ದೇಹದಲ್ಲಿ ಬಹಳ ನಿರ್ಲಕ್ಷಿಸುವ ಜಾಗ ಎಂದರೆ ಅದು ಮೊಣಕೈ ಮತ್ತು ಮೊಣಕಾಲು. ಅದಕ್ಕೆ ಯಾವುದೇ ರೀತಿಯ ಆರೈಕೆ ಮಾಡದೆ ಹಾಗೆ ಬಿಟ್ಟುಬಿಡುತ್ತೇವೆ. ಹಾಗಾಗಿ ಅದು ಇತರೆ ಭಾಗಗಳಿಗಿಂತ ಒರಟಾಗಿರುತ್ತವೆ ಹಾಗೂ ಗಾಢ ಕಪ್ಪುಬಣ್ಣದಲ್ಲಿರುತ್ತವೆ.
ನಮ್ಮ ದೇಹದ ಕೆಲ ಭಾಗಗಳು ಚರ್ಮದ ಬಣ್ಣಕ್ಕಿಂತ ಕಪ್ಪಾಗಿರುತ್ತವೆ. ಅಂದರೆ ಮೊಣಕೈ(Elbow), ಮೊಣಕಾಲುಗಳ(Knees) ಸುತ್ತಲಿನ ಚರ್ಮವು ಉಳಿದ ಭಾಗಕ್ಕಿಂತ ಹೆಚ್ಚು ಗಾಢವಾಗಿರುತ್ತದೆ. ಮೊಣಕೈಗಳು ಮತ್ತು ಮೊಣಕಾಲುಗಳಂತಹ ನಮ್ಮ ಕೀಲುಗಳ ಸುತ್ತಲಿನ ಚರ್ಮವು ನೆರಳು ಗಾಢವಾಗಿರುತ್ತದೆ. ಆದರೆ ಅದು ತುಂಬಾ ಗಾಢವಾಗಿ ಅಥವಾ ಒರಟಾಗಿ ಉಳಿಯಬೇಕು ಎಂದು ಅರ್ಥವಲ್ಲ. ಇತರೆ ಪ್ರದೇಶಗಳಿಗೆ ಹೆಚ್ಚಿನ ಗಮನ ಕೊಟ್ಟಷ್ಟು ಈ ಪ್ರದೇಶಗಳಿಗೆ ಗಮನ ಕೊಡುವುದಿಲ್ಲ ಎಂದು. ಅವುಗಳನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ. ಆದರೆ ಒಳ್ಳೆಯ ಭಾಗವೆಂದರೆ ಈ ಸಾಮಾನ್ಯ ಚರ್ಮದ ಸಮಸ್ಯೆಗಳನ್ನು ಸುಲಭವಾದ ಮನೆಮದ್ದುಗಳೊಂದಿಗೆ ಗಾಢಬಣ್ಣವನ್ನು ಹೋಗಲಾಡಿಸಬಹುದು. ಮೊಣಕೈ ಮತ್ತು ಮೊಣಕಾಲುಗಳಲ್ಲಿ ಆದಂತಹ ಕಪ್ಪು ಕಲೆಗಳನ್ನು ತೆಗೆದುಹಾಕಲು ಮಾರುಕಟ್ಟೆಯಲ್ಲಿ ಹಲವು ಕ್ರೀಮ್‌ಗಳಿವೆ ಎಂದರೂ ಅವು ಮನೆಯಲ್ಲಿ ಮಾಡುವ ಮದ್ದಿನಷ್ಟು ಪರಿಣಾಮಕಾರಿಯಾಗಿ ಇರುವುದಿಲ್ಲ. ಅಡುಗೆಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಸ್ಕçಬ್ ತಯಾರಿಸಿ ಹಚ್ಚುವುದರಿಂದ ಕೇವಲ ಒರಟುತನವನ್ನು ಹೋಗಲಾಡಿಸುವುದಲ್ಲದೆ ಅದಕ್ಕೆ ಬೇಕಾದ ಪೋಷಣೆಯನ್ನು ಒದಗಿಸುತ್ತದೆ.
ಕಪ್ಪು ಮೊಣಕೈ ಮತ್ತು ಮೊಣಕಾಲುಗಳಿಗೆ ಚಿಕಿತ್ಸೆ ನೀಡಲು ಮನೆಮದ್ದುಗಳು ಇಲ್ಲಿವೆ
1. ತೆಂಗಿನಕಾಯಿ, ಬಾದಾಮಿ, ಅಥವಾ ಎಳ್ಳಿನ ಎಣ್ಣೆ
ಒರಟಾದ ಮೊಣಕೈ ಮತ್ತು ಮೊಣಕಾಲುಗಳನ್ನು ಹೊಂದಿದ್ದರೆ, ಕೀಲುಗಳ ಪೋಷಣೆಯ ಕೊರತೆಯಾಗಿರುತ್ತದೆ. ನೈಸರ್ಗಿಕ ತೆಂಗಿನಕಾಯಿ(Coconut Oil), ಬಾದಾಮಿ(Badam Oil) ಅಥವಾ ಎಳ್ಳಿನ ಎಣ್ಣೆಯನ್ನು ಹಚ್ಚುವ ಮೂಲಕ ಸರಿಯಾದ ರೀತಿಯ ಕಾಳಜಿಯನ್ನು ನೀಡಿ. ಮಲಗುವ ಮುನ್ನ ಎಣ್ಣೆಯನ್ನು ಹಚ್ಚಿ ಮತ್ತು ಆ ಜಾಗವನ್ನು ಚೆನ್ನಾಗಿ ಮಸಾಜ್ ಮಾಡಿ. ಈ ತೈಲಗಳು ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಆ ಜಾಗಕ್ಕೆ ಪೋಷಣೆಯನ್ನು ಒದಗಿಸುತ್ತದೆ ಮತ್ತು ಒರಟುತನವನ್ನು ಕಡಿಮೆ ಮಾಡುತ್ತದೆ.
ಚಳಿ ಅಂದ್ರೆ ಚರ್ಮ ಒರಟಾಗೋದು ಕಾಮನ್ ಬಿಡಿ, ಆದರೆ ಹೀಗ್ ಕಾಪಾಡಿಕೊಳ್ಳಿ
undefined
2. ಅಲೋವೆರಾ ಜೆಲ್ (Alovera Gell)
ಕೀಲುಗಳಿಗೆ ಸರಿಯಾದ ಪೋಷಣೆ ಮತ್ತು ಆರೈಕೆಯು ಕೆಲ ಸಂದರ್ಭದಲ್ಲಿ ಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಅಲೋವೆರಾ ಜೆಲ್ ಅನ್ನು ಹಚ್ಚಿ. ನೈಸರ್ಗಿಕ ಅಲೀವೆರಾ ಜೆಲ್ ಅನ್ನು ನಿಯಮಿತವಾಗಿ ಬಳಸುವುದರಿಂದ ಮೊಣಕೈ ಮತ್ತು ಮೊಣಕಾಲುಗಳನ್ನು ಸುತ್ತಲಿನ ಕಪ್ಪು ಹೋಗುತ್ತದೆ. ತಾಜಾ ಅಲೋವೆರಾ ಪೇಸ್ಟ್ ಅನ್ನು ಹಚ್ಚುದರೆ ಇನ್ನಷ್ಟು ಉತ್ತಮ ಫಲಿತಾಂಶ ಕಾಣಬಹುದು. ಪೇಸ್ಟ್ ಅನ್ನು ಹಚ್ಚಿ 30ರಿಂದ 35 ನಿಮಿಷಗಳ ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ.
3.ಅರಿಶಿನ, ಹಾಲು ಮತ್ತು ಜೇನು (Turmeric, Milk, Honey)
ಆಯುರ್ವೇದದಲ್ಲಿ ಅರಿಶಿಣಕ್ಕೆ ಬಹಳ ಮಹತ್ವ ನೀಡಲಾಗುತ್ತದೆ. ಇದರಲ್ಲಿ ನೈಸರ್ಗಿಕವಾದ ಆಂಟಿಸೆಪ್ಟಿಕ್ ಗುಣವಿದೆ. ಇದು ಗಾಢವಾದ ಅಥವಾ ಒರಟಾದ ಮೊಣಕೈಗಳು ಮತ್ತು ಮೊಣಕಾಲಿನ ಮೇಲೆ ಹಚ್ಚಬೇಕು. 1 ಚಮಚ ಅರಿಶಿಣ, ಜೇನುತುಪ್ಪ ಮತ್ತು 2 ಚಮಚ ಹಾಲು ಹಾಕಿ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿ ಕಪ್ಪು ಬಣ್ಣದ ಜಾಗಕ್ಕೆ ಹಚ್ಚಿ. ಈ ಪೇಸ್ಟ್ ಕನಿಷ್ಠ 30 ನಿಮಿಷಗಳ ಕಾಲ ಇರಬೇಕು. ನಂತರ ಅದನ್ನು ತಣ್ಣೀರಿನಿಂದ ತೊಳೆದು ಒಣಗಲು ಬಿಡಿ. ಉತ್ತಮ ಫಲಿತಾಂಶಕ್ಕೆ ವಾರಕ್ಕೊಮ್ಮೆಯಾದರೂ ಈ ರೀತಿ ಮಾಡಿ.
4. ಮೊಸರು ಮತ್ತು ವಿನೆಗರ್(Yogurt And Vinegar)
1 ಚಮಚ ಮೊಸರು ಮತ್ತು 1 ಚಮಚ ವಿನೆಗರ್ ತೆಗೆದುಕೊಳ್ಳಿ. ಈ ಎರಡು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಉತ್ತಮವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಮೊಣಕೈ ಮತ್ತು ಮೊಣಕಾಲು ಪ್ರದೇಶದಲ್ಲಿ ಈ ನೈಸರ್ಗಿಕ ಸ್ಕ್ರಬ್ ಬಳಸಿ. ಈ ಸ್ಕ್ರಬ್ ಹಚ್ಚಿ 30 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದು ಒಣಗಲು ಬಿಡಿ.
Beauty Tips: ಇದ್ದಿಲಿನ ಮಾಸ್ಕ್ನಲ್ಲಿ ಅಡಗಿದೆ ತ್ವಚೆಯ ಸೌಂದರ್ಯ
5. ಸಕ್ಕರೆ ಮತ್ತು ಆಲಿವ್ ಆಯಿಲ್ ಸ್ಕ್ರಬ್ (Sugar And Olive oil Scrub)
ಸಕ್ಕರೆಯು ಉತ್ತಮ ನೈಸರ್ಗಿಕ ಚರ್ಮದ ಎಕ್ಸ್ಫೋಲಿಯಂಟ್(Exfoliation) ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆಲಿವ್ ಎಣ್ಣೆಯು ಎಲ್ಲಾ ಪೋಷಣೆಯ ಗುಣಗಳನ್ನು ಹೊಂದಿದೆ. 1 ಚಮಚ ಪುಡಿ ಮಾಡಿದ ಸಕ್ಕರೆ ಮತ್ತು 1 ಚಮಚ ಆಲಿವ್ ಎಣ್ಣೆಯನ್ನು ಚೆನ್ನಾಗಿ ಕಲಸಿ. ಈ ಎರಡು ನೈಸರ್ಗಿಕ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಅವುಗಳನ್ನು ಪೀಡಿತ ಪ್ರದೇಶಕ್ಕೆ ಹಚ್ಚಿ. ಈ ಸ್ಕçಬ್ ಕನಿಷ್ಠ 30-35 ನಿಮಿಷಗಳ ಹಾಗೆ ಇರಲಿ. ನಂತರ ತಣ್ಣೀರಿನಿಂದ ತೊಳೆಯಿರಿ.
6. ಸಕ್ಕರೆ, ನಿಂಬೆ, ಮತ್ತು ಜೇನುತುಪ್ಪದ ಸ್ಕ್ರಬ್ (Sugar, Lemon, Honey Scrub)
1 ಚಮಚ ಪುಡಿ ಮಾಡಿದ ಸಕ್ಕರೆ, 1 ಚಮಚ ನಿಂಬೆ ಮತ್ತು 1 ಚಮಚ ನೈಸರ್ಗಿಕ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಕಲಸಿ. ಮೊಣಕೈ ಮತ್ತು ಮೊಣಕಾಲುಗಳ ಮೇಲೆ ಪೇಸ್ಟ್ ಅನ್ನು ಹಚ್ಚಿ. ಈ ಪದಾರ್ಥಗಳು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳಾಗಿ(Bleaching agent) ಕಾರ್ಯನಿರ್ವಹಿಸುತ್ತವೆ ಮತ್ತು ಈ ಪ್ರದೇಶಗಳಲ್ಲಿನ ಕಪ್ಪು ಕಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.