ಬೆವರಿನ ಕಿರಿಕಿರಿ; ಆಯುರ್ವೇದದಲ್ಲಿದೆ ಚಿಕಿತ್ಸೆ!

By Suvarna News  |  First Published Dec 15, 2019, 12:35 PM IST

ಖಾರ ತಿಂದರೆ ಮೈ ಬೆವರುತ್ತದೆ, ಚೂರು ನಡೆದರೆ ಬೆವರಿ ಒದ್ದೆಮುದ್ದೆಯಾಗುತ್ತೀರಿ, ಸ್ವಲ್ಪ ಬಿಸಿಲೇರಿದರೂ ಬೆವರು ದಳದಳನೆ ಇಳಿಯುತ್ತದೆ. ಈ ಸಮಸ್ಯೆಯಿಂದಾಗಿ ಮನೆಯಿಂದ ಹೊರಗೆ ಕಾಲಿಟ್ಟಾಗ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಲೇ ಭಯಪಡುವಂತಾಗಿದೆ. ಹಾಗಿದ್ದರೆ, ಈ ಬೆವರಿನ ಸಮಸ್ಯೆಗೆ ಚಿಕಿತ್ಸೆ ನೀಡಲೇಬೇಕು.


ಅತಿಯಾದ ಬೆವರು ಅವಮಾನಕಾರಿಯಾದುದು. ಸಾಮಾನ್ಯವಾಗಿ ಖಾರ ತಿಂದಾಗ, ಕೋಪಗೊಂಡಾಗ, ಬಿಪಿ, ಡಯಾಬಿಟೀಸ್ ಮುಂತಾದ ಸಮಸ್ಯೆಗಳಿದ್ದಾಗ, ಮೆನೋಪಾಸ್ ಸಮಯದಲ್ಲಿ, ಬಿಸಿಲು ಹೆಚ್ಚಾದಾಗ ಬೆವರು ಹೆಚ್ಚುತ್ತದೆ. ಇದಲ್ಲದೆ, ಆಂತರಿಕ ಕಾರಣಗಳಿಂದ ಕೆಲವರಿಗೆ ಸಿಕ್ಕಾಪಟ್ಟೆ ಬೆವರುತ್ತದೆ. 

ಬೆವರಲ್ಲೂ ಮೆನ್ ಆರ್ ಫ್ರಂ ಮಾರ್ಸ್, ವಿಮೆನ್ ಆರ್ ಫ್ರಂ ವೀನಸ್

Tap to resize

Latest Videos

ಶಾಪಿಂಗ್‌ಗೆ ಹೋದಾಗ, ಡೇಟಿಂಗ್, ವಾಕಿಂಗ್ ಎಲ್ಲೇ ಜನನಿಬಿಡ ಪ್ರದೇಶಕ್ಕೆ ಹೋದಾಗ ಮೈ ಬೆವರಿ ಬಟ್ಟೆ ಎಲ್ಲ ಒದ್ದೆಯಾಗಿ ದೇಹಕ್ಕೆ ಅಂಟಿಕೊಂಡರೆ ಎದುರಿರುವವರೊಡನೆ ಮಾತನಾಡಲು ಆತ್ಮವಿಶ್ವಾಸ ಕುಗ್ಗುತ್ತದೆ. ವಾಸನೆ ಬರುತ್ತಿದ್ದೀವೀನೋ ಎಂಬ ಕಳವಳದ ಜೊತೆಗೆ, ಅವರು ನಮ್ಮಂದಿಗೆ ಮಾತನಾಡಲು ಕಿರಿಕಿರಿ ಅನುಭವಿಸುತ್ತಾರೇನೋ ಎಂಬ ಯೋಚನೆ ಕಾಡುತ್ತದೆ. ಇದೆಲ್ಲದರೊಂದಿಗೆ ಯಾರೇ ಆದರೂ ನಮ್ಮ ಮೈಯಿಂದ ದೂರ ನಿಂತು ಮಾತನಾಡುತ್ತಾರೆ. ಅವರ ಕೈ ನಮಗೆ ತಾಗಿದರೆ ಅಸಹ್ಯ ಮಾಡಿಕೊಳ್ಳುತ್ತಾರೆ. ಅಷ್ಟು ಸಾಲದೆಂಬಂತೆ ಒಗೆವ ಬಟ್ಟೆ ರಾಶಿ ಬೀಳುತ್ತದೆ. ಸೆಂಟ್, ಪರ್ಫೂಮ್‌ಗೆ ರಾಶಿ ರಾಶಿ ಖರ್ಚಾಗುತ್ತದೆ. 

ಆದರೆ, ಇಷ್ಟೆಲ್ಲ ಸಮಸ್ಯೆಯಿದ್ದೂ ಅನುಭವಿಸಿಕೊಂಡಿರುವುದೇಕೆ? ಔಷಧ ತೆಗೆದುಕೊಳ್ಳದೆಯೇ ಪರಿಹಾರ ಕಂಡುಕೊಳ್ಳಲು ಆಯುರ್ವೇದದಲ್ಲಿದೆ ಚಿಕಿತ್ಸೆ. ಅದಕ್ಕೂ ಮುನ್ನ ಬೆವರೇಕೆ ಬರುತ್ತದೆ ನೋಡೋಣ.

ಬೆವರು ಬಹಳ ಸಾಮಾನ್ಯ ದೈಹಿಕ ಪ್ರಕ್ರಿಯೆಯಾಗಿದ್ದು, ಈ ಮೂಲಕ ದೇಹದಿಂದ ಅತಿಯಾದ ಉಷ್ಣತೆ ಹೊರಹೋಗುತ್ತದೆ. ಯಾವಾಗ ಒತ್ತಡದಿಂದ ದೇಹದ ತಾಪಮಾನ ಹೆಚ್ಚಾಯಿತು ಎಂದು ಮೆದುಳು ಗ್ರಹಿಸುತ್ತದೋ ಆಗ ಹೀಟ್ ರೆಂಟ್ ಹೊರಹೋಗುತ್ತದೆ. ಆದರೆ, ಕೆಲವರಿಗೆ ಮಾತ್ರ ಉಳಿದವರಿಗಿಂತ ಅತಿ ಹೆಚ್ಚು ಬೆವರು ಬರುತ್ತದೆ. ಇದು ಅವರ ದೇಹದ ಹಲವು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಗೆ ಹೈಪರ್ ಹೈಡ್ರೋಸಿಸ್ ಎಂದು ಹೆಸರು. ಇದಕ್ಕೆ ಚಿಕಿತ್ಸೆ ಹೇಗೆ?

ಆ್ಯಂಟಿಪರ್ಸ್ಪಿರೆಂಟ್ ಹರ್ಬ್

ಸ್ವೇಡಿಪನಯನ ಎಂಬ ಔಷಧೀಯ ಎಲೆಯು ಅತಿಯಾದ ಬೆವರನ್ನು ಕಡಿಮೆ ಮಾಡುವಲ್ಲಿ ಸಹಾಯಕ. ಇವು ತಣ್ಣನೆಯ ಹಾಗೂ ಬೆಚ್ಚನೆಯ ಎರಡೂ ಅಂಶಗಳನ್ನು ಹೊಂದಿದ ಹರ್ಬ್ ಆ್ಯಂಟಿ ಆಸ್ಪಿರೆಂಟ್ಸ್. ಈ ಎಲೆಗಳ ಈ ಗುಣವು ಅತಿಯಾದ ಬೆವರನ್ನು ತಹಬಂದಿಗೆ ತರಲು ಸಹಕಾರಿ. ಕ್ಯಾನೋಪಿ, ಮಸ್ತಿಕಾದಂಥ ಹಲವು ಔಷಧೀಯ ಎಲೆಗಳನ್ನು ಸೇವಿಸಬಹುದು. ಇವನ್ನು ನೇರವಾಗಿ ತಿನ್ನಬಹುದು, ಇಲ್ಲವೇ ಇವುಗಳಿಂದ ರಸ ತೆಗೆದು ಕುಡಿಯಬಹುದು. ಪ್ರತಿದಿನ ಇವನ್ನು ಬಳಸಿ ತಂಬುಳಿ, ಸಾಸಿವೆ ಮಾಡಿ ಸೇವಿಸಬಹುದು. 

ಪಿತ್ತ ದೋಷ

ಪಿತ್ತ ದೋಷ ಹೆಚ್ಚಾದಾಗಲೇ ಬೆವರು ಹೆಚ್ಚುವುದು. ಪಿತ್ತ ಏರಿದಾಗ ಬೈಲ್ ರಸ ದೇಹದಲ್ಲಿ ಸರಿಯಾಗಿ ಕೆಲಸ ಮಾಡದ ಕಾರಣ ಅಜೀರ್ಣ, ಹೀಟ್, ದೇಹದ ಉಷ್ಣತೆ ಹೆಚ್ಚುವುದು ಆಗುತ್ತದೆ. ಇದರಿಂದ ಅತಿಯಾಗಿ ದೇಹ ಬೆವರತೊಡಗುತ್ತದೆ. ಈ ಪಿತ್ತ ದೋಷ ಹೋಗಲಾಡಿಸಲು, 10 ಒಣದ್ರಾಕ್ಷಿಗಳನ್ನು ಪ್ರತಿದಿನ ರಾತ್ರಿ ಮಲಗುವಾಗ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆದ್ದ ಕೂಡಲೇ ಸೇವಿಸುವುದನ್ನು ರೂಢಿಸಿಕೊಳ್ಳಿ. ಕೊತ್ತಂಬರಿ ಬೀಜವನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು, ಮರುಬೆಳಗ್ಗೆ ಆ ನೀರನ್ನು ಸೋಸಿಕೊಂಡು ಕುಡಿಯಿರಿ. ಇದರ ಹೊರತಾಗಿ ನೆಲ್ಲಿಕಾಯಿ ಪುಡಿಯೊಂದಿಗೆ ಬೆಲ್ಲ ತಿನ್ನುವ ಅಭ್ಯಾಸ ರೂಢಿಸಿಕೊಂಡರೂ ಪಿತ್ತ ಇಳಿಯುತ್ತದೆ. ಇನ್ನು, ಹೊರ ಹೋಗುವಾಗ ಕ್ಯಾಪ್ ಧರಿಸಿ. 

ಇದು ಹೆಣ್ಣಿನ ಸಮಸ್ಯೆ, ಯೋನಿಗೆ ತಪ್ಪಲಿ ಬೆವರಿನ ಕಾಟ

ಫ್ಯಾಟ್

ಆಯುರ್ವೇದದ ಪ್ರಕಾರ, ಫ್ಯಾಟ್ ಟಿಶ್ಯೂಗಳ ಬೈಪ್ರಾಡಕ್ಟ್ ಆಘಿ ಬೆವರು ಉತ್ಪಾದನೆಯಾಗುತ್ತದೆ. ಅದಕ್ಕಾಗಿಯೇ ದಪ್ಪಗಿರುವವರಲ್ಲಿ ಬೆವರು ಹೆಚ್ಚು. ಹಾಗಾಗಿ, ದೇಹದಲ್ಲಿ ಬೊಜ್ಜನ್ನು ಕರಗಿಸುವುದು ಮುಖ್ಯ. ಇದಕ್ಕಾಗಿ ಯೋಗ, ಪ್ರಾಣಾಯಾಮ, ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಡಯಟ್ ಮಾಡುವುದು ಅಗತ್ಯ. 

ಒತ್ತಡ

ಇಂದಿನ ಬ್ಯುಸಿ, ಸ್ಪರ್ಧಾತ್ಮಕ ಬದುಕಿನಲ್ಲಿ ಪ್ರತಿಯೊಬ್ಬರೂ ಒತ್ತಡ, ಖಿನ್ನತೆ, ಭಯದಿಂದ ಬಳಲುತ್ತಾರೆ. ಈ ಎಲ್ಲ ಕಾರಣಗಳೂ ಬೆವರನ್ನು ಹೆಚ್ಚಿಸುತ್ತವೆ. ಹೀಗಾಗಿ, ಪ್ರತಿ ಬೆಳಗ್ಗೆ ಎದ್ದೊಡನೆ ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಂಡರೆ ಇದು ಮನಸ್ಸನ್ನು ಶಾಂತವಾಗಿಸಿ ಟೆನ್ಷನ್ ಕಡಿಮೆ ಮಾಡುತ್ತದೆ. ಇದರಿಂದ ಒತ್ತಡವೂ ತಗ್ಗುತ್ತದೆ. ಇದರೊಂದಿಗೆ ವಾರಕ್ಕೆ ಮೂರು ದಿನ ತಲೆಗೆ ಬ್ರಾಹ್ಮಿ ಎಣ್ಣೆ ಹೆಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ.

ಸ್ಥಂಬನ ಥೆರಪಿ

ಅತಿಯಾದ ಬೆವರಿಗೆ ನಿಮಗೆ ಕಾರಣ ಗೊತ್ತಿಲ್ಲದಿದ್ದಾಗ, ಅಂಗೈ ಹಾಗೂ ಅಂಗಾಲುಗಳಲ್ಲಿ ಹೆಚ್ಚು ಬೆವರುವವರು ಹೀಗೆ ಮಾಡಿ. ಸ್ನಾನಕ್ಕೂ 1 ಗಂಟೆ ಮುಂಚೆ ಚಂದನಾದಿ ತೈಲವನ್ನು ತಲೆ ಕೂದಲಿಗೆ ಹಚ್ಚಿ ಬುಡವನ್ನು ಚೆನ್ನಾಗಿ ಮಸಾಜ್ ಮಾಡಿ. ಬಳಿಕ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ನಂತರ ಮತ್ತೊಮ್ಮೆ ತಣ್ಣೀರಿನಿಂದ ಸ್ನಾನ ಮಾಡಿ. 

ಮಲ್ಲಿಗೆ ಎಣ್ಣೆ

ಸ್ನಾನ ಮಾಡುವ ನೀರಿಗೆ 2-3 ಎಂಎಲ್ ಮಲ್ಲಿಗೆ ಎಣ್ಣೆ ಅಥವಾ ಲ್ಯಾವೆಂಡರ್ ಆಯಿಲ್ ಸೇರಿಸಿ. ಇದರಿಂದ ಬೆವರುವುದು ಕಡಿಮೆಯಾಗುವ ಜೊತೆಗೆ ದೇಹದುರ್ಗಂಧವೂ ಕಡಿಮೆಯಾಗುತ್ತದೆ. 

click me!