗುರು ಹೇಳುವುದ ಕೇಳಿ

ಚಳಿಗಾಲದ ವಾಕಿಂಗ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಹೆಚ್ಚು ಸಿಹಿಯನ್ನು ತಿನ್ನಲು ಬಯಸುವವರು 15 ನಿಮಿಷ ವೇಗದ ನಡಿಗೆಯನ್ನು ಮಾಡಿದರೆ ಫುಡ್ ಕ್ರೇವಿಂಗ್ ಅನ್ನು ಕಡಿಮೆ ಮಾಡಿಕೊಳ್ಳಬಹುದು.

ಅನೇಕ ಮಂದಿಗೆ ಸ್ಥೂಲಕಾಯ ವಂಶಪಾರಂಪರ್ಯವಾಗಿ ಬಂದಿರುತ್ತದೆ. ಹೀಗೆ ಸ್ಥೂಲಕಾಯದ ಜೀನ್ ಗಳನ್ನು ಹೊಂದಿರುವವರು ನಿಯಮಿತವಾಗಿ ಒಂದು ಗಂಟೆಗಳ ವಾಕಿಂಗ್ ಮಾಡಿದರೆ ಅಂತಹ ಜೀನ್ ಗಳ ಪರಿಣಾಮ ಅರ್ಧದಷ್ಟು ಇಳಿಕೆಯಾಗುತ್ತದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧನೆಯಿಂದ ತಿಳಿದುಬಂದಿದೆ. ನಿಮ್ಮ ತೂಕ ಇಳಿಯಬೇಕೆಂದ್ರೆ ಚಳಿ ಭಯಬಿಟ್ಟು ಬೇಗ ಎದ್ದು ವಾಕಿಂಗ್ ಶುರು ಮಾಡಿ. 

click me!