ಆರೋಗ್ಯ ಯಾಕೋ ಸರಿ ಇಲ್ವಾ? ಬೆಳಗ್ಗೆ ಎದ್ದ ಕೂಡಲೇ ಇವನ್ನು ಮಾಡೋದ ಮರೀಬೇಡಿ

By Suvarna News  |  First Published Nov 1, 2022, 5:36 PM IST

ಮನೆಯಲ್ಲೇ ಇದ್ದುಕೊಂಡು ವೈದ್ಯರ ಬಳಿಗೆ ಹೋಗದೆ ಕೆಲವು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಧನಿಯಾ ಬೀಜ ಇದಕ್ಕೆ ನೆರವಾಗುತ್ತದೆ. ದಿನವೂ ಬೆಳಗ್ಗೆ-ಸಂಜೆ ಧನಿಯಾ ನೀರು ಕುಡಿಯುವುದರಿಂದ ಮಧುಮೇಹ, ಕೊಬ್ಬು, ಚಿಂತೆ, ಆತಂಕಗಳು ದೂರವಾಗುತ್ತವೆ.
 


ಉತ್ತರ ಭಾರತದಿಂದ ದಕ್ಷಿಣ ಭಾರತದ ತುದಿಯವರೆಗೆ ವಿಭಿನ್ನ ಸಂಪ್ರದಾಯ ಕಂಡುಬಂದರೂ ನಮ್ಮ ಆಹಾರ ಪದಾರ್ಥಗಳಲ್ಲಿ ಕೆಲವನ್ನು ಸಮಾನವಾಗಿ ಬಳಕೆ ಮಾಡುವುದು ಕಂಡುಬರುತ್ತದೆ. ಅವುಗಳಲ್ಲಿ ಕೊತ್ತಂಬರಿ ಬೀಜ ಅಥವಾ ಧನಿಯಾಕ್ಕೆ ಅಗ್ರಸ್ಥಾನವಿದೆ. ಪ್ರತಿಮನೆಗಳಲ್ಲೂ ಒಂದಿಲ್ಲೊಂದು ರೂಪದಲ್ಲಿ ಪ್ರತಿದಿನ ಧನಿಯಾವನ್ನು ಬಳಕೆ ಮಾಡಲಾಗುತ್ತದೆ. ಆದರೆ, ಇದನ್ನು ಕೇವಲ ಒಂದು ಮಸಾಲೆ ಪದಾರ್ಥವನ್ನಾಗಿ ನೋಡುವುದು ಸರಿಯಲ್ಲ. ಧನಿಯಾದಲ್ಲಿರುವ ಅನೇಕ ಅಂಶಗಳು ಮಧುಮೇಹ ಮತ್ತು ಕೊಬ್ಬಿನ ಸಮಸ್ಯೆ ನಿವಾರಣೆಗೆ ನೆರವಾಗುತ್ತವೆ. ಚರ್ಮ ಹಾಗೂ ಕೂದಲ ತೊಂದರೆಗಳನ್ನು ನಿವಾರಿಸುತ್ತವೆ. ಅಧ್ಯಯನಗಳ ಪ್ರಕಾರ, ಧನಿಯಾದಲ್ಲಿ ಬಯೋಆಕ್ಟಿವ್ ಫೈಟೋಕೆಮಿಕಲ್ಸ್ ಸಮೃದ್ಧವಾಗಿರುತ್ತವೆ. ಹಾಗೂ ಆಂಟಿಆಕ್ಸಿಡಂಟ್ ಗಳು ಹೇರಳವಾಗಿರುತ್ತವೆ. ಇದರಿಂದ ಚಿಂತೆ, ಆತಂಕ, ಒತ್ತಡ, ಸುಸ್ತು, ಮೈಗ್ರೇನ್ ಮುಂತಾದ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಹಾಗೆಯೇ, ಆಂಟಿಮೈಕ್ರೊಬಿಯಲ್ ಮತ್ತು ಆಂಟಿಇನ್ ಫ್ಲಮೇಟರಿ ಅಂಶಗಳನ್ನೂ ಹೊಂದಿರುವ ಧನಿಯಾವನ್ನು ದಿನವೂ ನಿಯಮಿತವಾಗಿ ಬಳಕೆ ಮಾಡುವುದು ಆರೋಗ್ಯಕ್ಕೆ ಭಾರೀ ಉತ್ತಮ. ಮನೆಯಲ್ಲೇ ಇದ್ದುಕೊಂಡು ಅನೇಕ ಸಮಸ್ಯೆಗಳನ್ನು ಧನಿಯಾ ಬಳಕೆಯಿಂದ ದೂರ ಮಾಡಬಹುದು. ಹಾಗಿದ್ದರೆ ಇದರಿಂದ ಏನೆಲ್ಲ ಪ್ರಯೋಜನವಿದೆ ಎಂದು ಅರಿತುಕೊಳ್ಳಿ.  

·         ಧನಿಯಾ (Coriander) ನೀರಿನಲ್ಲಿ ಆಂಟಿಆಕ್ಸಿಡಂಟ್ಸ್ (Anti Oxidants)
ಧನಿಯಾ ಬೀಜ ಹಾಗೂ ಅದರಿಂದ ತಯಾರಿಸಿದ ನೀರಿನಲ್ಲಿ ಹೇರಳವಾಗಿ ಆಂಟಿಆಕ್ಸಿಡಂಟ್ಸ್ ಇರುತ್ತವೆ. ಇದೊಂದು ರೀತಿಯ ಪ್ರಾಕೃತಿಕ ಅಣು. ಇದು ನಮ್ಮ ದೇಹದಲ್ಲಿರುವ ಹಾನಿಕಾರಕ (Toxic) ಕಣಗಳನ್ನು ನಾಶ ಮಾಡುತ್ತದೆ. ಹೃದ್ರೋಗ (Heart Disease), ಕ್ಯಾನ್ಸರ್ (Cancer), ಪಾರ್ಶ್ವವಾಯು, ಉಸಿರಾಟದ ಸಮಸ್ಯೆ, ರೋಗನಿರೋಧಕ ಶಕ್ತಿ ಕುಗ್ಗುವುದು, ಪಾರ್ಕಿನ್ಸನ್ ಮುಂತಾದ ಸಮಸ್ಯೆಗಳ ಅಪಾಯವನ್ನು ಇದು ಕಡಿಮೆ ಮಾಡುತ್ತದೆ.

Tap to resize

Latest Videos

ಹೊತ್ತಿಲ್ಲದ ಹೊತ್ತಿಗೆ ಮಲಗಿದರೆ ಆರೋಗ್ಯಕ್ಕೆ ಕುತ್ತು, ಹಾಗಾದರೆ ಮಲಗಲು ಯಾವುದು ಬೆಸ್ಟ್ ಟೈಮ್?

·         ಚಿಂತೆ, ಸುಸ್ತು (Fatigue) ದೂರ
ಆಫ್ರಿಕಾದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ, ಧನಿಯಾದಿಂದ ಚಿಂತೆ, ಆತಂಕ (Anxiety) ಮತ್ತು ಸುಸ್ತು ದೂರವಾಗುತ್ತದೆ. ನಿದ್ರಾಹೀನತೆಯ (Sleep Disorder) ಸಮಸ್ಯೆ ಕಡಿಮೆಯಾಗುತ್ತದೆ. ಧನಿಯಾ ನೀರು ನೋವನ್ನು ಕಡಿಮೆಗೊಳಿಸಲು ಸಹಾಯಕವಾಗಿದ್ದು, ಮಾಂಸಖಂಡಗಳಿಗೆ (Muscles) ಹಿತ ನೀಡುತ್ತದೆ. ಆತಂಕ ಸೃಷ್ಟಿಸುವ ನರವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ.

·         ದೇಹಕ್ಕೆ ತಂಪು (Cold)
ಧನಿಯಾ ನೀರನ್ನು ಕುಡಿಯುವುದು ದೇಹಕ್ಕೆ ತಂಪು. ದೇಹ ಉಷ್ಣವಾದಾಗ ನಿದ್ರಾಹೀನತೆಯಂತಹ ಸಮಸ್ಯೆ ಉಂಟಾಗುವುದು ಸಾಮಾನ್ಯ. ಅಂತಹ ಸಮಯದಲ್ಲಿ ಧನಿಯಾ ನೀರನ್ನು ಕುಡಿದರೆ ತಂಪಾಗಿ, ಚೆನ್ನಾಗಿ ನಿದ್ರೆ ಬರುತ್ತದೆ. ಅಲ್ಲದೆ, ಕಿಡ್ನಿಯನ್ನು ವಿಷಮುಕ್ತಗೊಳಿಸುತ್ತದೆ. ಅಷ್ಟೇ ಅಲ್ಲ, ಗ್ಯಾಸ್ಟ್ರಿಕ್ (Gastric), ಆಸಿಡಿಟಿಗೂ ಪರಿಹಾರ ನೀಡುತ್ತದೆ.

ಬ್ರೇಕ್‌ಫಾಸ್ಟ್‌ಗೆ ಕಾರ್ನ್‌ಫ್ಲೇಕ್ಸ್‌ ತಿನ್ತೀರಾ, ತೂಕ ಹೆಚ್ಚಾಗುತ್ತೆ ಗೊತ್ತಿರ್ಲಿ

·         ಚರ್ಮ (Skin) ಮತ್ತು ಕೂದಲಿನ (Hair) ಮೇಲೆ ಚಮತ್ಕಾರ
ಧನಿಯಾದಲ್ಲಿರುವ ಕಬ್ಬಿಣಾಂಶ ಮತ್ತು ಆಂಟಿಫಂಗಲ್ (Anti Fungal), ಆಂಟಿಬ್ಯಾಕ್ಟೀರಿಯಲ್ ಅಂಶಗಳು ನಮ್ಮ ಚರ್ಮದ ಆರೋಗ್ಯಕ್ಕೆ ಪೂರಕವಾಗಿವೆ. ಚರ್ಮದ ಮೇಲೆ ಉಂಟಾಗುವ ವಿವಿಧ ಕಿರಿಕಿರಿ ದೂರಮಾಡುತ್ತವೆ. ಹಲವು ವಿಟಮಿನ್ ಗಳೂ ಇರುವುದರಿಂದ ಕೂದಲಿನ ಬಹಳಷ್ಟು ಸಮಸ್ಯೆಗಳು ದೂರವಾಗುತ್ತವೆ. ಕೂದಲು ಉದುರುವುದು ಕಡಿಮೆ ಆಗುತ್ತದೆ. ಹೊಸ ಕೂದಲು ಬೆಳೆಯುತ್ತವೆ. ಕೂದಲಿಗೆ ಹಾಕುವ ಎಣ್ಣೆಯೊಂದಿಗೆ ಧನಿಯಾವನ್ನೂ ಬೆರೆಸಿಕೊಳ್ಳುವುದರಿಂದ ಕೂದಲು ತುಂಡಾಗುವ ಸಮಸ್ಯೆ ಇರುವುದಿಲ್ಲ.  

ಧನಿಯಾ ನೀರು ಮಾಡೋದು ಹೇಗೆ?
ಧನಿಯಾ ನೀರನ್ನು ತಯಾರಿಸುವುದು ಸುಲಭ. ಎರಡು ಕಪ್ ನೀರನ್ನು ತೆಗೆದುಕೊಂಡು ಪಾತ್ರೆಗೆ ಹಾಕಿ ಅದಕ್ಕೆ ಒಂದು ಚಮಚ ಧನಿಯಾ ಬೀಜಗಳನ್ನು ಹಾಕಿ ಕುದಿಸಬೇಕು. ಈ ನೀರಿನ ಪ್ರಮಾಣ ಅರ್ಧಕ್ಕೆ ಬಂದಾಗ ಅಂದರೆ ಒಂದು ಲೋಟದ ಪ್ರಮಾಣಕ್ಕೆ ಇಳಿದಾಗ ಇಳಿಸಬೇಕು. ಬಳಿಕ, ಸ್ವಲ್ಪ ಆರಿಸಿಕೊಂಡು ಕುಡಿಯಬೇಕು. ಧನಿಯಾ ನೀರನ್ನು ದಿನವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ (Empty Stomach) ಕುಡಿಯುವುದು ಲಾಭಕರ. ಆದರೆ, ದಿನದ ಯಾವುದೇ ಸಮಯದಲ್ಲಾದರೂ ಸೇವನೆ ಮಾಡಿದರೂ ಸಮಸ್ಯೆ ಇಲ್ಲ.

click me!