ಮುಖದ ಮೇಲೆ ಬಂಗು ಇದ್ಯಾ? ಒಂದು ತಿಂಗಳು ಹೀಗೆ ಮಾಡಿ ನೋಡಿ: ಖ್ಯಾತ ಆಯುರ್ವೇದ ತಜ್ಞರ ಸಲಹೆ ಕೇಳಿ

Published : Feb 05, 2025, 04:46 PM ISTUpdated : Feb 05, 2025, 04:55 PM IST
ಮುಖದ ಮೇಲೆ ಬಂಗು ಇದ್ಯಾ? ಒಂದು ತಿಂಗಳು ಹೀಗೆ ಮಾಡಿ ನೋಡಿ: ಖ್ಯಾತ ಆಯುರ್ವೇದ ತಜ್ಞರ ಸಲಹೆ ಕೇಳಿ

ಸಾರಾಂಶ

ಮುಖದ ಮೇಲಿನ ಬಂಗು ಹಾರ್ಮೋನುಗಳ ವ್ಯತ್ಯಾಸ, ಸೂರ್ಯನ ಬಿಸಿಲು, ಅನುವಂಶೀಯತೆಯಿಂದ ಉಂಟಾಗುತ್ತದೆ. ಆತ್ಮವಿಶ್ವಾಸ ಕುಗ್ಗಿಸುವ ಈ ಸಮಸ್ಯೆಗೆ ಡಾ. ಗೌರಿಯಮ್ಮ, ಹೊಟ್ಟೆ ಶುದ್ಧಿಗೆ ಹೀರೇ/ಸೋರೆಕಾಯಿ-ದೊಡ್ಡಪತ್ರೆ ರಸ ಸೇವಿಸಿ, ಮುಲ್ತಾನಿ ಮಿಟ್ಟಿ, ನಿಂಬೆರಸ, ಗ್ಲಿಸರಿನ್ ಲೇಪಿಸಲು ಸೂಚಿಸುತ್ತಾರೆ. ರಕ್ತಚಂದನ, ಕುಂಕುಮಾದಿ ತೈಲ, ಕಡ್ಲೆಹಿಟ್ಟು-ಅರಿಶಿನ-ಮೆಂತ್ಯೆ ಮಿಶ್ರಣವೂ ಪರಿಣಾಮಕಾರಿ.

ಮುಖದ ಮೇಲೆ ಕೆಲವರಿಗೆ ಬಂಗು (pigmentation) ಬರುವುದು ಸಹಜ. ಇದು ಹೆಚ್ಚಾಗಿ ಹಾರ್ಮೋನಲ್​ ಇಂಬ್ಯಾಲೆನ್ಸ್​ನಿಂದ ಬರುವ ಕಾರಣದಿಂದ ಮಹಿಳೆಯರಲ್ಲಿ ಬಂಗು ಹೆಚ್ಚು. ಆದರೆ ಈ ರೀತಿ ಬಂಗು ಬಂದಾಗ ಮನಸ್ಸೆಲ್ಲಾ ಕಿರಿಕಿರಿ ಅನುಭವ. ಇದೇ ಕಾರಣಕ್ಕೆ ಕೆಲವರು ಹೊರಗೆ ಹೋಗಲು ಕೂಡ ನೊಂದುಕೊಳ್ಳುವುದು ಇದೆ. ಹೋದ ಕಡೆಗಳಲ್ಲಿ ಜನರು ಕೇಳುವ ಪ್ರಶ್ನೆಗಳಿಗೆ ಸುಸ್ತಾಗಿ ಹೋಗುವುದು ಕೂಡ ಇದೆ. ಎಷ್ಟೋ ಸಂದರ್ಭಗಳಲ್ಲಿ ಇದು ಆತ್ಮವಿಶ್ವಾಸವನ್ನೂ ಕುಗ್ಗಿಸುವುದು ಉಂಟು. ಇವೆಲ್ಲಾ ಸಾಮಾನ್ಯ, ಟೆನ್ಷನ್​, ಆತಂಕ ಹೆಚ್ಚಾದಾಗ ಇದು ಹೆಚ್ಚಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ ಆದರೂ ಕೂಡ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಕಿರಿಕಿರಿ ಅನುಭವಿಸಬೇಕಾಗುತ್ತಿದೆ. 


ನಮ್ಮ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ ಈ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಹರಡುತ್ತವೆ. ಬಂಗು ಮೂಡಲು ಮೇಲೆ ಹೇಳಿದಂತೆ ಹಲವು ಕಾರಣಗಳೂ ಇದ್ದರೂ,  ಸುಡುವ ಸೂರ್ಯನ ಬಿಸಿಲಿನಲ್ಲಿ ಸತತವಾಗಿ ಚರ್ಮ ಒಡ್ಡುವುದು ಕೂಡ ಇದಕ್ಕೆ ಒಂದು ಕಾರಣ. ಜೊತೆಗೆ, ಅನುವಂಶೀಯತೆ, ಹಾರ್ಮೋನಲ್ ಬದಲಾವಣೆಗಳು ಕಾರಣವಾಗುತ್ತದೆ. ಬಂಗು ಬಂದಾಗ ಇದಕ್ಕೆಂದೇ ಹಲವಾರು ಮೆಡಿಸಿನ್​ಗಳು ಲಭ್ಯ ಇವೆ. ಆದರೆ ಹೆಚ್ಚಿನ ಮಂದಿ ಇವುಗಳನ್ನು ಟ್ರೈ ಮಾಡಿರಲಿಕ್ಕೆ ಸಾಕು. ಆದರೆ ಇಂಥ ಕೆಲವು ರಾಸಾಯನಿಕಯುಕ್ತ ಕ್ರೀಮ್​ಗಳಿಂದ ಅಡ್ಡ ಪರಿಣಾಮಗಳೇ ಹೆಚ್ಚು. 

ಶ್ವಾಸಕೋಶದ ಸಮಸ್ಯೆ ಮುಕ್ತಿಗೆ, ಮಕ್ಕಳಾಗೋದಕ್ಕೆ ಅರಳಿ ಮರನೇ ಯಾಕೆ? ಡಾ. ಗೌರಿಯಮ್ಮನವರ ಮಾತು ಕೇಳಿ...

ಆದ್ದರಿಂದ ಖ್ಯಾತ ಆಯುರ್ವೇದ ತಜ್ಞರಾಗಿರುವ ಡಾ. ಗೌರಿಯಮ್ಮ ಅವರು ಟಿಪ್ಸ್​ ಕೊಟ್ಟಿದ್ದಾರೆ. ಅದರ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ. ಡಾ.ಗೌರಿಯಮ್ಮ ಅವರು ಹೇಳುವ ಪ್ರಕಾರ, ಬಂಗಿಗೆ ಬರೀ ಕ್ರೀಮ್​ ಹಚ್ಚಿದರೆ ಸಾಕಾಗುವುದಿಲ್ಲ. ಇದಕ್ಕೆ ಹೊಟ್ಟೆಯ ಶುದ್ಧಿಯೂ ಅಗತ್ಯವಾಗಿದೆ. ಏಕೆಂದರೆ ಇದು ಹಾರ್ಮೋನಲ್​ ಅನಿಯಂತ್ರಿತೆಯಿಂದ ಬರುವ ಕಾರಣ, ಅದರ ಶುದ್ಧಿಯಾಗಬೇಕು. ಆದ್ದರಿಂದ ಈ ರಸವನ್ನು ಕುಡಿಯುತ್ತಾ ಬಂದರೆ ಕ್ರಮೇಣ ಬಂಗು ಕಡಿಮೆಯಾಗುತ್ತದೆ ಎಂದಿದ್ದಾರೆ. ಹೀರೇಕಾಯಿ ಅಥವಾ ಸೋರೆಕಾಯಿ ಮತ್ತು ದೊಡ್ಡ ಪತ್ರೆ ಎಲೆಯ 2-3 ದಳಗಳು. ಇವಿಷ್ಟನ್ನು ಕಟ್​ ಮಾಡಿ ಮಿಕ್ಸಿಯಲ್ಲಿ ಹಾಕಿ ರಸವನ್ನು ಶೋಧಿಸಬೇಕು. ಬೆಳಿಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ಒಂದು ರಸವನ್ನು ಸ್ವಲ್ಪ ಜೇನುತುಪ್ಪ ಮಿಕ್ಸ್​ ಮಾಡಿ ಕುಡಿಯುತ್ತಾ ಬರಬೇಕು. ಒಂದು ತಿಂಗಳಿನಲ್ಲಿಯೇ ನಿಮಗೆ ರಿಸಲ್ಟ್​ ಗೊತ್ತಾಗುತ್ತದೆ ಎಂದಿದ್ದಾರೆ.
 
ಇನ್ನು ಮುಖಕ್ಕೆ ಹಚ್ಚುವುದಿದ್ದರೆ ಮುಲ್ತಾನಿ ಮಿಟ್ಟಿ, ಅರ್ಧ ಚಮಚದಷ್ಟು ಹಾಕಿಕೊಂಡು ಕಿತ್ತಲೆ ಅಥವಾ ನಿಂಬೆ ಹಣ್ಣಿನ ಎರಡು ಚಮಚ ರಸವನ್ನು ಹಾಕಿ ಎರಡು ತೊಟ್ಟಿನಷ್ಟು ಗ್ಲಿಸರಿನ್​ ಹಾಕಿಕೊಳ್ಳಿ. ಮಿಕ್ಸ್​ ಮಾಡಿ ಪೇಸ್ಟ್​ ರೀತಿ. ಮುಖ ಪೂರ್ತಿ ಲೇಪ ಮಾಡಿಕೊಳ್ಳಿ. ಅರ್ಧಗಂಟೆ ಬಳಿಕ ಸ್ವಚ್ಛಗೊಳಿಸಿ ಎಂದಿದ್ದಾರೆ. ಇದರ ಹೊರತಾಗಿಯೂ ಕೆಲವು ಆಯುರ್ವೇದ ತಜ್ಞರು ಹೇಳುವ ಪ್ರಕಾರ,  ರಕ್ತಚಂದನವನ್ನು ತೇದು ಪ್ರತಿದಿನ ಮುಖಕ್ಕೆ ಹಚ್ಚಬೇಕು. ಇಲ್ಲದಿದ್ದರೆ, ಆಯುರ್ವೇದ ಔಷಧ ಅಂಗಡಿಗಳಲ್ಲಿ ಸಿಗುವ  ಕುಂಕುಮಾದಿ ತೈಲದಿಂದ ಮಸಾಜ್​ ಮಾಡಿಕೊಳ್ಳಬಹುದು.  ಮುಖಕ್ಕೆ ರಾಸಾಯಿನಿಕ ಸೋಪಿನ ಬದಲು, ಒಂದು ಕೆಜಿ ಕಡ್ಲೆ ಹಿಟ್ಟು, ಕಾಲು ಕಸ್ತೂರಿ ಅರಿಶಿಣ, ಸ್ವಲ್ಪ ಮೆಂತ್ಯ ಪೌಡರ್​ ಮಿಕ್ಸ್​ ಮಾಡಿ ಇದನ್ನು ಹಚ್ಚಿಕೊಂಡರೆ  ಚರ್ಮದ ರೋಗಗಳೇ ಬರುವುದಿಲ್ಲ ಎನ್ನುತ್ತಾರೆ ಅವರು. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ