ಆಯುರ್ವೇದದ ಮ್ಯಾಜಿಕ್​ ಚಹ! ಬೊಜ್ಜು ಕರಗುವ ಜೊತೆ ಹತ್ತು ಹಲವು ಉಪಯೋಗ- ಮಾಡುವುದು ತುಂಬಾ ಸುಲಭ

Published : Nov 15, 2025, 06:02 PM IST
Belly Fat Reducing Ayurvedic Tea

ಸಾರಾಂಶ

ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸಲು ವ್ಯಾಯಾಮದ ಜೊತೆಗೆ ಆಯುರ್ವೇದದಲ್ಲಿ ಪರಿಹಾರವಿದೆ. ಜೀರಿಗೆ, ಕೊತ್ತಂಬರಿ ಮತ್ತು ಸೋಂಪು ಬಳಸಿ ತಯಾರಿಸಿದ ಈ ವಿಶೇಷ ಟೀ, ಜೀರ್ಣಕ್ರಿಯೆಯನ್ನು ಸುಧಾರಿಸಿ ಕೆಲವೇ ದಿನಗಳಲ್ಲಿ ಬೊಜ್ಜನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಬೆಲ್ಲಿ ಫ್ಯಾಟ್​ (Belly Fat Tea) ಎನ್ನುವುದು ಈಗ ಸರ್ವೇ ಸಾಮಾನ್ಯವಾಗಿದೆ. ಬೊಜ್ಜು ಅದರಲ್ಲಿಯೂ ಹೆಚ್ಚಾಗಿ ಹೊಟ್ಟೆಯ ಸುತ್ತಲೂ ಶೇಖರಿಸುವ ಫ್ಯಾಟ್​ ತಂದುಕೊಳ್ಳುವುದು ಬಲು ಸುಲಭ. ಆದರೆ ಅದನ್ನು ಕರಗಿಸಬೇಕು ಎಂದರೆ ಇನ್ನಿಲ್ಲದ ಪ್ರಯತ್ನ ಮಾಡಬೇಕು. ವ್ಯಾಯಾಮ ಮಾಡುವುದು, ವಾಕಿಂಗ್​ ಮಾಡುವುದು, ಯೋಗ, ಧ್ಯಾನ, ಡಯೆಟ್​ ಏನೇ ಮಾಡಿದ್ರೂ ಇದನ್ನು ಕರಗಿಸುವುದು ಕಷ್ಟವೇ. ಆದರೆ ನಿಯಮಿತವಾದ ವ್ಯಾಯಾಮ, ಯೋಗ ಮಾಡುವುದು ಬೆಲ್ಲಿ ಫ್ಯಾಟ್​ಗೆ ಮಾತ್ರವಲ್ಲದೇ ಆರೋಗ್ಯ ವರ್ಧಕವೂ ಹೌದು.

ಆದರೆ, ಇಲ್ಲಿ ಮೂರೇ ಮೂರು ವಸ್ತುಗಳಿಂದ ತಯಾರಾದ ಆಯುರ್ವೇದದಲ್ಲಿ ಶತಮಾನಗಳಿಂದಲೂ ಬಳಕೆ ಆಗ್ತಿರೋ ಬೊಜ್ಜು ಕರಗಿಸುವ ಟೀ ಮಾಡುವ ವಿಧಾನವನ್ನು ಹೇಳಿಕೊಡಲಾಗಿದೆ. ಏಂಷಿಯೆಂಟ್​ ಡಿಜಿನ್​ ಎನ್ನುವ ಖಾತೆಯಲ್ಲಿ ಇದನ್ನು ಶೇರ್ ಮಾಡಲಾಗಿದೆ. ಇದನ್ನು ಪ್ರತಿದಿನವೂ ಕುಡಿಯುವುದರಿಂದ, ಇಲ್ಲವೇ ಒಂದು ಫ್ಲಾಸ್ಕ್​ನಲ್ಲಿ ಹಾಕಿಕೊಂಡು ಪೂರ್ತಿ ದಿನವೂ ಸ್ವಲ್ಪ ಸ್ವಲ್ಪ ಕುಡಿಯುತ್ತಾ ಬಂದರೆ ಕೆಲವೇ ದಿನಗಳಲ್ಲಿ ಬೊಜ್ಜು ಮಾಯವಾಗುವುದು. ಇದು ಜೀರ್ಣಕ್ರಿಯೆಯನ್ನು ಚೆನ್ನಾಗಿ ಮಾಡುವ ಕಾರಣದಿಂದ ಇದರಿಂದಾಗಿಯೇ ಬರುವ ಹಲವು ಕಾಯಿಲೆಗಳನ್ನೂ ವಾಸಿ ಮಾಡುತ್ತದೆ.

ಅಂದಹಾಗೆ ಇದಕ್ಕೆ ಬೇಕಾಗಿರುವ ಮೂರು ಪದಾರ್ಥ ಎಂದರೆ, ಜೀರಿಗೆ, ಕೊತ್ತಂಬರಿ ಮತ್ತು ಸೋಂಪು ಅಷ್ಟೇ.

ಜೀರಿಗೆಯ ಪ್ರಯೋಜನಗಳು

- ಅಗ್ನಿ (ಜೀರ್ಣಕಾರಿ ಬೆಂಕಿ) ಅನ್ನು ಉತ್ತೇಜಿಸುತ್ತದೆ

- ಅನಿಲವನ್ನು ಕಡಿಮೆ ಮಾಡುತ್ತದೆ ಮತ್ತು ಅಜೀರ್ಣವನ್ನು ಶಮನಗೊಳಿಸುತ್ತದೆ

- ಅಮಾ (ವಿಷಕಾರಿ ತ್ಯಾಜ್ಯ) ಅನ್ನು ಹೊರಹಾಕುತ್ತದೆ

- ಬೊಜ್ಜನ್ನು ನಿವಾರಿಸುತ್ತದೆ ಮತ್ತು ಉಬ್ಬಿರುವ ಲೋಳೆಯ ಪೊರೆಗಳನ್ನು ಶಮನಗೊಳಿಸುತ್ತದೆ

- ಇದು ಉತ್ಕರ್ಷಣ ನಿರೋಧಕಗಳು ಮತ್ತು ಕಬ್ಬಿಣವನ್ನು ಹೊಂದಿರುತ್ತದೆ. ಆದ್ದರಿಂದ ಆರೋಗ್ಯವನ್ನು ಸುಧಾರಿಸುತ್ತದೆ

- ಜೀರಿಗೆ ವಾತ ಮತ್ತು ಕಫ ದೋಷಗಳನ್ನು ಶಮನಗೊಳಿಸುತ್ತದೆ, ಆದರೆ ಅದರ ಉಷ್ಣತೆಯ ಸ್ವಭಾವವು ಕೊತ್ತಂಬರಿ ಮತ್ತು ಸೋಂಪುಗಳಿಂದ ಸಮತೋಲನಗೊಳ್ಳುತ್ತದೆ, ಇದು ಪಿತ್ತಗಳಿಗೂ ಸಹ ಸೂಕ್ತವಾಗಿದೆ.

ಕೊತ್ತಂಬರಿಯ ಪ್ರಯೋಜನಗಳು

- ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅನಿಲವನ್ನು ನಿವಾರಿಸುತ್ತದೆ.

- ಪಿತ್ತ ಅಸ್ವಸ್ಥತೆಗಳಿಗೆ, ವಿಶೇಷವಾಗಿ ಮೂತ್ರ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.

- ಜೀರ್ಣಕ್ರಿಯೆ ಮತ್ತು ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ಕರುಳಿನ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುತ್ತದೆ.

- ಉರಿಯೂತವನ್ನು ಕಡಿಮೆ ಮಾಡುತ್ತದೆ, ರುಮಟಾಯ್ಡ್ ಸಂಧಿವಾತದಂತಹ ಪರಿಸ್ಥಿತಿಗಳಿಗೂ ಸಹಾಯ ಮಾಡುತ್ತದೆ

ಸೋಂಪಿನ ಕಾಳಿನ ಪ್ರಯೋಜನಗಳು

- ಪಿತ್ತವನ್ನು ಉಲ್ಬಣಗೊಳಿಸದೆ ಅಗ್ನಿಯನ್ನು ಬಲಪಡಿಸುತ್ತದೆ

- ಸೆಳೆತವನ್ನು ನಿಲ್ಲಿಸುತ್ತದೆ ಮತ್ತು ಜೀರ್ಣಾಂಗವನ್ನು ಸಡಿಲಗೊಳಿಸುತ್ತದೆ

- ಮಾನಸಿಕ ಜಾಗರೂಕತೆಯನ್ನು ಉತ್ತೇಜಿಸುತ್ತದೆ ಮತ್ತು IBS ಪರಿಹಾರದಲ್ಲಿ ಸಹಾಯ ಮಾಡುತ್ತದೆ

- ಕೊಬ್ಬು ಸುಡುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ದುಗ್ಧರಸವನ್ನು ಚಲಿಸಲು ಸಹಾಯ ಮಾಡುತ್ತದೆ

ಮಾಡುವುದು ಹೇಗೆ?

1 ಟೀಸ್ಪೂನ್ ಜೀರಿಗೆ

1 ಟೀಸ್ಪೂನ್ ಕೊತ್ತಂಬರಿ ಬೀಜಗಳು

1 ಟೀಸ್ಪೂನ್ ಸೋಂಪಿನ ಬೀಜಗಳು

1 ಕಪ್ ನೀರು

- ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಯಲ್ಲಿ ನೀರನ್ನು ಕುದಿಸಿ.

- ಈ ಮೂರೂ ಪದಾರ್ಥಗಳನ್ನು ಸೇರಿಸಿ.

- 5 ರಿಂದ 10 ನಿಮಿಷಗಳ ಕಾಲ ಕುದಿಸಿ

- ಇದನ್ನು ಸೋಸಿ, ಚಹಾ ರೆಡಿಯಾಗಿಯಿತು.

- ಇದನ್ನು ಥರ್ಮಾಸ್​ನಲ್ಲಿ ಇರಿಸಿ.

- ಗರಿಷ್ಠ ಪ್ರಯೋಜನಗಳಿಗಾಗಿ ದಿನವಿಡೀ ಕುಡಿಯಿರಿ. ಎಷ್ಟು ಸುಲಭ ಅಲ್ಲವೆ?

ಟೀ ಮಾಡುವ ವಿಧಾನ ನೋಡಲು ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ

https://www.instagram.com/reel/DRAX_TyERzj/?utm_source=ig_web_copy_link&igsh=NTc4MTIwNjQ2YQ==

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ
ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?