ಯೋಗದ ಲಾಭ ಪ್ರತಿಯೊಬ್ಬರಿಗೂ ತಿಳಿದಿದೆ. ಅನೇಕರು ಯೋಗ ಮಾಡ್ತಾರೆ. ಆದ್ರೆ ಯೋಗದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಯಡವಟ್ಟು ಮಾಡಿಕೊಳ್ತಾರೆ. ಯೋಗ ಮಾಡುವ ಮೊದಲು ಅದರ ಬ್ಗ್ಎ ಸರಿಯಾಗಿ ತಿಳಿಯುವುದು ಮುಖ್ಯ.
ಅಂತರಾಷ್ಟ್ರೀಯ (International) ಮಟ್ಟದಲ್ಲಿ ಯೋಗ (Yoga) ಕ್ಕೆ ಮಾನ್ಯತೆ ಸಿಕ್ಕಿದೆ. ಇತ್ತೀಚಿನ ದಿನಗಳಲ್ಲಿ ಯೋಗ ಮಾಡುವವರ ಸಂಖ್ಯೆ ಹೆಚ್ಚಾಗಿದ್ದೂ ಸತ್ಯ. ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಜನರು ನಿಯಮಿತವಾಗಿ ಯೋಗಾಸನಗಳನ್ನು ಮಾಡ್ತಿದ್ದಾರೆ. ಯೋಗವು ನಮ್ಮ ಮನಸ್ಸನ್ನು ಶಾಂತವಾಗಿ ಮತ್ತು ಆರೋಗ್ಯ (health) ವಾಗಿಟ್ಟುಕೊಳ್ಳಲು ನೆರವಾಗುವ ಒಂದು ನೈಸರ್ಗಿಕ ಮಾರ್ಗವಾಗಿದೆ. ಇದು ಸ್ಪರ್ಧಾತ್ಮಕ ಯುಗ. ಒಬ್ಬರನ್ನೊಬ್ಬರು ಹಿಂದಿಕ್ಕಿ ಮುಂದೆ ಹೋಗುವ ಧಾವಾಂತ ಎಲ್ಲರಿಗೂ ಇರುತ್ತದೆ. ಇದ್ರಿಂದಾಗಿ ಒತ್ತಡಕ್ಕೊಳಗಾಗುವುದು ಹೆಚ್ಚು. ಒತ್ತಡದಿಂದ ದೇಹ ಸಾವಿರಾರು ರೋಗಗಳನ್ನು ಬರಮಾಡಿಕೊಳ್ಳುತ್ತದೆ. ಯೋಗವು ಪ್ರಾಚೀನ ಭಾರತದಿಂದ ಬಂದ ದೈಹಿಕ ಮತ್ತು ಮಾನಸಿಕ ಅಭ್ಯಾಸವಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಯೋಗದಲ್ಲಿ ಮಾಡುವ ಆಸನಗಳನ್ನು ಯೋಗಾಸನ ಎಂದು ಕರೆಯಲಾಗುತ್ತದೆ. ಪ್ರತಿದಿನ ಯೋಗ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಶಕ್ತಿಯು ಹೆಚ್ಚಾಗುತ್ತದೆ. ನಕಾರಾತ್ಮಕ ಭಾವನೆಗಳು ಕಡಿಮೆಯಾಗುತ್ತವೆ. ಮಾನಸಿಕ ಆರೋಗ್ಯ ಸುಧಾರಿಸುವ ಯೋಗ ದೇಹವನ್ನು ಸದೃಢವಾಗಿಡುತ್ತದೆ. ಅನೇಕರಿಗೆ ಯೋಗದ ಬಗ್ಗೆ ಸರಿಯಾಗಿ ತಿಳಿದಿಲ್ಲ. ಯೋಗ ಮಾಡಬೇಕೆಂದು ನಿರ್ಧಾರ ಮಾಡಿರ್ತಾರೆ. ಆದ್ರೆ ಯಾವ ಸಮಯದಲ್ಲಿ ಹಾಗೆ ಎಲ್ಲಿ ಮಾಡ್ಬೇಕೆಂಬುದು ಗೊತ್ತಿರೋದಿಲ್ಲ. ಇಂದು ನಾವು ಯೋಗವನ್ನು ಯಾವ ಸಮಯದಲ್ಲಿ ಮಾಡ್ಬೇಕು ಹಾಗೆ ಎಲ್ಲಿ ಮಾಡ್ಬೇಕು ಎನ್ನುವ ಬಗ್ಗೆ ಮಾಹಿತಿಯನ್ನು ನೀಡ್ತೇವೆ.
ಯೋಗ ಪ್ರಾರಂಭಿಸಲು ಈ ನಿಯಮಗಳನ್ನು ಅನುಸರಿ :
ಯೋಗ ಮಾಡಲು ಈ ಸಮಯ ಸೂಕ್ತ : ಯೋಗವನ್ನು ಸಾಮಾನ್ಯವಾಗಿ ಯಾವಾಗ ಮಾಡ್ಬೇಕೆನ್ನುವ ಪ್ರಶ್ನೆ ಕಾಡುತ್ತದೆ. ಬೆಳಿಗ್ಗೆ ಹಾಗೂ ಸಂಜೆ ಯೋಗವನ್ನು ಮಾಡುವವರಿದ್ದಾರೆ. ಕೆಲವರು ಮಧ್ಯಾಹ್ನ 12 ಗಂಟೆಗೆ ಯೋಗ ಮಾಡ್ತಾರೆ. ಯೋಗ ತಜ್ಞರ ಪ್ರಕಾರ, ಬೆಳಿಗ್ಗೆ ಯೋಗ ಮಾಡಲು ಸೂಕ್ತ ಸಮಯವಾಗಿದೆ. ಬೆಳಿಗ್ಗೆ ಉಪಾಹಾರ ಸೇವಿಸುವ ಮೊದಲು ನೀವು ಯೋಗವನ್ನು ಅಭ್ಯಾಸ ಮಾಡಬೇಕು. ಏಕೆಂದರೆ ಯೋಗ ಅಥವಾ ಯಾವುದೇ ರೀತಿಯ ವ್ಯಾಯಾಮ ಮಾಡುವಾಗ ಹೊಟ್ಟೆ ಹಗುರವಾಗಿ ಮತ್ತು ಖಾಲಿಯಾಗಿರುವುದು ಮುಖ್ಯ. ನೀವು ಯೋಗ ಮಾಡಲು ಸಂಜೆಯ ಸಮಯವನ್ನು ಸಹ ಆಯ್ಕೆ ಮಾಡಬಹುದು. ಆದ್ರೆ ನಿಮ್ಮ ಹೊಟ್ಟೆ ಖಾಲಿಯಾಗಿರಬೇಕು. ಆಗ ಮಾತ್ರ ನೀವು ಸರಿಯಾದ ರೀತಿಯಲ್ಲಿ ಯೋಗವನ್ನು ಮಾಡಬಹುದು. ಯೋಗ ಮಾಡುವ ಮೊದಲು 3 ಗಂಟೆಗಳ ಕಾಲ ಯಾವುದೇ ಆಹಾರ ಸೇವನೆ ಮಾಡ್ಬಾರದು.
ಇದನ್ನೂ ಓದಿ: Men Helath : ಎಚ್ಚರ…! ಈ ಕಾರಣಕ್ಕೆ ಪುರುಷರನ್ನು ಕಾಡುತ್ತೆ ಮುಟ್ಟು
ಯೋಗ ಮಾಡುವಾಗ ಮನಸ್ಸು ಹೀಗಿರಲಿ : ಯೋಗ ಮಾಡ್ಬೇಕೆಂದು ಮಾಡುವುದು ಒಳ್ಳೆಯದಲ್ಲ. ಯೋಗ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ರಿಲ್ಯಾಕ್ಸ್ ನೀಡುವ ಕಾರಣ ಯೋಗ ಮಾಡುವಾಗ ನಮ್ಮ ಮನಸ್ಸು ಕೂಡ ಮುಖ್ಯವಾಗುತ್ತದೆ. ಆತುರಾತುರದಲ್ಲಿ ಯೋಗ ಮಾಡಬಾರದು. ಯೋಗಕ್ಕಾಗಿ ಸಮಯ ನಿಗದಿ ಮಾಡಿಕೊಳ್ಳಬೇಕು. ಬೇರೆ ಯಾವುದೇ ಒತ್ತಡ, ಗಡಿಬಿಡಿಯಿಲ್ಲದೆ ಆರಾಮವಾಗಿ ಯೋಗವನ್ನು ಮಾಡ್ಬೇಕು. ಯೋಗ ಮನಸ್ಸಿನಲ್ಲಿ ಏಕಾಗ್ರತೆಯನ್ನು ಮತ್ತು ದೇಹದಲ್ಲಿ ನಮ್ಯತೆಯನ್ನು ಸ್ಥಾಪಿಸುತ್ತದೆ.
ನಿಯಮಿತತೆ ಹಾಗೂ ಸ್ಥಳ : ಪ್ರತಿ ದಿನ ಯೋಗ ಮಾಡುವುದು ಒಳ್ಳೆಯದು. ಹಾಗೆಯೇ ಪ್ರತಿ ದಿನ ಒಂದೇ ಸಮಯದಲ್ಲಿ ಯೋಗ ಮಾಡ್ಬೇಕು. ಯೋಗ ಮಾಡಲು ನಿಯಮಗಳನ್ನು ಅನುಸರಿಸುವುದು ಅತ್ಯಂತ ಅವಶ್ಯಕವಾಗಿದೆ. ಹಾಗೆಯೇ ಪ್ರಶಾಂತ ಸ್ಥಳದಲ್ಲಿ ಯೋಗ ಮಾಡ್ಬೇಕಾಗುತ್ತದೆ. ವಿಶಾಲವಾದ ಸ್ಥಳ, ಗಾಳಿಯಾಡುವ ಪ್ರದೇಶ ಹಾಗೂ ಸೂಕ್ತ ಬೆಳಕಿರುವ ಜಾಗದಲ್ಲಿ ಯೋಗ ಮಾಡ್ಬೇಕು.
ಇದನ್ನೂ ಓದಿ: ಅಯ್ಯೋ ಸ್ಟ್ರೆಸ್ ಸ್ಟ್ರೆಸ್ ಅನ್ನೋದು ಬಿಡಿ, ಲೈಫನ್ನು ಹೀಗ್ ಎಂಜಾಯ್ ಮಾಡಿ
ಯೋಗ ಮಾಡುವಾಗ ಎಚ್ಚರವಿರಲಿ : ದಿನಕ್ಕೆ ಒಂದು ಅಥವಾ ಎರಡು ಬಾರಿ ಯೋಗ ಮಾಡಲು ಸೂಚಿಸಲಾಗುತ್ತದೆ. ಆದ್ರೆ ಯೋಗವನ್ನು ಸರಿಯಾಗಿ ಕಲಿತು ಮಾಡಬೇಕಾಗುತ್ತದೆ. ಯೋಗದಲ್ಲಿ ಉಸಿರಾಟ ಕ್ರಿಯೆ ಮುಖ್ಯವಾಗುತ್ತದೆ. ಹಾಗಾಗಿ ಸೂಕ್ತ ಉಸಿರಾಟ ಕ್ರಿಯೆ ಮೂಲಕ ಯೋಗಾಸನ ಮಾಡ್ಬೇಕು.