Lower Back Pain: ಸೊಂಟದ ನೋವು ಅಬ್ಬಬ್ಬಾ ಬೇಡ್ವೇ ಬೇಡ, ಅದ್ಯಾಕೆ ಮಹಿಳೆಯರನ್ನ ಕಾಡುತ್ತೆ?

By Suvarna News  |  First Published May 22, 2023, 5:31 PM IST

ಸೊಂಟದ ನೋವನ್ನು ಒಮ್ಮೆಯಾದರೂ ಅನುಭವಿಸದ ಮಹಿಳೆಯರು ಇರಲಿಕ್ಕಿಲ್ಲ. ವಿಟಮಿನ್‌ ಡಿ ಕೊರತೆ, ಜೀವನಶೈಲಿ, ಬೊಜ್ಜು, ಮೆನೋಪಾಸ್.‌ ಆಸ್ಟಿಯೋಪೊರೊಸಿಸ್‌ ಸೇರಿದಂತೆ ಹಲವು ಕಾರಣಗಳಿಂದ ಮಹಿಳೆಯರಲ್ಲಿ ಸೊಂಟದ ನೋವು ಉಂಟಾಬಹುದು.
 


ಸೊಂಟ ನೋವಿನ ಅನುಭವ ಬಹುತೇಕ ಮಹಿಳೆಯರಿಗೆ ಇರುತ್ತದೆ. 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸೊಂಟ ನೋವು ಅತಿ ಸಾಮಾನ್ಯ. ಒಂದು ಅಧ್ಯಯನದ ಪ್ರಕಾರ, ಸೊಂಟ ನೋವು ಪುರುಷರಿಗಿಂತ ಮಹಿಳೆಯರಲ್ಲೇ ಅಧಿಕ. ಅಷ್ಟಕ್ಕೂ ಇದು ಯಾವುದೇ ವಯಸ್ಸಿನಲ್ಲೂ ಬರಬಹುದು, ಆದರೆ, ನಲ್ವತ್ತರ ಮೇಲ್ಪಟ್ಟು ಸಾಮಾನ್ಯ. ಪೀರಿಯೆಡ್ಸ್‌ ಅಥವಾ ಗರ್ಭಾವಸ್ಥೆಯಲ್ಲ್ಲೂ ಸೊಂಟ ನೋವು ಅತಿ ಹೆಚ್ಚು. ಬದಲಾದ ಜೀವನಶೈಲಿ ಮತ್ತು ಅಸಮತೋಲನದ ಆಹಾರದಿಂದಾಗಿ ಸೊಂಟ ನೋವಿನ ಸಮಸ್ಯೆ ಬಹಳಷ್ಟು ಮಹಿಳೆಯರಲ್ಲಿ ಕಂಡುಬರುತ್ತದೆ. ಇದರ ಹೊರತಾಗಿ ಇನ್ನಿತರ ಸಾಕಷ್ಟು ಕಾರಣಗಳೂ ಇರಬಹುದು. ಸೊಂಟ ನೋವಿನಿಂದ ಬಚಾವಾಗಲು ಮಹಿಳೆಯರು ಹಲವು ರೀತಿಯ ಔಷಧ, ತೈಲಗಳ ಮೊರೆ ಹೋಗುವುದು ಸಾಮಾನ್ಯವಾಗಿ ಕಾಣುತ್ತದೆ. ಆದರೆ, ಇವು ತಾತ್ಕಾಲಿಕ. ಸೊಂಟ ನೋವಿನ ಮೂಲ ಕಾರಣ ಗುರುತಿಸದ ಹೊರತು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಇತ್ತೀಚೆಗಂತೂ ಕಡಿಮೆ ವಯಸ್ಸಿನವರಿಗೂ ಸೊಂಟ ನೋವು ಕಂಡುಬರುತ್ತಿರುವುದು ಆತಂಕದ ಸಂಗತಿ. ಸೊಂಟದ ಮಾಂಸಖಂಡಗಳಲ್ಲಿ ಸೆಳೆತ, ನೋವು ಉಂಟಾಗುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು.

•    ಗರ್ಭಾವಸ್ಥೆ (Pregnancy)
ಸಾಮಾನ್ಯವಾಗಿ ಗರ್ಭ ಧರಿಸಿದ ಸಮಯದಲ್ಲಿ ಹಲವು ಮಹಿಳೆಯರು (Woma) ಈ ಸಮಸ್ಯೆ ಎದುರಿಸುತ್ತಾರೆ. ಸೊಂಟದ ಕೆಳಗೆ ಈ ನೋವು ಉಂಟಾಗುತ್ತದೆ. 5ನೇ ತಿಂಗಳ ಬಳಿಕ ಬೆನ್ನುಹುರಿಯ ತಳಭಾಗದಲ್ಲಿ ನೋವು ಕಂಡುಬರುತ್ತದೆ. ಆ ಬಳಿಕ ನೋವು (Pain) ಹೆಚ್ಚಾಗಬಹುದು. ಇದರಿಂದಾಗಿ ಸಾಕಷ್ಟು ತೊಂದರೆಯಾಗಬಲ್ಲದು. ಸೂಕ್ತವಾಗಿ ನಿಭಾಯಿಸುವುದು ಮುಖ್ಯ. ಸೊಂಟ ನೋವಿಗೆ (Lower Back Pain) ಪರಿಹಾರ ಪಡೆಯಲು ಸರಳ ಯೋಗ (Yoga), ಧ್ಯಾನಗಳು ಪರಿಣಾಮಕಾರಿ.

Tap to resize

Latest Videos

ಉದ್ಯೋಗಸ್ಥ ಮಹಿಳೆಯರಿಗೆ ಪಿರಿಯಡ್ಸ್ ಲೀವ್ ನೀಡಬೇಕೆ? ಬೇಡವೇ? ಏನಂತೀರಿ

•    ಆಸ್ಟಿಯೋಪೊರೊಸಿಸ್‌ (Osteoporosis)
40 ವರ್ಷಗಳ ಬಳಿಕ ಮಹಿಳೆಯರಲ್ಲಿ ಈಸ್ಟ್ರೋಜೆನ್‌ (Estrogen) ಹಾರ್ಮೋನ್‌ ಸ್ರವಿಕೆ ಕಡಿಮೆಯಾಗುತ್ತದೆ. ಇದರಿಂದಾಗಿ ಪ್ರಿ-ಮೆನೋಪಾಸ್‌ (Pre Menopause) ಗೆ ತುತ್ತಾಗುತ್ತಾರೆ. ಈಸ್ಟ್ರೋಜೆನ್‌ ಹಾರ್ಮೋನ್‌ ಕೊರತೆ ಮೂಳೆಗಳ (Bones) ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗೆಯೇ, ವಯಸ್ಸಾಗುತ್ತಿದ್ದಂತೆ ಸ್ಟಾಂಡಿಲೈಟಿಸ್‌, ಸ್ಪೈನಲ್‌ ಸ್ಟೆನೋಸಿಸ್‌ ಮತ್ತು ಡಿಜನರೇಟಿವ್‌ ಡಿಸ್ಕ್‌ ಇತ್ಯಾದಿ ಕಾರಣಗಳಿಂದ ಸೊಂಟದ ನೋವು ಕಂಡುಬರಬಹುದು. 

•    ಬೊಜ್ಜು (Obesity)
ದೇಹದ ತೂಕ (Weight) ಅತಿಯಾಗಿರುವಾಗ ಸೊಂಟದ ನೋವಿನ ಸಮಸ್ಯೆಯೂ ಹೆಚ್ಚು. ಬೊಜ್ಜುತನ ಉಂಟಾಗದಿರಲು ಮಹಿಳೆಯರು ಸೂಕ್ತ ಆಹಾರ ಪದ್ಧತಿ (Food Style), ಜೀವನಶೈಲಿ ಅನುಸರಿಸುವುದು ಭಾರೀ ಮುಖ್ಯ. ಕುಳಿತುಕೊಳ್ಳುವಾಗ ಬೆನ್ನುಹುರಿಯನ್ನು ನೇರವಾಗಿ ಇರಿಸಿಕೊಳ್ಳಬೇಕು. ಇದರ ಜತೆಗೆ, ದಿನವೂ ವ್ಯಾಯಾಮ ಮಾಡಬೇಕು. ಬೊಜ್ಜು ಹೆಚ್ಚುವ ಆಹಾರ ವರ್ಜಿಸಬೇಕು. ವಿಟಮಿನ್‌ ಡಿ ಮತ್ತು ಕ್ಯಾಲ್ಸಿಯಂ (Calcium) ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ನಿಯಂತ್ರಣ ತಂದುಕೊಂಡರೆ ಬೊಜ್ಜಿನ ಸಮಸ್ಯೆ ಬಹಳಷ್ಟು ಪ್ರಮಾಣದಲ್ಲಿ ಕಡಿಮೆ ಆಗುವುದು ನಿಶ್ಚಿತ.

ಸೆಕ್ಸ್‌ ಅಂದ್ರೆ ಹಲವರಿಗೆ ಖುಷಿಗಿಂತ ನೋವೇ ಹೆಚ್ಚು!

•    ಜೀವನಶೈಲಿ (Lifestyle)
ಜೀವನಶೈಲಿಗೂ ಸೊಂಟ ನೋವಿಗೂ ಏನು ಸಂಬಂಧ ಅನ್ನಿಸಬಹುದು. ಸಾಮಾನ್ಯವಾಗಿ ಮಹಿಳೆಯರು ವ್ಯಾಯಾಮ ಮಾಡುವುದು ಕಡಿಮೆ. 40ರ ಮೇಲ್ಪಟ್ಟು ವ್ಯಾಯಾಮ (Exercise) ಮಾಡುವುದು ಅತಿ ವಿರಳ. ಇದರಿಂದಾಗಿ ಇವರ ಜೀವನಶೈಲಿಯೂ ಕೆಟ್ಟ ಮಾರ್ಗದಲ್ಲಿ ಸಾಗುತ್ತದೆ. ಕ್ರೇವಿಂಗ್ಸ್‌ (Cravings) ಅಂದರೆ ಒತ್ತಡವಾದಾಗ ಕರಿದ ತಿನಿಸು, ಬೇಕರಿ ತಿಂಡಿಗಳನ್ನು ಸೇವಿಸುವ ಬಯಕೆ ಹೆಚ್ಚುತ್ತದೆ. ಹಾರ್ಮೋನ್‌ (Hormones) ಬದಲಾವಣೆಯಿಂದ ದೇಹದಲ್ಲಿ ವ್ಯತ್ಯಾಸವಾಗುತ್ತದೆ. ಬೊಜ್ಜು ಹೆಚ್ಚುತ್ತದೆ. ಸುಸ್ತೆನಿಸುತ್ತದೆ. ನಿದ್ರೆ ಕಡಿಮೆಯಾಗಬಹುದು. ವಿಟಮಿನ್‌ ಡಿ ಕೊರತೆಯಿಂದ ಮೂಳೆಗಳಲ್ಲಿ ನೋವು ಉಂಟಾಗಬಹುದು. ಇವೆಲ್ಲವೂ ಸೊಂಟದ ನೋವಿಗೆ ಕಾರಣವಾಗುತ್ತವೆ.

•    ಮೆನೋಪಾಸ್‌ (Menopause)
ಮೆನೋಪಾಸ್‌ ಹಂತದಲ್ಲಿರುವ ಮಹಿಳೆಯರಿಗೆ ಸೊಂಟದ ನೋವು ಅತಿ ಸಾಮಾನ್ಯ. ಮಹಿಳೆಯರ ದೇಹ ಪ್ರತಿ ಹತ್ತು ವರ್ಷಕ್ಕೊಮ್ಮೆ ಗಮನಾರ್ಹ ಬದಲಾವಣೆಗೆ (Change) ಸಾಕ್ಷಿಯಾಗುತ್ತದೆ. ಮೆನೋಪಾಸ್‌ ಸಮಯದಲ್ಲಿ ಅನೇಕ ರೀತಿಯ ದೈಹಿಕ (Physical) ಸಮಸ್ಯೆಗಳು ಹೆಚ್ಚಬಹುದು. ಕಾರಣವೇ ಇಲ್ಲದೆ ಏನಾದರೊಂದು ಸಮಸ್ಯೆ ಕಾಡುತ್ತಲೇ ಇರಬಹುದು. ಸೊಂಟದ ನೋವು ಸಹ ಇವುಗಳಲ್ಲಿ ಒಂದು.

click me!