ಫಿಟ್ನೆಸ್‌ಗೆ ಶಾರ್ಟ್‌ ಕಟ್‌ ಬೇಡ, ಅದು ಇನ್‌ಸ್ಟಂಟ್ ಕಾಫಿ ಅಥವಾ ಟು ಮಿನಿಟ್‌ ನೂಡಲ್ಸ್‌ ಅಲ್ಲ; ನಟ ಅಕ್ಷಯ್‌ ಕುಮಾರ್‌

Published : Jan 01, 2024, 08:42 AM ISTUpdated : Jan 01, 2024, 08:52 AM IST
ಫಿಟ್ನೆಸ್‌ಗೆ ಶಾರ್ಟ್‌ ಕಟ್‌ ಬೇಡ, ಅದು ಇನ್‌ಸ್ಟಂಟ್ ಕಾಫಿ ಅಥವಾ ಟು ಮಿನಿಟ್‌ ನೂಡಲ್ಸ್‌ ಅಲ್ಲ; ನಟ ಅಕ್ಷಯ್‌ ಕುಮಾರ್‌

ಸಾರಾಂಶ

ಫಿಟ್ನೆಸ್‌ಗೆ ಶಾರ್ಟ್‌ ಕಟ್‌ ಬೇಡ, ಅದು ಇನ್‌ಸ್ಟಂಟ್ ಕಾಫಿ ಅಥವಾ ಟು ಮಿನಿಟ್‌ ನೂಡಲ್ಸ್‌ ಅಲ್ಲ.  ಹೀಗಾಗಿ ಹೊಸ ವರ್ಷದಲ್ಲಿ ಯಾವುದೇ ಅಡ್ಡದಾರಿ ರಹಿತ, ರಾಸಾಯನಿಕ ರಹಿತವಾಗಿ ಫಿಟ್‌ನೆಸ್ ಬೆಳೆಸಿಕೊಳ್ಳುವತ್ತ ಗಮನ ಕೊಡಿ ಎಂದು ನಟ ಅಕ್ಷಯ್‌ ಕುಮಾರ್‌ ಹೇಳಿದ್ದಾರೆ. ಮಾತ್ರವಲ್ಲ, ನಟರ ಲೈಫ್‌ಸ್ಟೈಲ್‌ ಫಾಲೋ ಮಾಡಬೇಡಿ ಎಂಬ ಕಿವಿಮಾತು ಹೇಳಿದ್ದಾರೆ.

ನವದೆಹಲಿ: ಜನತೆ ದೀರ್ಘಾವಧಿ ಪ್ರಯೋಜನ ನೀಡುವ ದೈಹಿಕ ಕಸರತ್ತಿನ ಕುರಿತು ಗಮನ ಹರಿಸಬೇಕೇ ಹೊರತು ತತ್‌ಕ್ಷಣದ ಫಲ ನೀಡುವ ತಂತ್ರಗಳಿಗೆ ಮೊರೆ ಹೋಗಬಾರದು. ವಿಶೇಷವಾಗಿ ಜನತೆ ವೈದ್ಯರ ಸಲಹೆಯ ಅನ್ವಯ ಜೀವನ ಶೈಲಿ ರೂಪಿಸಿಕೊಳ್ಳಬೇಕೇ ಹೊರತು ಚಲನಚಿತ್ರ ನಟರನ್ನಲ್ಲ ನೋಡಿ ಅಲ್ಲ ಎಂದು ನಟ ಅಕ್ಷಯ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ಮನ್‌ ಕೀ ಬಾತ್‌ನಲ್ಲಿ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅಕ್ಷಯ್‌ ಕುಮಾರ್‌, ‘ನಿಮಗೆಲ್ಲರಿಗೂ ಗೊತ್ತಿರುವಂತೆ ನಾನು ದೈಹಿಕ ಸಾಮರ್ಥ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೇನೆ. ಆದರೆ ಅದಕ್ಕಿಂತ ಹೆಚ್ಚಾಗಿ ಇಂಥ ದೈಹಿಕ ಸಾಮರ್ಥ್ಯವನ್ನು ನೈಸರ್ಗಿಕವಾಗಿ ಪಡೆಯುವುದರಲ್ಲಿ ಆಸಕ್ತಿ ಹೊಂದಿದ್ದೇನೆ. ಅಲಂಕಾರಿಕ ಜಿಮ್‌ಗಿಂತ ನಾನು ಈಜು, ಬ್ಯಾಡ್ಮಿಂಟನ್‌, ಮೆಟ್ಟಿಲು ಹತ್ತುವುದು ಮತ್ತು ಗದೆಯಲ್ಲಿ ಅಭ್ಯಾಸ ಮಾಡುವುದನ್ನು ಮತ್ತು ಉತ್ತಮ ಆಹಾರ ಸೇವಿಸುವುದನ್ನು ಇಷ್ಟಪಡುತ್ತೇನೆ’ ಎಂದು ಹೇಳಿದರು.

Yoga Day 2022-ಈ ಬಾಲಿವುಡ್‌ ನಟಿಯರ ಫಿಟ್ನೆಸ್‌ ರಹಸ್ಯ ಯೋಗ

ಸಿನಿಮಾ ನಟರಂತೆ ಲೈಫ್‌ಸ್ಟೈಲ್ ಚೇಂಜ್‌ ಮಾಡಿಕೊಳ್ಳಬೇಡಿ ಎಂದ ಅಕ್ಷಯ್‌ ಕುಮಾರ್‌
ಜೊತೆಗೆ, ‘ನೀವು ನಿಮ್ಮ ಜೀವನ ಶೈಲಿಯನ್ನು ವೈದ್ಯರ ಸಲಹೆ ಅನ್ವಯ ಬದಲಾಯಿಸಿಕೊಳ್ಳಬೇಕೇ ಹೊರತೂ, ಚಲನಚಿತ್ರ ನಟರನ್ನಲ್ಲ. ಏಕೆಂದರೆ ಚಲನಚಿತ್ರದಲ್ಲಿ ಕಾಣಿಸಿಕೊಳ್ಳುವ ರೀತಿಯಲ್ಲಿ ನಟರು ಇರುವುದಿಲ್ಲ. ಚಲನಚಿತ್ರಗಳಲ್ಲಿ ನಟರಿಗೆ ಹಲವು ವಿಧದ ಫಿಲ್ಟರ್‌ ಮತ್ತು ಸ್ಪೆಷಲ್‌ ಎಫೆಕ್ಟ್‌ಗಳನ್ನು ಬಳಸಲಾಗಿರುತ್ತದೆ. ಹೀಗಾಗಿ ಬಹುತೇಕ ವೇಳೆ ಅವರನ್ನು ನೋಡಿ ನಾವು ಕೂಡಾ ಅವರನ್ನೇ ಅನುಕರಿಸಲು ಅಡ್ಡದಾರಿ ಹಿಡಿಯತ್ತೇವೆ’ ಎಂದರು.

‘ಆದರೆ ದೈಹಿಕ ಸಾಮರ್ಥ್ಯದ ವಿಷಯದಲ್ಲಿ ಶಾರ್ಟ್‌ಕಟ್‌ (ಅಡ್ಡದಾರಿ) ಸರಿಯಾದುದಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಸಿಕ್ಸ್‌ಪ್ಯಾಕ್‌, ಎಯ್ಟ್‌ ಪ್ಯಾಕ್‌ಗಾಗಿ ಸ್ಟಿರಾಯ್ಡ್‌ಗಳನ್ನು ಸೇವಿಸುತ್ತಾರೆ. ಆದರೆ ಇಂಥ ಸೇವನೆಯಿಂದ ದೇಹದ ಹೊರಭಾಗ ಉಬ್ಬಿರುತ್ತದೆ, ಆದರೆ ಒಳಗೆ ಟೊಳ್ಳಾಗಿರುತ್ತದೆ. ಇಂಥ ಶಾರ್ಟ್‌ಕಟ್‌ಗಳು ಜೀವನವನ್ನು ಶಾರ್ಟ್‌ (ಕಡಿತ) ಮಾಡುತ್ತದೆ. ಕೆಲವರು ಕೊಬ್ಬು ತುಂಬುತ್ತದೆ ಎನ್ನುವ ಕಾರಣಕ್ಕೆ ತುಪ್ಪ ಸೇವಿಸುವುದನ್ನು ಬಿಡುತ್ತಾರೆ. ಆದರೆ ಗುಣಮಟ್ಟದ ತುಪ್ಪ ದೇಹಕ್ಕೆ ಅಗತ್ಯ. ಹೀಗಾಗಿ ನಾನು ಅದನ್ನು ಸೇವಿಸುತ್ತೇನೆ. ನಮ್ಮ ದೈಹಿಕ ಸಾಮರ್ಥ್ಯಕ್ಕೆ ಯಾವುದು ಒಳ್ಳೆಯದು? ಕೆಟ್ಟದ್ದು ಎನ್ನುವುದನ್ನು ನಾವು ತಿಳಿಯಬೇಕು’ ಎಂದು ಹೇಳಿದರು.

65 ನೇ ವಯಸ್ಸಿನಲ್ಲೂ ಇಷ್ಟು ಫಿಟ್‌ ಆಗಿರುವ Anil Kapoor ಸಿಕ್ರೇಟ್‌ ಏನು ಗೊತ್ತಾ?

ಫಿಟ್‌ನೆಸ್‌ ಇನ್‌ಸ್ಟಂಟ್‌ ಕಾಫಿ ಅಥವಾ ಟು ಮಿನಿಟ್‌ ನೂಡಲ್ಸ್‌ ಅಲ್ಲ!
‘ಫಿಟ್ನೆಸ್‌ ಎನ್ನುವುದು ಭಕ್ತಿ ಇದ್ದಂತೆ. ಅದು ಇನ್‌ಸ್ಟಂಟ್‌ ಕಾಫಿ ಅಥವಾ ಟು ಮಿನಿಟ್‌ ನೂಡಲ್ಸ್‌ ರೀತಿಯಲ್ಲ. ಹೀಗಾಗಿ ಹೊಸ ವರ್ಷದಲ್ಲಿ ಯಾವುದೇ ಅಡ್ಡದಾರಿ ರಹಿತ, ರಾಸಾಯನಿಕ ರಹಿತ, ಯೋಗ, ದೈಹಿಕ ಅಭ್ಯಾಸ, ಸಮಯಕ್ಕೆ ಸರಿಯಾದ ನಿದ್ದೆ. ಧ್ಯಾನದ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಭರವಸೆಯನ್ನು ನಿಮಗೆ ನೀವು ನೀಡಿ. ಎಲ್ಲದಕ್ಕಿಂತ ಹೆಚ್ಚಾಗಿ ನೀವು ಹೇಗಿದ್ದೀರೋ ಹಾಗೆ ನಿಮ್ಮನ್ನು ನೀವು ಸ್ವೀಕರಿಸಿ’ ಎಂದು ಅಕ್ಷಯ್‌ ಕರೆ ನೀಡಿದರು.

ಹಲವರಿಂದ ದೈಹಿಕ ಕಸರತ್ತಿನ ಪಾಠ:
ನಟ ಅಕ್ಷಯ್‌ ಕುಮಾರ್‌ ಅಲ್ಲದೆ, ಬೆಂಗಳೂರಿನ ರಿಷಭ್‌ ಮಲ್ಹೋತ್ರಾ, ಈಶ ಫೌಂಡೇಷನ್‌ನ ಸದ್ಗುರು, ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಚೆಸ್‌ ಗಾರುಡಿಗ ವಿಶ್ವನಾಥನ್‌ ಆನಂದ್‌ ಕೂಡಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ