Skin Cancer: ನಿಮ್ಮ ದೇಹದ ಮೇಲೂ ಇಂತಹ ಮಚ್ಚೆಗಳಿವೆಯೇ? ಎಚ್ಚರವಿರಲಿ

Published : Jul 09, 2022, 05:16 PM IST
Skin Cancer: ನಿಮ್ಮ ದೇಹದ ಮೇಲೂ ಇಂತಹ ಮಚ್ಚೆಗಳಿವೆಯೇ? ಎಚ್ಚರವಿರಲಿ

ಸಾರಾಂಶ

ದೇಹದ ಮೇಲೆ ಕಂಡುಬರುವ ಮಚ್ಚೆಗಳ ಬಗ್ಗೆ ಗಮನವಿರಬೇಕು. ಮಚ್ಚೆಗಳ ಬಣ್ಣ, ಗಾತ್ರಗಳಲ್ಲಿ ವ್ಯತ್ಯಾಸವಾಗುತ್ತಿದ್ದರೆ, ನೋವು ಕಂಡುಬಂದರೆ, ದ್ರವ ಸೋರಿಕೆಯಾದರೆ ನಿರ್ಲಕ್ಷ ಮಾಡಬಾರದು.    

ಮುಖ ಅಥವಾ ದೇಹದ ಕೆಲವು ಭಾಗಗಳಲ್ಲಿ ಕಂಡುಬರುವ ಮಚ್ಚೆ (Scar) ಯನ್ನು ಬ್ಯೂಟಿ ಸ್ಪಾಟ್ (Beauty Spot) ಎಂದು ಪರಿಗಣಿಸುವುದಿದೆ. ಆದರೆ, ಎಷ್ಟೋ ಬಾರಿ ಈ ಬ್ಯೂಟಿ ಸ್ಪಾಟ್ ಗಳು ಅಪಾಯಕಾರಿ ಎನ್ನುವುದು ಸಾಬೀತಾಗಿದೆ. ಆದರೆ, ಹಾಗೂ ಈ ಮಚ್ಚೆಗಳು ಕ್ಯಾನ್ಸರ್ (Cancer) ಅಂಶಗಳನ್ನು ಒಳಗೊಂಡಿರಬಲ್ಲವು ಹಾಗೂ ಮೆಲನೋಮಾ (Melanoma) ಎಂದು ಕರೆಯುವ ನಿರ್ದಿಷ್ಟ ಬಗೆಯ ಚರ್ಮದ ಕ್ಯಾನ್ಸರಿನ ಲಕ್ಷಣವಾಗಿಯೂ ಕಂಡುಬರಬಲ್ಲವು. ದೇಹದ ಮೇಲಿರುವ ಮಚ್ಚೆಗಳನ್ನು ನಾವು ಎಷ್ಟೋ ಬಾರಿ ಗಮನಿಸುವುದೂ ಇಲ್ಲ. ಅವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಚರ್ಮದ ಪಿಗ್ಮೆಂಟ್ (Pigment) ಉತ್ಪಾದಿಸುವ ಕೋಶಗಳಲ್ಲಿ ಮೆಲನೋಮಾಸೈಟ್ಸ್ ವಿಕಸನವಾದಾಗ ಈ ಸಮಸ್ಯೆ ಉಂಟಾಗುತ್ತದೆ. 

ಮೆಲನೋಮಾ ಲಕ್ಷಣ (Symptoms)
ಆರಂಭದಲ್ಲಿ ಕ್ಯಾನ್ಸರ್ ಯುಕ್ತ ಮಚ್ಚೆಗಳನ್ನು ಪತ್ತೆ ಮಾಡುವುದು ಕಷ್ಟಸಾಧ್ಯ. ಹೀಗಾಗಿ, ದೇಹದ ಮೇಲೆ ಹೆಚ್ಚು ಪ್ರಕಾರದ ಮಚ್ಚೆಗಳನ್ನು ಹೊಂದಿರುವವರು ನಿಗದಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ದೇಹದ ಯಾವುದೇ ಭಾಗದಲ್ಲಿ ಹೊಸ ಮಚ್ಚೆ ಕಾಣಿಸಿಕೊಂಡರೂ ಎಚ್ಚರಿಕೆ ವಹಿಸಬೇಕು. 
ಮೆಲನೋಮಾ ಸಂಶೋಧನಾ ಸಂಸ್ಥೆಯ ಪ್ರಕಾರ, ಕೆಲವು ಲಕ್ಷಣಗಳು ಹೀಗಿರುತ್ತವೆ. 
•    ಚರ್ಮದಲ್ಲಿ ಯಾವುದೇ ರೀತಿಯ ಬದಲಾವಣೆ (Change), ಮೊದಲೇ ಇರುವ ಮಚ್ಚೆಯ ಬಣ್ಣ ಹಾಗೂ ಗಾತ್ರದಲ್ಲಿ ವ್ಯತ್ಯಾಸ
•    ಮಚ್ಚೆಯಲ್ಲಿ ನೋವು, ದ್ರಾವಣದಂತಹ ಅಂಟು ಹೊರಬರುವುದು ಅಥವಾ ರಕ್ತ ಬರಬಲ್ಲದು.
•    ಮಚ್ಚೆ ಹೊಳೆಯುವುದು, ವ್ಯಾಕ್ಸ್ (Wax)ನಂತೆ ನುಣುಪಾಗುವುದು.
•    ಶುಷ್ಕವಾದ ಕೆಂಪು ಸ್ಪಾಟ್ 
•    ಮಚ್ಚೆಯಲ್ಲಿ ಕಡಿತ
•    ಕಾಲುಗಳು ಅಥವಾ ಕೈಗಳ ಉಗುರುಗಳಲ್ಲಿ ಕಪ್ಪು ಬಣ್ಣದ ಎಳೆಗಳು ಮೂಡುತ್ತವೆ.

ಇದನ್ನೂ ಓದಿ: CLEAN HAND: ತರಾತುರಿಯಲ್ಲಿ ಕೈ ತೊಳೆಯೋವಾಗ ಮಕ್ಕಳು ಮಾಡ್ತಾರೆ ಈ ತಪ್ಪು

ಕ್ಯಾನ್ಸರ್ ಯುಕ್ತ ಮಚ್ಚೆ ಗುರುತಿಸಿ
ಕ್ಯಾನ್ಸರ್ ಯುಕ್ತ ಮಚ್ಚೆಗಳನ್ನು ಗುರುತಿಸಬಹುದು. ಮಚ್ಚೆಯ ಒಂದು ಭಾಗ ಇನ್ನೊಂದು ಭಾಗದಂತೆ ಇಲ್ಲದಿದ್ದರೆ, ಮಚ್ಚೆಯ ಗಡಿ ಮೆತ್ತಗಿರುವ ಬದಲು ಚೂಪಾಗಿದ್ದರೆ, ಒರಟಾಗಿದ್ದರೆ, ಮಚ್ಚೆಯ ಬಣ್ಣ ಕಂದು, ಕಪ್ಪು, ಬಿಳಿ ಅಥವಾ ನೀಲಿಯಾಗಿದ್ದರೆ, ಮಚ್ಚೆಯ ಗಾತ್ರ 6 ಮಿಲಿಮೀಟರ್ ಗಿಂತ ಹೆಚ್ಚಾಗಿದ್ದರೆ ಎಚ್ಚರಿಕೆ ವಹಿಸಲೇಬೇಕು.

ಮೆಲನೋಮಾಕ್ಕೆ ಕಾರಣವೇನು?
ಮೆಲನಿನ್ ಉತ್ಪಾದಿಸುವ ಕೋಶಗಳಾದ ಮಿಲಾನೋಸೈಟ್ಸ್ ನಲ್ಲಿ ವ್ಯತ್ಯಾಸವಾದಾಗ ಮೆಲನೋಮಾ ಉಂಟಾಗುತ್ತದೆ. ಸಾಮಾನ್ಯವಾಗಿ ಚರ್ಮದ ಕೋಶಗಳು ಸುವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದುತ್ತವೆ. ಚರ್ಮದ ಸ್ತರದಲ್ಲಿ ಹಳೆಯ ಕೋಶಗಳು ಸತ್ತು ಹೊಸ ಕೋಶಗಳು ಹುಟ್ಟುತ್ತವೆ. ಈ ಸಮಯದಲ್ಲಿ ಕೆಲವು ಕೋಶಗಳ ಡಿಎನ್ಎಗೆ ಹಾನಿಯಾಗುತ್ತದೆ. ಆಗ ಹೊಸ ಕೋಶಗಳ ಸಂಖ್ಯೆ ಅನಿಯಂತ್ರಿತವಾಗಿ ಹೆಚ್ಚಲು ಶುರುವಾಗುತ್ತದೆ. ಇದರಿಂದ ಕ್ಯಾನ್ಸರ್ ಯುಕ್ತ ಕೋಶಗಳು ನಿರ್ಮಾಣವಾಗುತ್ತವೆ. 

ಇದನ್ನೂ ಓದಿ: ಹಾರ್ಟ್ ಅಟ್ಯಾಕ್‌ ಸೂಚನೆ ಒಂದು ತಿಂಗಳ ಮೊದ್ಲೇ ಸಿಗುತ್ತೆ !

ಯಾರಲ್ಲಿ ಸಾಮಾನ್ಯ?
•    ಹೆಚ್ಚು ಕಾಲ ಯುವಿ ಕಿರಣ (UV Rays) ಅಥವಾ ರೇಡಿಯೇಷನ್ (Radiation) ಸಂಪರ್ಕಕ್ಕೆ ಬರುವವರಲ್ಲಿ ಈ ಸಮಸ್ಯೆ ಹೆಚ್ಚು. ಒಂದೊಮ್ಮೆ ಯುವಿ ಕಿರಣಕ್ಕೆ ಒಡ್ಡುವುದು ಅನಿವಾರ್ಯವಾದರೆ ಮೈ ತುಂಬ ಬಟ್ಟೆ ಧರಿಸಿ. ಈ ಸಂದರ್ಭ ವಿಶೇಷ ಕನ್ನಡಕ, ಲೋಷನ್ ಗಳನ್ನು ಬಳಕೆ ಮಾಡಬೇಕು. 
•    ಕಪ್ಪು (Black) ಅಥವಾ ಕಂದು ಚರ್ಮಕ್ಕಿಂತ ಬಿಳಿ (White) ಚರ್ಮದವರಿಗೆ ಮೆಲನೋಮಾ ಸಮಸ್ಯೆ ಅಧಿಕ. ಏಕೆಂದರೆ, ಬಿಳಿ ಚರ್ಮದವರಲ್ಲಿ ಪಿಗ್ಮೆಂಟ್ ಕಡಿಮೆ ಪ್ರಮಾಣದಲ್ಲಿರುತ್ತದೆ. ಹೀಗಾಗಿ, ಅತಿನೇರಳೆ ಕಿರಣದಿಂದ ಚರ್ಮದ ರಕ್ಷಣೆ ಸಾಧ್ಯವಾಗುವುದಿಲ್ಲ. 
•    ಪದೇ ಪದೆ ಸನ್ ಬರ್ನ್ (Sunburn) ಆಗುತ್ತಿದ್ದರೆ ಗಮನ ವಹಿಸಿ. ಏಕೆಂದರೆ, ಅತಿಯಾಗಿ ಸನ್ ಬರ್ನ್ ಸಮಸ್ಯೆ ಇರುವವರಲ್ಲಿ ಮೆಲನೋಮಾ ಕಂಡುಬರುವುದು ಸಾಮಾನ್ಯ. 
•    ಆನುವಂಶಿಕವಾಗಿಯೂ ಚರ್ಮದ ಕ್ಯಾನ್ಸರ್ ಕಂಡುಬರುತ್ತದೆ. 
•    ವಯಸ್ಸಾದಂತೆ ಮೆಲನೋಮಾ ಅಪಾಯವೂ ಹೆಚ್ಚಾಗುವುದು ದೃಢಪಟ್ಟಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ