
ದಿನಕ್ಕೆ ಎರಡು ಬಾರಿ ಹಲ್ಲು (tooth) ಉಜ್ಜಿದ್ರೂ ಹಲ್ಲು ಕ್ಲೀನ್ ಇರೋದಿಲ್ಲ. ಹಲ್ಲಿನ ಒಳ ಭಾಗದಲ್ಲಿ ಅಥವಾ ಎರಡು ಹಲ್ಲಿನ ಮಧ್ಯೆ ಕಪ್ಪು ಅಥವಾ ಕೆಂಪು ಕಲೆ ಕಾಣಿಸಿಕೊಳ್ಳುತ್ತೆ. ಪಯೋರಿಯಾ, ಒಸಡುಗಳಲ್ಲಿ ರಕ್ತಸ್ರಾವ (Bleeding), ಹಲ್ಲಿನ ಕೊಳೆತ ಅಥವಾ ಬಾಯಿಯ ದುರ್ವಾಸನೆ, ಹಲ್ಲು ನೋವು ಸೇರಿದಂತೆ ಅನೇಕ ಹಲ್ಲಿನ ಸಮಸ್ಯೆ ಈಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದು ಬಾಯಿಯ ಆರೋಗ್ಯ ಹಾಳು ಮಾಡೋದಲ್ದೆ ಹಲವು ಬಾರಿ ಮುಜುಗರಕ್ಕೆ ಕಾರಣವಾಗುತ್ತೆ. ಹಲ್ಲಿಗೆ ಸಂಬಂಧಿಸಿದ ಎಲ್ಲ ಸಮಸ್ಯೆ ಬಗೆಹರಿಸಲು ಆಯುರ್ವೇದದಲ್ಲಿ ಮದ್ದಿದೆ.
ಸಾಮಾನ್ಯವಾಗಿ ಪ್ರತಿಯೊಬ್ಬರೂ ದಿನಕ್ಕೆ ಎರಡು ಬಾರಿ ಹಲ್ಲುಜ್ಜುತ್ತಾರೆ. ದುಬಾರಿ , ಟೂತ್ಪೇಸ್ಟ್ (toothpaste) ಬಳಕೆ ಮಾಡ್ತಾರೆ. ಆದ್ರೂ ಹಲ್ಲಿನ ಸಮಸ್ಯೆಗೆ ಪರಿಹಾರ ಸಿಗೋದಿಲ್ಲ. ಟೂತ್ ಪೇಸ್ಟ್ ನಲ್ಲಿ SLS (ಸೋಡಿಯಂ ಲಾರಿಲ್ ಸಲ್ಫೇಟ್) ಮತ್ತು ಫ್ಲೋರೈಡ್ನಂತಹ ರಾಸಾಯನಿಕ ಇರುತ್ತವೆ. ಇದು ಹಲ್ಲುಗಳ ಆರೋಗ್ಯ ಸುಧಾರಿಸುವ ಬದಲು ಹಲ್ಲನ್ನು ಹಾಳು ಮಾಡುತ್ತದೆ. ಆಯುರ್ವೇದ (Ayurveda) ತಜ್ಞರ ಪ್ರಕಾರ, ಹಲ್ಲುಗಳ ಎಲ್ಲ ಸಮಸ್ಯೆಗೆ ಇಲ್ಲೊಂದು ಉಪಾಯ ಇದೆ. ಅದನ್ನು ನೀವು ಸರಿಯಾಗಿ ಬಳಕೆ ಮಾಡಿದ್ರೆ ಲಾಭ ಪಡೆಯಬಹುದು.
ಹೇಗೆ ತಯಾರಿಸಬೇಕು? : 10 ಗ್ರಾಂ ಲವಂಗ, 20 ಗ್ರಾಂ ಅರಿಶಿನ, 30 ಗ್ರಾಂ ಲವಂಗದ ಎಲೆಗಳು ಮತ್ತು40 ಗ್ರಾಂ ಕಲ್ಲು ಉಪ್ಪನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ. ಇದನ್ನು ಗಾಳಿಯಾಡದ ಒಂದು ಡಬ್ಬದಲ್ಲಿ ತುಂಬಿ ಇಡಿ.
ಈ ಪುಡಿಯನ್ನು ಬಳಸುವುದು ಹೇಗೆ? : ವೈದ್ಯರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅರ್ಧ ಟೀಚಮಚ ಈ ಪುಡಿಯನ್ನು ಸ್ವಲ್ಪ ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಹಲ್ಲುಜ್ಜಬೇಕು. ಪ್ರತಿ ದಿನ ಹೀಗೆ ಮಾಡ್ತಾ ಬಂದಲ್ಲಿ ನಿಮ್ಮ ಹಲ್ಲಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಈ ಪುಡಿಯಿಂದ ಆಗುವ ಪ್ರಯೋಜನಗಳು ಏನು? : ಈ ಪುಡಿಗೆ ಆರೋಗ್ಯಕರ ಪದಾರ್ಥವನ್ನು ಬೆರೆಸಲಾಗಿದೆ. ಲವಂ, ನಂಜುನಿರೋಧಕ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ. ಇದು ಹಲ್ಲುನೋವು ಮತ್ತು ಸೋಂಕನ್ನು ಕಡಿಮೆ ಮಾಡುತ್ತದೆ. ಇನ್ನು ಅರಿಶಿನ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಇದು ಒಸಡುಗಳ ಉರಿಯೂತ ಮತ್ತು ಪಯೋರಿಯಾದಲ್ಲಿ ಪರಿಣಾಮವನ್ನು ತೋರಿಸುತ್ತದೆ. ಲವಂಗದ ಎಲೆಗಳು ಬಾಯಿಯ ದುರ್ವಾಸನೆಯನ್ನು ತೆಗೆಯುತ್ತದೆ. ಬ್ಯಾಕ್ಟೀರಿಯಾವನ್ನು ಕೊಲ್ಲುತ್ತವೆ. ಮತ್ತೊಂದೆಡೆ, ಕಲ್ಲುಪ್ಪು ಹಲ್ಲುಗಳಲ್ಲಿ ಕಾಣಿಸಿಕೊಳ್ಳುವ ಹಳದಿ ಬಣ್ಣದ ಸಮಸ್ಯೆಗೆ ಪರಿಹಾರವಾಗಿದೆ. ಹಲ್ಲುಗಳು ಹೊಳೆಪು ಪಡೆಯಲು ಇದು ಪರಿಣಾಮಕಾರಿ. ಇದು ಒಸಡುಗಳನ್ನು ಬಲಪಡಿಸುತ್ತದೆ.
ಆಯುರ್ವೇದ ತಜ್ಞರ ಪ್ರಕಾರ, ಈ ಆಯುರ್ವೇದ ಔಷಧಿ ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಇದರಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕವಿಲ್ಲ. ಇದನ್ನು ದೀರ್ಘಕಾಲದವರೆಗೆ ಬಳಸಬಹುದು. ಇದನ್ನು ನಿಯಮಿತವಾಗಿ ಮಾಡುವುದರಿಂದ, ನೀವು ಕಡಿಮೆ ಸಮಯದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.