ಈಗ ಮಳೆಗಾಲ. ಶೀತ ನೆಗಡಿ ತಾಪತ್ರಯ. ಜೊತೆಗೆ ಕೋವಿಡ್ ಸೋಂಕಿನ ಭಯ. ಇದನ್ನು ದೂರವಿಡಲು ಬೇಕೇ ಬೇಕು ವಿಟಮಿನ್ ಸಿ. ಅದನ್ನು ಹೊಂದಿರುವ ಆಹಾರಗಳು ಯಾವವು?
ಕೋವಿಡ್ ಸೋಂಕು ತಡೆಯಿಲ್ಲದೆ ಹಬ್ಬುತ್ತಿದೆ. ಅದಕ್ಕೆ ಔಷಧವಿಲ್ಲ. ಲಸಿಕೆಯೂ ಇಲ್ಲ. ಹಾಗಾಗಿ ಅದನ್ನು ದೂರವಿಡಲು ದೇಹದ ರೋಗನಿರೋಧಕ ಶಕ್ತಿಯೊಂದೇ ಮದ್ದು ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳೂ ಹೇಳುತ್ತಿದ್ದಾರೆ. ಮುಖ್ಯವಾಗಿ ವಿಟಮಿನ್ ಸಿ ಹಾಗೂ ವಿಟಮಿನ್ ಡಿಗಳನ್ನು ನಮ್ಮ ಬಾಡಿ ಹೊಂದಿರಬೇಕು. ಬಿಸಿಲಿನಲ್ಲಿ ವಿಟಮಿನ್ ಡಿ ಪುಷ್ಕಳವಾಗಿದೆ ಸಂಜೆ ಮುಂಜಾನೆ ಇಪ್ಪತ್ತು ನಿಮಿಷ ಬಿಸಿಲಿನಲ್ಲಿ ನಿಂತರೆ ವಿಟಮಿನ್ ಡಿ ಧಾರಾಳ. ಆದರೆ ವಿಟಮಿನ್‌ಸಿಯನ್ನು ನೀವು ಆಹಾರದಿಂದಲೇ ಗಳಿಸಿಕೊಳ್ಳಬೇಕು. ವಿಟಮಿನ್ ಸಿ ಹೆಚ್ಚಾಗಿ ಇರುವ ಆಹಾರಗಳು ಇಲ್ಲಿವೆ.
ನೆಲ್ಲಿಕಾಯಿ
ನೆಲ್ಲಿಕಾಯಿಯನ್ನು ಹಾಗೇ ಸೇವಿಸುವುದು ಅಥವಾ ಉಪ್ಪಿನಕಾಯಿ, ಜ್ಯೂಸ್, ಉಪ್ಪು ಸವರಿಕೊಂಡು ತಿನ್ನುವುದು- ಹೀಗೆ ಯಾವ ರೀತಿಯಲ್ಲಿ ಬೇಕಿದ್ದರೂ ಸೇವಿಸಿ. ಅದು ನಿಮ್ಮ ದೇಹಕ್ಕೆ ಬಲು ಒಳ್ಳೇದು. ಸಾಕಷ್ಟು ವಿಟಮಿನ್ ಸಿಯ ಖಜಾನೆ ಇದು. ಪವರ್‌ಫುಲ್ ಆಂಟಿ ಆಕ್ಸಿಡೆಂಟ್‌ಗಳು ಇದರಲ್ಲಿವೆ. ದಿನದಲ್ಲಿ ಒಂದೇ ಒಂದು ನೆಲ್ಲಿಕಾಯಿ ತಿಂದರೆ ಸಾಕು, ನಲುವತ್ತಾರು ಶೇಕಡದಷ್ಟು ವಿಟಮಿನ್ ಸಿ ನಿಮಗೆ ಸಿಕ್ಕಿಬಿಡುತ್ತದೆ. ನಮ್ಮ ಪಚನಶಕ್ತಿ, ಸ್ನಾಯುಗಳ ಶಕ್ತಿ, ಸಂತಾನೋತ್ಪಾದನಾ ಶಕ್ತಿಯನ್ನೂ ಅದು ವರ್ಧಿಸುತ್ತದೆ.
ತರಕಾರಿಗಳನ್ನು ಸೋಪ್ ನೀರಲ್ಲಿ ತೊಳೆದರೆ ಭಾರೀ ಡೇಂಜರ್!
ಕಿತ್ತಳೆ ಹಣ್ಣು
ಹಣ್ಣುಗಳ ರಾಜ ಎನಿಸಿಕೊಳ್ಳದಿದ್ದರೂ ಕಿತ್ತಳೆವೆ ವಿಶಿಷ್ಟ ಗುಣ ಇರುವುದು ಅದರ ಔಷಧೀಯ, ಪೌಷ್ಟಿಕ ಹಾಗೂ ಶಕ್ತಿವರ್ಧಕ ಗುಣಗಳಿಂದ. ಇದು ಸಿಟ್ರಿಕ್ ಫ್ರುಟ್. ಸಿಟ್ರಿಕ್ ಹಣ್ಣುಗಳು, ಹುಳಿ ಇರುವ ಹಣ್ಣುಗಳೆಲ್ಲವೂ ವಿಟಮಿನ್ ಸಿಯ ಖಜಾನೆಗಳು. ನೂರು ಗ್ರಾಂನಷ್ಟು ಕಿತ್ತಳೆ ಸೇವಿಸಿದರೆ ಐವತ್ತಮೂರು ಮಿಲಿಗ್ರಾಂನಷ್ಟು ವಿಟಮಿನ್ ಸಿ ನಿಮ್ಮ ದೇಹಕ್ಕೆ ಸೇರುತ್ತೆ. ನಮ್ಮ ಜೀವಕೋಶಗಳಇಗೆ ಪ್ರತಿದಿನ ಆಘುವ ಹಾನಿಯನ್ನು ಇದು ತಡೆಯುತ್ತದೆ. ಇದರಲ್ಲಿ ವಿಟಮಿನ್ ಡಿ ಕೂಡ ಇದೆ.
ಪಪ್ಪಾಯಿ
ಹಲವು ಕಾಯಿಲೆಗಳನ್ನು ನಿವಾರಿಸಲು ಪಪ್ಪಾಯಿಯನ್ನು ಮದ್ದಾಗಿ ಭಾರತೀಯರು ಶತಮಾನಗಳಿಂದ ಬಳಸಿಕೊಂಡು ಬಂದಿದ್ದಾರೆ. ಒಂದು ಮಧ್ಯಮ ಗಾತ್ರದ ಪಪ್ಪಾಯಿಯನ್ನು ನೀವು ತಿಂದರೆ, ಅದರಲ್ಲಿ ನಿಮಗೆ ದಿನಕ್ಕೆಷ್ಟು ಅಗತ್ಯವೋ ಅದಕ್ಕಿಂತ ಎರಡು ಪಟ್ಟು ವಿಟಮಿನ್ ಸಿ ಸಿಗುತ್ತೆ. ಇದರಲ್ಲಿರುವ ಪಪಯಿನ್ ಎಂಬ ಪಚನಕಾರಿ ಕಿಣ್ವ, ನೋವುಗಳನ್ನು ಶಮನಿಸುತ್ತದೆ. ಪೊಟಾಷಿಯಂ, ಮ್ಯಾಗ್ನೀಸಿಯಂ, ಫೋಲೇಟ್‌ಗಳ ಅನರ್ಘ್ಯ ನಿಧಿ. ರೋಗನಿರೋಧಕ ಶಕ್ತಿಗೂ ಒಟ್ಟಾರೆ ಆರೋಗ್ಯಕ್ಕೂ ದಾರಿ.
ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಸೆಲೆಬ್ರಿಟಿಗಳೇನು ಮಾಡ್ತಾರೆ?
ಕ್ಯಾಪ್ಸಿಕಂ
ಕೆಲವರು ಈ ತರಕಾರಿಯನ್ನು ಕಡೆಗಣಿಸುತ್ತಾರೆ. ಆದರೆ ನಿಮಗೆ ಗೊತ್ತಿರಲಿ. ಯಾವುದೇ ಸಿಟ್ರಿಕ್ ಹಣ್ಣಿನಲ್ಲಿರುವಷ್ಟೇ ಪ್ರಮಾಣದ ವಿಟಮಿನ್ ಸಿ ಇದರಲ್ಲೂ ಇರುತ್ತದೆ. ಬೀಟಾ ಕೆರೋಟಿನ್ ಕೂಡ ಸಾಕಷ್ಟು ಇದೆ ಇದರಲ್ಲಿ. ದೇಹದ ಸಹಜ ಪ್ರತಿರೋಧ ಶಕ್ತಿಯನ್ನು ಉದ್ದೀಪಿಸುತ್ತದೆ ಇದು. ನಿಮ್ಮ ಚರ್ಮದ ಆರೋಗ್ಯವನ್ನೂ ಕಣ್ಣೀನ ದೃಷ್ಟಿಯನ್ನೂ ಕಾಪಾಡುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.
ಪೇರಳೆ
ಒಂದು ಕಿತ್ತಳೆಯಲ್ಲಿ ಎಷ್ಟಿದೆಯೋ ಅದಕ್ಕಿಂತ ಎರಡು ಪಟ್ಟು ವಿಟಮಿನ್ ಸಿ ಪೇರಳೆಯಲ್ಲಿ ಇರುತ್ತದೆ. ಅಂದರೆ ಪ್ರತಿನಿತ್ಯ ನಿಮಗೆ ಬೇಕಾಗುವುದಕ್ಕಿಂತ ಎರಡು ಪಟ್ಟು. ಭಾರಿ ಪ್ರಮಾಣದ ಕಬ್ಬಿಣ, ಪೊಟಾಷಿಯಂ, ಕ್ಯಾಲ್ಷಿಯಂ ಕೂಡ ಇದರಲ್ಲಿರುತ್ತದೆ. ಆಂಟಿಮೈಕ್ರೋಬಯಾಲ್ ಗುಣಗಳು ಇದರಲ್ಲಿದ್ದು, ಹಾನಿಕರ ವೈರಾಣುಗಳನ್ನು, ಬ್ಯಾಕ್ಟೀರಿಯಾಗಳನ್ನು ಇದು ಕೊಲ್ಲಬಲ್ಲದು.
ಉಪ್ಪಿನಕಾಯಿ ಜ್ಯೂಸ್ ಬಗ್ಗೆ ಕೇಳಿದ್ದೀರಾ?ಆರೋಗ್ಯ ಸಮಸ್ಯೆಗಿದು ರಾಮಬಾಣ
ನಿಂಬೆಹಣ್ಣು
ನಿಂಬೆಹಣ್ಣು ನಮ್ಮ ದಾಹವನ್ನು ತಣಿಸುವ, ಬಾಡಿಯನ್ನು ಶುದ್ಧೀಕರಿಸುವ, ಪಚನಕ್ರಿಯೆಯನ್ನು ಸರಾಗ ಮಾಡುವ, ಹೊಟ್ಟೆಯಲ್ಲಿ ಆಗುವ ಆಸಿಡಿಟಿಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂಬುದೆಲ್ಲ ನಿಮಗೆ ಗೊತ್ತು. ದಿನಕ್ಕೊಮ್ಮೆ ನಿಂಬೂ ಪಾನಿ ಕುಡಿದರೆ ಕೋವಿಡ್ ದೂರ ಅಂತಲೂ ಡಾಕ್ಟರ್‌ಗಳೇ ಹೇಳುತ್ತ ಬಂದಿದ್ದಾರೆ. ಈ ಪುಟ್ಟ ಹಣ್ಣಿನಲ್ಲಿ ನಿಮ್ಮ ರೋಗಪ್ರತಿರೋಧ ಶಕ್ತಿ ಹೆಚ್ಚಿಸುವ ಎಷ್ಟೋ ಗುಣಗಳಿವೆ. ಥಯಮೀನ್, ರೈಬೋಫ್ಲಾವಿನ್, ವಿಟಮಿನ್ ಬಿ ಸಿಕ್ಸ್, ತಾಮ್ರ, ಮ್ಯಾಂಗನೀಸ್ ಮುಂತಾದವುಗಳೆಲ್ಲ ಇದರಲ್ಲಿವೆ.