Ayurvedic Tips for Dark Spots: ಮುಖದಲ್ಲಿ ಕಪ್ಪು ಕಲೆಗಳಾ? ಆಯುರ್ವೇದ ವೈದ್ಯೆ ಡಾ.ಗೌರಿ ಹೇಳಿದ ಟಿಪ್ಸ್​ ಕೇಳಿದ್ರೆ ಫಳಫಳ...

Published : Jun 04, 2025, 12:36 PM ISTUpdated : Jun 04, 2025, 12:47 PM IST
Ayurvedic tips for dark spots

ಸಾರಾಂಶ

ಯಾವ್ಯಾವುದೋ ಕಾರಣಗಳಿಂದ ಮುಖದ ಮೇಲೆ ಹಾಗೂ ದೇಹದ ಇತರ ಭಾಗಗಳಲ್ಲಿಕಪ್ಪು ಕಲೆಗಳು, ಕಪ್ಪು ಮಚ್ಚೆಗಳಾಗುವುದು ಸಹಜ. ಅವುಗಳ ಮೇಲೆ ಯಾವ್ಯಾವುದೋ ಕ್ರೀಮ್​ ಹಚ್ಚುವ ಬದಲು ಈ ಸುಲಭದ ಸಲಹೆ ಕೇಳಿ...

ಚರ್ಮಕ್ಕೆ ಸಂಬಂಧಪಟ್ಟ ಹಾಗೆ ಇನ್ನು ಸಾಕಷ್ಟು ಸಮಸ್ಯೆಗಳು ಇರುತ್ತವೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ತ್ವಚೆಯ ಸೌಂದರ್ಯಕ್ಕೆ ಎನ್ನುತ್ತಲೇ ಸಹಸ್ರಾರು ಬಗೆಯ ಕ್ರೀಂ, ಲೋಷನ್​ಗಳು ಬಂದಿವೆ. ಆದರೆ ಅವುಗಳನ್ನು ಅತಿಯಾಗಿ ಬಳಕೆ ಮಾಡಿದರೆ ಚರ್ಮದ ಕ್ಯಾನ್ಸರ್​ ಕೂಡ ಬರುವ ಸಾಧ್ಯತೆ ಇದೆ ಎಂದು ಇದಾಗಲೇ ಹಲವು ಅಧ್ಯಯನಗಳು ಹೇಳಿವೆ. ಆದರೂ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡಿರುವ ಈ ಜಗತ್ತಿನಲ್ಲಿ ಸುಂದರರಾಗಿ ಕಾಣಲು ಏನೆಲ್ಲಾ ಸರ್ಕಸ್​ ಮಾಡುವವರು ಇದ್ದಾರೆ. ಯಾವುದೇ ನಟ-ನಟಿಯರು ಜಾಹೀರಾತಿನಲ್ಲಿ ಕಾಣಿಸಿಕೊಂಡು ಹಚ್ಚಿಕೊಳ್ಳುವ ಕ್ರೀಮ್​ಗಳನ್ನು ಖರೀದಿ ಮಾಡಿ ಇನ್ನಿಲ್ಲದ ಸಮಸ್ಯೆಗಳನ್ನು ತಂದುಕೊಳ್ಳುವವರು ಇದ್ದಾರೆ. ಹೀಗೆ ಜಾಹೀರಾತಿನಲ್ಲಿ ಬರುವ ನಟ-ನಟಿಯರು ಕಂಪೆನಿಗಳಿಂದ ಲಕ್ಷನೋ, ಕೋಟಿನೋ ಹಣ ಪಡೆದು ಮುಖಕ್ಕೆ ಕ್ರೀಮ್​ ಬಳಿದುಕೊಳ್ಳುವಂತೆ ಪರದೆಯ ಮೇಲೆ ತೋರಿಸುತ್ತಾರೆಯೇ ವಿನಾ ಅದು ನಿಜವಲ್ಲ ಎನ್ನುವುದು ಎಷ್ಟೋ ಜನಕ್ಕೆ ಗೊತ್ತಾಗುವುದೇ ಇಲ್ಲ.

ಸುಮಾರು ಜನಕ್ಕೆ ಮುಖದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕೆ ಕಾರಣಗಳು ಹಲವಾರು ಇರಬಹುದು. ಮೊಡವೆ ಬಂದಾಗಲೂ ಕಪ್ಪು ಕಲೆಗಳು ಉಳಿಯುತ್ತೆ ಅಥವಾ ಕೆಲವೊಮ್ಮೆ ಈ ಗಾಯಗಳಾದಾಗ ವಾಸಿಯಾದರೂ ಕಪ್ಪು ಕಲೆ ಇರುತ್ತವೆ. ಸೆನ್ಸಿಟಿವ್ ಸ್ಕಿನ್ ಇದ್ದವರಲ್ಲಿ ಈ ಸಮಸ್ಯೆ ಹೆಚ್ಚು. ಆ ತರದವರಿಗೆ ಆ ಮಚ್ಚೆಗಳು ಹೋಗೋದೇ ಇಲ್ಲ. ಸಾಕಷ್ಟು ಜನರಿಗೆ ಇದು ಕಿರಿಕಿರಿ ಉಂಟು ಮಾಡುತ್ತದೆ. ಮುಖ ಮಾತ್ರವಲ್ಲದೇ, ಶರೀರದ ಇನ್ಯಾವುದೇ ಭಾಗದಲ್ಲಿ ಕಪ್ಪು ಕಲೆ ಇದ್ದರೂ ಕೂಡ ಒಂದು ರೀತಿ ಮನಸ್ಸಿಗೆ ಏನೋ ಹಿಂಸೆ ಆಗುತ್ತಿರುತ್ತದೆ. ಮನೆಯಲ್ಲಿಯೇ ಸಿಗುವ ಗಿಡ ಮೂಲಿಕೆಗಳು, ತರಕಾರಿಗಳಿಂದ ಕೆಲವೊಂದು ಚರ್ಮದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಅಷ್ಟಕ್ಕೂ ಜಾಹೀರಾತುಗಳಲ್ಲಿಯೂ ಆ ಗಿಡ ಮೂಲಿಕೆಗಳ ಹೆಸರುಗಳನ್ನು ಬಳಸಿಕೊಂಡೇ ಪ್ರಚಾರ ಮಾಡ್ತಿರೋದು ಎನ್ನುವುದೂ ನೆನಪಿರಲಿ. ಆದರೆ ಅಲ್ಲಿ ಹಾಕುವುದು ರಾಸಾಯನಿಕ ಎನ್ನುವುದೂ ನೆನಪಿಟ್ಟುಕೊಂಡರೆ ಒಳ್ಳೆಯದು. ಹಾಗಿದ್ದರೆ ಚರ್ಮದಲ್ಲಿ ಉಂಟಾಗುವ ಕಪ್ಪು ಕಲೆಗಳ ನಿವಾರಣೆಗೆ ಮನೆಯಲ್ಲಿಯೇ ಏನಾದ್ರೂ ಪರಿಹಾರ ಇದ್ಯಾ ಎಂದು ನೀವು ಕೇಳುತ್ತಿದ್ದರೆ ಅದಕ್ಕೆ ಖ್ಯಾತ ಆಯುರ್ವೇದ ವೈದ್ಯೆಯಾಗಿರುವ ಡಾ.ಗೌರಿಯಮ್ಮ ಅವರು ಈ ಪರಿಹಾರ ಹೇಳಿದ್ದಾರೆ ಕೇಳಿ.

ನಿಂಬೆಹಣ್ಣಿನ ಸಿಪ್ಪೆ;

ನಿಂಬೆಹಣ್ಣನ್ನು ಹಿಂಡಿದ ಮೇಲೆ ಸಿಪ್ಪೆಯನ್ನು ತೆಗೆದು ಇಟ್ಟುಕೊಳ್ಳಿ. ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಅದರ ಜೊತೆಗೆ ಸೌತೆಕಾಯಿಯ ಸಿಪ್ಪೆಯನ್ನು ಮಾತ್ರ ತೆಗೆದುಕೊಂಡು ಚೆನ್ನಾಗಿ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನೀರು ಹೆಚ್ಚಿಗೆ ಹಾಕಬಾರದು. ಇವೆರಡನ್ನು ರುಬ್ಬಿಕೊಂಡು ಇದನ್ನ ಒಂದು ರೀತಿ ಪೇಸ್ಟ್ ರೀತಿಯಲ್ಲಿ ಮಾಡಿ ಇಟ್ಕೊಳ್ಳಿ. ಆ ಪೇಸ್ಟ್ ಅನ್ನ ಯಾವ ಭಾಗದಲ್ಲಿ ನಿಮಗೆ ಹೆಚ್ಚಿನ ಕಪ್ಪು ಕಲೆಗಳಿದೆ ಅಥವಾ ಮುಖದಲ್ಲಿ ಇದ್ದದ್ದೆ ಆದ್ರೆ ಮುಖದ ಆ ಕಲೆ ಇರತಕ್ಕಂತಹ ಜಾಗಕ್ಕೆ ಸ್ವಲ್ಪ ದಪ್ಪನಾಗಿ ಹಾಕೊಳ್ಳಿ. ಬೇರೆ ಭಾಗಕ್ಕೆ ತೆಳುವಾಗಿ ಒಂದು ಲೇಪವನ್ನು ಹಾಕಿಕೊಳ್ಳಿ. ಈ ರೀತಿ ಲೇಪವನ್ನು ಹಾಕೊಂಡು ಒಂದು ಅರ್ಧ ಗಂಟೆಯ ನಂತರ ಕೇವಲ ಕಡ್ಲೆಹಿಟ್ಟಿನಲ್ಲಿ ಮುಖವನ್ನು ಸ್ವಚ್ಛ ಮಾಡಿಕೊಂಡು ಫಲಿತಾಂಶ ನೋಡಿ. ಸತತವಾಗಿ ಕೆಲವು ದಿವಸ ಮಾಡಿ ನೋಡಿ ನಿಮ್ಮ ಮುಖದ ಲಕ್ಷಣವೇ ಬದಲಾಗುತ್ತೆ ಮುಖದಲ್ಲಿ ಒಳ್ಳೆ ಕಾಂತಿ ಉಂಟಾಗುತ್ತೆ, ಮಚ್ಚೆಗಳು ಕಲೆಗಳು ಎಲ್ಲವೂ ಹೋಗುತ್ತೆ ಮುಖ ಬಹಳ ಸುಂದರವಾಗಿ ಕಾಣುತ್ತೆ. ಕೇವಲ ಮುಖ ಅಷ್ಟೇ ಅಷ್ಟೇ ಅಲ್ಲ, ಕೈ ಕಾಲುಗಳಲ್ಲಿ ಅಥವಾ ಬೇರೆ ಯಾವುದೇ ಭಾಗದಲ್ಲಿ ಕಪ್ಪು ಕಲೆಗಳು ಮಚ್ಚೆಗಳು ಇದ್ದದ್ದೆ ಆದ್ರೆ ಅದನ್ನ ಹೋಗಲಾಡಿಸಿಕೊಳ್ಳುವುದಕ್ಕೆ ಈ ಪ್ರಯೋಗವನ್ನು ಮಾಡಬಹುದಾಗಿದೆ.

ಲೋಳೆಸರ (ಅಲೋವಿರಾ): 
ಇನ್ನೊಂದು ರೀತಿಯೂ ಮಾಡಬಹುದು. ಅದೇನೆಂದರೆ ಲೋಳೆಸರ. ಲೋಳೆಸರದ ಜೊತೆಗೆ ಸ್ವಲ್ಪ ಈ ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿ. ಅದನ್ನು ಕೂಡ ಪೇಸ್ಟ್ ರೀತಿ ಮಾಡಿಕೊಳ್ಳಿ ಅಥವಾ ಇದರ ರಸಕ್ಕೆ ಸ್ವಲ್ಪ ಮೆಂತ್ಯ ಸೇರಿಸಿಕೊಳ್ಳಿ. ಅಂದರೆ ಒಂದು ಅರ್ಧ ಚಮಚದಷ್ಟು ಮೆಂತ್ಯವನ್ನ ನೆನೆಸಿಕೊಳ್ಳಿ. ಆ ನೆನೆಸಿದಂತಹ ಮೆಂತ್ಯದ ಸಮೇತ ಈ ಲೋಳೆಸರವನ್ನ ರುಬ್ಬಿಕೊಳ್ಳಿ. ಇದು ಒಂದು ಗಟ್ಟಿಯಾಗಿ ಒಂದು ಪೇಸ್ಟ್ ರೀತಿಯಲ್ಲಿ ಆಗುತ್ತೆ. ಈ ಪೇಸ್ಟ್ ಅನ್ನು ಕೂಡ ನೀವು ಮುಖಕ್ಕೆ ಅಥವಾ ಯಾವ ಭಾಗದಲ್ಲಿ ಕಪ್ಪು ಕಲೆಗಳಿದೆ ಆ ಜಾಗಕ್ಕೆ ಸ್ವಲ್ಪ ದಪ್ಪನಾಗಿ ಒಂದು ಈ ಲೇಪವನ್ನು ಕೊಡಿ ಅಥವಾ ಪ್ಯಾಕ್ ರೀತಿಯಲ್ಲಿ ಹಾಕಿಕೊಂಡು ಅರ್ಧ ಗಂಟೆ ಬಿಟ್ಟು ನಂತರ ಮುಖವನ್ನು ಸ್ವಚ್ಛಗೊಳಿಸಿಕೊಳ್ತಾ ಬನ್ನಿ. ದಿನಕ್ರಮೇಣ ದಿನೇ ದಿನೇ ದಿನೇ ಈ ಕಪ್ಪು ಮಚ್ಚೆಗಳು ಹೋಗ್ತಾ ಬರುತ್ತೆ. ಮೊದಲು ಸ್ವಲ್ಪ ಕಡಿಮೆಯಾಗುತ್ತೆ, ಆಮೇಲೆ ಸಂಪೂರ್ಣವಾಗಿ ಹೋಗೋದಕ್ಕೆ ಸಾಧ್ಯ ಆಗುತ್ತೆ. ಇದರ ಪೇಸ್ಟ್​ ಒಮ್ಮೆ ಮಾಡಿಟ್ಟುಕೊಂಡು ಫ್ರಿಡ್ಜ್ ಅಲ್ಲಿ ಹಾಗೆ ತೆಗೆದು ಇಟ್ಕೊಳ್ಳಿ. ಪ್ರತಿನಿತ್ಯದಲ್ಲಿ ಕೂಡ ಒಂದು 10 ನಿಮಿಷಗಳ ಕಾಲ ಹಾಕೊಂಡು ಸಮಯ ಸಿಕ್ಕಾಗ ಇದನ್ನ ಉಪಯೋಗವನ್ನ ಮಾಡ್ಕೊಳ್ತಾ ಬನ್ನಿ. ಇದರಿಂದ ಚರ್ಮವು ಕೂಡ ಚೆನ್ನಾಗಿ ಆಗುತ್ತೆ, ಚರ್ಮಕ್ಕೆ ಸಂಬಂಧಪಟ್ಟಂತಹ ಯಾವುದೇ ರೀತಿಯ ಸೋಂಕುಗಳು ಕೂಡ ಬರೋದಿಲ್ಲ.

ಕಿರಕ್ಸಾಲೆ ಸೊಪ್ಪು, ಟೊಮೆಟೊ ರಸ: 

ಕಿರುಕ್ಸಾಲೆ ಸೊಪ್ಪನ್ನ ತಂದು ಇಟ್ಟುಕೊಳ್ಳಿ. ಒಂದು ಕಟ್ಟು ಸಾಕು, ಮನೆಯಲ್ಲಿ ನೆರಳಲ್ಲಿ ಒಣಗಿಸಿಬಿಡಿ. ಚೆನ್ನಾಗಿ ಒಣಗಿದ ನಂತರ ಅದನ್ನ ಸುಟ್ಟುಬಿಟ್ಟು ಅದನ್ನ ಬೂದಿಯನ್ನ ಮಾಡಿ ಇಟ್ಟುಕೊಳ್ಳಿ. ಈ ಬೂದಿಯನ್ನ ಜರಡಿಯಾಡಿ. ನುಣುಪಾದಂತಹ ಈ ಬೂದಿಯನ್ನ ತೆಗೆದು ಇಟ್ಟುಕೊಳ್ಳಿ. ಇದನ್ನ ಕಿತ್ತಲೆ ಹಣ್ಣಿನ ರಸ ಅಥವಾ ನಿಂಬೆಹಣ್ಣಿನ ರಸ ಯಾವುದು ಯಾವಾಗ ಲಭ್ಯ ಇರುತ್ತೆ ಅದನ್ನ ತೆಗೆದುಕೊಳ್ಳಿ. ಆ ರಸದಲ್ಲಿ ಈ ಭಸ್ಮವನ್ನು ಸೇರಿಸಿ ಮಿಶ್ರ ಮಾಡಿಕೊಳ್ಳಿ ಇದನ್ನ ಕಲೆ ಇರತಕ್ಕಂತಹ ಜಾಗಕ್ಕೆ ಹಚ್ಚುತ್ತಾ ಬನ್ನಿ ದಿನಕ್ರಮೇಣ ಬಹಳ ಬೇಗ ಶೀಘ್ರವಾಗಿ ಇದರ ಕಲೆ ಹೋಗೋದಿಕ್ಕೆ ಈ ಸೊಪ್ಪಿನ ಕೇವಲ ಬೂದಿ ನಮಗೆ ಸಹಾಯವನ್ನ ಮಾಡುತ್ತೆ. ಇನ್ನೂ ಯಾವುದೂ ಸಿಕ್ಲಿಲ್ಲ ಅಂತಂದ್ರೆ ಟೊಮೆಟೊ ಹಣ್ಣು ಎಲ್ಲಾ ಕಡೆಯೂ ಸಿಕ್ಕುತ್ತೆ. ಟೊಮೆಟೊ ಹಣ್ಣಿನ ರಸವನ್ನು ತೆಗೆದುಕೊಳ್ಳಿ. ಒಂದು ಚಮಚದಷ್ಟು ರಸಕ್ಕೆ ಒಂದು ಎರಡು ಮೂರು ತೊಟ್ಟಿನಷ್ಟು ಜೇನುತುಪ್ಪವನ್ನು ಹಾಕಿಕೊಳ್ಳಿ ಮಿಶ್ರಣವನ್ನ ಮಾಡಿಕೊಳ್ಳಿ ಈ ಟೊಮೆಟೊ ರಸ ಜೇನುತುಪ್ಪ ಮಿಶ್ರಣವನ್ನ ಕಲೆ ಇರತಕ್ಕಂತಹ ಜಾಗಕ್ಕೆ ನೀವು ಲೇಪನವನ್ನ ಮಾಡ್ತಾ ಬನ್ನಿ. ಇದನ್ನು ಕೂಡ ಸತತವಾಗಿ ಕೆಲವು ದಿವಸಗಳ ಕಾಲ ಮಾಡೋದ್ರಿಂದ ಮುಖದಲ್ಲಿ ಇರತಕ್ಕಂತಹ ಕಲೆಗಳು ಇರಬಹುದು ಅಥವಾ ಸುಕ್ಕುಗಳು ಇರಬಹುದು ಅಥವಾ ಮುಖದಲ್ಲಿ ಇರುವಂತಹ ಅನೇಕ ಸಮಸ್ಯೆಗಳು ಇರಬಹುದು ಮೊಡವೆ ಗುಳ್ಳೆ ಇರಬಹುದು ಎಲ್ಲವನ್ನು ಕೂಡ ಸುಲಭವಾಗಿ ಪರಿಹರಿಸಿಕೊಳ್ಳುವುದಕ್ಕೆ ಸಾಧ್ಯ ಇದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಸಿ ಬೆಳ್ಳುಳ್ಳಿಯ ಶಕ್ತಿ.. ಬೆಳಗ್ಗೆ ಮೊದಲು ಈ ಕೆಲಸ ಮಾಡಿ ಅದೆಂಥದ್ದೇ ಕಾಯಿಲೆಯಾದ್ರೂ ಹಿಮ್ಮೆಟ್ಟುತ್ತೆ
ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು