ಬಹುತೇಕರು ಚೆಂದದ ಬಟ್ಟೆಗೆ ಆದ್ಯತೆ ನೀಡ್ತಾರೆ. ಬಟ್ಟೆಯನ್ನು ಯಾವುದರಿಂದ್ಲೇ ತಯಾರಿಸಿರಲಿ, ನಾವು ಸುಂದರವಾಗಿ ಕಾಣ್ತೀವಾ, ನಮಗೆ ಇದು ಹೊಂದುತ್ತಾ ಎಂಬುದನ್ನೇ ನೋಡ್ತಾರೆ. ಆದ್ರೆ ನೀವು ಧರಿಸುವ ಬಟ್ಟೆ ಬರೀ ನಿಮ್ಮ ಅಂದವನ್ನು ಮಾತ್ರವಲ್ಲ ಆರೋಗ್ಯವನ್ನೂ ನಿರ್ಧರಿಸುತ್ತದೆ.
ಇದು ಫ್ಯಾಷನ್ ಯುಗ. ಇಲ್ಲಿ ಬಟ್ಟೆ ಹಾಗೂ ಡಿಜಿಟಲ್ ಉಪಕರಣಗಳಿಗೆ ಇರುವಷ್ಟು ಪ್ರಾಮುಖ್ಯತೆ ಬಹುಶಃ ಬೇರೆ ಯಾವುದಕ್ಕೂ ಇರಲಿಕ್ಕಿಲ್ಲ. ಸಮಾಜಕ್ಕೆ ತಕ್ಕಂತೆ ಬಟ್ಟೆ ಧರಿಸುವುದು ಇಂದಿನವರ ರೂಢಿ. ದಿನೇ ದಿನೇ ಬರುವ ಹೊಸ ಹೊಸ ಬಗೆಯ ಡ್ರೆಸ್ ಗಳ ಹಿಂದೆ ಜನರು ಓಡುತ್ತಿದ್ದಾರೆ.
ಮನುಷ್ಯನ ದೇಹಕ್ಕೆ, ಬಣ್ಣಕ್ಕೆ, ಸ್ಟೈಲ್ ಗೆ ಹೊಂದಿಕೆಯಾಗುವಂತಹ ನಾನಾ ಬಗೆಯ ಬಟ್ಟೆ (Clothe)ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ನಾವು ಹಾಕುವ ಬಟ್ಟೆ ನಮಗೆ ಎಷ್ಟು ಆರಾಮ (Comfortable) ಎನಿಸುತ್ತದೆ ಅನ್ನೋದಕ್ಕಿಂತ ಹೆಚ್ಚು ಫ್ಯಾಷನ್ (Fashion) ಕಡೆಯೇ ಹೆಚ್ಚು ಗಮನ ಕೊಡುವ ಕಾಲವಿದು. ತೆಳ್ಳಗಿರುವವರು ದಪ್ಪಗೆ ಕಾಣುವಂತ ಬಟ್ಟೆಗಳನ್ನು ಧರಿಸುತ್ತಾರೆ. ದಪ್ಪಗೆ ಇರುವವರು ತೆಳ್ಳಗೆ ಕಾಣುವಂತಹ ಬಟ್ಟೆಯನ್ನು ಆರಿಸಿಕೊಳ್ಳುತ್ತಾರೆ. ಕುಳ್ಳಗಿರುವವರು ಎತ್ತರಕ್ಕೆ ಕಾಣುವಂತಹ ಬಟ್ಟೆಗಳನ್ನು ಧರಿಸುತ್ತಾರೆ. ಕೆಲವರು ಕಾಟನ್ ಬಟ್ಟೆಗಳನ್ನು ಧರಿಸಲು ಇಷ್ಟಪಟ್ಟರೆ, ಇನ್ಕೆಲವರು ಸಿಂಥೆಟಿಕ್ (Synthetic) ಬಟ್ಟೆಗಳನ್ನು ಇಷ್ಟಪಡುತ್ತಾರೆ. ಹೀಗೆ ನಾವು ಧರಿಸುವ ನಾನಾ ಬಗೆಯ ಬಟ್ಟೆಗಳು ನಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ವಿಷಯ ಅನೇಕರಿಗೆ ತಿಳಿದಿಲ್ಲ.
ರೋಹನ್ ಬೋಪಣ್ಣ ಟೆನಿಸ್ ಸಾಧನೆಗೆ ಕಾರಣವಾಯ್ತು ಅಯ್ಯಂಗಾರ್ ಯೋಗ
ನಾವು ಧರಿಸುವ ಬಟ್ಟೆ ನಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತೆ? : ನಾವು ಧರಿಸುವ ಬಟ್ಟೆಗಳು ನಮ್ಮ ಮಾನಸಿಕ ಹಾಗೂ ಶಾರೀರಿಕ ಆರೋಗ್ಯದಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ. ನಾವು ಒಳ್ಳೆಯ ಗುಣಮಟ್ಟದ ಬಟ್ಟೆಗಳನ್ನು ಧರಿಸುವುದರಿಂದ ಕ್ಯಾನ್ಸರ್ ನಂತಹ ಖಾಯಿಲೆಗಳಿಂದಲೂ ದೂರವಿರಬಹುದು. ನಾವು ಆರ್ಗ್ಯಾನಿಕ್ ಬಟ್ಟೆ ಧರಿಸುವುದಕ್ಕೂ ಸಿಂಥೆಟಿಕ್ ಬಟ್ಟೆಗಳನ್ನು ಧರಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಸದ್ಗುರು ಹೇಳಿದ್ದಾರೆ. ನಾವು ಉಡುವ ಬಟ್ಟೆಯೇ ನಮ್ಮ ದೇಹದ ಪ್ರತಿಯೊಂದು ಕಾರ್ಯವನ್ನೂ ನಿರ್ಧರಿಸುತ್ತದೆ. ಕಚ್ಚಾ ರೇಷ್ಮೆ ಬಟ್ಟೆ ಧರಿಸುವುದಕ್ಕೂ, ಹತ್ತಿಯ ಬಟ್ಟೆ ಧರಿಸುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ. ಯಾವುದು ನಿಮಗೆ ಹಿತ ಎನಿಸುತ್ತದೆ ಎಂದು ನೀವೇ ತೀರ್ಮಾನಿಸಬೇಕು. ದೇಹಕ್ಕೆ ಅಂಟಿಕೊಳ್ಳುವ ಬಟ್ಟೆಯ ಬದಲಾಗಿ ಸಡಿಲವಾದ ಆರಾಮ ಎನಿಸುವ ಬಟ್ಟೆಯನ್ನು ಧರಿಸಿ ನೋಡಿ ಎಂದು ಅವರು ಸಲಹೆ ನೀಡಿದ್ದಾರೆ.
ನೈಸರ್ಗಿಕ ಮತ್ತು ಜೈವಿಕ ವಸ್ತುಗಳಿಂದ ಮಾಡಿದ ಉಡುಪುಗಳು ನಮ್ಮ ನರಗಳ ಮೇಲೆ ಹಾಗೂ ರಕ್ತದೊತ್ತಡದ (Blood Pessure) ಮೇಲೆ ಆರೋಗ್ಯಕರ ಪರಿಣಾಮ ಬೀರುತ್ತವೆ. ನಾವು ಏನನ್ನು ತಿನ್ನುತ್ತೇವೆ, ಏನನ್ನು ಧರಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಹಾಗೇ ಹವಾಮಾನಕ್ಕೆ ತಕ್ಕ ಹಾಗೆ ನಮ್ಮ ಶರೀರಕ್ಕೆ ಹೊಂದಿಕೆಯಾಗುವಂತಹ ಬಟ್ಟೆಗಳನ್ನು ನಾವು ಧರಿಸಬೇಕು. ಆದರೆ ನಾವು ಫ್ಯಾಷನ್ ಕಡೆ ಹೆಚ್ಚು ಗಮನ ಹರಿಸುವುದರಿಂದ ನೈಸರ್ಗಿಕ ಉಡುಪುಗಳನ್ನು (Natural Dress) ಧರಿಸುವ ಬದಲು ಸಿಂಥೆಟಿಕ್ ಬಟ್ಟೆಗಳನ್ನು ಹೆಚ್ಚು ಹೆಚ್ಚು ಬಳಸುತ್ತಿದ್ದೇವೆ. ಇವು ನಮ್ಮ ಆರೋಗ್ಯದ ಮೇಲೆ ಹಾಗೂ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ಜಗ್ಗಿ ವಾಸುದೇವ್ ಹೇಳಿದ್ದಾರೆ.
ಪಿರಿಯಡ್ಸ್ ಡಿಲೇ ಮಾತ್ರೆ ತಗೋತಿದ್ದರೆ ಆರೋಗ್ಯಕ್ಕೆ ಕುತ್ತು ಬರೋದು ಗ್ಯಾರಂಟಿ!
ನಾವು ನಮಗೆ ಹಿತವಾಗುವ ಬಟ್ಟೆಯ ಹೊರತಾಗಿ ಯಾರು ಏನು ಹೇಳುತ್ತಾರೋ ಅಂತಹ ಬಟ್ಟೆಗಳನ್ನು ಧರಿಸುತ್ತೇವೆ ಅಥವಾ ಅನೇಕ ರೀತಿಯ ಜಾಹೀರಾತುಗಳಿಗೆ ಮರುಳಾಗುತ್ತಿದ್ದೇವೆ. ಕೆಲವೊಂದು ಸಂದರ್ಭದಲ್ಲಿ ನಾವು ಇನ್ನೊಬ್ಬರ ಒತ್ತಾಯಕ್ಕೆ ಮಣಿದು ನಮಗೆ ಇಷ್ಟವಾಗದ, ಸರಿಹೊಂದದ ಬಟ್ಟೆಯನ್ನು ಧರಿಸುತ್ತಿದ್ದೇವೆ. ಅದರ ಬದಲು ನಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿ, ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಉತ್ತಮ ಆರೋಗ್ಯವನ್ನು ನೀಡುವ ನೈಸರ್ಗಿಕ ಹಾಗೂ ಜೈವಿಕ ವಸ್ತುಗಳಿಂದ ತಯಾರಿಸಿದ ಬಟ್ಟೆಗಳನ್ನು ಧರಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದು ಜಗ್ಗಿ ವಾಸುದೇವ್ ಹೇಳಿದ್ದಾರೆ.